ಸುಮಾರು 300 ಪದಗಳಲ್ಲಿ ಇಂಪ್ರೇಸೀವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ?

ಇಂಟರ್ವ್ಯೂ ಫೇಸ್ ಮಾಡುವುದೆಂದ್ರೆ ಎಷ್ಟೇ ಕಾಂಫಿಡೆಂಟ್ ಆಗಿದ್ದರೂ ಒಳಗೊಳಗೆ ಏನೋ ಒಂದು ರೀತಿಯ ಭಯವಿರುತ್ತದೆ. ಇನ್ನೂ ಸಂದರ್ಶನಕಾರರು ಮೊದಲಿಗೆ ರೆಸ್ಯೂಮ್ ನೋಡಿ ಇಂಪ್ರೇಸ್ ಆಗಿ ಆ ಅಭ್ಯರ್ಥಿಯನ್ನ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಿಕೊಳ್ಳುತ್ತಾರೆ. ಸಂದರ್ಶನಕಾರರು ಈ ರೆಸ್ಯೂಮ್ ನೋಡಿಯೇ ಅಭ್ಯರ್ಥಿಗಳನ್ನ ಕೂಡಲೇ ಜರ್ಜ್ ಮಾಡಿಕೊಂಡಿರುತ್ತಾರೆ.

also read: ಸರಾಗವಾಗಿ ಇಂಗ್ಲೀಷ್ ಮಾತನಾಡಲು ನೀವು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಸುಮಾರು 300 ಪದಗಳಲ್ಲಿ ಇಂಪ್ರೇಸೀವ್ ಆಗಿ ರೆಸ್ಯೂಮ್ ತಯಾರಿಸುವುದು ಹೇಗೆ?

 

ಹಾಗಾಗಿ ಮೊದಲಿಗೆ ಇತರರ ರೆಸ್ಯೂಮ್ ಗಿಂತ ನಿಮ್ಮ ರೆಸ್ಯೂಮ್ ನಲ್ಲಿ ಹೆಚ್ಚಿನ ಬದಲಾವಣೆ ಮಾಡಿ, ನಿಮ್ಮ ರೆಸ್ಯೂಮ್ ಹೆಚ್ಚು ಇಂಪ್ರೇಸ್ ಮಾಡುವಂತೆ ತಯಾರಿಸಿಕೊಳ್ಳಿ.ಇತರರು ಕಂಪನಿಗೆ ಮಾಡಲು ಸಾಧ್ಯವಾಗದೇ ಇದ್ದದ್ದು, ನಿಮ್ಮಿಂದ ಸಾಧ್ಯವಾಗುವಂತದ್ದು ಯಾವ ಗುಣ ನಿಮ್ಮಲ್ಲಿ ಇದೆ ಅನ್ನೋದನ್ನ ಬರೆಯಿರಿ. ಇಷ್ಟೇ ಅಲ್ಲದೇ ಬೇರೆ ಯಾವೆಲ್ಲಾ ವಿಧಗಳಿಂದ ಸಂದರ್ಶನಕಾರರನ್ನ ಇಂಪ್ರೇಸ್ ಮಾಡಬಹುದು ಎಂಬ ಟಿಪ್ಸ್ ಇದೀಗ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ಸ್ಪೆಸಿಫಿಕ್ ಆಗಿರಲಿ

ಸ್ಪೆಸಿಫಿಕ್ ಆಗಿರಲಿ

ನಿಮ್ಮ ಬಗ್ಗೆ ಏನಾದ್ರೂ ವಿವರಿಸಿ ಎಂದಾಗ, ಮೊದಲಿಗೆ ನಿಮ್ಮ ಹೆಸರಿನಿಂದ ಪ್ರಾರಂಭಿಸಿ, ಬಳಿಕ ನಿಮ್ಮ ಎಜ್ಯುಕೇಶನ್, ಕೆರಿಯರ್, ಹವ್ಯಾಸ ಮುಂತಾದ ವಿಷಯಗಳ ಬಗ್ಗೆ ತಿಳಿಸುತ್ತಾ ಹೋಗುತ್ತೀರಿ. ಇದು ನೇರವಾಗಿ ಕೇಳಿದಾಗ ನೀವು ತಿಳಿಸುವಂತಹ ಉತ್ತರ. ಆದ್ರೆ ನಿಮ್ಮ ರೆಸ್ಯೂಮ್ ಫಸ್ಟ್ ಇಂಪ್ರೇಶನ್ ಮೂಡಿಸುವುದರಿಂದ ಅಲ್ಲಿ ನೀವು ಹೇಗೆ ಈ ಮೇಲಿನ ವಿಷಯಗಳನ್ನ ತಿಳಿಸುತ್ತೀರಿ ಅನ್ನೋದು ನಿಮ್ಮ ಟ್ಯಾಲೆಂಟ್ .

ಆದಷ್ಟು ರೆಸ್ಯೂಮ್ ನಲ್ಲಿ ಈ ಬಗ್ಗೆ ತಿಳಿಸುವಾಗ ಸಿಂಪಲ್, ಕ್ಲಿಯರ್ ಹಾಗೂ ನೇರವಾದ ಭಾಷೆಗಳನ್ನ ಬಳಸಿ. ಉದಾಹರಣೆಗೆ ನೀವು ಈಗಾಗಲೇ ಸೋಶಲ್ ಮೀಡಿಯಾ ಮ್ಯಾನೇಜರ್ ಆಗಿದ್ದರೆ, ಸಿಂಪಲ್ ಆಗಿ ಮೂರು ಅಕ್ಷರದಲ್ಲೇ ಬರೆಯಿರಿ ವಿನಾಃ ಕ್ಲಿಷ್ಟಕರವಾದ ಪದಗಳ ಬಳಕೆ ಬೇಡ. ಅನಗತ್ಯ ವಿವರಣೆ ಬೇಡ.

ಕ್ರಿಯೇಟೀವ್ ಆಗಿರಲಿ:

ಕ್ರಿಯೇಟೀವ್ ಆಗಿರಲಿ:

ನಿಮ್ಮ ಕ್ರಿಯೇಟಿವಿಟಿ ಬಗ್ಗೆಯೂ ತಿಳಿಸುವುದು ಉತ್ತಮ. ಹಿಂದಿನ ಕಂಪನಿಗೆ ನಿಮ್ಮ ಕ್ರಿಯೇಟಿವಿಟಿಯಿಂದ ಎಷ್ಟು ಲಾಭವಾಗಿದೆ ಅನ್ನೋದನ್ನ ತಿಳಿಸಿ. ಹಾಗಂತ ಈ ಬಗ್ಗೆ ಉದ್ದುದ್ದ ಬರೆಯುವ ಅಗತ್ಯವಿಲ್ಲ. ನಿಮ್ಮ ಐಡಿಯಾ ಹೇಗೆ ಬಳಕೆಯಾಯಿತು, ಯಾವ ರೀತಿಯಲ್ಲಿ ಬಳಕೆ ಆಯಿತು ಅನ್ನೋದನ್ನ ಶೇರ್ ಮಾಡಿಕೊಳ್ಳಿ.

ನಿಮ್ಮ ಕೌಶಲ್ಯದ ಬಗ್ಗೆ ವಿವರಿಸಿ:
 

ನಿಮ್ಮ ಕೌಶಲ್ಯದ ಬಗ್ಗೆ ವಿವರಿಸಿ:

ಹೌದು, ನಿಮ್ಮ ಬಗ್ಗೆ, ನಿಮ್ಮ ಕೌಶಲ್ಯ ಅಥವಾ ಸ್ಕಿಲ್ ಬಗ್ಗೆ ತಿಳಿಸುವುದಾದ್ರೆ, ಒಂದೇ ಪದದಲ್ಲಿ ವಿವರಿಸಬೇಡಿ. ನಿಮ್ಮ ಸ್ಕಿಲ್ ನ್ನ ಹಲವು ವಿಧದಲ್ಲಿ ಹೇಳಿ ಇಂಪ್ರೇಶ್ ಮೂಡಿಸಿ. ಉದಾಹರಣೆಗೆ: ಹಲವಾರು ವರ್ಷಗಳಿಂದ ನೀವು ಹೆಲ್ತ್ ಕೇರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದಾದ್ರೆ ಹೆಲ್ತ್ ಕೇರ್ ಇಂಡಸ್ಟ್ರಿಗೆ ಸಂಬಂಧಪಟ್ಟ ಸ್ಕಿಲ್ ಇದೆ ಎಂದು ಉತ್ತರಿಸಿದ್ರೆ ಸಾಲದು, ಬದಲಿಗೆ ನಿಮ್ಮ ಅನುಭವವನ್ನ ವಿವಿಧ ರೀತಿಯಲ್ಲಿ ಬಿಚ್ಚಿಡಿ ಅಂದ್ರೆ ಕ್ಲಿನಿಕಲ್ ಎಜ್ಯುಕೇಶನ್, ಕ್ಲಿನಿಕಲ್ ಮಾರ್ಕೇಟಿಂಗ್, ಹೆಲ್ತ್ ಕೇರ್ ಅಡ್ಮಿನಿಸ್ಟ್ರೇಟರ್ ಹೀಗೆಲ್ಲಾ ವಿವರಣಾತ್ಮಕವಾಗಿ ವಿವರಿಸಿ.

ಡೈನಾಮಿಕ್ ಪದಗಳು

ಡೈನಾಮಿಕ್ ಪದಗಳು

ಡೈನಾಮಿಕ ಪದ ಬಳಸಿದ್ರೆ ಸ್ವಲ್ಪ ನೆಗಟೀವ್ ಆಗಿ ಕೇಳುತ್ತೆ ಅನ್ನೋ ಭಾವನೆ ಮೂಡಬಹುದು. ಆದ್ರೆ ನೀವು ಮೊದಲಿಗೆ ಡೈನಾಮಿಕ ಹಾಗೂ ಬ್ರಾಗಿಂಗ್ ಪದಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ. ಫ್ರೆಶ್ ಹಾಗೂ ಇಂಟ್ರಸ್ಟಿಂಗ್ ಪದಗಳನ್ನ ಬಳಸಿ ಮಾತನಾಡಿ. ಇದರಿಂದ ನೀವು ಇತರರಿಗಿಂತ ವಿಭಿನ್ನವಾಗಿ ನಿಲ್ಲುತ್ತೀರಿ.

ನಿಮ್ಮ ಬಗ್ಗೆ ವಿವರಿಸಿ ಎಂದಾಗ ಅದಕ್ಕೆ ಉತ್ತರ ನೀಡಲು ಒಂದು ಕ್ಷಣಕ್ಕೆ ಕಷ್ಟವಾಗಬಹುದು. ಸಾಮಾನ್ಯವಾಗಿ ರೆಸ್ಯೂಮ್ ನಲ್ಲಿಯೇ ಈ ಬಗ್ಗೆ ಬರೆಯುವಾಗ ಹೆಚ್ಚಿನ ಅಭ್ಯರ್ಥಿಗಳು ಕಂಫ್ಯೂಸ್ ಆಗುತ್ತಾರೆ. ಹಾಗಾಗಿ ನೀವು ಮೊದಲಿಗೆ ಏನು ತಿಳಿದುಕೊಳ್ಳಬೇಕಂದ್ರೆ ಸಂದರ್ಶನ ಮಾಡುವವರು ಸಿಕ್ಕಾಪಟ್ಟೆ ಬ್ಯುಸಿ ಇರುತ್ತಾರೆ. ಹಾಗಾಗಿ ಅವರು ಜಸ್ಟ್ ಒಂದು ಬಾರಿ ನಿಮ್ಮ ರೆಸ್ಯೂಮ್ ಸ್ಕ್ಯಾನ್ ಮಾಡಿ ನಿಮ್ಮ ಹೆಸರು ಶಾರ್ಟ್ ಲಿಸ್ಟ್ ಮಾಡಿಕೊಳ್ಳುತ್ತಾರೆ. ಹಾಗಾಗಿ ನಿಮ್ಮ ರೆಸ್ಯೂಮ್ ಡೈನಾಮಿಕ್, ಸ್ಪೆಸಿಫಿಕ್ ಆಗಿದ್ರೆ ನೀವು ಇಂಟರ್ವ್ಯೂಗೆ ಸೆಲೆಕ್ಟ್ ಆಗುವುದರಲ್ಲಿ ಯಾವುದೇ ಅನುಮಾನವಿರಲ್ಲ.

also read: ಸ್ಟಾರ್ ಗಿರಿ ಸಿಗೋ ಮುನ್ನ ಈ ಸ್ಟಾರ್‌ಗಳ ಜಾಬ್ ಹೇಗಿತ್ತು ನೋಡಿ!

For Quick Alerts
ALLOW NOTIFICATIONS  
For Daily Alerts

English summary
Your Resume needs to be professional and polished because if not, your application will fail to win a recruiters heart. Writing a great resume does not necessarily mean you should follow the rules you hear through the grapevine. It does not have to be one page or follow a specific resume format
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X