International Mother Language day 2022 : ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಇಲ್ಲಿದೆ

ಭಾಷಾ ವೈವಿಧ್ಯತೆ ಮತ್ತು ಬಹುಸಂಸ್ಕೃತಿಯ ಮಹತ್ವವನ್ನು ಎತ್ತಿ ಹಿಡಿಯಲು ಫೆಬ್ರವರಿ 21 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. ಭಾಷೆಗಳು ಜನರೊಟ್ಟಿಗೆ ಸಂವಹನ ನಡೆಸಲು ಹೇಗೆ ಪ್ರಾಮುಖ್ಯತೆಯನ್ನು ವಹಿಸುತ್ತವೆ ಮತ್ತು ಈ ಮೂಲಕ ಶಿಕ್ಷಣ ಮತ್ತು ಅಭಿವೃದ್ಧಿಯ ಪ್ರಕ್ರಿಯೆಯನ್ನು ಹೇಗೆ ಮುನ್ನಡೆಸಬಹುದು ಎಂಬುದರ ಕುರಿತು ಈ ದಿನವು ಕೇಂದ್ರೀಕರಿಸುತ್ತದೆ.

ಅಂತರರಾಷ್ಟ್ರೀಯ ಮಾತೃಭಾಷಾ ದಿನವು ಸಮಾಜದಲ್ಲಿ ಬಹುಭಾಷಾ ಅಸ್ತಿತ್ವವನ್ನು ಉತ್ತೇಜಿಸುತ್ತದೆ ಮತ್ತು ಸುಸ್ಥಿರ ವಿಧಾನಗಳ ಮೂಲಕ ಸಾಂಪ್ರದಾಯಿಕ ಜ್ಞಾನ ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಅಂತರರಾಷ್ಟ್ರೀಯ ಮಾತೃಭಾಷೆ ದಿನದ ಕುರಿತ ಸಂಪೂರ್ಣ ಮಾಹಿತಿ

ಅಂತರರಾಷ್ಟ್ರೀಯ ಮಾತೃಭಾಷಾ ದಿನ 2022 ಇತಿಹಾಸ :

ಬಾಂಗ್ಲಾದೇಶವು ಮೊದಲು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಆಲೋಚನೆಯನ್ನು ಹೊಂದಿತು. UNESCO ಬಾಂಗ್ಲಾದೇಶದ ಈ ಉಪಕ್ರಮವನ್ನು 1999 ರಲ್ಲಿ 30 ನೇ UNESCO ಸಾಮಾನ್ಯ ಸಮ್ಮೇಳನದಲ್ಲಿ ಅನುಮೋದಿಸಿತು. ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಮೊದಲ ಬಾರಿಗೆ ಫೆಬ್ರವರಿ 21,2000 ರಂದು ಆಚರಿಸಲಾಯಿತು ಮತ್ತು ಅಂದಿನಿಂದ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಮಾತೃಭಾಷಾ ದಿನ 2022 ಮಹತ್ವ :

ವಿಶ್ವಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಅಂದಾಜು 6000 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ ಮತ್ತು ಅವುಗಳಲ್ಲಿ ಸುಮಾರು 43 ಪ್ರತಿಶತವು ಅಳಿವಿನಂಚಿನಲ್ಲಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ನೂರು ಭಾಷೆಗಳಿಗೆ ಮಾತ್ರ ಮಾನ್ಯತೆಯನ್ನು ನೀಡಲಾಗಿದೆ. ಆದ್ದರಿಂದ ಬಹುಭಾಷಾವಾದದ ಪ್ರಾಮುಖ್ಯತೆಯನ್ನು ಜನರಿಗೆ ಅರ್ಥೈಸಲು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ.

ಅಂತರರಾಷ್ಟ್ರೀಯ ಮಾತೃಭಾಷಾ ದಿನ 2022 ಥೀಮ್ :

ಪ್ರತಿ ವರ್ಷ ಈ ದಿನವನ್ನು ನಿರ್ದಿಷ್ಟ ಥೀಮ್ ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ "ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು". COVID-19 ಶಾಲೆಗಳನ್ನು ಮುಚ್ಚಲು ಕಾರಣವಾಗಿರುವುದರಿಂದ ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳು ಈಗ ಶಿಕ್ಷಣವನ್ನು ನೀಡಲು ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಬಳಸಿಕೊಂಡಿವೆ. ಆದ್ದರಿಂದ ಈ ವರ್ಷದ ಥೀಮ್ ಬಹುಭಾಷಾ ಶಿಕ್ಷಣವನ್ನು ನಿರ್ಮಿಸಲು ಮತ್ತು ಸುಧಾರಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು ಕೇಂದ್ರೀಕರಿಸುತ್ತದೆ. ಎಲ್ಲರಿಗೂ ಗುಣಮಟ್ಟದ ಬೋಧನೆ ಮತ್ತು ಕಲಿಕೆಯನ್ನು ಅಭಿವೃದ್ಧಿಪಡಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗುವುದು. ಈ ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲು ಫೆಬ್ರವರಿ 21 ರಂದು ಯುನೆಸ್ಕೋ ವೆಬ್ನಾರ್ ಅನ್ನು ಆಯೋಜಿಸುತ್ತದೆ.

ಭಾರತದಲ್ಲಿ ಮಾತೃಭಾಷೆಗಳು :

ಜನಗಣತಿಯ ಮಾಹಿತಿಯ ಪ್ರಕಾರ ಭಾರತದಲ್ಲಿ 19,500 ಕ್ಕೂ ಹೆಚ್ಚು ಭಾಷೆಗಳು ಅಥವಾ ಉಪಭಾಷೆಗಳನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆ. ಭಾರತದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚು ಜನರು ಮಾತನಾಡುವ 121 ಭಾಷೆಗಳಿವೆ ಎಂದು ಅದು ಹೇಳಿದೆ.

121 ಭಾಷೆಗಳನ್ನು ಎರಡು ಭಾಗಗಳಲ್ಲಿ ಪ್ರಸ್ತುತಪಡಿಸಲಾಗಿದೆ - ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಒಳಗೊಂಡಿರುವ ಭಾಷೆಗಳು ಅವು 22 ಭಾಷೆಗಳನ್ನು ಒಳಗೊಂಡಿವೆ ಮತ್ತು ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸದ ಭಾಷೆಗಳು ಅವು 99 ಭಾಷೆಗಳನ್ನು ಒಳಗೊಂಡಿವೆ.

ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಅನುಸೂಚಿತ ಭಾಷೆಗಳು: ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ. ಇವುಗಳಲ್ಲಿ 14 ಭಾಷೆಗಳನ್ನು ಆರಂಭದಲ್ಲಿ ಸಂವಿಧಾನದಲ್ಲಿ ಸೇರಿಸಲಾಯಿತು. 1967 ರಲ್ಲಿ ಸಿಂಧಿ ಭಾಷೆಯನ್ನು ಸೇರಿಸಲಾಯಿತು. ನಂತರ 1992 ರಲ್ಲಿ ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಮೂರು ಭಾಷೆಗಳನ್ನು ಸೇರಿಸಲಾಯಿತು. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿಯನ್ನು 2004 ರಲ್ಲಿ ಸೇರಿಸಲಾಯಿತು.

For Quick Alerts
ALLOW NOTIFICATIONS  
For Daily Alerts

English summary
International mother language day is on february 21. Here is the history, significance and theme in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X