ನಿಮಗೆ ವಿದೇಶಿ ಭಾಷೆಗಳನ್ನು ಮಾತಾಡೋಕೆ ಮತ್ತು ಬರೆಯೋಕೆ ಬರುತ್ತಾ ? ಹಾಗಿದ್ದರೆ ನಿಮಗಾಗಿ ಇವೆ ಹಲವು ಉದ್ಯೋಗಗಳು

ಹಲವರು ಪದವಿ ಪಡೆದು ಉದ್ಯೋಗವನ್ನು ಹುಡುಕುತ್ತಿರುತ್ತೀರಿ ಮತ್ತೆ ಇನ್ನೂ ಕೆಲವರು ಸಿಕ್ಕ ಉದ್ಯೋಗ ಇಷ್ಟವಾಗದೆ ಪರದಾಡುವ ಪರಿಸ್ಥಿತಿ. ಮತ್ತೆ ಕೆಲವರಿಗೆ ಉನ್ನತ ವ್ಯಾಸಂಗ ಮಾಡಿದ್ದಿದ್ದರೆ ಉತ್ತಮ ಉದ್ಯೋಗ ಸಿಗುತ್ತಿತ್ತೇನೋ ಎನ್ನುವ ಚಿಂತೆ. ಈ ಎಲ್ಲಾ ಸಮಸ್ಯೆಗಳಿಗೂ ಒಂದು ಉಪಾಯ ಇದೆ.

ಅದೇನೆಂದರೆ ಇಂದಿನ ದಿನಗಳಲ್ಲಿ ಮಾತೃಭಾಷೆಯ ಜೊತೆಗೆ ಹಲವು ಭಾಷೆಗಳನ್ನು ನೀವು ಬಲ್ಲವರಾಗಿದ್ದರೆ ನಿಮಗೆ ಹಲವು ಉದ್ಯೋಗಾವಕಾಶಗಳಿವೆ. ಅದ್ಹೇಗೆ ಹಾಗಿದ್ದರೆ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಅಂತೀರಾ? ಕರಿಯರ್ ಇಂಡಿಯಾ ಈ ಬಗೆಗೆ ತಿಳಿಸಿ ಕೊಡಲಿದೆ.

ವಿದೇಶಿ ಭಾಷೆಗಳನ್ನು ಬಲ್ಲವರಾಗಿದ್ದರೆ ನಿಮಗಾಗಿ ಇವೆ ಹಲವು ಉದ್ಯೋಗಗಳು

 

ಹಲವು ಭಾಷೆಗಳ ಜೊತೆಗೆ ವಿದೇಶಿ ಭಾಷೆಗಳನ್ನು ನೀವು ಬಲ್ಲವರಾಗಿದ್ದರೆ ಈ ಉದ್ಯೋಗಗಳನ್ನ ಮಾಡಬಹುದು.ಅವು ಯಾವುವೆಂದರೆ?

1 ಇಂಟರ್‌ಪ್ರಿಟರ್:

ಅನೇಕ ಎಂಎನ್‌ಸಿ ಕಂಪೆನಿಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಇಂಟರ್‌ಪ್ರಿಟರ್‌ಗಳ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಏಕೆಂದರೆ ಅನೇಕ ವಿದೇಶಿಗರು ಬಂದು ಹೋಗುವ ಸಂದರ್ಭಗಳಲ್ಲಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಲು ವಿದೇಶಿ ಭಾಷೆಗಳನ್ನು ಬಲ್ಲ ಇಂಟರ್‌ಪ್ರಿಟರ್‌ನ ಅಗತ್ಯ ಹೆಚ್ಚಿರುತ್ತದೆ. ಹಾಗಾಗಿ ನೀವು ವಿದೇಶಿ ಭಾಷೆಗಳನ್ನು ಬಲ್ಲವರಾಗಿದ್ದಲ್ಲಿ ಇಂಟರ್‌ಪ್ರಿಟರ್ ಆಗಬಹುದು.

2. ಏರ್‌ಹೋಸ್ಟೆಸ್:

ವಿವಿಧ ವಿದೇಶಿ ಭಾಷೆಗಳನ್ನು ನೀವು ಬಲ್ಲವರಾಗಿದ್ದರೆ ನೀವು ಏರ್‌ಹೋಸ್ಟೆಸ್ ಆಗಬಹುದು. ಏರ್‌ಹೋಸ್ಟೆಸ್ ಆಗಲು ಪ್ರಯಾಣಿಕರೊಡನೆ ಸಂವಹನ ಮಾಡುವುದನ್ನು ಬಲ್ಲವರಾಗಿರಬೇಕು. ಪ್ರಯಾಣಿಕರಿಗೆ ಬೇಕಿರುವ ಅಗತ್ಯತೆಗಳನ್ನು ಪೂರೈಸಲು ಮತ್ತು ಅವರೊಡನೆ ಮಾತನಾಡಲು ಹಲವು ಭಾಷೆಗಳನ್ನು ಬಲ್ಲವರಾಗಿರಬೇಕು. ಅಲ್ಲದೇ ತಿಂಗಳುಗಟ್ಟಲೇ ವಿಮಾನದಲ್ಲೇ ಪ್ರಯಾಣಿಸುತ್ತಾ ಹಲವರೊಂದಿಗೆ ಸಂವಹನ ಮಾಡುವುದರಿಂದ ಹಲವು ಭಾಷೆಗಳನ್ನು ಬಲ್ಲವರಾಗಿದ್ದರೆ ಒಳಿತು.

3. ಬಿಪಿಓ ಎಕ್ಸಿಕ್ಯುಟಿವ್ :

ಯಾವುದೇ ಬಿಪಿಓ ಸಂಸ್ಥೆಗಳು ತಮ್ಮ ಕ್ಲೈಂಟ್‌ನೊಂದಿಗೆ ಮಾತನಾಡಲು ಮಾತೃ ಭಾಷೆಯನ್ನು ಬಲ್ಲವರಾಗಿರಬೇಕು. ಎಲ್ಲವನ್ನು ಇಂಗ್ಲೀಷ್‌ ಭಾಷೆಯಲ್ಲಿ ಸಂವಹನ ನಡೆಸಲು ಸಾಧ್ಯವಿರುವುದಿಲ್ಲ. ಹಾಗಾಗಿ ಬಿಪಿಓಗಳು ವಿವಿಧ ಭಾಷೆಗಳನ್ನು ಮತ್ತು ಸಂವಹನ ಕೌಶಲ್ಯವನ್ನು ಬಲ್ಲ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಬಿಪಿಓ ಎಕ್ಸಿಕ್ಯುಟಿವ್ ಆದರೆ ತಿಂಗಳಿಗೆ 25 ರಿಂದ 30 ಸಾವಿರ ವೇತನವನ್ನು ಪಡೆಯಬಹುದು.

4. ಟ್ರಾನ್ಸ್‌ಲೇಟರ್ (ಅನುವಾದಕ) :

ಅನುವಾದಕರಿಗೆ ಇಂದಿನ ದಿನಗಳಲ್ಲಿ ಭಾರೀ ಉದ್ಯೋಗಾವಕಾಶಗಳಿವೆ. ಹಾಗಾಗಿ ನೀವು ಹಲವು ಭಾಷೆಗಳನ್ನು ಬಲ್ಲವರಾಗಿದ್ದು ಜೊತೆಗೆ ಬರವಣಿಗೆ ಕೌಶಲ್ಯವಿದ್ದರೆ ಟ್ರಾನ್ಸ್‌ಲೇಟರ್ (ಅನುವಾದಕ) ಆಗಿ ಕೆಲಸ ಮಾಡಬಹುದು.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

5. ಶಿಕ್ಷಕ /ಶಿಕ್ಷಕಿ:

ಅನೇಕ ಶಾಲಾ ಕಾಲೇಜುಗಳಲ್ಲಿ ವಿದೇಶಿ ಭಾಷೆಗಳನ್ನು ಕಲಿಸುವ ಉದ್ದೇಶದಿಂದ ತರಬೇತಿಯನ್ನು ನೀಡಲಾಗುವುದು. ನೀವೂ ವಿದೇಶಿ ಭಾಷೆಗಳನ್ನು ಬಲ್ಲವರಾಗಿದ್ದಲ್ಲಿ ಅಂತಹ ಶಾಲಾ ಕಾಲೇಜುಗಳಲ್ಲಿ ಶಿಕ್ಷಕ / ಶಿಕ್ಷಕಿಯಾಗಿ ಉದ್ಯೋಗವನ್ನು ಮಾಡಬಹುದು.

6. ಬ್ಲಾಗರ್:

ಆಧುನಿಕ ಯುಗದಲ್ಲಿ ಬ್ಲಾಗರ್‌ ಆಗಿ ಕೆಲಸ ನಿರ್ವಹಿಸುವುದರಿಂದ ಅನೇಕ ಲಾಭಗಳಿವೆ. ಅನೇಕ ಕಂಪೆನಿಗಳು ಮತ್ತು ಅನೇಕ ಸಂಸ್ಥೆಗಳು ತಮ್ಮದೇ ಆದ ಬ್ಲಾಗ್‌ಗಳನ್ನು ಹೊಂದಿರುತ್ತವೆ ಹಾಗಾಗಿ ನೀವು ಬೇರೆ ಭಾಷೆಗಳನ್ನು ಬಲ್ಲವರಾಗಿದ್ದರೆ ಬ್ಲಾಗರ್ ಆಗಿ ಕೆಲಸ ಮಾಡಬಹುದು. ಇದರಿಂದ ತಿಂಗಳಿಗೆ 25 ರಿಂದ 40 ಸಾವಿರ ರೂ ವೇತನವನ್ನು ಪಡೆಯಬಹುದು.

ವಿದೇಶಿ ಭಾಷೆಗಳನ್ನು ಕಲಿಯಲು ಭಾರತದಲ್ಲಿ ಇರುವ ಬೆಸ್ಟ್‌ ಕಾಲೇಜುಗಳ ಪಟ್ಟಿ:

ಅನೇಕರು ವಿದೇಶದ ಭಾಷೆಗಳನ್ನು ಕಲಿಯಬೇಕೆಂಬ ಹಂಬಲವನ್ನು ಹೊಂದಿರುತ್ತೀರಿ. ಹಾಗಾಗಿ ಭಾರತದಲ್ಲಿ ಯಾವೆಲ್ಲಾ ಬೆಸ್ಟ್ ಕಾಲೇಜುಗಳಲ್ಲಿ ವಿದೇಶದ ಭಾಷೆಯನ್ನು ಕಲಿಯಬಹುದು ಎನ್ನುವುದರ ಪಟ್ಟಿ ಇಲ್ಲಿದೆ.

* ಜವಾಹರ್ ಲಾಲ್ ನೆಹರು ಯೂನಿವರ್ಸಿಟಿ,ನವದೆಹಲಿ

* ಇಎಫ್‌ಎಲ್‌ಯು,ಹೈದರಾಬಾದ್

* ಯೂನಿವರ್ಸಿಟಿ ಆಫ್ ದೆಹಲಿ, ನವ ದೆಹಲಿ

 

* ಬನಾರಸ್ ಹಿಂದು ಯೂನಿವರ್ಸಿಟಿ,ವಾರಣಾಸಿ

* ಕಲ್ಕತ್ತ ಯೂನಿವರ್ಸಿಟಿ,ಕೊಲ್ಕತ್ತ

* ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ,ನವದೆಹಲಿ

* ಇಗ್ನೋ,ನವದೆಹಲಿ

* ಮುಂಬೈ ಯೂನಿವರ್ಸಿಟಿ, ಮುಂಬೈ

* ಸಾವಿತ್ರಿಬಾಯಿ ಫುಲೆ ಯೂನಿವರ್ಸಿಟಿ, ಪುಣೆ

* ಎಸ್‌ಐಎಫ್‌ಐಎಲ್‌ ಪುಣೆ

ಈ ಅಭ್ಯಾಸಗಳು ನಿಮ್ಮಲ್ಲಿದರೆ ನೀವು ಐಎಎಸ್‌ ಅಧಿಕಾರಿ ಆಗೋದು ಖಚಿತ

For Quick Alerts
ALLOW NOTIFICATIONS  
For Daily Alerts

English summary
Here is the list of super cool jobs for people who knows foreign language. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more