ಹೇಗೆ ಉತ್ತರ ಬರೆದ್ರೆ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬಹುದು?

By Kavya

ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬಂತೆಂದ್ರೆ ಸಾಕು ಭಯಪಡಲು ಪ್ರಾರಂಭಿಸುತ್ತಾರೆ. ಪರೀಕ್ಷೆ ಎಂಬುವುದು ಒಂದು ಶಿಕ್ಷೆ ಎಂದು ಅವರು ಭಾವಿಸುತ್ತಾರೆ. ಇನ್ನು ನಾವು ಎಷ್ಟೇ ಚೆನ್ನಾಗಿ ಓದಿ ಎಕ್ಸಾಂ ಹಾಲ್ ಗೆ ಹೋದ್ರು ಉತ್ತಮವಾಗಿ ಇಂಪ್ರೇಸೀವ್ ಆಗಿ ಉತ್ತರಿಸುವಲ್ಲಿ ವಿಫಲರಾಗುತ್ತೇವೆ. ಅಂತಹ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.

ವಿದ್ಯಾರ್ಥಿಗಳ ಪ್ರಕಾರ ಅವರೇನೋ ಪರೀಕ್ಷೆಯಲ್ಲಿ ಸರಿಯಾಗಿ ಬರೆದಿದ್ದರಬಹುದು. ಆದ್ರೆ ಅದನ್ನ ತಿದ್ದುವ ಶಿಕ್ಷಕನಿಗೆ ಅದು ಸರಿಯಾಗಿ ಕಾಣಿಸದೇ ಇರಬಹುದು. ಅದಕ್ಕೆ ಕಾರಣ ನೀವು ಉತ್ತರ ಪತ್ರಿಕೆ ಪ್ರೆಸೆಂಟ್ ಮಾಡಿರುವ ರೀತಿ ಇರಬಹುದು. ಹಾಗಾಗಿ ಮೊದಲಿಗೆ ನಿಮ್ಮ ಉತ್ತರ ಪತ್ರಿಕೆ ಇಂಪ್ರೇಸೀವ್ ಆಗಿರಬೇಕು. ಅದಕ್ಕೆ ನೀವೇನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಪ್ರಶ್ನಾಪತ್ರಿಕೆ ಗಮನವಿಟ್ಟು ಓದಿ

ಪ್ರಶ್ನಾಪತ್ರಿಕೆ ಗಮನವಿಟ್ಟು ಓದಿ

ನೀವು ಸ್ಟ್ರೆಸ್ ನಲ್ಲಿದ್ರೆ ಪ್ರಶ್ನಾಪತ್ರಿಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ನೀವು ಅಂಕ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಮೊದಲಿಗೆ ನೀವು ಜಾಗರೂಕತೆಯಿಂದ ಪ್ರಶ್ನಾಪತ್ರಿಕೆ ಓದಿ. ಆಮೇಲೆ ಮೆಂಟಲಿ ಪ್ಲ್ಯಾನ್ ಮಾಡಿಕೊಂಡು ಬಳಿಕ ಉತ್ತರ ಬರೆಯಲು ಪ್ರಾರಂಭಿಸಿ. ಈ ಟ್ರಿಕ್ಸ್ ನೀವು ಫಾಲೋ ಮಾಡಿದ್ರೆ ಖಂಡಿತ ಹೆಚ್ಚು ಅಂಕ ಗಳಿಸುತ್ತೀರಾ

ಟೈಂ ಹೊಂದಾಣಿಕೆ

ಟೈಂ ಹೊಂದಾಣಿಕೆ

ಪರೀಕ್ಷೆಯಲ್ಲಿ ಟೈಂ ಹೊಂದಾಣಿಕೆ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮೊದಲಿಗೆ ಟೈಂನ್ನ ಹೇಗೆ ಹೊಂದಾಣಿಕೆ ಮಾಡಿಕೊಳ್ಳುವುದು ಎಂಬುವುದು ತಿಳಿದುಕೊಳ್ಳಬೇಕು. ಪ್ರತೀ ಪ್ರಶ್ನೆಗೂ ಸಮಯ ಫಿಕ್ಸ್ ಮಾಡಿಕೊಳ್ಳಿ. ಆ ಮೇಲೆ ಫಿಕ್ಸ್ ಮಾಡಿದ ಸಮಯದೊಳಗೆ ಉತ್ತರಿಸಲು ಪ್ರಯತ್ನಿಸಿ. ಒಂದು ವೇಳೆ ಉತ್ತರ ಸಿಗದೇ ಇದ್ದಾಗ ಅದೇ ಪ್ರಶ್ನೆಯಲ್ಲಿ ಕಾಲಕಳೆದು ಟೈಂ ವೇಸ್ಟ್ ಮಾಡಬೇಡಿ. ಮುಂದಿನ ಪ್ರಶ್ನೆಗೆ ಉತ್ತರಿಸುತ್ತಾ ಹೋಗಿ

ಉತ್ತರ ಹೀಗಿರಲಿ
 

ಉತ್ತರ ಹೀಗಿರಲಿ

ಪ್ರಶ್ನಾಪತ್ರಿಕೆ ನೋಡದೆನೇ ಉತ್ತರ ಬರೆಯಲು ಪ್ರಾರಂಭಿಸಬೇಡಿ. ಸ್ವಲ್ಪ ಸಮಯ ಪ್ರಶ್ನೆ ಪತ್ರಿಕೆ ಓದಲು ತೆಗೆದುಕೊಳ್ಳಿ. ಹಾಗೂ ಯಾವ ರೀತಿ ಉತ್ತರಿಸುವುದು ಎಂದು ತಲೆಯಲ್ಲೇ ಯೋಜನೆ ಹಾಕಿಕೊಳ್ಳಿ. ಇದು ನಿಮಗೆ ಸರಿಯಾದ ಉತ್ತರ ಬರೆಯಲು ಸಹಕಾರಿಯಾಗುವುದು. ಇನ್ನು ನೀವು ಪ್ರಬಂಧ ಬರೆಯುದಾದರೆ, ಇಂಟ್ರಡಕ್ಷನ್ , ಪ್ರಮುಖ ಅಂಶ ಹಾಗೂ ಕಂಕ್ಲೂಶನ್ ಬರೆಯಲು ಮರೆಯದಿರಿ. ಸ್ಟ್ರಾಂಗ್ ಕಂಕ್ಲೂಶನ್ ಉತ್ತಮ ಉತ್ತರವಾಗಿದ್ದು ಅತೀ ಹೆಚ್ಚು ಅಂಕ ಗಳಿಸಬಹುದಾಗಿದೆ

ಎರಡೂ ರೀತಿಯಾಗಿ ಉತ್ತರಿಸಲು ಪ್ರಯತ್ನಿಸಿ

ಎರಡೂ ರೀತಿಯಾಗಿ ಉತ್ತರಿಸಲು ಪ್ರಯತ್ನಿಸಿ

ಚರ್ಚೆಯಂತಹ ಪ್ರಶ್ನೆ ಬಂದಾಗ ಎರಡೂ ರೀತಿಯಿಂದಲೂ ಉತ್ತರಿಸಿದು ಒಳಿತು. ಒಂದೇ ಮಗ್ಗಲಲ್ಲಿ ಯೋಚಿಸಿ ಉತ್ತರಿಸಬೇಡಿ. ಉತ್ತರದ ಪ್ರಮುಖ ಭಾಗದಲ್ಲಿ ನಿಮ್ಮ ಅಭಿಪ್ರಾಯ ಬರೆಯಿರಿ. ಹೆಚ್ಚು ವಿದ್ಯಾರ್ಥಿಗಳು ಇಂತಹ ಪ್ರಶ್ನೆಗೆ ನೇರವಾಗಿ ಉತ್ತರಿಸಲು ಮುಂದಾಗುತ್ತಾರೆ. ಆದ್ರೆ ಇದು ಸರಿಯಾದ ಮಾರ್ಗವಲ್ಲ

ಹಳೆಯ ಪ್ರಶ್ನಾಪತ್ರಿಕೆ ಅಭ್ಯಸಿಸಿ

ಹಳೆಯ ಪ್ರಶ್ನಾಪತ್ರಿಕೆ ಅಭ್ಯಸಿಸಿ

ಪರೀಕ್ಷೆಗೆ ಹೋಗೋ ಮುನ್ನ ಹಳೆಯ ಪ್ರಶ್ನಾಪತ್ರಿಕೆ ಅಭ್ಯಸಿಸುವುದು ಬೆಸ್ಟ್. ಇದರಿಂದ ನಿಮಗೆ ಹೇಗೆ ಸರಿಯಾದ ಉತ್ತರ ಬರೆಯಬಹುದು ಎಂದ ಐಡಿಯಾ ಮಾತ್ರ ಸಿಗುವುದಲ್ಲದೇ, ಪರ್ಫೆಕ್ಟ್ ಆಗಿ ಹೇಗೆ ಬರೆಯುವುದು ಎಂಬ ಮಾಹಿತಿ ಕೂಡಾ ಸಿಗುತ್ತದೆ

ಉತ್ತರ ಪತ್ರಿಕೆ ಪರಿಶೀಲಿಸಿ

ಉತ್ತರ ಪತ್ರಿಕೆ ಪರಿಶೀಲಿಸಿ

ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಎಲ್ಲಾ ಉತ್ತರ ಬರೆದ ಬಳಿಕ ಮತ್ತೊಮ್ಮೆ ಉತ್ತರ ಪತ್ರಿಕೆ ಯಾವತ್ತೂ ಪರಿಶೀಲಿಸುವುದಿಲ್ಲ. ನೀವು ಕೊನೆಯಲ್ಲಿ ಮತ್ತೊಮ್ಮೆ ಚೆಕ್ ಮಾಡುವುದರಿಂದ, ಸ್ಪೇಲ್ಲಿಂಗ್ ಮಿಸ್ಟೇಕ್, ಗ್ರಾಮರ್ ಮಿಸ್ಟೇಕ್ ಎಲ್ಲಿಯಾದ್ರೂ ಆಗಿದ್ರೆ ಸರಿ ಪಡಿಸಬಹುದು. ಅಷ್ಟೇ ಅಲ್ಲ ಪ್ರಮುಖ ಉತ್ತರಕ್ಕೆ ಹೈಲೆಟ್ ಮಾಡಬಹುದು, ಅಗತ್ಯವಿದ್ರೆ ಡಯಾಗ್ರಾಮ್ ಬಳಸಬಹುದು.ಹಾಗಾಗಿ ಉತ್ತರ ಪತ್ರಿಕೆ ಪರಿಶೀಲನೆ ಅಗತ್ಯ

ಬರವಣಿಗೆ:

ಬರವಣಿಗೆ:

ಹೆಚ್ಚಿನ ವಿದ್ಯಾರ್ಥಿಗಳು ಬರವಣಿಗೆಗೆ ಪ್ರಾಮುಖ್ಯತೆ ನೀಡುವುದಿಲ್ಲ. ಅವರು ಈ ವಿಚಾರವನ್ನ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಆದ್ರೆ ನಿಜ ವಿಷಯವೆಂದ್ರೆ ಸುಂದರ ಬರವಣಿಗೆ ಅತೀ ಹೆಚ್ಚು ಅಂಕ ಸ್ಕೋರ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಬರವಣಿಗೆ ಸುಂದರವಾಗಿದ್ರೆ ಅದನ್ನ ತಿದ್ದಯವವರಿಗೆ ಓದಲು ಕೂಡಾ ಸುಲಭವಾಗುತ್ತದೆ ಅಷ್ಟೇ ಅಲ್ಲ ನೋಡಲು ನಿಟ್ ಆಗಿದ್ದು, ಅವರು ಅಂಕ ನೀಡುತ್ತಾ ಹೋಗುತ್ತಾರೆ

ಗುಣಮಟ್ಟದ ಉತ್ತರ

ಗುಣಮಟ್ಟದ ಉತ್ತರ

ಎಕ್ಸಾಂನಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕೆಂದು ಆಲೋಚಿಸುತ್ತಿದ್ದೀರಾ. ಹಾಗಿದ್ರೆ ಇಲ್ಲಿದೆ ಉಪಾಯ. ಕೇಳಿರುವ ಪ್ರಶ್ನೆಗೆ ಸರಿಯಾದ ಉತ್ತಮ ಗುಣಮಟ್ಟದ ಉತ್ತರ ಬರೆಯಿರಿ ವಿನಾಃ ಬಾಯಿಗೆ ಬಂದಂತೆ ಏನೇನೋ ಬರೆಯಬೇಡಿ. ಇದರಿಂದ ನಿಮ್ಮ ಉತ್ತರ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಕೆಲವು ವಿದ್ಯಾರ್ಥಿಗಳು ಅಂದುಕೊಂಡಿರುತ್ತಾರೆ ಉತ್ತರ ಗಾತ್ರ ದೊಡ್ಡದಾದಷ್ಟು ಹೆಚ್ಚು ಅಂಕ ಸಿಗುತ್ತದೆ ಎಂದು. ಆದ್ರೆ ಇದು ತಪ್ಪು ಕಲ್ಪನೆ. ತಿದ್ದುವವರು ಗಾತ್ರಕ್ಕೆ ಪ್ರಾಮುಖ್ಯತೆ ನೀಡಲ್ಲ ಬದಲಿಗೆ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಾರೆ

ಈ ಮೇಲೆ ಹೇಳಿರುವ ಟಿಪ್ಸ್ ಫಾಲೋ ಮಾಡುವುದರಿಂದ , ಪರೀಕ್ಷೆಯಲ್ಲಿ ನೀವು ಕೂಡಾ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದರಲ್ಲಿ ಅನುಮಾನವೇ ಇಲ್ಲ.

 

For Quick Alerts
ALLOW NOTIFICATIONS  
For Daily Alerts

English summary
Most of the students are scared of exams, and we feel exams are held just to punish us. Even though we enter the examination hall with tons of information in our brain, we often fail to present the answers in an impressive way. To score maximum marks one must follow some easy and simple tips shared below
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X