ಜೆಇಇ ಮುಖ್ಯ ಪರೀಕ್ಷೆ ಇಂದಿನಿಂದ ಸೆಪ್ಟೆಂಬರ್ 6ರ ವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಎನ್ಇಟಿ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರ ಅನುಸಾರ ವಿದ್ಯಾರ್ಥಿಗಳು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು ಒಳಿತು ಎಂದು ಇಲ್ಲಿ ಸಲಹೆ ನೀಡಲಾಗಿದೆ.
- ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಮತ್ತು ಕೈಗವಸನ್ನು ಧರಿಸಿಕೊಂಡು ಹೋಗಿ. ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಯಾರೊಡನೆಯೂ ಸಂಪರ್ಕ ಮಾಡುವಾಗ ಮಾಸ್ಕ್ ರಹಿತ ಸಂಪರ್ಕ ಒಳಿತಲ್ಲ.
- ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ನಿಮಗೆ ಬೇಕಿರುವ ನೀರು ಸ್ಯಾನಿಟೈಸರ್ ಮತ್ತು ಪೆನ್ ಹಾಗೂ ಇತರೆ ಸಾಮಾಗ್ರಿಗಳನ್ನು ನೀವೇ ತೆಗೆದುಕೊಂಡಿ ಹೋಗಿ. ಇದಕ್ಕಾಗಿ ಯಾರ ಮೇಲೂ ಅವಲಂಬಿತರಾಗದಿರಿ.
- ಮುಖ್ಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಹಾಗೂ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇನ್ನು ಪರೀಕ್ಷಾ ಕೇಂದ್ರಕ್ಕೆ ಪ್ರಯಾಣಿಸುವಾಗ ತುಂಬಾನೆ ಕಾಳಜಿವಹಿಸಿ.
For Quick Alerts
For Daily Alerts