ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು!

By Kavya

ಪ್ರತಿಯೊಬ್ಬರು ಸಕ್ಸಸ್ ಫುಲ್ ವ್ಯಕ್ತಿಗಳಾಗಿರುವುದಿಲ್ಲ. ಅದಕ್ಕೆ ಕಾರಣ ಕೂಡಾ ಸಿಂಪಲ್ ಯಾಕೆಂದ್ರೆ ಯಶಸ್ವಿಯಾಗಲು ಎಲ್ಲರೂ ಕೂಡಾ ಸರಿಯಾದ ಕೆಲಸಗಳನ್ನ ಮಾಡಿಕೊಂಡು ಇರುವುದಿಲ್ಲ. ಆದ್ರೆ ಸಕ್ಸಸ್ ಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ ಅದಕ್ಕಾಗಿ ಸ್ವಲ್ಪ ಶ್ರಮ ವಹಿಸಲು ಮಾತ್ರ ಯಾರೂ ಕೂಡಾ ಸಿದ್ಧರಿರುವುದಿಲ್ಲ.

 

ಹೊಸ ಬ್ಯುಸಿನೆಸ್ ಗೆ ಕೈ ಹಾಕುತ್ತಿದ್ದೀರಾ... ಸಕ್ಸಸ್ ಗಾಗಿ ವಾಸ್ತು ಪ್ರಕಾರ ನಿಮ್ಮ ಕಛೇರಿ ಹೀಗಿರಲಿ!ಹೊಸ ಬ್ಯುಸಿನೆಸ್ ಗೆ ಕೈ ಹಾಕುತ್ತಿದ್ದೀರಾ... ಸಕ್ಸಸ್ ಗಾಗಿ ವಾಸ್ತು ಪ್ರಕಾರ ನಿಮ್ಮ ಕಛೇರಿ ಹೀಗಿರಲಿ!

ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು!

ಇನ್ನ ಯಶಸ್ವೀ ವ್ಯಕ್ತಿಗಳಿಗೆ ಸಮಯ ಎಂಬುವುದು ತುಂಬಾನೇ ಪ್ರಮುಖವಾದುದು. ನೀವು ಕೂಡಾ ಕೆರಿಯರ್ ಲೈಫ್ ನಲ್ಲಿ ಸಕ್ಸಸ್ ಪಡೆಯಬೇಕು ಎಂದು ಅಂದುಕೊಂಡಿದ್ದರೆ ಬೆಳಗ್ಗೆ ಏನೆಲ್ಲಾ ಮಾಡಿದ್ರೆ ಒಳ್ಳೆಯದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಮುಂಜಾನೆ ಬೇಗ ಎದ್ದೇಳಿ:

ಇಂಟರ್ವ್ಯೂ ವೇಳೆ ಈ ನಾಲ್ಕು ಸವಾಲು ಯಾವತ್ತು ಕೇಳಬೇಡಿ... ಕೆಲಸ ಸಿಗೋದು ಕೂಡಾ ತಪ್ಪುತ್ತೆ!ಇಂಟರ್ವ್ಯೂ ವೇಳೆ ಈ ನಾಲ್ಕು ಸವಾಲು ಯಾವತ್ತು ಕೇಳಬೇಡಿ... ಕೆಲಸ ಸಿಗೋದು ಕೂಡಾ ತಪ್ಪುತ್ತೆ!

ಇಂದು ಸಕ್ಸಸ್ ಫುಲ್ ಆಗಿರುವ ಶೇ .90 ರಷ್ಟು ವ್ಯಕ್ತಿಗಳು ಬೆಳಗ್ಗೆ 6 ಗಂಟೆಗೆ ಮುನ್ನನೇ ಎದ್ದೇಳುತ್ತಾರಂತೆ ಎಂದು ಸರ್ವೇ ಪ್ರಕಾರ ತಿಳಿದುಬಂದಿದೆ. ಪೆಪ್ಸಿಕೋ ಸಿಇಒ ಇಂದ್ರ ನೂಯಿ ಇದಕ್ಕೆ ಬೆಸ್ಟ್ ಉದಾಹರಣೆ.

ಎದ್ದೋಡನೆ ಒಂದು ಗ್ಲಾಸ್ ನೀರು ಕುಡಿಯಿರಿ:

ರಾತ್ರಿ ಮಲಗಿದ ಬಳಿಕ ಏನೂ ಸೇವಿಸದೇ ಇರುವುದರಿಂದ ದೇಹವು ತುಂಬಾನೇ ಡಿ ಹೈಡ್ರೇಟ್ ಆಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಿರಿ. ಇದರಿಂದ ಏನೆಲ್ಲಾ ಪ್ರಯೋಜನವಾಗುತ್ತೆ ಎಂಬುವುದು ನಿಮಗೆ ಕೂಡಲೇ ಕೆಲವೇ ದಿನಗಳಲ್ಲಿ ತಿಳಿಯುತ್ತದೆ. ನೀರು ಕುಡಿದ ಬಳಿಕ ನಿಮ್ಮ ಬಾಡಿ ಹೈಡ್ರೇಟ್ ಆಗುತ್ತದೆ ಜತೆಗೆ ದೇಹದಲ್ಲಿನ ಕಲ್ಮಶವನ್ನ ಅದು ಹೊರಗೆ ಹಾಕುತ್ತದೆ.

ಕಾಲೇಜು ಮೆಟ್ಟಿಲು ಹತ್ತಲಿರುವ ಬಣ್ಣದ ಚಿಟ್ಟೆಗಳಿಗೆ ಉಪಯುಕ್ತ ಮಾಹಿತಿಕಾಲೇಜು ಮೆಟ್ಟಿಲು ಹತ್ತಲಿರುವ ಬಣ್ಣದ ಚಿಟ್ಟೆಗಳಿಗೆ ಉಪಯುಕ್ತ ಮಾಹಿತಿ

ವರ್ಕೌಟ್ ಮಾಡಿ:

ಹೆಚ್ಚಿನ ಮಂದಿ ಬೆಳಗ್ಗೆ ಎದ್ದೋಡನೆ ಯೋಗ ಮಾಡುತ್ತಾರೆ. ಹಾಗೆಯೇ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಕೆಲಸ ಪ್ರಾರಮಭಿಸುವ ಮುನ್ನ ನೀವು ವರ್ಕೌಟ್ ಮಾಡುವುದರಿಂದ ನಿಮ್ಮ ದೇಹದ ಎನರ್ಜಿ ಬೂಸ್ಟ್ ಆಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದೋಡನೆ ಜಾಗ್ ಮಾಡಿ. ಇದರಿಂದ ದಿನಪೂರ್ತಿ ನೀವು ಎನರ್ಜಿಟಿಕ್ ಆಗಿ ಇರುತ್ತೀರಾ.

ಹೆಲ್ತಿ ಬ್ರೇಕ್‌ಫಾಸ್ಟ್ ನಿಮ್ಮದಾಗಿಸಿ

ಮುಂಜಾನೇ ಬೆಳಗ್ಗೆ ಹರಿಬರ್ರಿಯಾಗಿ ಎದ್ದು ಒಂದು ಕಪ್ ಕಾಫಿ ಕುಡಿದು ನಾವು ಖಾಲಿ ಹೊಟ್ಟೆಗೆ ಆಫೀಸ್‌ಗೆ ಹೋಗುತ್ತೇವೆ.ಇದರಿಂದ ಆಸಿಡಿಟಿ ಮುಂತಾದ ಸಮಸ್ಯೆ ಹುಟ್ಟಿಕೊಂಡು ನಿಮಗೆ ಕೆಲಸದತ್ತ ಗಮನ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬೆಳಗ್ಗೆ ಆಫೀಸ್‌ಗೆ ಹೋಗುವ ಮುನ್ನ ಹೆಲ್ತಿಯಾದ ಆಹಾರ ಸೇವಿಸಿ ಆಫೀಸಿಗೆ ತೆರಳಿ. ಹೊಟ್ಟೆ ತುಂಬಿದ್ದಾಗ ಮಾತ್ರ ಮೈಂಡ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು.

ಈಗಷ್ಟೇ ಪದವಿ ಮುಗಿಸಿರುವವರಿಗಾಗಿ ಆಫ್‌ಬೀಟ್ ಕೋರ್ಸ್ ಗಳು!ಈಗಷ್ಟೇ ಪದವಿ ಮುಗಿಸಿರುವವರಿಗಾಗಿ ಆಫ್‌ಬೀಟ್ ಕೋರ್ಸ್ ಗಳು!

ನಿಮ್ಮ ಸಹದ್ಯೋಗಿಗಳತ್ತನೂ ಇರಲಿ ಗಮನ:

ಹೌದು ಸಹದ್ಯೋಗಿಗಳತ್ತನೂ ಗಮನ ಇರಬೇಕು. ಕೆಲವೊಮ್ಮೆ ಅವರಿಗೆ ನಿಮ್ಮ ಸಹಾಯದ ಹಾಗೂ ಪ್ರೋತ್ಸಾಹದ ಅಗತ್ಯವಿರುತ್ತದೆ. ಹಾಗಾಗಿ ನೀವೇ ಎಷ್ಟೇ ಬ್ಯುಸಿ ಇದ್ದರೂ ಬೆಳಗ್ಗೆ ಆಫೀಸ್ ಹೋದೊಡನೇ ಒಮ್ಮೆ ರಿಲಾಕ್ಸ್ ಆಗಿ ಬಳಿಕ ಸಹದ್ಯೋಗಿಗಳ ಕೆಲಸ ಬಗ್ಗೆ ಚರ್ಚಿಸುವುದು ಬೆಸ್ಟ್

For Quick Alerts
ALLOW NOTIFICATIONS  
For Daily Alerts

English summary
Successful people know that time is a precious commodity. And while theirs is easily eaten up by phone calls, meetings and sudden crises once they have gotten to the office, the morning hours are under their control.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X