ಜಾಬ್ ಕಳೆದುಕೊಳ್ಳುವುದು ಎಂದ್ರೆ ನೀವು ಸೆಲ್ಫ್ ಕಾಂಫಿಡೆನ್ಸ್ ಕಳೆದುಕೊಂಡಂತೆ. ಆದ್ರೆ ನಿಮಗೆ ಕೂಡಲೇ ಬೇರೆ ಸಂಸ್ಥೆಯಿಂದ ಆಫರ್ ಬಂದ್ರೆ ಕಳೆದುಕೊಂಡ ಸೆಲ್ಫ್ ಕಾಂಫಿಡೆನ್ಸ್ ಮರಳಿ ಬರುವುದು.

ನಿಮಗೆ ನೊಟೀಸ್ ಪಿರೇಡ್ ನೀಡೋ ಮುನ್ನ ಬೇರೆ ಕಂಪನಿಯಿಂದ ಆಫರ್ ನಿಮ್ಮದಾಗಿಸಿಕೊಳ್ಳುವುದು ಹೇಗೆ ಎಂದು ನಿಮಗೆ ಸಲಹೆ ನೀಡುತ್ತೇವೆ.
ಭಾವನಾತ್ಮಕ ಕಂಟ್ರೋಲ್:
ನಿಮಗೆ ಕಾರಣವಿಲ್ಲದೆನೇ ಟಾರ್ಚರ್ ನೀಡುತ್ತಿದ್ದಾರಾ...? ಅದೆಷ್ಟೋ ಮಂದಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದಾದ್ರೆ ಸುಮ್ ಸುಮ್ನೆ ಕಂಪನಿಯಿಂದ ಟಾರ್ಚರ್ ಗೆ ಒಳಗಾಗುತ್ತಾರೆ. ನಿಮಗೆ ಅವರ ಈ ವರ್ತನೆಯಿಂದ ಶಾಕ್ ಆಗಿರಬಹುದು. ಈ ಅನುಭವ ನಿಮಗಾದ್ರೆ ನೀವು ಅಲ್ಲಿಂದ ಮೂವ್ ಆಗುವುದು ಒಳ್ಳೆಯದು. ನೆನಪಿಟ್ಟುಕೊಳ್ಳಿ ಯಾವುದೇ ಕಾರಣವಿರಬಹುದು, ನಿಮಗೆ ವಿಪರೀತ ಸ್ಟ್ರೆಸ್ ಆದ್ರೆ ನೀವು ಆ ಕೂಡಲೇ ಬೇರೆ ಕಂಪನಿಗೆ ಟ್ರೈ ಮಾಡುವುದು ಬೆಸ್ಟ್.
ಯಾರಿಗೂ ದೂರಬೇಡಿ:
ನಿಮಗೆ ಯಾವುದೇ ಪರಿಸ್ಥತಿ ಬಂದೊದಗಿದ್ರು ನಿಮ್ಮ ಪರಿಸ್ಥಿತಿಗೆ ನೀವು ಬೇರೆಯವರನ್ನ ಹೊಣೆ ಮಾಡಬೇಡಿ. ಬೇರೆಯವರನ್ನ ದೂರುವುದು ಒಳ್ಳೆಯದಲ್ಲ. ನೀವು ಅದಕ್ಕೆ ಅರ್ಹರಲ್ಲ ಎಂದು ನೀವೇ ತಿಳಿದುಕೊಳ್ಳುವುದು ಬೆಸ್ಟ್. ನಿಮಗೆ ನೀಡುವ ಟಾರ್ಚರ್ ಹಿಂದೆ ಬೇರೆಯವರ ಕೈವಾಡವಿದೆ ಎಂದು ದೂರುವುದನ್ನ ಬಿಟ್ಟುಬಿಡಿ.
ನಿಮ್ಮನ್ನ ಅನಾಲಿಸ್ ಮಾಡಿಕೊಳ್ಳಿ:
ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನ ಮೊದಲು ಗುರುತಿಸಿಕೊಳ್ಳಿ. ಕಂಪನಿಗೆ ಬೇಕಾಗಿರುವ ಕೌಶಲ್ಯ ಒಂದೆ ವೇಳೆ ನಿಮ್ಮ ಆಸಕ್ತಿಯ ಚಟುವಟಿಕೆಯಾಗಿದ್ರೆ ಅದು ನಿಮ್ಮ ಪಾಲಿಗೆ ಬೋನಸ್ ಆಗುತ್ತದೆ. ಹಳೆಯ ಕೆಲಸದ ಅನುಭವದಿಂದ ಇದನ್ನ ಕಲಿತುಕೊಳ್ಳಿ. ಅವಕಾಶ ಸಿಕ್ಕಾಗ ಬೇರೆ ಕಂಪನಿಗೆ ಜಂಪ್ ಆಗಿ. ನಿಮಗೆ ಆಸಕ್ತಿಕರ ಚಟುವಟಿಕೆ ಹಾಗೂ ಹಾಗೂ ಯಾವುದು ಆಸಕ್ತಿಕರ ಚಟುವಟಿಕೆಯಲ್ಲ ಎಂಬ ವಿಚಾರದ ಬಗ್ಗೆ ಒಂದು ಲಿಸ್ಟ್ ಮಾಡಿಕೊಳ್ಳಿ. ಆದ್ರೂ ನಿಮಗೆ ಈಗ ಸಿಕ್ಕಿರುವ ಜಾಬ್ ನಿಮ್ಮ ಆಸಕ್ತಿಯ ಜಾಬ್ ಆಗಿದ್ರೆ ಅದರಲ್ಲೇ ಕೆಲಸ ಮಾಡಲು ಪ್ರಾರಂಭಿಸಿ.
ನಿಮ್ಮನ್ನ ಅಪ್‌ಡೇಟ್ ಮಾಡಿಕೊಳ್ಳಿ:
ನೀವು ಚಹಾ ಪ್ರಿಯರಾಗಿದ್ರೆ ಎಲ್ಲಾ ಫ್ಲೇವರಿನ ಚಹಾ ಒಮ್ಮೆ ಟೇಸ್ಟ್ ಮಾಡಿಕೊಳ್ಳಿ. ವಿಭಿನ್ನ ರೀತಿಯ ಕಂಪನಿಗಳಿಗೆ ನಿಮ್ಮ ಒಂದೇ ತೆರನಾದ ರೆಸ್ಯೂಮ್ ಸ್ಯೂಟ್ ಆಗುವುದಿಲ್ಲ. ಪ್ರತಿಯೊಂದು ಸಂಸ್ಥೆಯು ನಿಮ್ಮಲ್ಲಿ ತಮಗೆ ಬೇಕಾದ ಸ್ಪೇಶಲ್ ಸ್ಕಿಲ್ ಬಯಸುತ್ತದೆ. ಹಲವು ವಿಧದ ಹುದ್ದೆಗಳ ಜಾಬ್ ಜವಾಬ್ದಾರಿ ಬೇರೆನೇ ಆಗಿರುತ್ತದೆ. ಹಾಗಾಗಿ ನಿಮ್ಮ ರೆಸ್ಯೂಮ್ ನಲ್ಲಿ ಇಂಡಸ್ಟ್ರಿಗೆ ಸಂಬಂಧಪಟ್ಟ ನಿಮ್ಮ ಲೇಟೆಸ್ಟ್ ಟ್ರೆಂಡ್ ಸ್ಕಿಲ್ ಬಗ್ಗೆ ಅಪ್‌ಡೇಟ್ ಮಾಡಿಕೊಂಡಿರಿ.
ಸ್ಥಿರವಾಗಿರಿ:
ನಮ್ಮ ಜೀವನದಲ್ಲಿ ಸಂಭವಿಸುವ ನೆಗಟೀವ್ ವಿಚಾರಗಳತ್ತ ಕೂಡಾ ಗಮನ ಕೊಡಿ. ನಿಮ್ಮ ಮುಂದೆ ಕೆಲವೊಂದು ಆಯ್ಕೆಗಳು ಕೂಡಾ ಎದುರಾಗಬಹುದು. ಒಂದು ಆಯ್ಕೆಯನ್ನ ನೀವು ನಿಮ್ಮದಾಗಿಸಿಕೊಂಡ ಮೇಲೆ ಮತ್ತೆ ಅದರತ್ತನೇ ಗಮನ ನೀಡಿ. ಬೇರೆಡೆ ಗಮನ ಹರಿಸಬೇಡಿ.


Click it and Unblock the Notifications











