ಸಕ್ಸಸ್ ಕೆರಿಯರ್ ಗಾಗಿ... ಆಫೀಸ್‌ನಲ್ಲಿ ನಿಮ್ಮ ಡೆಸ್ಕ್ ಮೇಲೆ ಇವು ಇರಲೇ ಬೇಕು..!

ದಿನದ ಹೆಚ್ಚು ಗಂಟೆ ನೀವು ಆಫೀಸನಲ್ಲಿ ಕಳೆಯುತ್ತೀರಿ. ಕೆಲವೊಮ್ಮೆ ಮನೆಗಿಂತ ಹೆಚ್ಚು ಸಮಯ ನಾವು ಆಫೀಸ್‌ನಲ್ಲಿಯೇ ಕುಳಿತಿರುತ್ತೇವೆ. ಹಾಗಾಗಿ ನಿಮ್ಮ ಡೆಸ್ಕ್ ಮೇಲೆ ಕೆಲವೊಂದು ಪ್ರಮುಖ ಸಾಮಾಗ್ರಿಗಳು ಇರಲೇ ಬೇಕು.

ನಾವು ನಿಮಗೆ ಇವತ್ತು ಯಾವ ವಿಷಯ ಹೇಳುತ್ತಿದ್ದೇವೆ ಎಂದ್ರೆ ನೀವು ಆಫೀಸನಲ್ಲಿ ಡೆಸ್ಕ್ ಮೇಲೆ ಇಡಲೇಬೇಕಾದ ವಸ್ತುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಪ್ರತಿದಿನ ಏನೇನು ಮಾಡಬೇಕು ಎಂದು ಕೆಲಸದ ಬಗ್ಗೆ ನೀವು ಲಿಸ್ಟ್ ಮಾಡಿಕೊಳ್ಳುತ್ತೀರಿ. ಈ ಲಿಸ್ಟ್ ನಲ್ಲಿ ನಿಮ್ಮ ಇಡೀ ದಿನದ ಕೆಲಸದ ಬಗ್ಗೆ ಬರೆದಿರುತ್ತೀರಿ. ಇದರ ಜತೆ ಏನಾದ್ರೂ ಸ್ಪೇಶಲ್ ಟಾಸ್ಕ್ ಕೊಟ್ರೆ ಅದರ ಬಗ್ಗೆಯೂ ನೀವು ಬರೆದಿರುತ್ತೀರಿ. ಹಾಗೆಯೇ ನಿಮ್ಮ ಮೇಜಿನ ಮೇಲೆ ಯಾವೆಲ್ಲಾ ಅಗತ್ಯ ವಸ್ತುಗಳು ಇರಲೇ ಬೇಕು ಎಂದು ನಾವು ನಿಮಗೆ ಮತ್ತೊಂದು ಲಿಸ್ಟ್ ನೀಡುತ್ತೇವೆ ಚೆಕ್ ಮಾಡಿಕೊಳ್ಳಿ.

ನೀರಿನ ಬಾಟಲ್:
 

ನೀರಿನ ಬಾಟಲ್:

ನೀವು ಕೆಲಸದ ಒತ್ತಡದಲ್ಲಿ ಮುಳುಗಿ ಹೋದಾಗ ನೀವು ನೀರು ಕುಡಿಯಲು ಕೂಡಾ ಮರೆಯುತ್ತೀರಿ. ಆದ್ರೆ ನೀರು ಕುಡಿಯುವುದು ತುಂಬಾ ಅಗತ್ಯವಾದ ಕೆಲಸವಾಗಿದೆ. ನಿಮ್ಮ ಲ್ಯಾಪ್‌ಟಾಪ್ ಬಳಿ ಒಂದು ನಿರಿನ ಬಾಟಲ್ ಇಟ್ಟುಕೊಳ್ಳಿ. ನಿಮಗೆ ಯಾವಾಗೆಲ್ಲಾ ಣಿರು ಕುಡಿಯಬೇಕು ಎಂದು ಅನಿಸುತ್ತದೋ ಆವಾಗೆಲ್ಲಾ ನೀರು ಕುಡಿಯಬಹುದು. ಇದರಿಂದ ನೀವು ದಿಪೂರ್ತಿ ಹೈಡ್ರೇಟ್ ಆಗಿ ಇರಬಹುದು.

ತಿಂಡಿ-ತನಿಸು:

ತಿಂಡಿ-ತನಿಸು:

ಖಾಲಿ ಹೊಟ್ಟೆಯಲ್ಲಿ ಯಾರೂ ಮನಸ್ಸು ಕೂಡಾ ಕೆಲಸ ಮಾಡಲು ತಯಾರಿರುವುದಿಲ್ಲ. ನಿಮಗೂ ಕೂಡಾ ಈ ಅನುಭವ ಆಗಿರಬಹುದು. ಹಾಗಾಗಿ ನಿಮ್ಮ ಡೆಸ್ಕ್ ನಲ್ಲಿ ಹಣ್ಣುಗಳು, ಒಣ ದ್ರಾಕ್ಷಿ, ಬಾದಾಮಿ, ಕಡಲೆ, ಫ್ಲೆಕ್ಸಿ ಸೀಡ್ಸ್ ಸೇರಿದಮತೆ ಆರೋಗ್ಯಯುತವಾದ ಆಹಾರಗಳನ್ನ ತಂದಿಟ್ಟು ಕೊಳ್ಳಿ. ನಿಮಗೆ ಹಸಿವಾದಾಗ ಕೂಡಲೇ ನೀವು ಇವುಗಳನ್ನ ಸೇವಿಸಬಹುದು. ಇದರಿಂದ ನಿಮ್ಮ ಹೊಟ್ಟೆಯೂ ತುಂಬುತ್ತದೆ. ಅಷ್ಟೇ ಅಲ್ಲ ಅನ್‌ಹೆಲ್ತಿ ಫುಡ್ ಸೇವಿಸುವುದು ಕೂಡಾ ತಪ್ಪುತ್ತದೆ.

ಟಿಶ್ಯು ಬಾಕ್ಸ್:

ಟಿಶ್ಯು ಬಾಕ್ಸ್:

ಸಹ ಉದ್ಯೋಗಿಗಳ ಟಿಶ್ಯು ಆವಾಗವಾಗ ಕೇಳಿ ಪಡೆದುಕೊಳ್ಳುವುದು ಅವರಿಗೂ ಸರಿ ಎನಿಸಲ್ಲ. ಇದರಿಂದ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮ ಡೆಸ್ಕ್ ಮೇಲೆ ಟಿಶ್ಯು ಅಗತ್ಯವಾಗಿ ಇಟ್ಟುಕೊಳ್ಳಿ. ಇನ್ನು ಮೇಲೆ ಹೇಳಿದಂತೆ ತಿಂಡಿ - ತನಿಸು ಇಟ್ಟುಕೊಂಡ ಮೇಲೆ ಟಿಶ್ಯು ಇರಲೇ ಬೇಕು. ಈ ಟಿಶ್ಯು ನಿಮಗೆ ತುಂಬಾ ಕೆಲಸಕ್ಕೆ ಉಪಯೋಗಕ್ಕೆ ಬರುವುದು.

 ಫೋಟೋಗ್ರಾಫ್:
 

ಫೋಟೋಗ್ರಾಫ್:

ನಿಮ್ಮ ಫ್ಯಾಮಿಲಿ, ಸ್ನೇಹಿತರ ಇಲ್ಲ ನಿಮಗೆ ತುಂಬಾ ಆಪ್ತರಾಗಿರುವವರ ಫೋಟೋವನ್ನ ನಿಮ್ಮ ಡೆಸ್ಕ್‌ನಲ್ಲಿ ಇಡುವುದು ಬೆಟರ್. ಕೆಲಸದ ಒತ್ತಡದ ಮಧ್ಯೆ ನಿಮ್ಮ ದೃಷ್ಟಿ ಈ ಫೋಟೋದತ್ತ ಬೀರಿದೊಡನೇ ಎಷ್ಟೇ ಸ್ಟ್ರೆಸ್ ಇದ್ರೂ ರಿಲೀಫ್ ಸಿಗುವುದು ಮಾತ್ರವಲ್ಲ ದಿನವಿಡೀ ಖುಷಿ ಖುಷಿಯಾಗಿ ಕಳೆಯಬಹುದು.

ಮೇಕಪ್ ವಸ್ತುಗಳು:

ಮೇಕಪ್ ವಸ್ತುಗಳು:

ನೀವು ಆಫೀಸಿಗೆ ಬೆಳಗ್ಗೆ ಬರುವಾಗ ಅವಸರ ಅವಸರವಾಗಿ ಬಂದಿರುತ್ತೀರಿ. ಇಷ್ಟೇ ಅಲ್ಲ ಸಂಜೆ ನಿಮಗೆ ಒಂದು ಪಾರ್ಟಿ ಕೂಡಾ ಎಟೆಂಡ್ ಮಾಡಬೇಕಾಗಿರುತ್ತದೆ. ಈ ಮಧ್ಯೆ ನಿಮಗೆ ಮತ್ತೆ ಮನೆಗೆ ಹೋಗಿ ತಯಾರಾಗಲು ಸಮಯವಿರುವುದಿಲ್ಲ. ಹಾಗಾಗಿ ಇಂತಹ ಪರಿಸ್ಥತಿ ಕೂಲ್ ಆಗಿ ಹ್ಯಾಂಡಲ್ ಮಾಡಬೇಕಾದ್ರೆ ನಿಮ್ಮ ಮೇಜಿನಲ್ಲಿ ಮೇಕಪ್ ಕಿಟ್ ಕೂಡಾ ಇರಬೇಕು.

ಫೋನ್ ಚಾರ್ಜರ್:

ಫೋನ್ ಚಾರ್ಜರ್:

ಈ ವಸ್ತುವಿನ ಅಗತ್ಯತೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ನಿಮಗೆ ತಿಳಿದಿದೆ ಪೋನ್ ಹಾಗೂ ಫೋನ್ ಚಾರ್ಜರ್ ನಮ್ಮ ಜೀವನದಲ್ಲಿ ಎಷ್ಟು ಪ್ರಮುಖ ಸ್ಥಾನ ಪಡೆದಿದೆ ಎಂಬುವುದು. ಪ್ರತಿಯೊಬ್ಬರಿಗೂ ಅವರವರ ಮೊಬೈಲ್ ಅವರ ಜಗತ್ತು. ಹಾಗಾಗಿ ಮೊಬೈಲ್ ಚಾರ್ಜರ್ ಜತೆಯಲ್ಲಿಯೇ ಇಟ್ಟು ಕೊಳ್ಳುವುದು ಬೆಸ್ಟ್. ಯಾಕೆಂದ್ರೆ ಪದೇ ಪದೇ ಇತರರ ಜತೆ ಚಾರ್ಜರ್ ಕೇಳುವುದು ಸರಿಯಲ್ಲ

For Quick Alerts
ALLOW NOTIFICATIONS  
For Daily Alerts

English summary
Some Items evryone Should have on their desk. If you want to produce your best work, then you will need to keep things in your work place. here is the list of desk items that will keep you happy everytime
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more