ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ರಿಸಲ್ಟ್ ಇತ್ತೀಚೆಗಷ್ಟೇ ಪ್ರಕಟವಾಗಿತ್ತು. ಯಾರಿಗೆಲ್ಲಾ ಕಡಿಮೆ ಅಂಕ ಬಂದಿದೆಯೋ ಹಾಗೂ ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆ ಇದ್ದವರು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಇಂದಿನಿಂದ ಮರು ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದು ಯಾವ ವಿದ್ಯಾರ್ಥಿಗಳಿಗೆ ಈಗ ಸಿಕ್ಕಿರುವ ಅಂಕಕ್ಕಿಂತ ಇನ್ನೂ ಅಧಿಕ ಅಂಕ ಸಿಗುವ ನಿರೀಕ್ಷೆ ಇದೆಯೋ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೇ 14ರಂದು ಕೊನೆಯ ದಿನಾಂಕ.

ಮರುಮೌಲ್ಯಮಾಪನ ಶುಲ್ಕ ವಿವರ ಹೀಗಿದೆ:
ಸ್ಕ್ಯಾನ್‌ಡ್ ಕಾಪಿ ಸಲ್ಲಿಕೆಗೆ: ರೂ 400
ಮರುಮೌಲ್ಯಮಾಪನ ಶುಲ್ಕ: ರೂ 1200
ಮರುಮೌಲ್ಯಮಾಪನಕ್ಕೆ ಈ ವಿಧಾನ ಫಾಲೋ ಮಾಡಿ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು
ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ಆನ್‌ಲೈನ್ ಅಪ್ಲಿಕೇಶನ್ ಫಾರ್ ಸ್ಕ್ಯಾನ್‌ಡ್ ಕಾಪಿ , ಮರಮೌಲ್ಯಮಾಪನ, ರೀ ಟೋಟಲಿಂಗ್ ಆಫ್ ಸೆಕೆಂಡ್ ಪಿಯು ಎಕ್ಸಾಮಿನೇಶನ್ ಆನ್ಸರ್ ಸ್ಕ್ರಿಪ್ಟ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಪರದೆ ಮೇಲೆ ಮಾಹಿತಿ ತೆರೆದುಕೊಳ್ಳುತ್ತದೆ
ಸ್ಟೆಪ್ 4: ಸ್ಕ್ರೋಲ್ ಡೌನ್ ಮಾಡಿ ಪೇಜ್‌ನ ಕೆಳಭಾಗದಲ್ಲಿರುವ ಅಪ್ಲೈ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 5: ಅರ್ಜಿಯ ಲಿಸ್ಟ್ ತೆರೆದುಕೊಳ್ಳುತ್ತದೆ. ನಿಮಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: ಪರದೆ ಮೇಲೆ ಅರ್ಜಿ ಮೂಡುತ್ತದೆ . ಸಂಬಂಧಪಟ್ಟ ಡೀಟೆಲ್ಸ್ ಭರ್ತಿ ಮಾಡುತ್ತಾ ಹೋಗಿ
ಸ್ಟೆಪ್ 7: ಶುಲ್ಕಪಾವತಿಸಿ
ಸ್ಟೆಪ್ 8: ಅರ್ಜಿ ಸಲ್ಲಿಸಿ ಎಲ್ಲಾ ಪ್ರೊಸೆಸ್ ಕಂಪ್ಲೀಟ್ ಮಾಡಿ


Click it and Unblock the Notifications











