ಬೋರಿಂಗ್ ವಿಷಯವ‌ನ್ನು ಇಂಟರೆಸ್ಟಿಂಗ್ ಆಗಿಸೋದು ಹೇಗೆ?

By Kavya

ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಗೊಂಡಿದೆ ಹಾಗೆಯೇ ಅನೇಕ ಪರೀಕ್ಷೆಗಳು ಸಮೀಪಿಸುತ್ತಿದೆ ಇದಕ್ಕಾಗಿ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುತ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿ ಇದೀಗ ಲಾಂಗ್ ಗ್ಯಾಪ್ ನಂತರ ಪರೀಕ್ಷೆ ಬರೆಯುತ್ತಿದ್ದಾರೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಬೋರಿಂಗ್ ಸಬ್‌ಜೆಕ್ಟ್‌ ಅನ್ನೋದು ಇದ್ದೇ ಇರುತ್ತದೆ. ಆ ವಿಷ್ಯದ ಬಗ್ಗೆ ಆಸಕ್ತಿಯೇ ಇರೋದಿಲ್ಲ. ಆದರೆ ಪರೀಕ್ಷೆಗಾಗಿ ಓದಲೇಬೇಕಾದ ಅನಿವಾರ್ಯ ಹಾಗಾಗಿ ವಿದ್ಯಾರ್ಥಿಗಳು ಇಷ್ಟವಾಗದ ವಿಷಯವನ್ನು ಹೇಗೆ ಆಸಕ್ತಿಯಿಂದ ಓದುವಂತೆ ಮಾಡಬಹುದು ಎನ್ನವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಈ ಲೇಖನವನ್ನು ಓದಿದ ಬಳಿಕ ವಿದ್ಯಾರ್ಥಿಗಳಿಗೆ ನಿಮಗೆ ಇಷ್ಟವಾಗದ ಸಬ್‌ಜೆಕ್ಟ್ ಕೂಡ ಇಂಟ್ರೆಸ್ಟಿಂಗ್ ಅನಿಸುತ್ತದೆ ನೋಡಿ.

1. ಹಾಸ್ಯ ಸೇರಿಸಿ

1. ಹಾಸ್ಯ ಸೇರಿಸಿ

ನಾವು ಶಾಲಾ ದಿನಗಳಲ್ಲಿ ಕಲಿತ ಗಣಿತದ ಸೂತ್ರಗಳು ಹಾಗೂ ವಿಜ್ಞಾನದ ಫಾರ್ಮುಲಾಗಳು ನಮಗೆ ನೆನಪಿನಲ್ಲಿ ಉಳಿಯದೇ ಇರಬಹುದು. ಆದರೆ ಶಾಲಾ ದಿನಗಳಲ್ಲಿ ಸ್ನೇಹಿತರ ಜೊತೆ ಮಾಡಿರುವ ತಮಾಷೆಗಳು ಖಂಡಿತಾ ನೆನಪಿರುತ್ತದೆ. ಈಗೀನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವಿಷಯವೂ ಬಹಳಷ್ಟು ವಿಧಾನಗಳಲ್ಲಿ ದೊರೆಯುತ್ತದೆ. ಯಾವುದೇ ಆಸಕ್ತಿದಾಯಕವಲ್ಲದ ವಿಷಯವನ್ನು ತಮಾಷೆಯಾಗಿ ಬಿಂಬಿಸಬೇಕು. ಇದರಿಂದ ಅ ವಿಷಯ ನಿಮಗೆ ಸುಲಭವಾಗಿ ನೆನಪಿನಲ್ಲಿರುತ್ತದೆ.

2. ವಿಭಿನ್ನ ದೃಷ್ಠಿಕೋನವನ್ನು ಇಟ್ಟುಕೊಳ್ಳಿ

2. ವಿಭಿನ್ನ ದೃಷ್ಠಿಕೋನವನ್ನು ಇಟ್ಟುಕೊಳ್ಳಿ

ನಾವು ನೋಡುವ ದೃಷ್ಠಿಕೋನವೇ ತಪ್ಪಾಗಿರುವುದರಿಂದ ಆ ವಿಷ್ಯದ ಸೌಂದರ್ಯವನ್ನು ನಾವು ಕಳೆದುಕೊಳ್ಳುತ್ತೇವೆ, ಸೌಂದರ್ಯವನ್ನೆವುದು ನೋಡುಗರ ನೋಟದಲ್ಲಿದೆ ಅನ್ನೋದು ನಿಜ, ಹಾಗಿರುವಾಗ ನಮ್ಮ ದೃಷ್ಠಿಕೋನವನ್ನೇ ಏಕೆ ಬದಲಾಯಿಸಬಾರದು.

3. ಅದ್ಭುತವಾಗಿಸಿ

3. ಅದ್ಭುತವಾಗಿಸಿ

ಕಾದಂಬರಿ ಓದೋದಕ್ಕಿಂತ ಕಾಮಿಕ್ ಪುಸ್ತಕವನ್ನು ಓದೋದು ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಯಾಕೆಂದರೆ ಯಾವುದೆಲ್ಲಾ ನಮಗೆ ಸಂತೋಷವನ್ನು ನೀಡುತ್ತದೆ. ಅದು ನಮ್ಮ ಮನಸ್ಸಿನಲ್ಲಿ ಬೇಗನೇ ಫಿಕ್ಸ್ ಆಗುತ್ತದೆ. ಗ್ರಾಫಿಕ್ಸ್ ಆಗಿರಬಹುದು. ಫೋಟೋಗಳಾಗಿರಬಹುದು ವಿಷಯವನ್ನು ಖುಷಿ ನೀಡುವಂತಹ ರೀತಿಯಲ್ಲಿ ವ್ಯಕ್ತಪಡಿಸುವಂತಿದ್ದರೆ ನೀವು ಅದನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ.

4. ಪ್ರಶ್ನಾವಳಿಗಳನ್ನು ರಚಿಸಿ

4. ಪ್ರಶ್ನಾವಳಿಗಳನ್ನು ರಚಿಸಿ

ಮುಖ್ಯ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ. ಅದಕ್ಕೆ ಉತ್ತರಗಳನ್ನು ಕಂಡುಹಿಡಿಯಿರಿ. ಚಿಕ್ಕದಾಗಿ ಚೊಕ್ಕದಾದ ಉತ್ತರ ರಚಿಸಿ. ಹೀಗೆ ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ ಅದಕ್ಕೆ ಉತ್ತರವನ್ನೂ ಕಂಡುಕೊಳ್ಳಲು ಪ್ರಯತ್ನಿಸುತ್ತೀರಾ. ಇದು ಮುಂದೆಯೂ ಸಹಾಯವಾಗುತ್ತದೆ.

5. ಕೇಸ್‌ ಸ್ಟಡಿ

5. ಕೇಸ್‌ ಸ್ಟಡಿ

ಇತರ ಬೋರಿಂಗ್ ವಿಧಾನಗಳನ್ನು ಅನುಸರಿಸುವ ಬದಲು ಕೇಸ್‌ ಸ್ಟಡಿ ಮಾಡಿ. ಹೊರಗಿನ ಪ್ರಪಂಚದಲ್ಲಿ ವಿಷ್ಯವನ್ನು ಹೇಗೆ ಅಳವಡಿಸ ಬಹುದು ಎನ್ನುವುದು ಕೇಸ್‌ ಸ್ಟಡಿಯಿಂದ ತಿಳಿಯುತ್ತದೆ. ಪುಸ್ತಕ ಓದಿದರೂ ಸಿಗದಂತಹ ಮಾಹಿತಿಯನ್ನು ಕೇಸ್‌ ಸ್ಟಡಿ ನೀಡುತ್ತದೆ. ಇದು ನಿಮ್ಮನ್ನು ಚಾಲೆಂಜಿಂಗ್‌ನ್ನಾಗಿಸುತ್ತದೆ ಜೊತೆಗೆ ಇವುಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನೂ ತಿಳಿಸುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
The opinions we form on some subjects which seem boring can be due to various reasons. maybe your teacher didn’t make it interesting enough or you don’t have the necessary foundations, etc.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+