ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ?

ಆಫೀಸ್ ನೆಗಟೀವಿಟಿ ಮಧ್ಯೆ ಕೆಲಸ ಮಾಡುವುದೆಂದ್ರೆ ಅದೊಂದು ತುಂಬಾ ಕಷ್ಟಕರವಾದ ಟಾಸ್ಕ್. ಹೌದು ಇವತ್ತು ನಾವು ಮಾತನಾಡುತ್ತಿರುವುದು ಆಫೀಸ್ ನೆಗಟೀವಿಟಿ ಬಗ್ಗೆ

ಆಫೀಸ್ ನೆಗಟೀವಿಟಿ ಮಧ್ಯೆ ಕೆಲಸ ಮಾಡುವುದೆಂದ್ರೆ ಅದೊಂದು ತುಂಬಾ ಕಷ್ಟಕರವಾದ ಟಾಸ್ಕ್. ಹೌದು ಇವತ್ತು ನಾವು ಮಾತನಾಡುತ್ತಿರುವುದು ಆಫೀಸ್ ನೆಗಟೀವಿಟಿ ಬಗ್ಗೆ. ನೆಗಟೀವಿಟಿ ಎಂಬುವುದು ತುಂಬ ಕಷ್ಟಕರ ವಿಷಯ. ಇದು ನಮ್ಮ ಪರ್ಫೋಮೆನ್ಸ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ?

ಈ ನೆಗಟೀವಿಟಿಯಿಂದ ಸ್ಮಾರ್ಟ್ ಆಗಿ ಹೊರ ಬರುವುದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮುಂದಕ್ಕೆ ಓದಿ.

ಜನರ ಜತೆ ಸೋಶಲ್ ಆಗಿರಿ:

ಇಂತ ಸನ್ನಿವೇಶದಲ್ಲಿ ನೀವು ಏನು ಮಾಡಬೇಕು ಅಂದ್ರೆ ನಿಮ್ಮ ಸಹದ್ಯೋಗಿಗಳ ಜತೆ ಉತ್ತಮ ರಿಲೇಶನ್ ಶಿಪ್ ಕಾಯ್ದಿರಿಸಿಕೊಳ್ಳಿ. ಇದರಿಂದ ನೀವು ಅವರನ್ನ ಅರ್ಥಮಾಡಿಕೊಳ್ಳಬಹುದು ಮಾತ್ರವಲ್ಲ, ನಿಮ್ಮ ಗುರಿ, ನಿಮ್ಮ ಜ್ಞಾನದ ಬಗ್ಗೆ ಅವರಿಗೂ ತಿಳಿಯುವುದು. ಕೆಲವೊಮ್ಮೆ ಕೆಲವರು ಯಾವುದೇ ಚರ್ಚೆಯಲ್ಲಿ ಭಾಗಿಯಾಗದೆ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಇದ್ದು ಬಿಡುತ್ತಾರೆ. ಆದ್ರೆ ಇದು ಅವರ ಅಟ್ಯುಟುಡ್ ಮಟ್ಟವನ್ನ ನಿಮ್ಮ ಮುಂದೆ ಇಡುತ್ತದೆ. ಹಾಗಾಗಿ ಸಹದ್ಯೋಗಿಗಳ ಜತೆ ಉತ್ತಮ ಬಾಂಧವ್ಯದಿಂದ ಇರುವುದು ಬೆಸ್ಟ್

ಗಾಸಿಪ್ ಗಳಿಗೆ ಕಿವಿ ಕೊಡಬೇಡಿ:

ಒಮ್ಮೆ ನೀವು ಸಹದ್ಯೋಗಿಗಳ ಜತೆ ಉತ್ತಮ ಬಾಂಧ್ಯವ್ಯ ಹೊಂದಿದ ಮೇಲೆ ಅವರು ಹೇಳುವ ಗಾಸಿಪ್ ಗಳಿಗೆ ಕಿವಿ ಕೊಡಬೇಡಿ. ಆಫೀಸ್ ಬಾಸ್, ಹಾಗೂ ಇನ್ನಿತ್ತರ ಸಹದ್ಯೋಗಿಗಳ ಬಗ್ಗೆ ಅವರು ಗಾಸಿಪ್ ಮಾಡುವಾಗ ಕಿವಿ ಕೊಡಬೇಡಿ. ಯಾಕೆಂದ್ರೆ ನೆಗಟೀವಿಟಿ ಎಂಬುವುದು ಪ್ರಾರಂಭವಾಗುವುದು ಇಲ್ಲಿಂದಲೇ.

ಗಾಸಿಪ್ ಮಾಡುವ ವ್ಯಕ್ತಿಗಳಿಂದ ದೂರವಿರುವುದು ಬೆಸ್ಟ್ ಅಷ್ಟೇ ಅಲ್ಲ ಅವರು ಗಾಸಿಪ್ ಮಾಡಲು ಬಂದಾಗ ನಂಗೆ ಇಂಟ್ರೆಸ್ಟ್ ಇಲ್ಲ ಎಂದು ಅಲ್ಲಿಂದ ಹೊರಟು ಹೋಗಿ.

ಒಂದು ಹೆಜ್ಜೆ ಮುಂದಕ್ಕೆ ಬನ್ನಿ:

ನಿಮಗೆ ಯಾವುದಾದ್ರೂ ವಿಚಾರ ಕಷ್ಟ ಹಾಗೂ ಇರಿಟೇಟ್ ಎಂದು ಅನಿಸಿದರೆ, ನೋ ವರಿ ಒಂದು ಹೆಜ್ಜೆ ಮುಂದಕ್ಕೆ ಬನ್ನಿ. ಆ ವಿಚಾರದ ಬಗ್ಗೆ ನೇರವಾಗಿ ಮಾತನಾಡಿ. ಕೆಲವೊಮ್ಮೆ ಹೆಚ್ಚಿನ ಟೀಂ ವರ್ಕ್ ಕೂಡಾ ನೆಗಟೀವಿಟಿ ಸೃಷ್ಟಿಸುತ್ತದೆ. ಹಾಗಾಗಿ ಅದನ್ನ ಅಲ್ಲಿಗೆ ಸ್ಟಾಪ್ ಮಾಡಿ.

ಪಾಸಿಟೀವ್ ಆಗಿರಿ:

ಪರ್ಫೇಕ್ಟ್ ಬ್ಯಾಲೆನ್ಸ್ ಇರಿಸಬೇಕಾದ್ರೆ ನೀವು ಪಾಸಿಟಿವಿಟಿ ಸ್ಪ್ರೆಡ್ ಮಾಡವುದು ಬೆಸ್ಟ್. ಇದರಿಂದ ನೀವು ಹ್ಯಾಪಿ ಆಗಿ ಇರುತ್ತೀರಿ. ಯಾರೇ ನಿಮ್ಮ ಬಗ್ಗೆ ಕೆಟ್ಟದ್ದು ಮಾತನಾಡಿದ್ರೂ ನೀವು ಮಾತ್ರ ಇತರರ ಬಗ್ಗೆ ಒಳ್ಳೆಯದನ್ನೇ ಮಾತನಾಡಿ. ಪಾಸಿಟೀವ್ ಮಾತುಗಳನ್ನೇ ಆಡುವುದು ಉತ್ತಮ.

ಫೋಕಸ್ ಆಗಿರಿ:

ಒಮ್ಮೆ ನೀವು ಕೆಲಸ ಪ್ರಾರಂಭಿಸಿದ್ದೀರಿ ಎಂದಾದ್ರೆ ನಿಮ್ಮ ವರ್ಕ್ ಹಾಗೂ ಪ್ರಾಜೆಕ್ಟ್ ಬಗ್ಗೆ ಹೆಚ್ಚು ಗಮನಕೊಟ್ಟು ಕೆಲಸ ಮಾಡಿ. ಇತರರ ಅಸೂಯೆ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸದ ಗುರಿಯತ್ತ ಹೆಚ್ಚು ಫೋಕಸ್ ಮಾಡುವುದರಿಂದ ನೆಗಟೀವಿಟಿಯಿಂದ ನೀವು ದೂರವಿರಬಹುದು.

For Quick Alerts
ALLOW NOTIFICATIONS  
For Daily Alerts

English summary
The Office negativity it is one of the most frustrating things to deal with and sometimes it also affects yhe performance result highly. Here are the important 5 ways to deal with the office negativity.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X