ಆಫೀಸ್‌ನಲ್ಲಿ ಎಲ್ಲರ ಜತೆ ಚೆನ್ನಾಗಿ ಬೆರೆತು ಕೆಲಸ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಕಾಂಪಿಡೆನ್ಸ್ ನಿಂದ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಬೇಕೆಂದು ಪ್ರತಿಯೊಬ್ಬ ಉದ್ಯೋಗಿ ಕೂಡಾ ಬಯಸುತ್ತಾನೆ. ಆದ್ರೆ ಅದು ಯಾಕೋ ಕನಸಿನ ಮಾತಾಗಿ ಉಳಿಯುತ್ತದೆ. ಈ ಸಮಸ್ಯೆ ನೀವು ಕೂಡಾ ಎದುರಿಸುತ್ತಿದ್ದೀರಾ ಹಾಗಿದ್ರೆ ಇಲ್ಲಿ ಓದಿ. ಈ ವರ್ಷದ ಬೆಸ್ಟ್ ಎಂಪ್ಲಾಯ್ ಅವಾರ್ಡ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ಇಡೀ ದಿನ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡಿದ್ರೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ನೀವು ಈ ಕೆಳಗೆ ನೀಡಿರುವ ವಿಷಯಗಳನ್ನ ಕೂಡಾ ನಿಮ್ಮ ಲೈಫ್ ನಲ್ಲಿ ರೂಢಿಸಿಕೊಳ್ಳಬೇಕು.

ಶಿಸ್ತು:
ಯಾರೂ ಶಿಸ್ತಿನಿಂದ ಇರುವುದಿಲ್ಲವೋ ಅವರು ಸಕ್ಸಸ್ ನಿಂದ ದೂರವುಳಿಯುತ್ತಾರೆ. ನೀವು ಒಳ್ಳೆಯ ಉದ್ಯೋಗಿ ಎಂಬ ಭಾವನೆ ಇತರರಲ್ಲಿ ಮೂಡಬೇಕಾದ್ರೆ ಅಲ್ಲಿ ಶಿಸ್ತು ಪ್ರಮುಖ ಪಾತ್ರವಹಿಸುತ್ತದೆ. ಹೀಗೆ ಸುಮ್ಮನೆ ನಿಮಗೆ ಯಾವುದೇ ಕೆಲಸ ಸಿಗುವುದಿಲ್ಲ. ಇಂಟರ್ ವ್ಯೂ ವೇಳೆ ನೀವು ಎಷ್ಟು ಪಂಕ್ಚುವಲ್ ಇದ್ದೀರಾ ಎಂಬುವುದು ಅವರಿಗೆ ತೋರಿಸಿ ಕೊಡಬೇಕು. ಸರಿಯಾದ ಟೈಂ ಗೆ ನೀವು ಆಫೀಸ್ ಗೆ ಬರಬೇಕು. ಯಾರು ಸರಿಯಾದ ಟೈಂಗೆ ಇಲ್ಲ ಅದಕ್ಕೂ ಮುನ್ನ ಆಫೀಸ್ ಗೆ ಬಂದು ಕೆಲಸ ಮಾಡುತ್ತಾರೋ ಅವರು ಬಾಸ್ ದೃಷ್ಟಿಯಲ್ಲಿ ಒಳ್ಳೆಯವರಾಗಿರುತ್ತಾರೆ.
ಕಾಂಫಿಡೆನ್ಸ್:
ನೀವು ಕೆಲಸ ಮುಗಿಸದೇ ಇದ್ದಿರಬಹುದು, ಇಲ್ಲ ಇನ್ನೂ ಅದೆಷ್ಟೋ ಕೆಲಸ ಬಾಕಿ ಉಳಿಸಿರಬಹುದು. ನಿಮ್ಮ ಕೆಲಸ ಬಾಕಿ ಉಳಿದಿರಲು ಸರಿಯಾದ ಕಾರಣವಿದ್ರೆ ನೀವು ನಿಮ್ಮ ಬಾಸ್ ಬಳಿ ಕಾಂಫಿಡೆನ್ಸ್ ನಿಂದ ಚರ್ಚೆ ಮಾಡಿ. ಕಂಪನಿಯಲ್ಲಿ ಮೀಟಿಂಗ್ ಇದ್ರೆ ಇಲ್ಲ ಸೆಮಿನಾರ್ ಇದ್ರೆ ಹಾಘೂ ಇನ್ನಿತ್ತರ ಆಕ್ಟಿವಿಟಿಗಳಲ್ಲಿ ಕಾಂಫಿಡೆನ್ಸ್ ನಿಂದ ಪಾಲ್ಗೊಳ್ಳಿ.
ಚಾಂಪಿಯನ್ ಮೈಂಡ್‌ಸೆಟ್:
ಚಾಂಪಿಯನ್ ಮೈಂಡ್‌ಸೆಟ್ ನಿಮ್ಮದಾಗಿದ್ರೆ ನೀವು ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಬಹುದು. ಕಡಿಮೆ ಇನ್‌ಪುಟ್‌ನಿಂದ ಬೆಸ್ಟ್ ಔಟ್‌ಪುಟ್ ಕಂಪನಿ ಬಯಸುತ್ತದೆ. ನಿಮ್ಮ ಪ್ರೊಫೈಲ್‌ಗಿಂತ ನೀವು ಹೆಚ್ಚು ಏನಾದ್ರೂ ಕಂಪನಿಗೆ ಕೊಟ್ಟರೆ ನೀವು ಬಾಸ್‌ನ ಮನಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಈ ಗುಣ ಎಲ್ಲಾ ಉದ್ಯೋಗಿಗಳಿಗಿಂತ ನಿಮ್ಮನ್ನ ಇನ್ನೂ ಉತ್ತಮ ಸ್ಥಾನಕ್ಕೆ ಏರಿಸುತ್ತದೆ.
ಪ್ಲ್ಯಾನ್ ಮಾಡಿಕೊಳ್ಳಿ:
ವಿದ್ಯಾರ್ಥಿಗಳು ಹೊಸತೇನಾದ್ರೂ ಕಲಿಯಲು ಯಾವಾಗಲೂ ಪೆನ್ ಹಾಗೂ ನೋಟ್ ಪೇಡ್ ತಮ್ಮ ಜತೆ ಇರಿಸಿಕೊಂಡಿರುತ್ತಾರೆ. ನೀವು ಕೆಲಸ ಮಾಡುವ ಜಾಗದಲ್ಲಿ ಆ ಹ್ಯಾಬಿಟ್ ಈಗಲೂ ಫಾಲೋ ಮಾಡಿ. ನಿಮ್ಮ ಬಾಸ್ ಕಂಪನಿಗೆ ಸಂಬಂಧಪಟ್ಟ ಪಾಲಿಸಿ, ಕೆಲಸ ಇನ್ನಿತ್ತರ ಪ್ರಮುಖ ಡೀಟಲ್ಸ್ ಬಗ್ಗೆ ಚರ್ಚೆ ಮಾಡುವಾಗ ನೀವು ಅದನ್ನ ನೋಟ್ ಮಾಡಿಕೊಳ್ಳಿ. ಹಾಗೂ ಅದನ್ನ ಕಾರ್ಯ ರೂಪಕ್ಕೆ ತರಲು ಮನೆಯಿಂದಲೂ ವರ್ಕ್ ಮಾಡಿ, ಇಲ್ಲ ಆಫೀಸ್‌ನಲ್ಲಿ ಹೆಚ್ಚು ಹೊತ್ತು ಕಾಲ ಕೆಲಸ ಮಾಡಿ. ಇದರಿಂದ ನೀವು ಬಾಸ್‌ನ ಮೆಚ್ಚುಗೆ ಗಳಿಸಬಹುದು.
ಜವಬ್ದಾರಿ:
ವೃತ್ತಿಪರವಾಗಿ ಇಲ್ಲ ವೃತ್ತಿಪರವಾಗಿ ಇಲ್ಲದೇ ಇರಬಹುದು ಆದ್ರೆ ಯಾರು ಜವಬ್ದಾರಿ ಹೊರಲು ಸಿದ್ಧರಿರುತ್ತಾರೋ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸುತ್ತಾರೆ. ನೀವು ನಿಮ್ಮ ಸಹದ್ಯೋಗಿಗಳ ಜತೆ ಉತ್ತಮ ರಿಲೇಶನ್‌ಶಿಪ್ ಜತೆ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ರೆ ನೀವು ಆಫೀಸ್‌ನಲ್ಲಿ ಕೂಡಾ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ನಿಮ್ಮ ಜತೆ ಕೆಲಸ ಮಾಡುವ ಉದ್ಯೋಗಿ ನೀವು ಆಫೀಸ್‌ನಲ್ಲಿ ನೀಡಿರುವ ಟಾಸ್ಕ್ ಕಂಪ್ಲೀಟ್ ಮಾಡದೇ ಇದ್ದರೆ, ನೀವು ಅವರ ಜತೆ ಜವಬ್ದಾರಿ ಹೊತ್ತು ಕೊಂಡು ಕೆಲಸ ಮಾಡಿ ಟಾಸ್ಕ್ ಕಂಪ್ಲೀಟ್ ಮಾಡಲು ಸಹಾಯ ಮಾಡಿ. ಹೀಗೆ ಮಾಡಿದಾಗ ನೀವು ಬಾಸ್‌ನ ಬೆಸ್ಟ್ ಉದ್ಯೋಗಿ ಎನಿಸಿಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.


Click it and Unblock the Notifications











