ಸಂದರ್ಶನಕ್ಕೆ ಕರೆಯುವ ಮುನ್ನ ಸಂದರ್ಶನಕಾರರು ನಿಮ್ಮ ರೆಸ್ಯೂಮ್ ಚೆಕ್ ಮಾಡುತ್ತಾರೆ. ಹಾಗಾಗಿ ಮೊದಲಿಗೆ ಅವರನ್ನ ನೀವಲ್ಲ ಬದಲಿಗೆ ನಿಮ್ಮ ರೆಸ್ಯೂಮ್ ಇಂಪ್ರೇಸ್ ಮಾಡಬೇಕು. ಆಗ ಮಾತ್ರ ನಿಮಗೆ ಸಂದರ್ಶನಕ್ಕೆ ಕರೆ ಬರಲು ಸಾಧ್ಯ.

ಮೊದಲಿಗೆ ಇತರರ ರೆಸ್ಯೂಮ್ ಗಿಂತ ನಿಮ್ಮ ರೆಸ್ಯೂಮ್ ಹೇಗೆ ಸಂದರ್ಶನಕಾರರ ಮನಸ್ಸು ಸೆಳೆಯುವಂತೆ ರಚಿಸಬೇಕು ಎಂದು ಆಲೋಚಿಸಿ. ಹಾಗೂ ಇತರರು ಕಂಪನಿಗೆ ಮಾಡಲು ಸಾಧ್ಯವಾಗದೇ ಇರುವಂತದ್ದನ್ನ ನೀವು ಏನು ಮಾಡಲು ಸಾಧ್ಯ ಎಂಬುವುದನ್ನ ಯೋಚಿಸಿ ರೆಸ್ಯೂಮ್ ನಲ್ಲಿ ಬರೆಯಿರಿ. ಇನ್ನು ಇತರರಿಗಿಂತ ನಿಮ್ಮ ರೆಸ್ಯೂಮ್ ಹೇಗೆ ಇಂಪ್ರೇಸೀವ್ ಆಗಿ ಬರೆಯುವುದು ಎಂದು 200 ಪದಗಳಲ್ಲಿ ತಿಳಿಸಲಾಗಿದೆ ಮುಂದಕ್ಕೆ ಓದಿ.
ಸ್ಪೆಸಿಫಿಕ್ ಆಗಿ ಬರೆಯಿರಿ
ಯಾರಾದ್ರೂ ನಿಮ್ಮ ಬಗ್ಗೆ ತಿಳಿಸಿ ಎಂದಾಗ ಹೆಸರು, ವಿದ್ಯಾರ್ಹತೆ, ಕೆರಿಯರ್ ನಿಂದ ನಾವು ಮಾತು ಪ್ರಾರಂಭಿಸಿ ನಮ್ಮ ಬಗ್ಗೆ ವಿವರಿಸಿ ಹೇಳುತ್ತೇವೆ. ಆದ್ರೆ ಇದೆಲ್ಲವನ್ನ ಮೊದಲು ನಿಮ್ಮ ರೆಸ್ಯೂಮ್ ತಿಳಿಸುವಂತಿರಬೇಕು. ಹಾಗಾಗಿ ನೀವು ರೆಸ್ಯೂಮ್ ತಯಾರಿಸುವಾಗ ಈ ಮೇಲೆ ಹೇಳಿರುವ ಎಲ್ಲಾ ಮಾಹಿತಿಗಳನ್ನ ಒಳಗೊಂಡಂತೆ ಸಿಂಪಲ್, ಕ್ಲಿಯರ್ ಹಾಗೂ ಡೈರೆಕ್ಟ್ ಆಗಿ ತಿಳಿಸಿ. ಉದಾಹರಣೆಗೆ ನೀವು ಸೋಶಲ್ ಮೀಡಿಯಾ ಮ್ಯಾನೇಜರ್ ಆಗಿದ್ದಲ್ಲಿ, ಸೋಶಲ್ ಮೀಡಿಯಾ ಮ್ಯಾನೇಜರ್ ಎಂದು ಬರೀ ಮೂರು ಪದಗಳಲ್ಲಿ ತಿಳಿಸಿ ಬದಲಿಗೆ ೧೦ ಪದಗಳಲ್ಲಿ ತಿಳಿಸುವ ಅಗತ್ಯವಿಲ್ಲ. ಅನಗತ್ಯ ಇಂಟ್ರಡಕ್ಷನ್ ಯಾವುದೇ ಕಾರಣಕ್ಕೂ ಬೇಡ.
ಕ್ರಿಯೇಟಿವಿಟಿ
ಹಿಂದಿನ ಕಂಪನಿಯಲ್ಲಿ ಯಾವ ಕ್ರಿಯೇಟಿವಿಟಿ ಬಳಸಿ ನೀವು ಕೆಲಸ ಮಾಡಿದ್ದೀರಿ ಎಂದು ಮೊದಲಿಗೆ ತಿಳಿದುಕೊಳ್ಳಿ. ಇನ್ನು ನಿಮ್ಮ ಕ್ರಿಯೆಟಿವಿಟಿ ಬಗ್ಗೆ ಉದ್ದುದ್ದ ಲೈನ್ ಬೇಡ. ನಿಮ್ಮ ಐಡಿಯಾ ಹಾಗೂ ಒಳ್ಳೆಯ ವಿಚಾರಗಳನ್ನ ಶಾರ್ಟ್ ಆಗಿ ಬರೆದು ಶೇರ್ ಮಾಡಿಕೊಳ್ಳಿ.
ಸ್ಕಿಲ್ ಬಗ್ಗೆ ವಿವರಿಸಿ
ನಿಮ್ಮ ಒಂದೇ ಸ್ಕಿಲ್ ಬಗ್ಗೆ ನೇರವಾಗಿ ಬರೆಯುದಕ್ಕಿಂತ ಬೆಟರ್ ನಿಮ್ಮ ಸ್ಕಿಲ್ ನ್ನ ವಿಭಜಿಸಿ ಬರೆಯಿರಿ. ಆದಷ್ಟು ಬೆಟರ್ ಆಗಿ ನಿಮ್ಮ ಸ್ಕಿಲ್ ನ್ನ ವಿಭಜಿಸಿ. ಉದಾಹರಣೆಗೆ ನೀವು ಹೆಲ್ತ್ ಕೇರ್ ಇಂಡಸ್ಟ್ರಿಯಲ್ಲಿ ಹಲವಾರು ವರ್ಷದಿಂದ ದುಡಿಯುತ್ತಿರಬಹುದು, ಹಾಗಾಗಿ ಸ್ಕಿಲ್ ಬಗ್ಗೆ ಬರೆಯುವಾಗ ಬರೀ ಹೆಲ್ತ್ ಕೇರ್ ಅಡ್ಮಿನಿಸ್ಟ್ರೇಟರ್ ಎಂದು ಬರೆಯುವ ಬದಲು ಕ್ಲಿನಿಕಲ್ ಎಜ್ಯುಕೇಶನ್, ಕ್ಲಿನಿಕಲ್ ಮಾರ್ಕೇಟಿಂಗ್ ಹೀಗೆ ವಿವರಿಸುತ್ತಾ ಬರೆಯಿರಿ, ಇದರಿಂದ ನಿಮ್ಮ ರೆಸ್ಯೂಮ್ ಇಂಪ್ರೇಸಿವ್ ಕೂಡಾ ಆಗಿರುವುದು.
ಡೈನಾಮಿಕ್ ಪದಗಳ ಬಳಕೆ ಮಾಡಿ
ಡೈನಾಮಿಕ್ ಪದ ಬಳಸಿದ್ರೆ ನಿಮ್ಮ ರೆಸ್ಯೂಮ್ ಸ್ವಲ್ಪ ವೇಟೆಜ್ ಬರುವುದು. ಸಾಮಾನ್ಯ ಲೈನ್ ಹಾಗೂ ಡೈನಾಮಿಕ್ ಲೈನ್ ಗಳ ಬಳಕೆಯಿಂದ ಏನೆಲ್ಲಾ ವ್ಯತ್ಯಾಸ ಆಗುವುದು ಎಂದು ಚೆಕ್ ಮಾಡಿಕೊಳ್ಳಿ. ಫ್ರೆಶ್ ಹಾಗೂ ಇಂಟ್ರೆಸ್ಟಿಂಗ್ ಭಾಷೆಯಿಂದ ನಿಮ್ಮ ರೆಸ್ಯೂಮ್ ತಯಾರಿಸಿ.


Click it and Unblock the Notifications











