ಅತೀ ಹೆಚ್ಚು ವೇತನ ಪಡೆಯಬಹುದಾದ ಜಾಬ್ ಗಳು... ಇದು ಭಾರತದಲ್ಲಿ ಮಾತ್ರ!

ಅತೀ ಹೆಚ್ಚು ವೇತನ ನೀಡುವ ಜಾಬ್ ಗಳು ಇವು. ಈ ಜಗತ್ತಿನಲ್ಲಿ ಯಾವುದೇ ಒಂದು ವಸ್ತುವು ನಿಮಗೆ ಫ್ರೀಯಾಗಿ ಇಲ್ಲ ಸುಲಭವಾಗಿ ಸಿಗುವುದಿಲ್ಲ. ನಿಮಗೆ ಹಣದ ಅಗತ್ಯವಿರುತ್ತದೆ. ಹಣದ ವಿಷಯ ಬಂದಾಗ ಅಲ್ಲಿ ಎರಡು ಆಯ್ಕೆಗಳು ಇರುತ್ತದೆ.

By Kavya

ಅತೀ ಹೆಚ್ಚು ವೇತನ ನೀಡುವ ಜಾಬ್ ಗಳು ಇವು. ಈ ಜಗತ್ತಿನಲ್ಲಿ ಯಾವುದೇ ಒಂದು ವಸ್ತುವು ನಿಮಗೆ ಫ್ರೀಯಾಗಿ ಇಲ್ಲ ಸುಲಭವಾಗಿ ಸಿಗುವುದಿಲ್ಲ. ನಿಮಗೆ ಹಣದ ಅಗತ್ಯವಿರುತ್ತದೆ. ಹಣದ ವಿಷಯ ಬಂದಾಗ ಅಲ್ಲಿ ಎರಡು ಆಯ್ಕೆಗಳು ಇರುತ್ತದೆ.

ಭಾರತದಲ್ಲಿ ಅತೀ ಹೆಚ್ಚು ವೇತನ ನೀಡುವ ಜಾಬ್ ಗಳು!

ಒಂದ ನೀವು ಹುಟ್ಟುವಾಗಲೇ ಬಾಯಲ್ಲಿ ಬೆಳ್ಳಿಯ ಸ್ಪೂನ್ ಹಿಡಿದುಕೊಂಡು ಬಂದವರಾಗರಬೇಕು ಇಲ್ಲ ನೀವು ಕಠೀಣ ಶ್ರಮ ಪಟ್ಟು ಹಣ ಸಂಪಾದಿಸಬೇಕು. ಹಾಗಾಗಿ ಎಲ್ಲರೂ ಹುಟ್ಟುವಾಗ ಶ್ರೀಮಂತರಾಗಿ ಹುಟ್ಟುವುದಿಲ್ಲ ಬದಲಿಗೆ ಎಲ್ಲರೂ ಹಣ ಸಂಪಾದಿಸಲು ಕಠೀಣ ಶ್ರಮ ಪಡುತ್ತಾರೆ. ಅತೀ ಹೆಚ್ಚು ವೇತನ ನೀಡುವ ಹುದ್ದೆಯನ್ನ ಪಡೆಯುವುದು ಕೂಡಾ ತುಂಬಾ ಕಷ್ಟಕರವಾದ ವಿಷಯ. ಆ ಬಗ್ಗೆ ನೀವು ಹಲವಾರು ರಿಸರ್ಚ್‌ಗಳನ್ನ ಮಾಡಿರಬೇಕು. ಅಷ್ಟೇ ಅಲ್ಲ ಉನ್ನತ ವಿದ್ಯಾರ್ಹತೆ ಕೂಡಾ ಹೊಂದಿರಬೇಕು.

ಭಾರತದಲ್ಲಿ ಅತೀ ಹೆಚ್ಚು ವೇತನ ನೀಡುವ ಹುದ್ದೆಯ ಲಿಸ್ಟ್ ಇಲ್ಲಿ ನೀಡಲಾಗಿದೆ.

ಮ್ಯಾನೇಜ್‌ಮೆಂಟ್ ಪ್ರೊಫೆಶನಲ್ಸ್:

ಪ್ರತಿಯೊಂದು ಸಂಸ್ಥೆಯ ಬ್ಯಾಕ್ ಬೋನ್ ಎಂದು ಕರೆಸಿಕೊಳ್ಳುವ ವೃತ್ತಿ ಮ್ಯಾನೇಜ್‌ಮೆಂಟ್ ಪ್ರೊಫೆಶನಲ್ಸ್. ಕಂಪನಿ ನೀಡುವ ಟಾಸ್ಕ್ ಗಳನ್ನ ಇವರು ಕಂಪ್ಲೀಟ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಈ ಕೆಲಸಕ್ಕೆ ಹಾರ್ಡ್ ವರ್ಕ್ ಹಾಗೂ ಡೆಡಿಕೇಶನ್ ಅಗತ್ಯ. ಇಲ್ಲಿ ನಿಮಗೆ ತುಂಬಾ ಚ್ಯಾಲೆಂಜ್ ಲೆವೆಲ್ ಕೆಲಸಗಳು ಎದುರಾಗುತ್ತದೆ. ಒಮ್ಮೆ ಆ ಸ್ಟೇಜ್ ಕ್ರಾಸ್ ಮಾಡಿದ್ರೆ ಸಾಕು ಆ ಮೇಲೆ ಹೆಚ್ಚು ಹಣ ಗಳಿಸಬಹುದು. ಫ್ರೆಶರ್ಸ್ 3,00,000 ರೂ ಸಂಪಾದಿಸಬಹುದು ಹಾಗೆಯೇ ಅನುಭವಸ್ಥರು 80,00,000 ದುಡಿಯಬಹುದು.

ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ಸ್:

ಕಂಪನಿಗೆ ಫೈನಾನ್ಸ್ ಸಲಹೆ ಹಾಗೂ ಫಂಡ್ ಗಳನ್ನ ಹೆಚ್ಚಿಸುವ ಕೆಲಸ ಇವರದಾಗಿರುತ್ತದೆ. ಫ್ರೆಶರ್ಸ್ ಈ ಹುದ್ದೆಯಲ್ಲಿ ಸುಮಾರು ರೂ. 12,00,000 ಗಳಿಸಬಹುದು.

ಚಾರ್ಟೆಡ್ ಅಕೌಂಟ್:

ಚಾರ್ಟೆಡ್ ಅಕೌಂಟ್ ನಲ್ಲಿ ನೀವು ಶಾರ್ಪ್ ಇದ್ದರೆ ಈ ಫೀಲ್ಡ್‌ನಲ್ಲಿ ನೀವು ಹೆಚ್ಚು ಆದಾಯ ಗಳಿಸಬಹುದು. ಅಷ್ಟೇ ಅಲ್ಲ ಗೌರವ ಕೂಡಾ ಪಡೆಯಬಹುದು. ಹೆಚ್ಚು ಅನುಭವವಿರುವ ಸಿಎ ರೂ. 25,70,000 ಗಳಿಸಬಹುದು

ಮೆರೈನ್ ಇಂಜಿನಿಯರ್ ಹಾಗೂ ಜಿಯೋಲಾಜಿಸ್ಟ್:

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಸೆಕ್ಟರ್ ನಲ್ಲಿ ಕೆಲಸ ಸಿಕ್ಕರೆ ಮೆರೈನ್ ಇಂಜಿನಿಯರ್ ಹಾಗೂ ಜಿಯೋಲಾಜಿಸ್ಟ್ ಪೋಸ್ಟ್ ಗೆ ಉತ್ತಮ ವೇತನವಿದೆ. ಈ ಫೀಲ್ಡ್‌ನಲ್ಲಿ 15 ಲಕ್ಷ ರೂ ಸಂಪಾದಿಸಬಹುದು.

ಬ್ಯುಸಿನೆಸ್ ಅನಾಲಿಸ್ಟ್:

ಸ್ಪರ್ಧಾತ್ಮಕ ಮಾರ್ಕೆಟ್ ನಲ್ಲಿ ಕಂಪನಿಯನ್ನು ಮೇಲಕ್ಕೆ ತರುವಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಅವರ ರೋಲ್ ಹೆಚ್ಚಿದೆ. ಈ ಫೀಲ್ಡ್‌ನಲ್ಲಿ ಫ್ರೆಶರ್ಸ್ ಕೂಡಾ ಸುಂಆರು 6 ಲಕ್ಷ ರೂ ಆದಾಯ ಗಳಿಸುತ್ತಾರೆ

ಮೆಡಿಕಲ್ ಫೀಲ್ಡ್:

ನಿವೃತ್ತಿ ಎಂಬುವುದು ಇಲ್ಲದೇ ಇರುವ ಫೀಲ್ಡ್ ಎಂದ್ರೆ ಅದು ಮೆಡಿಕಲ್ ಫೀಲ್ಡ್. ಇಲ್ಲಿ ನೀವು ಗುಡ್ ಸರ್ಜನ್ ಆಗಿದ್ರೆ ತುಂಬಾ ಹಣ ಸಂಪಾದಿಸಬಹುದು.

ವಕೀಲರು:

ವಕೀಲರ ಕೆಲಸ ತುಂಬಾ ಕಠೀಣವಾದುದು. ಒಮ್ಮೆ ಈ ಫೀಲ್ಡ್‌ನಲ್ಲಿ ನೀವು ಹೆಸರು ಗಳಿಸಿದ್ರೆ ಅಂದ್ರೆ ಆಮೇಲೆ ನಿಮ್ಮನ್ನ ಹಿಡಿಯೋರು ಇಲ್ಲ. ಪ್ರತಿ ಸಿಂಗಲ್ ಆರ್ಗುಮೆಂಟ್‌ಗೆ ನೀವು ಲಕ್ಷಾಂತರ ದುಡ್ಡು ಚಾರ್ಜ್ ಮಾಡಬಹುದು.

ಮಾರ್ಕೆಟಿಂಗ್:

ಮಾರ್ಕೆಟಿಂಗ್ ಒಂದು ಕಲೆ ಇದ್ದಂತೆ ಅಷ್ಟೇ ಅಲ್ಲ ಈ ವೃತ್ತಿಯಲ್ಲಿ ತಾಳ್ಮೆ ಕೂಡಾ ಅಗತ್ಯ. ಒಮ್ಮೆ ನೀವು ಚೆನ್ನಾಗಿ ಹ್ಯಾಂಡಲ್ ಮಾಡಲು ಕಲಿತರೆ ಮುಂದೊಂದು ದಿನ ಸಿಇಓ ಆಗೋದರಲ್ಲಿ ಡೌಟೇ ಇಲ್ಲ ಬಿಡಿ.

ಸಾಫ್ಟ್‌ವೇರ್:

ಡೆವಲೆಪ್ ಮೆಂಟ್ ನಲ್ಲಿ ನೀವು ಬೆಸ್ಟ್ ಫರ್ಫೋಮರ್ ಆಗಿದ್ದರೆ ಸಾಫ್ಟ್‌ವೇರ್ ಪ್ರೊಫೆಶನ್ ನಿಮ್ಮದಾಗಿಸಿಕೊಳ್ಳಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
In this world does not come for free or easily. you will need money and hardwork. when it comes to having money, there is two option.one is hard work and another one is rich by birth. here is the list of highest paid jobs in India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+