ಯುಜಿಸಿ ನೆಟ್ ಪರೀಕ್ಷೆ... ಕೊನೆ ಗಳಿಗೆ ತಯಾರಿ ಹೇಗೆ?

ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (ಎನ್‌ಇಟಿ) ಪರೀಕ್ಷೆಯನ್ನ ಜುಲೈ ೮ ಭಾನುವಾರದಂದು ನಿಗದಿಗೊಳಿಸಿದೆ. ಈ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ

ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (ಎನ್‌ಇಟಿ) ಪರೀಕ್ಷೆಯನ್ನ ಜುಲೈ ೮ ಭಾನುವಾರದಂದು ನಿಗದಿಗೊಳಿಸಿದೆ. ಈ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗೆ ಈ ಪರೀಕ್ಷೆ ನಡೆಸಲಾಗುತ್ತದೆ.

ಯುಜಿಸಿ ನೆಟ್ ಪರೀಕ್ಷೆ... ಕೊನೆ ಗಳಿಗೆ ತಯಾರಿ ಹೇಗೆ?

ಯುಜಿಸಿ ನೆಟ್ ಪರೀಕ್ಷೆಯು ೮೪ ಸಬ್‌ಜೆಕ್ಟ್ ಗಳಲ್ಲಿ ನಡೆಯಲಿದೆ. ದೇಶದ 91 ಸಿಟಿಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಇದೀಗ ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು ಕೊನೆಯ ಗಳಿಗೆಯ ಸ್ಟಡಿಗೆ ಕೆರಿಯರ್ ಇಂಡಿಯಾ ಕೆಲವೊಂದು ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ನೋಟ್ಸ್ ರಿವೈಸ್ ಮಾಡಿಕೊಳ್ಳಿ:

ಇದು ನೀವು ಮಾಡಲೇ ಬೇಕಾದ ಪ್ರಮುಖ ಕೆಲಸ. ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗ, ಈಗಾಗಲೇ ಓದಿರುವ ನೋಟ್ಸ್ ಗಳನ್ನ ಮತ್ತೊಮ್ಮೆ ಓದಿ ರಿವೈಸ್ ಮಾಡಿಕೊಳ್ಳಿ. ನೀವಾಗಿಯೇ ತಯಾರು ಮಾಡಿಕೊಂಡಿರುವ ನೋಟ್ಸ್ ನಲ್ಲಿ ಓದುವ ಟೈಂನಲ್ಲಿ ಪ್ರಮುಖ ಟಾಪಿಕ್ ಗಳನ್ನ ಹೈಲೆಟ್ ಮಾಡಿಟ್ಟುಕೊಳ್ಳಿ. ಬಳಿಕ ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ ಎಂದಾದಾಗ ಹೈಲೆಟ್ ಮಾಡಿರುವ ಪಾಯಿಂಟ್ಸ್ ಗಳನ್ನ ಮತ್ತೊಮ್ಮೆ ಓದಿಕೊಳ್ಳಿ.

ಪೇಪರ್ 1 ನ್ನ ಹಗುರವಾಗಿ ಪರಿಣಿಸಬೇಡಿ:

ಪೇಪರ್ 1 ಸಬ್‌ಜೆಕ್ಟ್ ಗೆ ಸಂಬಂಧಪಟ್ಟಿರುವುದಿಲ್ಲ. ಅಭ್ಯರ್ಥಿಗಳ ಟೀಚಿಂಗ್ ಹಾಗೂ ರಿಸರ್ಚ್ ಸಾಮರ್ಥ್ಯ ಟೆಸ್ಟ್ ಮಾಡಲು ಈ ಪೇಪರ್ ನೀಡಲಾಗುತ್ತದೆ. ಇದರಲ್ಲಿ ತಾರ್ಕಿಕ ಸಾಮರ್ಥ್ಯ, ಗ್ರಹಿಕೆ ಹಾಗೂ ವಿಭಿನ್ನತೆಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪತ್ರಿಕೆಯು 100 ಅಂಕಗಳನ್ನ ಒಳಗೊಂಡಿರುತ್ತದೆ. ಹಾಗಾಗಿ ಇದನ್ನ ಹಗುರವಾಗಿ ಪರಿಗಣಿಸಬೇಡಿ.

ಪೇಪರ್ 2 ಕೂಡಾ ತುಂಬಾ ಇಂಪೋರ್ಟೆಂಟ್:

ಪೇಪರ್ 2ರಲ್ಲಿ ಸಬ್‌ಜೆಕ್ಟ್ ಅನುಸಾರ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಹಾಗಾಗಿ ಸಬ್‌ಜೆಕ್ಟ್ ಪ್ರತಿಯೊಂದು ಪಾಠವನ್ನು ಕೂಡಾ ಚೆನ್ನಾಗಿ ಕಂಪ್ಲೀಟ್ ಆಗಿ ಓದಿಕೊಳ್ಳಿ. ಪ್ರತಿಯೊಂದು ಸಬ್‌ಜೆಕ್ಟ್ ನ ಬಗ್ಗೆ ಡೀಟೆಲ್ ಆಗಿ ಸಿಬಿಎಸ್ ಇ ಸಿಲೇಬಸ್ ನೀಡಿದೆ. ಅಭ್ಯರ್ಥಿಗಳು ಈ ಸಿಲೇಬಸ್ ಲಿಸ್ಟ್ ಚೆಕ್ ಮಾಡಿಕೊಂಡು ಸ್ಟಡಿ ಮಾಡಿ ಹೆಚ್ಚಿನ ಅಂಕ ಸ್ಕೋರ್ ಮಾಡಿಕೊಳ್ಳಿ.

ಸ್ಟ್ರಾಟೆಜೀಸ್ ತಯಾರು ಮಾಡಿಕೊಳ್ಳಿ:

ಇನ್ನೂ ಎಕ್ಸಾಂ ಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ ಎಂದಾದ್ರೆ ನೀವು ಸ್ವಲ್ಪ ಹೆಚ್ಚು ಎಫರ್ಟ್ ಹಾಕುವುದು ಅಗತ್ಯ. ಅದಕ್ಕಾಗಿ ಪ್ರತ್ಯೇಕ ಸ್ಟಡಿ ಶೆಡ್ಯುಲ್ ಹಾಗೂ ಸ್ಟ್ರಾಟೆಜಿ ರೆಡಿಮಾಡಿಟ್ಟು ಕೊಳ್ಳಿ. ಅಷ್ಟೇ ಅಲ್ಲ ಕೊನೆಯ ಕೆಲವೇ ದಿನಗಳು ಬಾಕಿ ಇರುವಾಗ ಹೇಗೆ ಸ್ಟಡಿ ಮಾಡಬೇಕೆಂದು ಕೂಡಾ ಸ್ಟ್ರಾಟೆಜಿ ರೆಡಿಮಾಡಿಕೊಳ್ಳಿ.

ನಿಮ್ಮ ಸ್ಪೀಡ್ ಹೆಚ್ಚಿಸಿಕೊಳ್ಳಿ:

ಪೇಪರ್ 1 ಹಾಗೂ ಪೇಪರ್ 2 ಪತ್ರಿಕೆಯ ಅವಧಿ ಕ್ರಮವಾಗಿ 1 ಹಾಗೂ 2 ಗಂಟೆ. ಹಾಗಾಗಿ ಟೈಂ ಸರಿಯಾಗಿ ಪತ್ರಿಕೆಯಲ್ಲಿ ಉತ್ತರ ಬರೆದು ಮುಗಿಸುವುದು ಸುಲಭ ಟಾಸ್ಕ್ ಅಲ್ಲ. ಹಾಗಾಗಿ ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗ ಎಕ್ಸಾಂ ಅಲ್ಲಿ ಹೇಗೆ ಫಾಸ್ಟ್ ಆಗಿ ಬರೆಯುವುದು ಎನ್ನುವುದರ ಬಗ್ಗೆನೂ ಫೋಕಸ್ ಮಾಡಿ.

ಕಾಂಫಿಡೆನ್ಸ್ ಹೆಚ್ಚಿಸಿಕೊಳ್ಳಿ:

ಇನ್ನಿತ್ತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದ್ರೆ ಯುಜಿಸಿ ನೆಟ್ ಪರೀಕ್ಷೆ ತುಂಬಾ ವಿಭಿನ್ನ. ಇದು ಉನ್ನತ ಸ್ಥಾನಕ್ಕೆ ನಡೆಸುವ ಪರೀಕ್ಷೆಯಾಗಿದೆ. ಹಾಗಾಗಿ ನೀವು ಈ ಪರೀಕ್ಷೆ ವೇಳೆ ಕಾಂಫಿಡೆಂಟ್ ಆಗಿರುವುದು ಇಂಪೋರ್ಟೆಂಟ್.

For Quick Alerts
ALLOW NOTIFICATIONS  
For Daily Alerts

English summary
Central Board of Secondary Education (CBSE), which is an autonomous organisation under the HRD Ministry, has been granted the authority to conduct the University Grants Commission (UGC) National Eligibility Test (NET) on Sunday, i.e., July 8. UGC NET, which is conducted twice a year, is held to select the candidates for the Assistant Professor and Junior Research Fellowship (JRF) posts in Indian universities and colleges. Qualifying in the JRF will make candidates pursue research in their respective postgraduate subject
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X