Kanakadasa Jayanthi 2021 : ಕನಕದಾಸರ ಪ್ರಸಿದ್ಧ ಉಲ್ಲೇಖ ಮತ್ತು ಹೇಳಿಕೆಗಳು ಇಲ್ಲಿವೆ

ಕನಕದಾಸ ಜಯಂತಿ : ಮಹಾನ್ ಸಂತನಿಗೆ ಗೌರವ ಸಲ್ಲಿಸುವ ಮೂಲಕ ಕರ್ನಾಟಕ ಸರ್ಕಾರ ಅವರ ಜನ್ಮದಿನವನ್ನು ರಾಜ್ಯ ರಜಾದಿನವೆಂದು ಘೋಷಿಸಿದೆ. ರಾಜ್ಯದಾದ್ಯಂತದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ಶ್ರೀ ಕನಕ ದಾಸ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ.

 
ಕನಕದಾಸ ಜಯಂತಿ ಪ್ರಯುಕ್ತ ಅವರ ಉಲ್ಲೇಖ ಮತ್ತು ಹೇಳಿಕೆಗಳು

ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ ಕನಕದಾಸ. ಮಹಾನ್ ಸಂತನಿಗೆ ಗೌರವ ಸಲ್ಲಿಸುವ ಮೂಲಕ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಅವರ ಜನ್ಮದಿನವನ್ನು ರಾಜ್ಯ ರಜಾದಿನವೆಂದು ಘೋಷಿಸಿದೆ. ರಾಜ್ಯದಾದ್ಯಂತದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಶ್ರೀ ಕನಕ ದಾಸ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಸಹಜ ಬದುಕಿನಿಂದ ಕೀರ್ತನಕಾರರಾಗಿ,ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಮಾತಿದೆ. ನರಸಿಂಹ ಸ್ತೋತ್ರ, ರಾಮ ಧ್ಯಾನ ಮಂತ್ರ ಮತ್ತು ಮೋಹನ ತರಂಗಿಣಿ ಅವರ ಕೆಲವು ಗಮನಾರ್ಹ ರಚನೆಗಳು.

ಕನಕದಾಸರು ಕರ್ನಾಟಕ ಸಂಗೀತದ ಸ್ತಂಭಗಳು ಮತ್ತು ಕೊಡುಗೆದಾರರಲ್ಲಿ ಪ್ರಮುಖರು ಎಂದು ಪರಿಗಣಿಸಲಾಗಿದೆ. ಅವರ ಉಪಭೋಗ ಮತ್ತು ಕೀರ್ತನೆಗಳು ಹೆಚ್ಚು ಜನಪ್ರಿಯವಾಗಿವೆ. ತಿಮ್ಮಪ್ಪ ನಾಯಕ ವಿಜಯನಗರ ಸಾಮ್ರಾಜ್ಯದ ಬಾಡ ಎಂಬ ಸ್ಥಳದಲ್ಲಿ ನವೆಂಬರ್ 6, 1509 ರಂದು ಜನಿಸಿದರು ಮತ್ತು 1609 ರಲ್ಲಿ ನಿಧನರಾದರು.

ಕುರುಬ ಗೌಡ ಸಮುದಾಯದವರು ಅವರ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಅವರ ಜನ್ಮ ವಾರ್ಷಿಕೋತ್ಸವವನ್ನು ಕರ್ನಾಟಕ ರಾಜ್ಯ ಸರ್ಕಾರವು ರಜಾದಿನವಾಗಿ ಗೊತ್ತುಪಡಿಸಿದೆ. ಅವರ ಜನ್ಮದಿನವಾದ ಇಂದು ಸಮಾಜದಲ್ಲಿ ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಸಾರಿದ ಅವರ ಅಸಾಧಾರಣ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುತ್ತಾ ಅವರ ಉಲ್ಲೇಖಗಳು ಮತ್ತು ಹೇಳಿಕೆಗಳನ್ನು ಒಮ್ಮೆ ಓದೋಣ.

 

ಕನಕದಾಸರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಹೇಳಿಕೆಗಳು ಇಲ್ಲಿವೆ :

* ಯಾವಾಗ ನಿಮ್ಮಲ್ಲಿರುವ "ನಾನು" ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತೋ ಆವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ.

* ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರು ? ಅಡವಿಯೊಳಗಿನ ಪ್ರಾಣಿ ಪಕ್ಷಿಗಳಿಗೆ ಅಡಿಗಡಿಗೆ ಆಹಾರವಿಟ್ಟವರು ಯಾರು ?
ಕಲ್ಲಿನಲಿ ಕೂಗುವ ಕಪ್ಪೆಗಳಿಗೆ ಆಹಾರ ನೀಡಿದವರಾರು ? ಅದಕ್ಕಾಗಿ ಚಿಂತಿಸದಿರು ತಾಳು ಮನವೇ ಕಾಗಿನೆಲೆ ಆದಿಕೇಶವ ಎಲ್ಲರನು ಸಲಹುವನು.

* ಕುಲ ಕುಲವೆಂದು ಹೊಡೆದಾಡಿ ಸಾಯಬೇಡಿರಿ ಹುಚ್ಚಪ್ಪಗಳಿರಾ. ಆತ್ಮ ಯಾವ ಕುಲ? ಜೀವ ಯಾವ ಕುಲ? ಗಾಳಿ ಯಾವ ಕುಲ? ನೀರು ಯಾವ ಕುಲ? ಅನ್ನ ಯಾವ ಕುಲ?

* ಒಡಲಿನ ಆಸೆಗಾಗಿ ಜೇನಿನೊಳಗೆ ಬಿದ್ದು ಸಾಯುವ ನೊಣದಂತೆ ನಾನಾಗಿರುವೆ. ನನ್ನನ್ನು ಈ ಜೀವನ ಬಂಧನದಿಂದ ಮುಕ್ತಗೊಳಿಸು ರಂಗನೇ..

* ಪರಸತಿಯ ನೋಡದಿರು, ದುರ್ಜನರ ಕೂಡದಿರು, ಗರ್ವದ ಮಾತುಗಳನ್ನು ಆಡದಿರು, ಕೈಯ ಹಿಂದೆಗೆವ ಹೇಡಿಯನ್ನು ಬೇಡದಿರು, ಬೀದಿಗೂಳುಂಬ ದೈವಗಳನ್ನು ಕೊಂಡಾಡದಿರು.

* ಮನದಲ್ಲಿ ಕಪಟವಿಟ್ಟುಕೊಂಡು ಎಷ್ಟು ಜಪ ಮಾಡಿದರೇನು ಫಲ? ವೇದ ಶಾಸ್ತ್ರಗಳನ್ನೋದಿ ಬಾಯಾರಿದರೆ ಏನು ಫಲ ? ಹೊಳೆಯೊಳಗೆ ಮುಳುಗಿ ತಪ ಮಾಡಿದರೇನು ಫಲ ? ಮನದಲ್ಲಿ ಕಪಟವಿರುವಾಗ ಎಲ್ಲವೂ ನಿಷ್ಫಲ..

* ಮೋಕ್ಷ ಸಿಗಬೇಕೆಂದರೆ "ನಾನು" ಎಂಬಾಸೆ ಬಿಟ್ಟು ದಾಸನಾಗಬೇಕು, ಸದಾಶಿವನ ದಾಸನಾಗಬೇಕು..

For Quick Alerts
ALLOW NOTIFICATIONS  
For Daily Alerts

English summary
On kanakadasa jayanthi here is the best quotes and thoughts of social reformer kanakadasa.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X