ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಕಂಪನಿ ಅಭಿವೃದ್ಧಿಯಾಗಬೇಕೆಂದರೆ ಕಂಪನಿಯಲ್ಲಿನ ಉದ್ಯೋಗಿಗಳು ಎಲ್ಲರೂ ಜತೆಯಾಗಿ ಸಹಕಾರ ಸಹಾಯ ಮಾಡಿಕೊಂಡು ದುಡಿಯಬೇಕು. ಎಲ್ಲರಿಗೂ ತಮ್ಮ ತಮ್ಮ ಕೆಲಸ ಮಾಡುವುದೆಂದ್ರೆ ಸಿಕ್ಕಾಪಟ್ಟೆ ಇಷ್ಟವಿರುತ್ತದೆ.

By Kavya

ಕಂಪನಿ ಅಭಿವೃದ್ಧಿಯಾಗಬೇಕೆಂದರೆ ಕಂಪನಿಯಲ್ಲಿನ ಉದ್ಯೋಗಿಗಳು ಎಲ್ಲರೂ ಜತೆಯಾಗಿ ಸಹಕಾರ ಸಹಾಯ ಮಾಡಿಕೊಂಡು ದುಡಿಯಬೇಕು. ಎಲ್ಲರಿಗೂ ತಮ್ಮ ತಮ್ಮ ಕೆಲಸ ಮಾಡುವುದೆಂದ್ರೆ ಸಿಕ್ಕಾಪಟ್ಟೆ ಇಷ್ಟವಿರುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ಸಹದ್ಯೋಗಿಗಳ ಜತೆ ಕೆಲಸ ಮಾಡುವುದು ಬೇಕಿರುವುದಿಲ್ಲ. ಆದ್ರೆ ಪ್ರಾಜೆಕ್ಟ್ ವರ್ಕ್ ಎಂದು ವಿಷಯ ಬಂದಾಗ ಎಲ್ಲರೂ ಜತೆಯಾಗಿಯೇ ದುಡಿಯಬೇಕಾಗುತ್ತದೆ.

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಒಂದು ವೇಳೆ ನಿಮಗೆ ಇಷ್ಟವಿಲ್ಲದ ಸಹದ್ಯೋಗಿಗಳ ಜತೆ ನಿಮಗೆ ಕೆಲಸ ಮಾಡಲು ಹೇಳಿದ್ರೆ ಅದು ನಿಜಕ್ಕೂ ನಿಮಗೆ ಒಂದು ಚ್ಯಾಲೇಂಜ್ ಇದ್ದಂತೆ. ಇಂತಹ ಪರಿಸ್ಥತಿಯಲ್ಲಿ ನೀವು ಹೇಗೆ ವರ್ಕ್ ಮಾಡಬೇಕು, ಇಂತಹ ಪರಿಸ್ಥಿತಿಯನ್ನ ನಿಭಾಯಿಸುವುದು ಹೇಗೆ ಎಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ?ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ?

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ನೆನಪಿಟ್ಟುಕೊಳ್ಳಿ ಪ್ರಾಜೆಕ್ಟ್ ಯಾವತ್ತಿದ್ರೂ ಫಸ್ಟ್:

ನೀವು ಯಾವುದೇ ಕೆಲಸ ಕೈಗೆತ್ತಿಕೊಳ್ಳುವ ಮುನ್ನ ಮೊದಲು ಏನು ಯೋಚಿಸಬೇಕು ಅಂದ್ರೆ, ಜಗಳ, ಮನಸ್ಥಾಪ ಎಲ್ಲಾ ಆಮೇಲೆ ಇದೀಗ ಏನೇ ಇದ್ರೂ ಮೊದಲು ಪ್ರಾಜೆಕ್ಟ್ ಅಷ್ಟೇ ಎಂದು ಮೊದಲು ನಿಮ್ಮ ತಲೆಯಲ್ಲಿ ಇಟ್ಟು ಕೊಳ್ಳಿ. ಕೆಲಸ ಪ್ರಾರಂಭಿಸುವ ಮುನ್ನ ಈ ಯೋಚನೆ ನಿಮ್ಮ ತಲೆಯಲ್ಲಿ ಬರಲಿ. ಬಳಿಕ ನಿಮ್ಮ ಪ್ರಾಜೆಕ್ಟ್ ವರ್ಕ್ ಪ್ರಾರಂಭಿಸಿ

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಕೆಲಸದತ್ತ ಇರಲಿ ಗಮನ ಕೋ-ಕೆಲಸಗಾರರ ಮೇಲಲ್ಲ:

ಆಫೀಸ್‌ನಲ್ಲಿ ಪ್ರಮೋಶನ್ ಗಾಗಿ ದುಡಿಯುವವರು ಹೀಗಿರುತ್ತಾರೆ!ಆಫೀಸ್‌ನಲ್ಲಿ ಪ್ರಮೋಶನ್ ಗಾಗಿ ದುಡಿಯುವವರು ಹೀಗಿರುತ್ತಾರೆ!

ಈ ಪಾಯಿಂಟ್ ನೀವು ನೆನಪಿಟ್ಟುಕೊಳ್ಳಬೇಕು. ನಿಮಗೆ ಕೆಲಸ ವೇಳೆ ನಿಮ್ಮ ಸಹದ್ಯೋಗಿಗಳ ವರ್ತನೆ ಇಷ್ಟವಾಗದೇ ಇರಬಹುದು ಹಾಗಂತ ಅವರ ಜತೆ ಗುದ್ದಾಡುವುದು ಸರಿಯಲ್ಲ. ಬದಲಿಗೆ ಅವರತ್ತ ಗಮನವಹಿಸಬೇಡಿ. ಒಂದು ವೇಳೆ ನಿಮ್ಮ ಸಹದ್ಯೋಗಿಗಳು ನಿಮ್ಮ ಕಾಲೆಳೆಯುವ ಯತ್ನ ಮಾಡಿದ್ರೆ ಅವರ ಮುಂದೆ ಸ್ಮಾರ್ಟ್ ಆಗಿ ವರ್ತಿಸಿ. ಹಾಗೂ ಅವರು ಏನೇ ಕೊಣಕಿದ್ರೂ ನಿಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೇರ್ ಮಾಡದೇ ಇರಿ.

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಅಭಿಪ್ರಾಯಗಳನ್ನ ಶೇರ್ ಮಾಡಿಕೊಳ್ಳಿ ಜತೆಗೆ ಸ್ವೀಕರಿಸಿ:

ನೀವು ಜತೆಯಾಗಿ ಕೆಲಸ ಮಾಡುವುದು ಎಂದಾದ್ರೆ ನೀವು ನಿಮ್ಮ ಐಡಿಯಾಗಳನ್ನ ಶೇರ್ ಮಾಡಿಕೊಳ್ಳಿ. ಹಾಗೂ ನಿಮಗೆ ಇಷ್ಟವಿಲ್ಲದ ಸಹದ್ಯೋಗಿಗಳು ಏನಾದ್ರೂ ಸಲಹೆ ನೀಡಿದ್ರೆ ಅದನ್ನ ಕೂಡಾ ಸ್ವೀಕರಿಸುವ ಮನೋಭಾವ ನಿಮ್ಮದಾಗಿಸಿಕೊಳ್ಳಿ. ನಿಮಗೆ ಇಷ್ಟವಿಲ್ಲದ ವರ್ಕರ್ ಐಡಿಯಾ ನಿಷ್ಪ್ರಯೋಜಕ ಎಂದು ಭಾವಿಸಬೇಡಿ.

ಕಾಲೇಜು ಕ್ಯಾಂಪಸ್ ತುಂಬಾ ಹಾರಾಡೋ ರಾಣಿ ಜೇನುಗಳಿಗೆ ಬ್ಯೂಟಿ ಸಲಹೆ!ಕಾಲೇಜು ಕ್ಯಾಂಪಸ್ ತುಂಬಾ ಹಾರಾಡೋ ರಾಣಿ ಜೇನುಗಳಿಗೆ ಬ್ಯೂಟಿ ಸಲಹೆ!

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ನಯವಾಗಿ ಮಾತನಾಡಿ:

ಪ್ರಾಜೆಕ್ಟ್ ವರ್ಕ್ ಜತೆಯಾಗಿ ಮಾಡಿದ್ರೆ ಮಾತ್ರ ಆದಷ್ಟು ಬೇಗ ಕಂಪ್ಲೀಟ್ ಮಾಡಲು ಸಾಧ್ಯ. ಹಾಗಾಗಿ ವರ್ಕ್ ವೇಳೆ ನಿಮಗೆ ಯಾವುದೇ ಸಹಾಯ ಬೇಕಿದ್ರೆ ನಿಮ್ಮ ಕೋ-ವರ್ಕರ್ ಜತೆ ನಯವಾಗಿ ಕೇಳಿ ಪಡೆಯಿರಿ. ಅದೇ ರೀತಿ ಅವರು ನಿಮ್ಮಿಂದ ಏನಾದ್ರೂ ಸಹಾಯ , ಸಲಹೆ ಬಯಸಿದ್ದಾಗ ನಿವು ಕೂಡಾ ನಯವಾಗಿಯೇ ಉತ್ತರಿಸಿ.

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಶಾಂತ ಸ್ವಾಭಾವದಿಂದಿರಿ:

ಕಾಲೇಜು ಮುಗಿದ ಕೂಡಲೇ ಫ್ರೆಶರ್ಸ್ ಗೆ ಯಾವ ಜಾಬ್ ಬೆಸ್ಟ್ !ಕಾಲೇಜು ಮುಗಿದ ಕೂಡಲೇ ಫ್ರೆಶರ್ಸ್ ಗೆ ಯಾವ ಜಾಬ್ ಬೆಸ್ಟ್ !

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ಕೆಲಸ ಮಾಡಲು ಹೇಳಿದಾಗ ನೀವು ಶಾಂತರಾಗಿ ಅವರ ಜತೆ ಕೆಲಸ ಮಾಡಿ. ಬದಲಿಗೆ ಅವರ ಮೇಲೆ ಕೂಗಾಡಿಕೊಂಡು, ರೇಗಾಡಿಕೊಂಡು ಕೆಲಸ ಮಾಡಿದ್ರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ ಪ್ರಾಜೆಕ್ಟ್ ಮುಗಿದ ಬಳಿಕವೂ ಅದು ನಿಮ್ಮ ಕೆರಿಯರ್ ಗೆ ಮೈನಸ್ ಪಾಯಿಂಟ್ ಆಗಿ ಕಾಡಬಹುದು. ಹಾಗಾಗಿ ಆದಷ್ಟು ಶಾಂತ ಸ್ವಾಭಾವದಿಂದ ನಿಮ್ಮ ಕೋ-ವರ್ಕರ್ ಜತೆ ವರ್ತಿಸಿ

For Quick Alerts
ALLOW NOTIFICATIONS  
For Daily Alerts

English summary
These reasons were the guide on working with someone you dislike.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X