ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಅನೇಕ ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಕುಳಿತು ಓದಿದರೂ ಪರೀಕ್ಷಾ ಸಂದರ್ಭದಲ್ಲಿ ಮಾತ್ರ ಓದಿದ್ದು ನೆನಪಾಗುತ್ತಿಲ್ಲ ಎಂದು ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅದಕ್ಕೆ ಕಾರಣ ಹಲವಾರಿವೆ. ಪ್ರತಿ ಮಗುವೂ ಶಾಲೆಯಲ್ಲಿ ಮೊದಲ ರ್ಯಾಂಕ್ ಪಡೆಯಲು ಸಾಧ್ಯವಿಲ್ಲ. ಒಂದೊಂದು ಮಗು ಕೂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಂದ ಮಾತ್ರಕ್ಕೆ ಪೋಷಕರು ಸುಮ್ಮನಾಗಬೇಕಿಲ್ಲ. ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಏನು ಮಾಡಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ.

ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಈ ಅಂಶಗಳನ್ನು ಗಮನವಿಡಿ. ಮಕ್ಕಳು ಸದಾ ಪುಸ್ತಕ ಹಿಡಿದು ಕುಳಿತರೆ ಓದಿದಂತಾಗುವುದಿಲ್ಲ. ಬದಲಾಗಿ ಓದು ಹೇಗಿರಬೇಕು ಮತ್ತು ಓದಿದ್ದು ನೆನಪಿನಲ್ಲುಳಿಯುವಂತೆ ಮಾಡುವುದು ಹೇಗೆ ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.

ವಿದ್ಯಾರ್ಥಿಗಳು ಓದಿದ್ದನ್ನು ಹೆಚ್ಚು ಸಮಯ ನೆನಪಿನಲ್ಲಿಡಲು ಹೀಗೆ ಮಾಡಿದರೆ ಸಾಕು!

ಅಧ್ಯಯನ ಮಾಡುವ ಮುನ್ನ ಕೊಂಚ ವಾಕ್ ಮಾಡಿ:
 

ಅಧ್ಯಯನ ಮಾಡುವ ಮುನ್ನ ಕೊಂಚ ವಾಕ್ ಮಾಡಿ:

ವಿದ್ಯಾರ್ಥಿಗಳು ಪ್ರತಿನಿತ್ಯ ಓದುವ ಮುಂಚೆ 15 ನಿಮಿಷಗಳ ಕಾಲ ವಾಕ್ ಮಾಡುವುದು ಒಳಿತು. ಇದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಬೆಳಗ್ಗೆಯಿಂದ ತರಗತಿಯಲ್ಲಿ ಸಮಯ ಕಳೆದ ಮಕ್ಕಳಿಗೆ ಮಾನಸಿಕವಾಗಿ ಒತ್ತಡಗಳಿರುತ್ತವೆ ಹಾಗಾಗಿ ಅಧ್ಯಯನ ಮಾಡುವ ಮುನ್ನ ಕೊಂಚ ದೂರ ನಡೆದರೆ ಅಧ್ಯಯನ ಮಾಡಲು ಆಸಕ್ತಿ ಉಂಟಾಗುವುದು.

ಧ್ಯಾನ ಮಾಡಿ:

ಧ್ಯಾನ ಮಾಡಿ:

ವಿದ್ಯಾರ್ಥಿಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಹೆಚ್ಚು ಅವಶ್ಯಕ. ಹಾಗಾಗಿ ಬೆಳಗ್ಗೆ ಮತ್ತು ಸಂಜೆ ಅಧ್ಯಯನಕ್ಕೆ ಕೂರುವ ಮುನ್ನ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ ಇದರಿಂದ ಮೆದುಳು ಮತ್ತು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ಪ್ರತಿನಿತ್ಯ ಅಧ್ಯಯನವನ್ನು ಯಾವುದೇ ರೀತಿಯ ದ್ವಂದ್ವಗಳಿಲ್ಲದೆ ಮತ್ತು ಆಯಾಸವಿಲ್ಲದೆ ಸುಲಭವಾಗಿ ಮಾಡಬಹುದು.

ನೀರು ಮತ್ತು ಆಹಾರ ಸೇವನೆ ಮುಖ್ಯ:

ನೀರು ಮತ್ತು ಆಹಾರ ಸೇವನೆ ಮುಖ್ಯ:

ಆರೋಗ್ಯ ಚೆನ್ನಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಅಂದಿನ ಪಾಠವನ್ನು ಅಂದೇ ಅಧ್ಯಯನ ಮಾಡಲು ಸಾಧ್ಯ ಮತ್ತು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ. ಹಾಗಾಗಿ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ. ಪ್ರತಿನಿತ್ಯ ಹೆಚ್ಚು ನೀರು ಕುಡಿಯಿರಿ ಮತ್ತು ಉತ್ತಮ ಆಹಾರ ಸೇವನೆಯನ್ನು ಮಾಡಿ. ಮೆದುಳಿನ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರವನ್ನು ಹೆಚ್ಚು ಸೇವಿಸಿ.

ಪುಸ್ತಕವನ್ನು ಕಣ್ಣಾಡಿಸಿ ಓದುವ ಬದಲು ಜೋರಾಗಿ ಬಾಯಿಂದ ಓದಿ:
 

ಪುಸ್ತಕವನ್ನು ಕಣ್ಣಾಡಿಸಿ ಓದುವ ಬದಲು ಜೋರಾಗಿ ಬಾಯಿಂದ ಓದಿ:

ಅನೇಕ ಮಕ್ಕಳು ಪುಸ್ತಕ ಹಿಡಿದು ಹೆಚ್ಚು ತಾಸು ಸುಮ್ಮನೆ ಓದುತ್ತಾ ಕುಳಿಯುತ್ತಾರೆ. ಆದರೆ ಇಂತಹ ಸಮಯದಲ್ಲಿ ಮನಸ್ಸು ಬೇರೆಡೆಗೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳು ಜೋರಾಗಿ ಬಾಯಿ ಬಿಟ್ಟು ಓದಿದಾಗ ವಿಷಯ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ.

ಓದಿದ್ದನ್ನು ಇನ್ನೊಬ್ಬರೊಂದಿಗೆ ಚರ್ಚಿಸಿ:

ಓದಿದ್ದನ್ನು ಇನ್ನೊಬ್ಬರೊಂದಿಗೆ ಚರ್ಚಿಸಿ:

ಅನೇಕ ಮಕ್ಕಳ ತಾವು ಓದಿ ಉತ್ತಮ ಅಂಕಗಳಿಸಬೇಕೆಂಬ ಆಲೋಚನೆಗಳನ್ನು ಹೊಂದಿರುತ್ತಾರೆ ಆದರೆ ಇದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ. ತಾವು ಓದಿದ ವಿಷಯವನ್ನು ಸ್ನೇಹಿತರೊಂದಿಗೆ ಚರ್ಚಿಸುವುದು ಮತ್ತು ಅವರಿಗೆ ವಿವರಿಸುವಂತಹ ಚಟುವಟಿಕೆಗಳನ್ನು ಮಾಡಿದಾಗ ವಿಷಯ ಜ್ಞಾನ ಹೆಚ್ಚುವುದರ ಜೊತೆಗೆ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿಟ್ಟುಕೊಳ್ಳಬಹುದು.

ಪಠ್ಯದಲ್ಲಿರುವ ಚಿತ್ರಗಳನ್ನು ಅಭ್ಯಾಸ ಮಾಡಿ:

ಪಠ್ಯದಲ್ಲಿರುವ ಚಿತ್ರಗಳನ್ನು ಅಭ್ಯಾಸ ಮಾಡಿ:

ವಿದ್ಯಾರ್ಥಿಗಲು ಪುಟಗಟ್ಟಲೆ ಓದಿದ್ದಕ್ಕಿಂದ ಕ್ಷಣಕಾಲ ನೋಡಿದಂತಹ ಪಠ್ಯದಲ್ಲಿನ ಚಿತ್ರಗಳು ಹೆಚ್ಚು ನೆನಪಿಗೆ ಬರುತ್ತವೆ. ಹಾಗಾಗಿ ಪಾಠಗಳಲ್ಲಿ ಇರುವ ಚಿತ್ರಗಳನ್ನು ಬಿಡಿಸುವ ಅಭ್ಯಾಸವನ್ನು ಹೆಚ್ಚು ಮಾಡಿ. ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ವಿಷಯವು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಅಧ್ಯಯನದ ನಡುವೆ ವಿರಾಮ ತೆಗೆದುಕೊಳ್ಳಿ:

ಅಧ್ಯಯನದ ನಡುವೆ ವಿರಾಮ ತೆಗೆದುಕೊಳ್ಳಿ:

ವಿದ್ಯಾರ್ಥಿಗಳು ಸದಾ ಓದಿನಲ್ಲಿ ಮಗ್ನರಾಗಿದ್ದರೆ ಓದಿನಲ್ಲಿ ಆಸಕ್ತಿ ಕಡಿಮೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. 40 ರಿಂದ 45 ನಿಮಿಷಗಳ ಕಾಲ ನಿರಂತರ ಅಧ್ಯಯನ ಮಾಡಿದ್ದಲ್ಲಿ ತದನಂತರ 10 ರಿಂದ 15 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಅಧ್ಯಯನ ಮಾಡುವುದು ಒಳಿತು. ಹೀಗೆ ಮಾಡಿದಾಗ ಯಾವುದೇ ವಿಷಯಗಳನ್ನು ಮರೆಯಲು ಸಾಧ್ಯವಿಲ್ಲ ಹಾಗೂ ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸುಲಭವಾಗುವುದು.

ಮನಸ್ಸಿಗೆ ರಿಲ್ಯಾಕ್ಸ್ ಆಗುವ ಸಂಗೀತ ಕೇಳಿ:

ಮನಸ್ಸಿಗೆ ರಿಲ್ಯಾಕ್ಸ್ ಆಗುವ ಸಂಗೀತ ಕೇಳಿ:

ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಎಲ್ಲ ವಿಷಯಗಳಿಂದಲೂ ದೂರವಿರಬೇಕೆಂದಿಲ್ಲ. ಮನಸ್ಸಿಗೆ ಮುದ ನೀಡವ ಆಸಕ್ತಿಗೆ ಪೂರಕವಾಗುವಂತಹ ಸಂಗೀತವನ್ನು ಕೇಳಿ. ಅಧ್ಯಯನ ನಡುವೆ ವಿರಾಮ ತೆಗೆದುಕೊಳ್ಳುವಂತಹ ಸಮಯದಲ್ಲಿ ವಿದ್ಯಾರ್ಥಿಗಳು ಈ ರೀತಿ ಮಾಡಿದರೆ ಮನಸ್ಸು ಉಲ್ಲಾಯುತವಾಗಿರುತ್ತದೆ ಜೊತೆಗೆ ರಿಲ್ಯಾಕ್ಸ್ ಕೂಡ ಸಿಗುತ್ತದೆ. ತದನಂತರ ಅಧ್ಯಯನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು.

ಸ್ನೇಹಿತರೊಂದಿಗೆ ಅಧ್ಯಯನ ಮಾಡಿ:

ಸ್ನೇಹಿತರೊಂದಿಗೆ ಅಧ್ಯಯನ ಮಾಡಿ:

ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಕೋಣೆಯೊಳಗೆ ಒಬ್ಬರೇ ಕುಳಿತು ಅಧ್ಯಯನ ಮಾಡುವುದನ್ನು ನೋಡುತ್ತಿರುತ್ತೇವೆ. ಆದರೆ ಶಾಲೆಯಲ್ಲಿ ಸ್ನೇಹಿತರೊಂದಿಗೆ ಕುಳಿತು ಅಧ್ಯಯನ ಮಾಡುತ್ತಾ, ಚರ್ಚಿಸುತ್ತಾ ಇನ್ನೊಬ್ಬರಿಗೆ ಹೇಳಿಕೊಡುತ್ತಾ ಅಧ್ಯಯನ ಮಾಡಿದರೆ ನಿಮ್ಮಂತೆ ಇತರರೂ ಓದಿನತ್ತ ಗಮನಕೊಡುತ್ತಾರೆ. ಅಷ್ಟೇ ಅಲ್ಲದೇ ನಿಮಗೂ ವಿಷಯ ಜ್ಞಾನ ಹೆಚ್ಚುತ್ತದೆ. ಪಠ್ಯದ ಬಗೆಗೆ ಕೆಲವು ಸಂದೇಹಗಳು ಉಂಟಾಗುತ್ತದೆ ಅದನ್ನು ಗೆಳೆಯರೊಡನೆ ಮಾತನಾಡಿ ಪರಿಹರಿಸಿಕೊಳ್ಳುವ ಅವಕಾಶವು ದೊರೆಯುತ್ತದೆ. ಹೀಗೆ ಮಾಡಿದರೆ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿಟ್ಟುಕೊಳ್ಳಬಹುದು.

ಕಷ್ಟವಾದ ವಿಷಯವನ್ನು ಹೆಚ್ಚು ಅಧ್ಯಯನ ಮಾಡಿ:

ಕಷ್ಟವಾದ ವಿಷಯವನ್ನು ಹೆಚ್ಚು ಅಧ್ಯಯನ ಮಾಡಿ:

ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳು ಬಹು ಬೇಗ ಅರ್ಥವಾಗುವುದಿಲ್ಲ ಮತ್ತೆ ಕೆಲವು ವಿಷಯಗಳು ಬಹು ಬೇಗ ನೆನಪಾಗುವುದಿಲ್ಲ. ಅಂತಹ ವಿಷಯಗಳನ್ನು ಹೆಚ್ಚು ಸಮಯ ಅಧ್ಯಯನ ಮಾಡಿದರೆ ನಿಮಗೆ ವಿಷಯವು ಅರ್ಥವಾಗುವುದರ ಜೊತೆಗೆ ಹೆಚ್ಚು ಕಾಲ ನೆನಪಿನಲ್ಲಿಡಲು ಸಾಧ್ಯವಾಗುವುದು.

ಈ ಎಲ್ಲಾ ಸರಳ ವಿಧಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಿದ್ದಲ್ಲಿ ಅಧ್ಯಯನವು ಯಾವುದೇ ಹಂತದಲ್ಲಿಯೂ ಕುಂಟಿತಗೊಳ್ಳುವುದಿಲ್ಲ. ಪ್ರಾಥಮಿಕ ಹಂತದ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ಹಂತದವರೆಗೂ ಈ ಅಂಶಗಳನ್ನು ನೆನಪಿನಲ್ಲಿಟ್ಟು ಅಧ್ಯಯನ ಮಾಡಿ. ಇದರಿಂದ ನೀವು ಪ್ರತಿಭಾವಂತ ವಿದ್ಯಾರ್ಥಿಯಾಗುವುದರ ಜೊತೆಗೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತೀರಿ.

For Quick Alerts
ALLOW NOTIFICATIONS  
For Daily Alerts

English summary
Here we are giving some tips for students to improve memory for studying. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more