ಸಚಿನ್, ಧೋನಿ ವಿರಾಟ್, ಮಿಥಾಲಿ ತರಹ ಕ್ರಿಕೆಟರ್ ಆಗೋ ಕನಸು ಕಾಣೋರಿಗೆ ಇಲ್ಲಿದೆ ಸಲಹೆ

By Kavya

ಎಲ್ಲರ ಜೀವನದಲ್ಲೂ ಒಂದು ಕನಸಿರುತ್ತದೆ ಜೀವನದಲ್ಲಿ ಏನಾದ್ರೂ ಒಂದು ಸಾಧನೆ ಮಾಡಬೇಕು ಎಂದು. ಇನ್ನು ಚಿಕ್ಕ ಮಕ್ಕಳಂತೂ ತಾವು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಇಲ್ಲ ವಿರಾಟ್ ಕೊಹ್ಲಿ ತರಹ ಫೇಮಸ್ ಕ್ರಿಕೆಟರ್ ಆಗಬೇಕೆಂದು ಬಯಸುತ್ತಾರೆ. ಬಾಲ್ಯದಿಂದಲೇ ಮಕ್ಕಳಿಗೆ ಕ್ರಿಕೆಟ್ ನೆಚ್ಚಿನ ಆಟವಾಗಿರತ್ತದೆ.

ಸಚಿನ್, ಧೋನಿ ವಿರಾಟ್, ಮಿಥಾಲಿ ತರಹ ಕ್ರಿಕೆಟರ್ ಆಗೋ ಕನಸು ಕಾಣೋರಿಗೆ ಇಲ್ಲಿದೆ ಸಲಹೆ

 

ನಮ್ಮ ದೇಶದ ಆಟ ಹಾಕಿ ಆದ್ರೂ ಎಲ್ಲರಿಗೂ ಕ್ರಿಕೆಟ್ ಅಂದ್ರೆ ಏನೋ ಒಂಥರಾ ಕ್ರೇಜ್. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಕ್ರಿಕೆಟ್ ಅಚ್ಚುಮೆಚ್ಚು. ಇನ್ನು ಕ್ರಿಕೆಟ್ ಇದೆ ಎಂದಾದ್ರೆ ಊಟ, ತಿಂಡಿ ಬಿಟ್ಟು ಕೂಡಾ ನೋಡ್ತಾ ಕುಳಿತುಕೊಳ್ಳುತ್ತಾರೆ.ಹಾಗಾಗಿ ಮುಂದೆ ದೊಡ್ಡವರಾದ ಮೇಲೆ ಡಾಕ್ಟರ್, ಇಂಜಿನೀಯರ್ ಆಗಬೇಕೆಂದು ಕನಸು ಕಾಣುವ ಮಕ್ಕಳ ಹಾಗೇ ತಾವು ಮುಂದೆ ದೊಡ್ಡ ಫೇಮಸ್ ಕ್ರಿಕೆಟರ್ ಆಗಬೇಕೆಂದು ಅದೆಷ್ಟೋ ಮಕ್ಕಳು ಕನಸು ಕಾಣುತ್ತಾರೆ.

Most Read: ರೆಸ್ಯೂಮ್ ನಲ್ಲಿ ಈ ಮಾಹಿತಿ ಇದ್ರೆ ಇಂದೇ ತೆಗೆದುಬಿಡಿ, ಕೆಲಸ ಸಿಗದೇ ಇರಲು ಇದು ಕೂಡಾ ಕಾರಣ ಇರುತ್ತೆ

ಹೆಸರು, ಹಣ, ಖ್ಯಾತಿ ಎಲ್ಲವೂ ಸಿಗುವಂತಹ ಕ್ರಿಕೆಟ್ ಜಗತ್ತಿಗೆ ನೀವು ಕೂಡಾ ಎಂಟ್ರಿ ಆಗಬೇಕೆಂಬ ಬಯಸಿದ್ರೆ ಅದಕ್ಕೆ ಏನೆಲ್ಲಾ ಮಾಡಬೇಕೆಂದು ನಿಮಗೆ ಇದೀಗ ಸಲಹೆ ನೀಡುತ್ತಿದ್ದೇವೆ ಮುಂದಕ್ಕೆ ಓದಿ:

ಬಾಲ್ಯದಿಂದಲೇ ಕ್ರಿಕೆಟ್ ಆಡಿ

ಬಾಲ್ಯದಿಂದಲೇ ಕ್ರಿಕೆಟ್ ಆಡಿ

ಯಾರು ಕ್ರಿಕೆಟ್‌ ನಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕೆಂದು ಬಯಸ್ಸಿದ್ದಲ್ಲಿ, ಅವರು ಬಾಲ್ಯದಿಂದಲೇ ಕ್ರಿಕೆಟ್ ಆಡಲು ಪ್ರಾರಂಭಿಸಬೇಕು. ಬಾಲ್ಯದಿಂದಲೇ ಕ್ರಿಕೆಟ್ ಕಡೆ ಗಮನಕೊಡಬೇಕು. ಇದೀಗ ಭಾರತದ ಕ್ರಿಕೆಟ್ ಟೀಂನಲ್ಲಿ ಯಾರೆಲ್ಲಾ ಇದ್ದಾರೋ ಅವರು ಬಾಲ್ಯವನ್ನು ಕ್ರಿಕೆಟ್ ಆಡಿಯೇ ಕಳೆದವರು. ಶಾಲಾ ಜೀವನದಲ್ಲಿ ಕ್ರಿಕೆಟ್ ನತ್ತ ಹೆಚ್ಚು ಫೋಕಸ್ ಮಾಡಿ. ಶಾಲಾ ದಿನಗಳಲ್ಲಿ ಚಿಕ್ಕ ಚಿಕ್ಕ ಟೂರ್ನಮೆಂಟ್ ಇರುತ್ತದೆ. ಇಂತಹ ಟೂರ್ನಮೆಂಟ್ ಗಳಲ್ಲಿ ತಪ್ಪದೇ ಭಾಗವಹಿಸಿ, ಅನುಭವ ಪಡೆದುಕೊಳ್ಳಿ.

ಫಿಟ್ ನೆಸ್ ಕಡೆ ಗಮನ

ಫಿಟ್ ನೆಸ್ ಕಡೆ ಗಮನ

ಕ್ರಿಕೆಟರ್ ಆಗಬೇಕೆಂದು ಕನಸು ಕಾಣುವವರು ತಮ್ಮ ಶರೀರದ ಬಗ್ಗೆಯೂ ಗಮನಕೊಡಬೇಕಾಗುತ್ತದೆ. ಯಾಕೆಂದ್ರೆ ನಿಮ್ಮ ಮೈಕಟ್ಟು ಕ್ರಿಕೆಟ್ ನಲ್ಲಿ ಮತ್ತಷ್ಟು ನೀವು ಮಿಂಚುವಂತೆ ಮಾಡಬಲ್ಲದು. ಕ್ರಿಕೆಟ್ ಅಂದ್ರೆ ಓಡುವುದು, ಬೀಳುವುದು, ರನ್ ಮಾಡುವುದು, ವಿಕೆಟ್ ತೆಗೆಯುವುದು ಇದ್ದೇ ಇರುತ್ತದೆ. ಆದ್ರೆ ಇದಕ್ಕೆಲ್ಲಾ ನಿಮ್ಮ ಶರೀರವು ಫ್ಲೆಕ್ಸಿಯಾಗಿ ಸಪೋರ್ಟ್ ಮಾಡಬೇಕು. ಅದಕ್ಕಾಗಿ ನೀವು ಫಿಟ್ ನೆಸ್ ನತ್ತ ಬಾಲ್ಯದಿಂದಲೇ ಗಮನ ಕೊಡಬೇಕು.

ಶಾಲೆ ಮಾತ್ರವಲ್ಲದೆ ಹೊರಗಿನ ಇನ್ನಿತ್ತರ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ
 

ಶಾಲೆ ಮಾತ್ರವಲ್ಲದೆ ಹೊರಗಿನ ಇನ್ನಿತ್ತರ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ

ಕ್ರಿಕೆಟರ್ ಆಗುವುದು ತುಂಬಾ ಸುಲಭದ ವಿಚಾರ ಎಂದು ನೀವು ಅಂದುಕೊಂಡಿದ್ದರೆ ಅದು ಸುಳ್ಳು. ನೀವು ಹೆಚ್ಚು ಪರಿಶ್ರಮ ಪಡದೇ ಇದ್ದರೆ ಫೇಮಸ್ ಕ್ರಿಕೆಟರ್ ಆಗಲು ಕೂಡಾ ಸಾಧ್ಯವಿಲ್ಲ. ಹಾಗಾಗಿ ಶಾಲೆಯಿಂದ ಹೊರಗಡೆ ನಡೆಯುವ ಸಣ್ಣ ಅಥವಾ ದೊಡ್ಡ ಯಾವುದೇ ಟೂರ್ನಮೆಂಟ್ ಆದ್ರೂ ಸರಿ ನೀವು ಭಾಗವಹಿಸಿ.ಅದರಲ್ಲಿ ಚೆನ್ನಾಗಿ ಪ್ರದರ್ಶನ ನೀಡಲು ಪ್ರಯತ್ನಪಡಿ. ಇದರಿಂದ ನಿವು ರಣಜಿ, ದಿಲಿಪ್ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ಟೀಂನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯ.

 ಯಾವತ್ತೂ ಮನಸ್ಸು ಬದಲಿಸಬೇಡಿ

ಯಾವತ್ತೂ ಮನಸ್ಸು ಬದಲಿಸಬೇಡಿ

ಹೆಚ್ಚಿನ ಮಕ್ಕಳು ಏನು ಮಾಡುತ್ತಾರೆ ಎಂದ್ರೆ ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ ಕನಸು ಕಂಡಿದ್ದು, ಬೆಳೆಯುತ್ತಾ ಇತರರ ಒತ್ತಾಯದ ಮೇರೆಗೆ ತಮ್ಮ ಆ ಕನಸನ್ನ ಅಲ್ಲಿಗೆ ಬಿಟ್ಟು ಬಿಡುತ್ತಾರೆ. ಆದ್ರೆ ಅದು ಸರಿಯಲ್ಲ ನೀವು ಕ್ರಿಕೆಟರ್ ಆಗಬೇಕೆಂದು ಬಯಸ್ಸಿದಲ್ಲಿ ಯಾವುದೇ ಕಾರಣಕ್ಕೂ ಮನಸ್ಸು ಬದಲಿಸಬೇಡಿ. ಹಾರ್ಡ್ ವರ್ಕ್ ಮಾಡಿ. ಹಾರ್ಡ್ ವರ್ಕ್ ಮಾಡಿದ್ರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ

ಕ್ರಿಕೆಟ್ ಅಕಾಡೆಮಿ

ಕ್ರಿಕೆಟ್ ಅಕಾಡೆಮಿ

ಕ್ರಿಕೆಟರ್ ಆಗಬೇಕೆಂದು ಬಯಸುವವರು ಕ್ರಿಕೆಟ್ ಅಕಾಡೆಮಿ ಸೇರುವುದು ಕೂಡಾ ಬೆಸ್ಟ್ ಐಡಿಯಾ. ಇಲ್ಲಿ ಚಾಣಾಕ್ಷತನದಿಂದ ಹೇಗೆ ಕ್ರಿಕೆಟರ್ ಆಗಬೇಕು ಎಂದು ಕಲಿಸಿಕೊಡಲಾಗುತ್ತದೆ. ಆದ್ರೆ ಇಲ್ಲಿನ ಶುಲ್ಕ ಭರಿಸಲು ಸಾಧ್ಯವಾಗದೇ ಅದೆಷ್ಟೋ ಮಕ್ಕಳು ಕ್ರಿಕೆಟರ್ ಆಗುವ ಕನಸು ಅರ್ಧಕ್ಕೆ ಬಿಟ್ಟು ಬಿಡುತ್ತಾರೆ.

ನಿಮ್ಮ ಮೇಲೆ ವಿಶ್ವಾಸವಿರಲಿ

ನಿಮ್ಮ ಮೇಲೆ ವಿಶ್ವಾಸವಿರಲಿ

ಹೌದು ನೀವು ಚೆನ್ನಾಗಿ ಕ್ರಿಕೆಟ್ ಆಡ ಬಲ್ಲೀರಿ ಎಂದು ನಿಮ್ಮಲ್ಲಿ ನೀವು ವಿಶ್ವಾಸ ಬೆಳೆಸಿಕೊಳ್ಳಿ. ಹಾಗೂ ನೀವು ಜಿಲ್ಲಾ ಮಟ್ಟದ ಕ್ರಿಕೆಟ್ ಟೀಂನಲ್ಲಿ ಚೆನ್ನಾಗಿ ಆಡಿದ್ರೆ ನಂತರ ರಾಜ್ಯಮಟ್ಟದ ಕ್ರಿಕೆಟ್ ನಲ್ಲಿ ಆಡಲು ಅವಕಾಶ ಸಿಗುತ್ತದೆ. ಇದರಿಂದ ನಿಮ್ಮ ಕನಸು ಸಕಾರಗೊಳಿಸಲು ಅವಕಾಶ ಸಿಕ್ಕಂತಾಗುತ್ತದೆ. ನಂತರ ಐಪಿಎಲ್ ನಂತರಹ ಲೀಗ್‌ನಲ್ಲಿ ಆಡಲು ಅವಕಾಶ ಸಿಗುವುದಲ್ಲದೇ, ಟೀಂ ೨೦ ಲೀಗ್‌ನಲ್ಲೂ ಅವಕಾಶ ಸಿಗುವುದು. ಈ ಎಲ್ಲಾ ಅವಕಾಶ ಬಳಸಿಕೊಂಡ ಬಳಿಕ ನೇರವಾಗಿ ಭಾರತದ ಟೀಂಗೆ ಆಯ್ಕೆಯಾಗುವ ಅವಕಾಶ ನಿಮಗೆ ಸಿಗಲಿದೆ

Most Read: ಬ್ಯಾಡ್ ಬಾಸ್ ಎಂದು ಮುಖಸಿಂಡರಿಸಿಕೊಳ್ಳಬೇಡಿ, ಅವರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
Hockey is the national game of our country But Most Of people have craze about cricket. And All Age of people's most Favorite sports is cricket. Children, youth, old age people, male, female, all are fan of cricket
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more