ಬ್ಲಾಗರ್ ಆಗುವುದು ಹೇಗೆ... ನೀವು ನೋಡಿರಬಹುದು ಅದೆಷ್ಟೋ ಮಂದಿ ನಿಮ್ಮ ಸುತ್ತ ಮುತ್ತ ಇರೋರು ಸೋಶಲ್ ಮೀಡಿಯಾದಲ್ಲಿ ಸ್ವಲ್ಪ ಫೇಮಸ್ ಆಗಿರುತ್ತಾರೆ. ಅದಕ್ಕೆ ಕಾರಣ ಅವರ ಬ್ಲಾಗ್.

ನಿಮಗೂ ಅವರ ತರಹ ಸೋಶಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕಾ... ಹಾಗಿದ್ರೆ ನೀವು ಕೂಡಾ ಯಾಕೆ ನಿಮ್ಮದೇ ಆದ ಬ್ಲಾಗ್ ತೆರೆಯಬಾರದು. ಇದರಿಂದ ನೀವು ಕೂಡಾ ಫೇಮಸ್ ಆಗಬಹುದು. ಹಾಗೂ ಅಂತರ್ಜಾಲ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದ್ದೇ ಇದೆ.
ನಿಮಗೂ ಕೂಡಾ ಬ್ಲಾಗರ್ ಆಗಿ ಫೇಮಸ್ ಎನಿಸಿಕೊಳ್ಳಬೇಕಾದ್ರೆ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ. ಫಾಲೋ ಮಾಡಿ.
ಅಭಿರುಚಿ ವಿಷಯ ಆಯ್ಕೆ ಮಾಡಿ:
ನೀವು ಯಾವ ವಿಷಯದಲ್ಲಿ ಆಸಕ್ತಿ ಹಾಗೂ ಕಂಟ್ರೋಲ್ ಹೊಂದಿದ್ದೀರಾ ಎಂದು ಮೊದಲು ನಿರ್ಧರಿಸಿಕೊಳ್ಳಿ. ಪ್ರತಿಯೊಬ್ಬರೂ ಆಸಕ್ತಿಯೂ ವಿಭಿನ್ನವಾಗಿರುತ್ತದೆ. ನಿಮ್ಮ ಆಸಕ್ತಿಗನುಗುಣವಾಗಿ ಒಂದು ಸಬ್‌ಜೆಕ್ಟ್ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ನೀವು ಆಹಾರ ಪ್ರಿಯರಾಗಿದ್ದರೆ ಫುಡ್‌ಗೆ ಸಂಬಂಧಪಟ್ಟಂತೆ ಬ್ಲಾಗ್ ತೆರೆಯಬಹುದು. ಫ್ಯಾಶನ್ ಲವರ್ ಆಗಿದ್ದರೆ ಲೈಫ್ ಸ್ಟೈಲ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಬ್ಲಾಗ್ ತೆರೆಯಿರಿ. ಹೀಗೆ ನಿಮ್ಮ ಇಷ್ಟ ಹಾಗೂ ಅಭಿರುಚಿಗೆ ತಕ್ಕಂತೆ ಬ್ಲಾಗ್ ತೆರೆಯುವುದು ಬೆಸ್ಟ್.
ರಫ್ ಆಗಿ ಮಾಡಿ ಅಭಿಪ್ರಾಯ ಸಂಗ್ರಹಿಸಿ:
ನಮ್ಮ ಸ್ನೇಹಿತರೇ ನಮ್ಮ ಬೆಸ್ಟ್ ವಿಮರ್ಶಕರಾಗಿರುತ್ತಾರೆ. ಜಗತ್ತಿಗೆ ಏನನ್ನೋ ಪರಿಚಯಸಿಬೇಕು ಎಂದಿದ್ದರೋ ಅದರ ಬಗ್ಗೆ ರಫ್ ಆಗಿ ಬರೆಯಿರಿ. ಮೊದಲಿಗೆ ಸ್ನೇಹಿತರಿಗೆ ತೋರಿಸಿ ಅವರ ಅಭಿಪ್ರಾಯ ಸಂಗ್ರಹಿಸಿಕೊಳ್ಳಿ. ಅಷ್ಟೇ ಅಲ್ಲ ಅವರಿಂದ ಕೆಲವೊಂದು ಸಲಹೆ ಹಾಗೂ ಐಡಿಯಾಗಳನ್ನ ಕೂಡಾ ಪಡೆಯುವುದು ಬೆಸ್ಟ್. ಬಳಿಕ ಎಲ್ಲಾ ಪರ್ಫೇಕ್ಟ್ ಎನಿಸಿಕೊಂಡ ಬಳಿಕ ಬ್ಲಾಗ್ ತೆರೆಯಿರಿ.
ಯೂನಿಕ್ ಐಡಿಯಾ:
ಈಗಾಗಲೇ ಟ್ರಾವೆಲ್, ಫುಡ್ ಹಾಗೂ ಲೈಫ್ ಸ್ಟೈಲ್ ಗೆ ಸಂಬಂಧಪಟ್ಟಂತೆ ಅನೇಕ ಬ್ಲಾಗ್ ಗಳಿವೆ. ನೀವು ಕೂಡಾ ಅದೇ ವಿಚಾರವಾಗಿ ಬ್ಲಾಗ್ ತೆರೆಯಬೇಕು ಎಂದು ಅಂದುಕೊಂಡಿದ್ದರೆ, ಸ್ವಲ್ಪ ಯೂನಿಕ್ ಆಗಿ ಹೊಸ ಆಲೋಚನೆ ಕೂಡಿರುವ ಐಡಿಯಾಗಳಿಂದ ಬ್ಲಾಗ್ ತೆರೆಯಿರಿ.
ಪ್ರತೀ ದಿನ ಪೋಸ್ಟ್ ಮಾಡಿ:
ಕೆಲವರು ಬ್ಲಾಗ್ ತೆರೆದು ತಿಂಗಳಿಗೊಮ್ಮೆ ಮಾತ್ರ ಏನಾದ್ರೂ ಆಕ್ಟಿವಿಟಿ ಮಾಡಿ ಹಾಕುತ್ತಾರೆ. ಇದರಿಂದ ನಿಮ್ಮ ಫ್ಯಾನ್ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗುತ್ತದೆ. ಅಪರೂಪಕ್ಕೆ ಪೋಸ್ಟ್ ಮಾಡುವವರನ್ನ ಯಾರೂ ಕೂಡಾ ಫಾಲೋ ಮಾಡುವುದಿಲ್ಲ. ಹಾಗಾಗಿ ಪ್ರತಿ ದಿನ ಏನಾದ್ರೂ ಪೋಸ್ಟ್ ಮಾಡಲು ಪರ್ಯತ್ನ ಮಾಡಿ.
ಸೋಶಲ್ ಮೀಡಿಯಾ ಸಹಾಯ ಪಡೆಯಿರಿ:
ಬ್ಲಾಗ್ ನಲ್ಲಿ ಪ್ರತೀ ದಿನ ಪೋಸ್ಟ್ ಮಾಡಿದ್ರೆ ಸಾಲದು ಬದಲಿಗೆ ಸೋಶಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರಬೇಕು. ಫೇಸ್‌ಬುಲ್, ಟ್ವಿಟರ್ ನಲ್ಲಿ ಸದಾ ಫ್ಯಾನ್ಸ್ ಜತೆ ಕನೆಕ್ಟ್ ಆಗಿರಿ. ಇದರಿಂದ ನಿಮ್ಮ ಪೋಸ್ಟ್ ಬೇಗನೇ ರೀಚ್ ಆಗುವುದು ಮಾತ್ರವಲ್ಲದೇ ತುಂಬಾ ಲೈಕ್ ಹಾಗೂ ಶೇರ್ ಸಿಗುವುದು. ಲೈಕ್ ಮತ್ತು ಶೇರ್ ಸಂಖ್ಯೆ ಹೆಚ್ಚಾದಂತೆ ನಿಮಗೆ ಬರುವ ಆದಾಯವೂ ಕೂಡಾ ಹೆಚ್ಚಾಗುವುದು


Click it and Unblock the Notifications











