JEE Advanced 2022 : ಜೆಇಇ ಪರೀಕ್ಷೆಗೆ ಮಾರ್ಗಸೂಚಿ ಮತ್ತು ಸಲಹೆಗಳು ಇಲ್ಲಿವೆ

ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2022 ಪರೀಕ್ಷೆಯು ಆಗಸ್ಟ್ 28 ರಂದು ನಡೆಯಲಿದೆ. ಜೆಇಇ jeeadv.ac.in ಅಧಿಕೃತ ವೆಬ್‌ಸೈಟ್ ನಲ್ಲಿ JEE ಅಡ್ವಾನ್ಸ್ಡ್ 2022 ಪ್ರವೇಶ ಪತ್ರವು ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇದೀಗ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪರೀಕ್ಷಾರ್ಥಿಗಳು ಪರೀಕ್ಷೆಯ ಮೊದಲು, ಪರೀಕ್ಷೆಯ ಸಮಯದಲ್ಲಿ ಮತ್ತು ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಗೆ ಸಲಹೆ ಮತ್ತು ಮಾರ್ಗಸೂಚಿಗಳು ಇಲ್ಲಿದೆ

JEE ಅಡ್ವಾನ್ಸ್ಡ್ 2022: ಪರೀಕ್ಷೆಯ ಮೊದಲು ಮಾಡಬೇಕಾದ ಕೆಲಸಗಳು :

* ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿದ JEE ಪ್ರವೇಶ ಪತ್ರದ ಮುದ್ರಿತ ಪ್ರತಿಯನ್ನು ಮತ್ತು ಮಾನ್ಯವಾದ ಮೂಲ ಫೋಟೋ ಗುರುತಿನ ಚೀಟಿಯನ್ನು ಹೊಂದಿರಬೇಕು.
* ಪೆನ್ನುಗಳು, ಪೆನ್ಸಿಲ್‌ಗಳು, ಪಾರದರ್ಶಕ ಬಾಟಲಿಯಲ್ಲಿ ಕುಡಿಯುವ ನೀರು, ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರ ಮತ್ತು ಮೂಲ ಫೋಟೋ ಗುರುತಿನ ಚೀಟಿಯನ್ನು ಮಾತ್ರ ಪರೀಕ್ಷಾ ಹಾಲ್‌ನೊಳಗೆ ಅನುಮತಿಸಲಾಗಿದೆ.
* ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮುಂಚಿತವಾಗಿ ವರದಿ ಮಾಡಬೇಕು ಮತ್ತು ಪ್ರವೇಶ ಪತ್ರದಲ್ಲಿ ನಮೂದಿಸಲಾದ ಅಗತ್ಯ ಔಪಚಾರಿಕತೆಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳು ಬೆಳಗ್ಗೆ 7 ಗಂಟೆಯಿಂದ ತೆರೆದಿರುತ್ತವೆ.
* ಪರೀಕ್ಷೆ ಪ್ರಾರಂಭವಾದ ನಂತರ ಬರುವ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

JEE ಅಡ್ವಾನ್ಸ್ಡ್ 2022: ಪರೀಕ್ಷೆಯ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು :

* ಅಭ್ಯರ್ಥಿಗೆ ಒಂದು ಸ್ಕ್ರಿಬಲ್ ಪ್ಯಾಡ್ ನೀಡಲಾಗುತ್ತದೆ. ಒದಗಿಸಿದ ಜಾಗದಲ್ಲಿ ಅಭ್ಯರ್ಥಿಯು ತನ್ನ ಹೆಸರು ಮತ್ತು JEE ಅಡ್ವಾನ್ಸ್ಡ್ 2022 ನೋಂದಣಿ ಸಂಖ್ಯೆಯನ್ನು ನಮೂದಿಸಿದ ನಂತರ ಸ್ಕ್ರಿಬಲ್ ಪ್ಯಾಡ್‌ಗೆ ಸಹಿ ಮಾಡಬೇಕು.
* ರೋಲ್ ಲಿಸ್ಟ್‌ನಲ್ಲಿ ಸಹಿ ಮಾಡುವ ಮೂಲಕ ಎರಡೂ ಪತ್ರಿಕೆಗಳಲ್ಲಿ ಹಾಜರಾತಿಯನ್ನು ಗುರುತು ಮಾಡಬೇಕು.
* ಪತ್ರಿಕೆ 2 ಪ್ರಾರಂಭದ ನಂತರ, ಅಭ್ಯರ್ಥಿಗಳು ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಸ್ವಯಂ-ಘೋಷಣಾ ನಮೂನೆಯನ್ನು ಒಳಗೊಂಡಿರುವ ಪ್ರವೇಶ ಪತ್ರವನ್ನು ಇನ್ವಿಜಿಲೇಟರ್‌ಗೆ ಹಸ್ತಾಂತರಿಸಬೇಕು. ಯಾವುದೇ ಅಭ್ಯರ್ಥಿಯು ಪ್ರವೇಶ ಪತ್ರವನ್ನು ಹಸ್ತಾಂತರಿಸಲು ತಪ್ಪಿದಲ್ಲಿ, ಪರೀಕ್ಷೆಯಿಂದ ಅನರ್ಹತೆ ಸೇರಿದಂತೆ ಕ್ರಮವನ್ನು ತೆಗೆದುಕೊಳ್ಳಬಹುದು.

JEE ಅಡ್ವಾನ್ಸ್ಡ್ 2022: ಪರೀಕ್ಷೆಯ ನಂತರ ಮಾಡಬೇಕಾದ ಕೆಲಸಗಳು :

* ಜೆಇಇ ಅಡ್ವಾನ್ಸ್ಡ್ ಇನ್ವಿಜಿಲೇಟರ್‌ನಿಂದ ಸೂಚನೆಗಳಿಗಾಗಿ ನಿರೀಕ್ಷಿಸಿ ಮತ್ತು ಸಲಹೆ ನೀಡುವವರೆಗೆ ನೀವು ನಿಮ್ಮ ಸ್ಥಾನಗಳಿಂದ ಎದ್ದೇಳಬೇಡಿ.
* JEE ಅಡ್ವಾನ್ಸ್ಡ್ 2022 ಪರೀಕ್ಷೆಯ ನಂತರ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಹಿಂತಿರುಗಿಸುವಂತೆ ನೋಡಿಕೊಳ್ಳಬೇಕು.

For Quick Alerts
ALLOW NOTIFICATIONS  
For Daily Alerts

English summary
JEE advanced 2022 is scheduled on august 28. Here is the tips to do before, during and after exam guidelines in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X