ಕೇವಲ ನಟನೆ ಮಾತ್ರವಲ್ಲ ಬಣ್ಣದ ಜಗತ್ತಿನಲ್ಲಿ ಈ ಕೆಲಸದಿಂದಲೂ ಹುಡುಗಿಯರು ಹೆಚ್ಚು ಸಂಪಾದಿಸಬಹುದು

ಸಿನಿ ಅಥವಾ ಟಿವಿ ಇಂಡಸ್ಟ್ರಿ ಕೇವಲ ಗ್ಲಾಮರ್ ಆಗಿರುವ ನಟಿಯರಿಗೆ ಮಾತ್ರ ಅನ್ನ ನೀಡುವುದಲ್ಲ, ಎಷ್ಟೋ ಮಂದಿಗೆ ಅನ್ನದಾತವಾಗಿದೆ.

By Kavya

ಸಿನಿ ಅಥವಾ ಟಿವಿ ಇಂಡಸ್ಟ್ರಿ ಕೇವಲ ಗ್ಲಾಮರ್ ಆಗಿರುವ ನಟಿಯರಿಗೆ ಮಾತ್ರ ಅನ್ನ ನೀಡುವುದಲ್ಲ, ಎಷ್ಟೋ ಮಂದಿಗೆ ಅನ್ನದಾತವಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಈ ಮನೋರಂಜನೆಗೆ ಸಂಬಂಧಪಟ್ಟ ಉದ್ಯಮ ಅಭಿವೃದ್ದಿಯತ್ತ ಸಾಗುತ್ತಿದ್ದು, ಅದೆಷ್ಟೋ ಮಂದಿ ತಮ್ಮ ಹೊಟ್ಟೆ ಪಾಡಿಗೆಗಾಗಿ ಇಲ್ಲಿಯೇ ಕೆರಿಯರ್ ರೂಪಿಸಿಕೊಂಡಿದ್ದಾರೆ.

ಕೇವಲ ನಟನೆ ಮಾತ್ರವಲ್ಲ ಬಣ್ಣದ ಜಗತ್ತಿನಲ್ಲಿ ಈ ಕೆಲಸದಿಂದಲೂ ಹುಡುಗಿಯರು ಹೆಚ್ಚು ಸಂಪಾದಿಸಬಹುದು

ಇನ್ನು ಸಿನಿಮಾ ಹಾಗೂ ಸೀರಿಯಲ್ ನೋಡಿರುವ ನಿಮಗೆ ಅದರಲ್ಲಿನ ನಟ ಹಾಗೂ ನಟಿಯರನ್ನ ನೋಡಿ ಇವರು ಎಷ್ಟು ಸಂಭಾವನೆ ಪಡೆಯುತ್ತಾರೋ ಹಾಗೂ ಬಣ್ಣದ ಜಗತ್ತಿನಲ್ಲಿ ಇವರೇ ಅತೀ ಹೆಚ್ಚು ಸಂಪಾದಿಸುವವರು ಎಂದು ನೀವು ಅಂದಿಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇನ್ನು ಈ ಕ್ಷೇತ್ರದಲ್ಲಿ ಹುಡುಗಿಯರು ಬರೀ ನಟನೆ ಮಾತ್ರವಲ್ಲದೇ ಬೇರೆ ಯಾವೆಲ್ಲಾ ಹುದ್ದೆಯಿಂದ ಹೆಚ್ಚು ಸಂಪಾದಿಸಬಹುದು ಎಂಬ ಮಾಹಿತಿ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ಎಡಿಟರ್

ಎಡಿಟರ್

ಹೌದು ಎಡಿಟಿಂಗ್ ಅಂದಾಗ ಯಾಕೋ ಕಷ್ಟದ ಹಾಗೂ ಟೆಕ್ನಿಕಲ್ ವರ್ಕ್ ಇರಬಹುದೆಂದು ಹುಡುಗಿಯರು ಹಿಂದೇಟು ಹಾಕಬಹುದು. ಆದ್ರೆ ನೋ ವರಿ ಈಗಾಗಲೇ ಪುರುಷರು ಹೆಚ್ಚು ಟ್ಯಾಲೆಂಟ್ ತೋರಿರುವ ಈ ಫೀಲ್ಡ್‌ನಲ್ಲಿ ಹುಡುಗಿಯರು ಕೂಡಾ ವರ್ಕ್ ಮಾಡಿ ತಾವೂ ಕೂಡಾ ಯಾರಿಗೆ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಫಿಲ್ಮ್ ಎಡಿಟಿಂಗ್ ಫೀಲ್ಡ್‌ನಲ್ಲಿ ನೀವು ದುಡಿಯಬೇಕು ಎಂದುಕೊಂಡಿದ್ದರೆ, ಎಫ್‌ಟಿಐಐ ಯಿಂದ ಎಡಿಟಿಂಗ್ ಗೆ ಸಂಬಂಧಪಟ್ಟ ಕೋರ್ಸ್ ಪಡೆಯುವುದು ಉತ್ತಮ.

ಬರಹಗಾರ

ಬರಹಗಾರ

ಟ್ಯಾಲೇಂಟೆಡ್ ಬರಹಗಾರರಿಗೆ ಟಿವಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ನಿಮಗೆ ಇಮೇಜಿನ್ ಮಾಡಿ ಬರೆಯುವ ಕಲೆ ತಿಳಿದಿದ್ದರೆ, ನೀವು ಇಲ್ಲಿ ಹೆಚ್ಚಿನ ದುಡ್ಡು ಸಂಪಾದಿಸಬಹುದು.

 

ಕ್ರಿಯೇಟೀವ್ ಹೆಡ್

ಕ್ರಿಯೇಟೀವ್ ಹೆಡ್

ಸ್ಕ್ರಿಪ್ಟಿಂಗ್, ಪ್ರೊಡಕ್ಷನ್, ಡಿಸೈನಿಂಗ್, ಲಾಜಿಸ್ಟಿಕ್, ಕಾಸ್ಟಿಂಗ್ ಸೇರಿದಂತೆ ಬಣ್ಣದ ಜಗತ್ತಿಗೆ ಸಂಬಂಧಪಟ್ಟ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ತಿಳಿದಿರುವ ಅಭ್ಯರ್ಥಿಗಳಿಗೆ ಟಿವಿ ಶೋಗಳಲ್ಲಿ ಹೆಚ್ಚಿನ ಉದ್ಯೋಗವಕಾಶವಿರುತ್ತದೆ. ಇನ್ನು ಮಹಿಳೆಯರಂತೂ ಮಲ್ಟಿಟಾಸ್ಕ್ ವಿಚಾರದಲ್ಲಿ ಎತ್ತಿದ ಕೈ. ಹಾಗಾಗಿ ಕ್ರಿಯೇಟಿವ್ ಹೆಡ್ ಪೋಸ್ಟ್‌ ನಲ್ಲಿ ಹೆಚ್ಚಾಗಿ ಹುಡುಗಿಯರೇ ಇರುತ್ತಾರೆ.

ಎಕ್ಸ್‌ಕ್ಯುಟೀವ್ ಪ್ರೊಡ್ಯುಸರ್

ಎಕ್ಸ್‌ಕ್ಯುಟೀವ್ ಪ್ರೊಡ್ಯುಸರ್

ಈ ಹುದ್ದೆ ಕ್ರಿಯೇಟಿವ್ ಹುದ್ದೆಗೆ ಹತ್ತಿರದ ಹುದ್ದೆಯಾಗಿರುತ್ತದೆ. ಇನ್ನು ಈ ಹುದ್ದೆಗೆ ಸಂಬಂಧಪಟ್ಟ ಕೋರ್ಸ್ ಗಳು ಕೂಡಾ ಇವೆ. ಫ್ರೀಲೈನ್ಸ್ ಆಗಿ ನೀವು ದುಡಿಯಬಹುದು ಇಲ್ಲ ಪ್ರೊಡಕ್ಷನ್ ಹೌಸ್‌ನಲ್ಲಿಯೂ ಕೆಲಸ ಮಾಡಬಹುದು. ಫಿಲ್ಮ್ ಮೇಕಿಂಗ್ ಕೋರ್ಸ್ ನೀವು ಮಾಡಿದ್ದರೆ, ನಿಮಗೆ ಈ ಹುದ್ದೆ ಬೆಸ್ಟ್. ಇಲ್ಲಂದ್ರೆ ಈಗಾಗಲೇ ಈ ವೃತ್ತಿ ಮಾಡಿಕೊಂಡಿರುವವರ ಸಹಾಯ ಪಡೆದು ನೀವು ಕಲಿತುಕೊಳ್ಳಬಹುದು.

ಡ್ರೆಸ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್

ಡ್ರೆಸ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್

ನಿಮ್ಮ ಲುಕ್ ಶೋನಲ್ಲಿ ಹೇಗೆ ಕಂಡ್ರೆ ಚೆನ್ನ ಎಂದು ಪುರುಷನಿಗಿಂತ ಮಹಿಳೆ ಚೆನ್ನಾಗಿ ಹೇಳಬಲ್ಲಳು. ಹಾಗಾಗಿ ಡ್ರೆಸ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿ ಮಹಿಳೆಯರಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಿಂದೆಲ್ಲಾ ಪುರುಷನೇ ಈ ಕ್ಷೇತ್ರವನ್ನ ನಿಭಾಯಿಸುತ್ತಿದ್ದ. ಆದ್ರೆ ಇದೀಗ ಮಹಿಳೆ ಕೂಡಾ ಈ ಕ್ಷೇತ್ರದಲ್ಲಿ ಮಿಂಚಲಾರಂಭಿಸಿದ್ದಾಳೆ.

 

More News  

For Quick Alerts
ALLOW NOTIFICATIONS  
For Daily Alerts

English summary
Cinema or Serial industry is not only about glamorous actresses. In this industry, more and more talented persons working. Hence, In this fiels requirement for girls is increasing day by day. That also not only in front of the camera, but behind it as well.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+