Preparation Tips For Supplementary Exam : ಪೂರಕ ಪರೀಕ್ಷಾ ತಯಾರಿಗೆ ಸಲಹೆಗಳು ಇಲ್ಲಿವೆ

ಪರೀಕ್ಷೆಯೆಂದರೆ ಸೋಲು ಗೆಲುವು ಎರಡನ್ನೂ ಸ್ವೀಕರಿಸಲು ಸದಾ ಸಿದ್ಧರಿರಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೇ ಮುಂದೆ ಸಾಗುವುದೇ ವಿದ್ಯಾರ್ಥಿಗಳ ನಿಜವಾದ ಸವಾಲು. ಕಳೆದ ಮೇ 19ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಪ್ರಕಟಗೊಂಡಿದೆ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹಾಗಂತ ವಿದ್ಯಾರ್ಥಿಗಳು ಧೈರ್ಯಗೆಡುವುದು ಬೇಡ, ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡುವ ಸಲುವಾಗಿಯೇ ಪೂರಕ ಪರೀಕ್ಷೆಗಳಿವೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ತಯಾರಿಗೆ ಸಲಹೆಗಳು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪೂರಕ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷಾ ತಯಾರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಲಾಗುತ್ತಿದೆ ಓದಿ ತಿಳಿಯಿರಿ ಮತ್ತು ಸಲಹೆಗಳನ್ನು ಪಾಲಿಸಿ.

ಪೂರಕ ಪರೀಕ್ಷೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ :

ಪೂರಕ ಪರೀಕ್ಷೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ :

ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಅಥವಾ ಇನ್ಯಾವುದೇ ಪರೀಕ್ಷೆಯಲ್ಲಿ ಅಗತ್ಯವಿರುವ ಅಂಕಗಳನ್ನು ಪಡೆಯಲು ಪೂರಕ ಪರೀಕ್ಷೆಗಳು ಎರಡನೇ ಅವಕಾಶವಾಗಿ ಪರಿಣಮಿಸುತ್ತವೆ. ಮೂಲ ಪರೀಕ್ಷೆಯನ್ನು ವಿವಿಧ ಕಾರಣಗಳಿಂದಾಗಿ ತೇರ್ಗಡೆ ಹೊಂದದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಹತೆ ಪಡೆಯಬಹುದು. ಆರಂಭಿಕ ಪರೀಕ್ಷೆಗಳನ್ನು ತೆಗೆದುಕೊಂಡ ಕೆಲವು ವಾರಗಳ ನಂತರ ಈ ಪರೀಕ್ಷೆಯು ನಡೆಯುತ್ತದೆ.

ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣಕ್ಕೆ ಕಠಿಣ ಶ್ರಮ :

ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣಕ್ಕೆ ಕಠಿಣ ಶ್ರಮ :

ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉತ್ತಮ ಮಾರ್ಗವೆಂದರೆ ಕಠಿಣ ಅಧ್ಯಯನ ಮಾಡುವುದು. ನೀವು ಪೂರಕ ಪರೀಕ್ಷೆಗೆ ಹಾಜರಾಗುವ ಕಾರಣ ನೀವು ವಿಶ್ರಾಂತಿ ಪಡೆಯಬೇಕು ಮತ್ತು ಲಘುವಾಗಿ ತೆಗೆದುಕೊಳ್ಳಬಹುದು ಎಂದರ್ಥವಲ್ಲ. ನಿಮಗೆ ಲಭ್ಯವಿರುವ ಸಮಯದಲ್ಲಿ ಆದಷ್ಟು ಬೇಗ ಅಧ್ಯಯನವನ್ನು ಕೈಗೊಳ್ಳಬೇಕು. ನಿಮ್ಮ ಅಧ್ಯಯನದ ವೇಳಾಪಟ್ಟಿಯಲ್ಲಿ ನಮ್ಮ ಸಲಹೆಗಳನ್ನು ಪಾಲಿಸಿ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಪಡೆಯಿರಿ.

ನಿಮ್ಮ ತಪ್ಪುಗಳನ್ನು ಗುರುತಿಸಿ :

ನಿಮ್ಮ ತಪ್ಪುಗಳನ್ನು ಗುರುತಿಸಿ :

ನೀವು ಈಗಾಗಲೇ ಪರೀಕ್ಷೆಯನ್ನು ಬರೆದಿದ್ದರೆ ಪೂರಕ ಪತ್ರಿಕೆಯಲ್ಲಿ ಉತ್ತೀರ್ಣರಾಗಲು ಉತ್ತಮ ಮಾರ್ಗವೆಂದರೆ ನಿಮ್ಮ ತಪ್ಪುಗಳನ್ನು ಗುರುತಿಸುವುದು. ನೀವು ಈ ಮುಂಚೆ ಎಲ್ಲಿ ಎಡವಿದ್ದೀರಿ ಎಂದು ಅರ್ಥೈಸಿಕೊಳ್ಳಿ, ಆಗ ನಿಮ್ಮ ತಪ್ಪುಗಳು ನಿಮಗೆ ಮನವರಿಕೆಯಾಗುತ್ತವೆ. ಹಾಗಾಗಿ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುವವರು ಮೊದಲು ನಿಮ್ಮ ತಪ್ಪುಗಳನ್ನು ಗುರುತಿಸಿ ತಿದ್ದುವ ಪ್ರಯತ್ನ ಮಾಡಿ.

ಹೊಸ ಅಧ್ಯಯನ ತಂತ್ರಗಳನ್ನು ಪ್ರಯತ್ನಿಸಿ :

ಹೊಸ ಅಧ್ಯಯನ ತಂತ್ರಗಳನ್ನು ಪ್ರಯತ್ನಿಸಿ :

ನೀವು ವರ್ಷಗಳಿಂದ ಒಂದೇ ರೀತಿಯ ಅಧ್ಯಯನ ವಿಧಾನಗಳನ್ನು ಬಳಸುತ್ತಿದ್ದೀರಾ? ಬಹುಶಃ ಹೊಸದನ್ನು ಪ್ರಯತ್ನಿಸುವ ಸಮಯವಿದು ಎಂಬುದನ್ನು ತಿಳಿಯಿರಿ. ನೀವು ಕಲಿಯುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಓದುವ ವಿಧಾನವನ್ನು ಹುಡುಕಿಕೊಳ್ಳಿ. ನಿಮ್ಮ ಸಹಪಾಠಿಗಳನ್ನು ಅವರು ಯಾವ ಅಧ್ಯಯನ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಕೇಳುವುದು ಮತ್ತು ಅದನ್ನು ಪಾಲಿಸುವುದು ಒಳಿತು.

ವಿಷಯವನ್ನು ಅರ್ಥಮಾಡಿಕೊಳ್ಳಿ :

ವಿಷಯವನ್ನು ಅರ್ಥಮಾಡಿಕೊಳ್ಳಿ :

ಅಧ್ಯಯನ ಎಂದರೆ ತಿಳುವಳಿಕೆ ಎಂದರ್ಥ. ನಿಮ್ಮ ಕೋರ್ಸ್ ವಿಷಯವನ್ನು ನೀವು ಓದಬಹುದು ಆದರೆ ನೀವು ಅದನ್ನು ಅರ್ಥಮಾಡಿಕೊಂಡಿದ್ದೀರಾ? ನೀವು ಏನು ಅಧ್ಯಯನ ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಫೇಲ್ ಮತ್ತು ಪಾಸ್ ನಡುವಿನ ವ್ಯತ್ಯಾಸವನ್ನು ಪರಿಹರಿಸುತ್ತದೆ.

ಗುಂಪು ಅಧ್ಯಯನ ಮಾಡಿ :

ಗುಂಪು ಅಧ್ಯಯನ ಮಾಡಿ :

ಒಂದಕ್ಕಿಂತ ಎರಡು ತಲೆ ಉತ್ತಮ ಎಂಬ ಮಾತು ನಿಮಗೆ ತಿಳಿದಿದೆಯೇ? ಅಧ್ಯಯನಕ್ಕೂ ಅದೇ ತಂತ್ರವನ್ನು ಅಳವಡಿಸಿಕೊಳ್ಳಿ. ಗುಂಪು ಅಧ್ಯಯನ ಮಾಡುವುದರಿಂದ ಹೊಸ ಅಧ್ಯಯನ ತಂತ್ರಗಳಿಗೆ ನಿಮ್ಮನ್ನು ಅಳವಡಿಸಿಕೊಳ್ಳಬಹುದು ಮತ್ತು ಹೊಸ ದೃಷ್ಟಿಕೋನದಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ನೀಡುತ್ತದೆ.

ಹಿಂದಿನ ಪತ್ರಿಕೆಗಳ ಅಧ್ಯಯನ :

ಹಿಂದಿನ ಪತ್ರಿಕೆಗಳ ಅಧ್ಯಯನ :

ನಿಮ್ಮ ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅತ್ಯುತ್ತಮ ಅಸ್ತ್ರವೆಂದರೆ ಹಿಂದಿನ ಪತ್ರಿಕೆಗಳ ಅಧ್ಯಯನ. ನಿಮಗೆ ಸಾಧ್ಯವಾದರೆ, ನೀವು ಅಧ್ಯಯನ ಮಾಡುವಾಗ ಹಿಂದಿನ ಪೇಪರ್‌ಗಳನ್ನು ಅಧ್ಯಯನ ಮಾಡಲು ಪ್ರಯತ್ನಿಸಿ. ಇದರಿಂದ ಪ್ರಶ್ನೆಗಳು ಹೇಗಿವೆ ಮತ್ತು ಹೇಗೆ ಉತ್ತರ ನೀಡಬೇಕು ಎಂಬೆಲ್ಲಾ ಗೊಂದಲಗಳು ದೂರವಾಗುತ್ತವೆ.

ನೀವು ಪೂರಕ ಪರೀಕ್ಷೆಯಲ್ಲಿ ವಿಫಲರಾದರೆ ಏನಾಗುತ್ತದೆ ?

ನೀವು ಪೂರಕ ಪರೀಕ್ಷೆಯಲ್ಲಿ ವಿಫಲರಾದರೆ ಏನಾಗುತ್ತದೆ ?

ಒಂದು ವೇಳೆ ಪೂರಕ ಪರೀಕ್ಷೆಯಲ್ಲಿ ವಿಫಲವಾದರೆ ನಿಮ್ಮ ಶೈಕ್ಷಣಿಕ ಜೀವನವು ಸ್ಥಗಿತಗೊಳ್ಳುತ್ತದೆ ಎಂದರ್ಥವಲ್ಲ. ಆದ್ದರಿಂದ ಆತಂಕಪಡಬೇಡಿ, ನೀವು ವಿಫಲವಾದರೆ ಮುಂದೆ ಮುಖ್ಯ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಆದರೆ ನೀವು ಕೊನೆಯಲ್ಲಿ ನಿಮ್ಮ ಗುರಿಯನ್ನು ಸಾಧಿಸುವಿರಿ.

ವಿದ್ಯಾರ್ಥಿಗಳು ಉತ್ತೀರ್ಣ ಮತ್ತು ಅನುತ್ತೀರ್ಣದ ಬಗ್ಗೆ ಮರೆತು ನಮ್ಮ ಸಲಹೆಗಳನ್ನು ಬಳಸಿ ಮತ್ತು ನಿಮ್ಮ ಪೂರಕ ಪರೀಕ್ಷೆಯನ್ನು ಉತ್ತಮವಾಗಿ ಬರೆಯಿರಿ. ಒಂದು ವೇಳೆ ನಿಮಗೆ ಅಧ್ಯಯನದಲ್ಲಿ ಸಮಸ್ಯೆಗಳು ಎದುರಾದಲ್ಲಿ, ಅದಕ್ಕೆ ಸೂಕ್ತ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಿ.

More News  

For Quick Alerts
ALLOW NOTIFICATIONS  
For Daily Alerts

English summary
Here is the preparation tips for students who are attending supplementary examination 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+