JEE Main 2021 Preparation: ಜೆಇಇ ಪ್ರಮುಖ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ

ಹೆಚ್ಚಿನ ವಿದ್ಯಾರ್ಥಿಗಳಿಗೆ ಹೇಗೆ ತಯಾರಿ ಪ್ರಾರಂಭ ಮಾಡುವುದು ಎಂದು ಇನ್ನೂ ಕೂಡಾ ಕಂಪ್ಯೂಶನ್ ಅಲ್ಲಿಯೇ ಇದ್ದಾರೆ. ಅಂಥಹ ವಿದ್ಯಾರ್ಥಿಗಳಿಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡಲಿದೆ.

By Kavya

ನೀವು ಇಂಜಿನೀಯರಿಂಗ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಐಐಟಿಯಲ್ಲಿ ಇಂಜಿನೀಯರಿಂಗ್ ಕೋರ್ಸ್ ಮಾಡಬೇಕೆಂಬ ಗುರಿ ಹೊಂದಿದ್ದರೆ, ಮೊದಲಿಗೆ ನೀವು ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ನೀವು ಪಾಸುಮಾಡಬೇಕು.

ಜೆಇಇ ಪ್ರಮುಖ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ

ಈಗಾಗಲೇ ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಪ್ರಮುಖ ಪರೀಕ್ಷಾ ದಿನಾಂಕವನ್ನ ಪ್ರಕಟಿಸಿದ್ದು, ಪರೀಕ್ಷೆಯು ಫೆಬ್ರವರಿ 23,2021 ರಿಂದ ಫೆಬ್ರವರಿ 26,2021ರ ವರೆಗೆ ನಡೆಯಲಿದೆ. ಹಾಗಾಗಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನ ಪಾಸ್ ಮಾಡಲು ಏನೆಲ್ಲಾ ಟ್ರಿಕ್ಸ್ ಬಳಸಬಹುದು ಎಂದು ಯೋಚಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೇಗೆ ತಯಾರಿ ಪ್ರಾರಂಭ ಮಾಡುವುದು ಎಂದು ಇನ್ನೂ ಕೂಡಾ ಕಂಪ್ಯೂಶನ್ ಅಲ್ಲಿಯೇ ಇದ್ದಾರೆ. ಅಂಥಹ ವಿದ್ಯಾರ್ಥಿಗಳಿಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಜೆಇಇ ಪ್ರಮುಖ ಪರೀಕ್ಷೆಯ ಸಿಲೇಬಸ್ ಓದಿಕೊಳ್ಳಿ:

ಜೆಇಇ ಪ್ರಮುಖ ಪರೀಕ್ಷೆಯ ಸಿಲೇಬಸ್ ಓದಿ ಅರ್ಥ ಮಾಡಿಕೊಂಡ ಬಳಿಕ ಪರೀಕ್ಷೆಗೆ ತಯಾರಿ ನಡೆಸುವುದು ಬೆಸ್ಟ್. ಮೊದಲಿಗೆ ಜೆಇಇ ಪ್ರಮುಖ ಪರೀಕ್ಷೆ ಸಿಲೇಬಸ್ ಓದುದರಿಂದ ನಿಮಗೆ ಟಾಪಿಕ್ ಹಾಗೂ ಸಬ್‌ಜೆಕ್ಟ್ ಬಗ್ಗೆ ಬ್ರೀಫ್ ಅಗಿ ಅರ್ಥವಾಗುವುದು. ಇದರಿಂದ ನೀವು ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬಹುದು ಎಂದು ಪ್ಲ್ಯಾನ್ ಮಾಡಬಹುದು.

ಜೆಇಇ ಪ್ರಮುಖ ಪರೀಕ್ಷೆಯ ಪ್ರಮುಖ ಟಾಪಿಕ್ ಗೆ ಹೆಚ್ಚಿನ ಪ್ರಾಮುಖ್ಯತೆ:

ಯಾವುದೇ ಎಂಟ್ರೇಸ್ ಪರೀಕ್ಷೆಗೆ ಪ್ರತಿಯೊಂದು ಟಾಪಿಕ್ ಕೂಡಾ ಪ್ರಮುಖ ಅಲ್ಲ. ಕೆಲವೊಂದು ಪ್ರಶ್ನೆಗಳು ತುಂಬಾ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಅಂತಹ ಪ್ರಶ್ನೆಗಳ ಮೇಲೆ ಹೆಚ್ಚು ಫೋಕಸ್ ಮಾಡಿ. ಇದರಿಂದ ಉತ್ತಮ ಫಲಿತಾಂಶ ನಿಮ್ಮದಾಗುವುದು. ಪ್ರತೀ ಸಬ್‌ಜೆಕ್ಟ್ ನ ಪ್ರಮುಖ ಪ್ರಶ್ನೆಯನ್ನ ಗುರುತಿಸಿ, ಅದನ್ನು ಸ್ಟಡಿ ಮಾಡಲು ಪ್ರಾರಂಭಿಸಿ.

ALSO READ: ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

ಜೆಇಇ ಪ್ರಮುಖ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕ ಖರೀದಿಸಿ:

ಇಂಜಿನೀಯರಿಂಗ್ ಎಂಟ್ರೇಸ್ ಎಕ್ಸಾಂಗಳಲ್ಲಿ ಜೆಇಇ ಪ್ರಮುಖ ಪರೀಕ್ಷೆ ತುಂಬಾ ಕಷ್ಟವಾಗಿರುತ್ತದೆ ಎಂದು ನೀವು ಅಂದುಕೊಂಡಿದ್ದರೆ, ಪರೀಕ್ಷೆ ತಯಾರಿಗೆ ನೀವು ಸರಿಯಾದ ಪುಸ್ತಕವನ್ನೇ ಆರಿಸಿಕೊಳ್ಳಬೇಕು. ಎನ್‌ಸಿಇಆರ್ ಟಿ ಪುಸ್ತಕವು ಬೆಸ್ಟ್ ಹಾಗೂ ಈ ಪರೀಕ್ಷೆ ತಯಾರಿಗೆ ಇದೊಂದು ಬೈಬಲ್ ಇದ್ದಂಗೆ ಎಂದೇ ಈ ಪುಸ್ತಕ ಫೇಮಸ್.

ಜೆಇಇ ಪ್ರಮುಖ ಪರೀಕ್ಷೆಗೆ ಶಾರ್ಟ್ ನೋಟ್ಸ್ ತಯಾರು ಮಾಡಿಕೊಳ್ಳಿ:

ಪರೀಕ್ಷೆಗೆ ತಯಾರು ಮಾಡಿಕೊಳ್ಳುವ ವೇಳೆ, ಶಾರ್ಟ್ ನೋಟ್ಸ್ ಇಲ್ಲ, ಫ್ಲ್ಯಾಶ್ ಕಾರ್ಡ್ ಕೂಡಾ ಮಾಡಿಕೊಳ್ಳಿ ಇದರಿಂದ ಓದಿರುವುದು ನೆನಪಿಟ್ಟುಕೊಳ್ಳಲು ತುಂಬಾ ಸಹಾಯಕವಾಗುವುದು. ಹೀಗೆ ಮಾಡುವುದರಿಂದ ಕೊನೆಯ ಟೈಂನ ರಿವಿಜನ್ ವೇಳೆ ನಿಮ್ಮ ಟೈಂ ಕೂಡಾ ಉಳಿಯುವುದು ಹಾಗೂ ಕಡಿಮೆ ಅವಧಿಯಲ್ಲಿ ಓದಿ ಕೂಡಾ ಮುಗಿಯುವುದು. ರಿವಿಜನ್ ಮಾಡುವುದರಿಂದ ವಿದ್ಯಾರ್ಥಿಗಳ ಕಾಂಫಿಡೆನ್ಸ್ ಕೂಡಾ ಬೂಸ್ಟ್ ಆಗುತ್ತದೆ.

ಹಿಂದಿನ ವರ್ಷದ ಜೆಇಇ ಪ್ರಮುಖ ಪರೀಕ್ಷೆಯ ಪ್ರಶ್ನಾಪತ್ರಿಕೆ ಮೆಲುಕು ಹಾಕಿ:

ಒಂದು ವೇಳೆ ಜೆಇಇ ಪ್ರಮುಖ ಪರೀಕ್ಷೆ 2019ರಲ್ಲಿ ಕೂಡಾ ನೀವು ಪಾಲ್ಗೊಂಡಿದ್ದರೆ, ಈ ವರ್ಷ ಈ ಸ್ಟ್ರಾಟಜಿ ಬೆಸ್ಟ್ ಎಂದು ಮೊದಲಿಗೆ ಯೋಚಿಸಿ. ಅಷ್ಟೇ ಅಲ್ಲ ಯಾವುದೇ ಪರೀಕ್ಷೆಗೂ ಕೂಡಾ ಹಳೆಯ ಪ್ರಶ್ನಾಪತ್ರಿಕೆ ರಿವಿಜನ್ ಮಾಡುವುದು ಬೆಸ್ಟ್. ಇನ್ನು ನ್ಯೂ ಸ್ಟ್ರಾಟಜಿ ಇದ್ರೆ ಅದನ್ನು ಕೂಡಾ ಫಾಲೋ ಮಾಡಿ. ಯಾಕೆಂದ್ರೆ ಈ ಬಾರಿಯ ಪರೀಕ್ಷೆಯಲ್ಲಿ ಎನ್‌ಟಿಎ ಹಲವಾರು ಬದಲಾವಣೆಗಳನ್ನ ಮಾಡಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
If you are one amongst the engineering aspirants and are aiming to pursue a course in one of the IITs, the first step is to crack the Joint Entrance Examination (JEE) Main! With the announcement of the decision to hold the JEE Main twice a year, the HRD ministry has opened the gates for a high-level competitive exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+