ಈ ಅಂಶಗಳು ನಿಮ್ಮ ರೆಸ್ಯೂಮ್ ನಲ್ಲಿದ್ದರೆ ಕೆಲಸ ಗ್ಯಾರಂಟಿ

Posted By:

ನೀವು ಯಾವುದಾದ್ರೂ ಹುದ್ದೆಗ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದಾದ್ರೆ ನಿಮ್ಮ ಬಯೋಡಾಟ ಇಲ್ಲ ರೆಸ್ಯೂಮ್ ಪ್ರಮುಖ ಪಾತ್ರವಹಿಸುತ್ತದೆ. ನಿಮಗೆ ಕೆಲಸ ಸಿಕ್ಕರೆ ಅದರಲ್ಲಿ ಹೆಚ್ಚಿನ ಕ್ರೆಡಿಟ್ ನಿಮ್ಮ ರೆಸ್ಯೂಮ್ ಗೆ ಸಲ್ಲುತ್ತದೆ.

ರೆಸ್ಯೂಮ್ ನಲ್ಲಿ ಇರಲೇ ಬೇಕಾದ ಮಾಹಿತಿಗಳು

ರೆಸ್ಯೂಮ್ ಮೂಲಕ ನಿಮ್ಮನ್ನ ಮೊದಲು ಹೆಚ್ ಆರ್ ಆಯ್ಕೆ ಮಾಡಿಕೊಳ್ಳುತ್ತಾರೆ. ನಿಮ್ಮ ರೆಸ್ಯೂಮ್ ಚೆನ್ನಾಗಿದ್ದರೆ ಮಾತ್ರ ಅವರು ನಿಮ್ಮನ್ನ ಸಂದರ್ಶನಕ್ಕೆ ಆಯ್ಕೆ ಮಾಡಬಹುದು. ಹಾಗಾಗಿ ರೆಸ್ಯೂಮ್ ಮೊದಲ ಹಂತದಿಂದ ಕೊನೆಯ ಹಂತದವರೆಗೂ ತುಂಬಾ ಸಹಾಯಕಾರಿ.

ರೆಸ್ಯೂಮ್ ನಲ್ಲಿ ನಿಮ್ಮ ವೈಯಕ್ತಿಯ ವಿವರಣೆ ಜತೆಗೆ ಶೈಕ್ಷಣಿಕ ವಿವರಣೆ ಹಾಗೂ ಅನುಭವ ವಿರುತ್ತದೆ. ಹಾಗಾಗಿ ಇಂತಹ ನಿಮಗೆ ಕೆಸಲ ಸಿಗುವಲ್ಲಿ ರೆಸ್ಯೂಮ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.ನೀವು ರೆಸ್ಯೂಮ್ ತಯಾರಿಸುತ್ತಿದ್ದಲ್ಲಿ ಈ ಕೆಳಗಿನ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ರೆಸ್ಯೂಮ್ ತಯಾರಿಸಿ.

ರೆಸ್ಯೂಮ್ ನಲ್ಲಿ ಇರಲೇ ಬೇಕಾದ ಮಾಹಿತಿಗಳು

ಆ ಅಂಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ

1. ಸಿ.ವಿ. ಅನ್ನು ಸಾಮಾನ್ಯ ಪತ್ರ ಅಥವಾ ಔಪಚಾರಿಕ ಪತ್ರದಂತೆ ಯಾವತ್ತೂ ಬರೆಯಬೇಡಿ ಮತ್ತು ರಚಿಸಬೇಡಿ

2. ಮೊದಲನೆಯದಾಗಿ ನಿಮ್ಮ ಪೂರ್ಣ ಹೆಸರು, ವಿಳಾಸ, ಮೇಲ್ ID ಮತ್ತು ಸಂಪರ್ಕ ಸಂಖ್ಯೆಯನ್ನು ಬರೆಯಿರಿ, ಇದರಿಂದ ನಿಮ್ಮ ವೈಯಕ್ತಿಕ ವಿವರಗಳ ಬಗ್ಗೆ ಕೂಡಲೇ ಹೆಚ್ ಆರ್ ಸಿಬ್ಬಂದಿಗಳಿಗೆ ತಿಳಿಯುತ್ತದೆ

3. ನಿಮ್ಮ ಉದ್ಯೋಗದ ಆಬ್ಜೆಕ್ಟಿವ್ನಲ್ಲಿ ಸ್ಪಷ್ಟವಾಗಿ ಬರೆಯಿರಿ ಏನು ಅಂದ್ರೆ ನೀವು ಯಾವ ಕೆಲಸವನ್ನು ಬಯಸುತ್ತೀರಿ ಮತ್ತು ಏಕೆ ನೀವು ಆ ಕೆಲಸವನ್ನ ಬಯಸುತ್ತೀರಿ ಎಂದು. 2 ಅಥವಾ 3 ಸಾಲುಗಳಲ್ಲಿ ವಿವರಿಸಿ

4. ನಿಮ್ಮ ಸಾಮರ್ಥ್ಯ, ನಿಮ್ಮ ಶಿಕ್ಷಣ, ಮತ್ತು ನಿಮ್ಮ ಅನುಭವದ ಬಗ್ಗೆ ಸ್ಪಷ್ಟವಾದ ಮತ್ತು ನಿಖರವಾದ ವಿವರಣೆಯನ್ನು ನೀಡಿ. ಇದು ನಿಮ್ಮ ರೆಸ್ಯೂಮ್ ನ ಮೊದಲ ಆಕರ್ಷಣೆಯಾಗಿದ್ದು, ಇದರಿಂದ ಎಚ್ಆರ್ ಸಿಬ್ಬಂದಿಗೆ 1 ನಿಮಿಷದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಅನುಭವವನ್ನು ಪತ್ತೆ ಹಚ್ಚಬಹುದು.

ರೆಸ್ಯೂಮ್ ನಲ್ಲಿ ಇರಲೇ ಬೇಕಾದ ಮಾಹಿತಿಗಳು

5. ಸಿ.ವಿ. ಸ್ವಚ್ಛವಾಗಿರಬೇಕು ಮತ್ತು ನೀಟ್ ಆಗಿರಬೇಕು. ಇದರಲ್ಲಿ ನೇರವಾದ ಭಾಷೆಯನ್ನು ಬಳಸಿ, ಮುಖ್ಯ ವಿಷಯಗಳನ್ನು ಮಾತ್ರ ಬರೆಯಿರಿ ಮತ್ತು ಅಗತ್ಯವಿಲ್ಲದ ವಿಚಾರಗಳನ್ನ ಬರೆಯಬೇಡಿ.

6. ಹೆಚ್ಚುವರಿ ಮಾಹಿತಿಯಲ್ಲಿ ನಿಮ್ಮ ಇತರ ಪ್ರತಿಭೆ ಮತ್ತು ಹವ್ಯಾಸಗಳ ವಿವರಗಳನ್ನು ಬರೆಯಿರಿ.

7. ಕೊನೆಯದಾಗಿ ನಿಮ್ಮ ಸಹಿ ದಿನಾಂಕ ಮತ್ತು ಸ್ಥಳವನ್ನು ಇರಿಸಿ.

English summary
The Good Resume Format will grab the HR attentions immediately. and make it clear that you are the best candidate for the job. Some Resume Formats will work better than performance. which resume Format is best for you. here is the list about what must included in resume

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia