ನಿಮಗೂ ಕಾಲೇಜು ಹೀರೋ ಎನಿಸಿಕೊಳ್ಳಬೇಕಾ... ಹಾಗಿದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ!

ನಿಮಗೂ ಅನಿಸುತ್ತಿದೆಯಾ ಕಾಲೇಜಿನಲ್ಲಿ ನಾಲ್ಕಾರು ಹುಡುಗರು ಅಣ್ಣಾ ಅಣ್ಣಾ ಎಂದು ನಿಮ್ಮ ಹಿಂದೆ ಮುಂದೆ ಸುತ್ತುತ್ತಿರಬೇಕು ಎಂದು. ಹಾಗಿದ್ರೆ ನೀವು ಮೊದಲಿಗೆ ನಿಮ್ಮ ಪರ್ಸನಾಲಿಟಿ ಸ್ಟ್ರಾಂಗ್ ಮಾಡಿಕೊಳ್ಳಿ. ಇದರ ಜತೆ ಬೇರೆ ಏನೆಲ್ಲಾ ಮಾಡಿಕೊಂಡ್ರೆ ನೀವು ಕಾಲೇಜಿನ ಹೀರೋ ಆಗ್ತೀರಾ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಈ ವಿಷಯಗಳು ನಿಮ್ಮನ್ನ ಕಾಲೇಜಿನ ಹೀರೊವನ್ನಾಗಿಸುತ್ತದೆ:
ಅಣ್ಣಾಗಿರಿ:
ಕೆಲವರು ಕಾಲೇಜಿಗೆ ಗೂಂಡಾಗಿರಿ ಮಾಡೋಕೆ ಬರ್ತಾರೆ. ಕಾಲೇಜಿಗೆ ಎಂಟ್ರಿ ಆಗುತ್ತಿದ್ದಂತೆಯೇ ಸೀನಿಯರ್ಸ್ ಗೆ ನಡುಕ ಹುಟ್ಟಿಸುತ್ತಾರೆ. ಅಷ್ಟೇ ಅಲ್ಲ ತಮ್ಮ ಪರಿಚಯ ಎಲ್ಲರಿಗೂ ಆಗಬೇಕೆಂದು ತಿರುಗಾಡುತ್ತಾ ಇರುತ್ತಾರೆ. ಸೈಕಲ್ ಸ್ಟ್ಯಾಂಡ್ ಹಾಗೂ ಕ್ಯಾಂಟೀನ್‌ಗಳಲ್ಲಿ ಇವರು ಹೆಚ್ಚು ಕಾಲಕಳೆಯುತ್ತಾರೆ. ಯಾರಿಗಾದ್ರೂ ತೊಂದರೆ ಯಾದಾಗ ಅವರು ಕೂಡಲೇ ನೇರವಾಗಿ ಇವರನ್ನೇ ಸಂಪರ್ಕಿಸುತ್ತಾರೆ. ಇವರಿಗೆ ಪ್ರತಿಯೊಬ್ಬರೂ ಕೂಡಾ ಹೆದರುತ್ತಾರೆ.
ಎಲ್ಲರಿಗೂ ಪರಿಚಿತ:
ಕೆಲವು ಹುಡುಗರು ಹೀಗೂ ಇರುತ್ತಾರೆ ಕಾಲೇಜು ಗೇಟ್ ಬಳಿ ಇರುವ ಸೆಕ್ಯುರಿಟಿಯಿಂದ ಹಿಡಿದು, ಕುಲಪತಿ ವರೆಗೂ ಇವರ ಪರಿಚಯವಿರುತ್ತದೆ. ಏನಾದ್ರೂ ಕೆಲಸ ಆಗಬೇಕಾದ್ರೆ ಹುಡುಗ ಇರಲಿ ಇಲ್ಲ ಹುಡುಗಿ ಇರಲಿ ಇವರನ್ನೇ ಮೊದಲಿಗೆ ನೆನಪಿಸಿಕೊಳ್ಳುತ್ತಾರೆ. ಜ್ಯೂನಿಯರ್ಸ್ ಹುಡುಗಿಗೆ ಯಾವುದಾದ್ರೂ ಪುಸ್ತಕ ಬೇಕಿದ್ರೆ ಆಕೆಗಾಗಿ ಇಡೀ ಲೈಬ್ರರಿ ಹುಡುಕಾಡಿ ಪುಸ್ತಕ ಕೊಡಲು ತಯಾರಿರುತ್ತಾರೆ. ಅಷ್ಟೇ ಅಲ್ಲ ಫ್ರೀ ಇದ್ದಾಗ ಹೆಚ್‌ಓಡಿ ಜತೆ ಕುಳಿತು ಟೀ ಕೂಡಾ ಕುಡಿದು ಮಸ್ತಿ ಕೂಡಾ ಮಾಡುತ್ತಾರೆ.
ಸ್ಟೂಡೆಂಟ್ ಲೀಡರ್:
ಇವರು ಸ್ಟೂಡೆಂಟ್ ಲೀಡರ್ ಕೂಡಾ ಆಗಿರುತ್ತಾರೆ. ಏನಾದ್ರೂ ಬೇಡಿಕೆಗಳಿದ್ರೆ ಅದರ ಮುತ್ತುವರ್ಜಿ ವಹಿಸಿ ಅದಕ್ಕಾಗಿ ಪ್ರತಿಭಟನೆ , ಹೋರಾಟ ಮಾಡಲೂ ಕೂಡಾ ಸಿದ್ಧರಿರುತ್ತಾರೆ. ಅದಕ್ಕಾಗಿ ಇವರು ಒಂದು ಟೀಂ ಕೂಡಾ ರಚಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೇ ಇತರ ಕಾಲೇಜುಗಳ ಮುಖಂಡರ ಜತೆ ಕೂಡಾ ಇವರು ನೇರ ಸಂಪರ್ಕದಲ್ಲಿ ಇರುತ್ತಾರೆ
ಬ್ಯಾಂಡ್‌ಗಳಲ್ಲಿ ಗುರುತಿಸಿಕೊಂಡಿರಬೇಕು: ಹುಡುಗ ಗಿಟರ್ ಬಾರಿಸಿದ್ರೆ ಇಲ್ಲ ಹಾಡು ಹಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತಾನೆ. ಇನ್ನೂ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಇರುವ ಹುಡುಗರಿಗೆ ಹುಡುಗಿಯರು ಬೇಗನೇ ಆಕರ್ಷಿತರಾಗುತ್ತಾರೆ. ಇಡೀ ಕಾಲೇಜಿನ ಇವರ ಬಗ್ಗೆ ಚರ್ಚೆ ನಡೆಯುತ್ತದೆ. ಇಂತಹ ಹುಡುಗರಿಗೆ ಹುಡುಗಿಯರು ಬೇಗನೇ ಆಕರ್ಷಿತರಾಗುತ್ತಾರೆ.
ನಾವು ಹೇಳಿದ ಇಷ್ಟು ಕ್ವಾಲಿಟಿಗಳಲ್ಲಿ ಕಡಿಮೆ ಅಂದ್ರೂ ಎರಡು ಕ್ವಾಲಿಟಿ ನಿಮ್ಮದಾಗಿದ್ರೆ ಖಂಡಿತ ನೀವು ಕೂಡಾ ಕಾಲೇಜು ಹೀರೋ ಆಗುವುದರಲ್ಲಿ ಡೌಟ್ ಇಲ್ಲ.


Click it and Unblock the Notifications











