ಆಫೀಸ್‌ನಲ್ಲಿ ಬಾಸ್‌ನ್ನ ಇಂಪ್ರೇಸ್ ಮಾಡಬೇಕಾ... ಹಾಗಿದ್ರೆ ಹೀಗೆ ಮಾಡಿ !

ನಾವು ಯಾವುದಾದರೂ ಹೊಸ ಕೆಲಸಕ್ಕೆ ಸೇರ್ಪಡೆಯಾದಾಗ ನಮ್ಮೊಳಗೆ ಒಂದು ರೀತಿಯ ಭಯವಿರುತ್ತದೆ.

ನಾವು ಯಾವುದಾದರೂ ಹೊಸ ಕೆಲಸಕ್ಕೆ ಸೇರ್ಪಡೆಯಾದಾಗ ನಮ್ಮೊಳಗೆ ಒಂದು ರೀತಿಯ ಭಯವಿರುತ್ತದೆ. ಬಾಸ್ ಹೇಗಿರಬಹುದು, ಅವರಿಗೆ ನಮ್ಮ ಕೆಲಸ ಇಷ್ಟವಾಗಬಹುದಾ ಎಂಬ ಅನುಮಾನಗಳೂ ನಮ್ಮಲ್ಲಿ ಮನೆ ಮಾಡಿರುತ್ತವೆ. ನೀವು ಕೂಡಾ ಹೊಸ ಕೆಲಸಕ್ಕೆ ಸೇರ್ಪಡೆಯಾಗುವವರಿದ್ದರೆ ಇಲ್ಲ ಈಗಷ್ಟೇ ಕೆಲಸಕ್ಕೆ ಸೇರಿದವರಾಗಿದ್ದರೆ ಬಾಸನ್ನ ಯಾವ ರೀತಿ ಇಂಪ್ರೇಸ್ ಮಾಡಬಹುದು ಎಂಬ ಮಾಹಿತಿ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತದೆ.

ಆಫೀಸ್‌ನಲ್ಲಿ ಬಾಸ್‌ನ್ನ ಇಂಪ್ರೇಸ್ ಮಾಡಬೇಕಾ... ಹಾಗಿದ್ರೆ ಹೀಗೆ ಮಾಡಿ !

ಸಮಕ್ಕೆ ಸರಿಯಾಗಿ ತಲುಪಿ:

ಮೊದಲ ಬಾರಿಗೆ ಕೆಲಸಕ್ಕೆ ಹೋಗುವವರಾಗಿದ್ದರೆ, ಇಲ್ಲ ಅನುಭವಿ ಕೆಲಸಗಾರರಾಗಿದ್ದರೆ ಯಾವುದೇ ಕಂಪನಿಗೆ ಸೇರಿದ ಕೂಡಲೇ ಮೊದಲಿಗೆ ನೀವು ಟೈಂ ಫಾಲೋ ಮಾಡಬೇಕು. ಸರಿಯಾದ ಸಮಯಕ್ಕೆ ಹೋಗಿ ಕಛೇರಿ ತಲುಪಬೇಕು. ಇನ್ನು ಮೊದಲ ದಿನವಂತೂ ಬೇಕಾದ್ರೆ ಬೇಗ ಹೋಗಿ ತಲುಪಿ ಆದ್ರೆ ತಡಮಾಡಬೇಡಿ. ನೀವು ಸರಿಯಾದ ಸಮಯಕ್ಕೆ ಕಚೇರಿಗೆ ಬಂದ್ರೆ ನಿಮ್ಮ ಬಾಸ್ ಖಂಡಿತ ಇಂಪ್ರೇಸ್ ಆಗುತ್ತಾರೆ.

ಮಾತಿನ ಮಧ್ಯೆ ಬಾಯಿ ಹಾಕುವುದು:

ಕೆಲವರು ತಮ್ಮನ್ನ ತಾವೇ ಹೀರೋ ಇಲ್ಲ ಬಾಸ್ ಅಂದುಕೊಂಡಿರುತ್ತಾರೆ. ಹಾಗಾಗಿ ಅಂತಹವರು ಬಾಸ್ ಮಾತನಾಡುವಾಗ ಮಧ್ಯೆ ಮಧ್ಯೆ ಮಾತನಾಡುತ್ತಾರೆ. ಕೆಲವೊಮ್ಮೆ ಸಂಬಂಧವಿಲ್ಲದ ವಿಚಾರ ಮಾತನಾಡುತ್ತಾರೆ. ಹಾಗಾಗಿ ಈ ವಿಚಾರದತ್ತ ಗಮನವಿರಲಿ. ಬಾಸ್ ಮಾತನಾಡಿದ ಬಳಿಕವೇ ನೀವು ವಿನಮ್ರರಾಗಿ ಮಾತು ಪ್ರಾರಂಭಿಸಿ. ವಿಪರೀತವಾಗಿ ಮಾತನಾಡಿ ಬಾಸ್ ಮುಂದೆ ಮರ್ಯಾದೆ ಕಳೆದುಕೊಳ್ಳಬೇಡಿ.

ಡೆಡ್ ಲೈನ್ ಬಗ್ಗೆ ಗಮನವಿರಲಿ:

ಹೊಸತ್ತಾಗಿ ಕಂಪನಿ ಸೇರಿದ ಕೂಡಲೇ ನಿಮಗೆ ಎಲ್ಲಾ ಕೆಲಸ ಗೊತ್ತಾಗುವುದಿಲ್ಲ. ಹಾಗಂತ ಕಲೆಯಲು ತಡಮಾಡಬೇಡಿ. ಕೂಡಲೇ ಕಲಿತುಕೊಂಡು ಕಂಪನಿಯ ಡೆಡ್ ಲೈನ್ ಒಳಗೆ ಕೊಟ್ಟಿರುವ ಟಾರ್ಗೇಟ್ ಕೆಲಸ ಮುಗಿಸಿಬಿಡಿ.

ಕೆಲಸದಲ್ಲಿ ಆಸಕ್ತಿ ತೋರಿಸಿ:

ಕಂಪನಿಯಲ್ಲಿ ಯಾವುದಾದರೂ ಹೊಸ ಕೆಲಸವಿದ್ದಾಗ ಹೆಚ್ಚಾಗಿ ಉದ್ಯೋಗಿಗಳು ಅದನ್ನ ಮಾಡಲು ಆಸಕ್ತಿ ತೋರಿಸುವುದಿಲ್ಲ. ಆದ್ರೆ ನೀವು ಹಾಗೆ ಮಾಡಬೇಡಿ. ನಿಮಗೆ ಗೊತ್ತಿಲ್ಲದಿದ್ದರೂ ಇತರರಿಂದ ತಿಳಿದುಕೊಂಡು ಆ ಕೆಲಸ ಮಾಡಲು ಮುಂದಾಗಿ. ಇದರಿಂದ ಬಾಸ್‌ಗೆ ನಿಮ್ಮ ಮೇಲೆ ಹೆಮ್ಮೆ ಮೂಡುವುದು. ಅಷ್ಟೇ ಅಲ್ಲ ನಿಮ್ಮ ಕೆಲಸದಿಂದ ಅವರು ಇಂಪ್ರೇಸ್ ಕೂಡಾ ಆಗುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
It would be nive if we lived in a world where our bosses judged us solely by the quality and quantity of our work. However the reality is that personal impressions are very important.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X