ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಅಂತ ಆಸೆ ಇದೆಯಾ? ಹಾಗಿದ್ರೆ ಇದನ್ನು ಓದಿ

ಭಾರತ ದೇಶವು ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಲು ಬ್ಯಾಂಕಿಂಗ್ ಕ್ಷೇತ್ರವೂ ಒಂದು ಮಹತ್ತರ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಾರಣ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಹಿಂದುಳಿದವು ಆದರೆ ಭಾರತದಲ್ಲಿ ಮಾತ್ರ ಅಷ್ಟೊಂದು ತೀವ್ರವಾದ ನಷ್ಟ ಉಂಟಾಗಲಿಲ್ಲ ಅದಕ್ಕೆ ಕಾರಣ ನಮ್ಮ ದೇಶದ ಬ್ಯಾಂಕ್‌ಗಳು. ನಮ್ಮ ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದೆ. ವ್ಯಾಪಾರ ವ್ಯವಹಾರಗಳು ವಿಸ್ತರಿಸುತ್ತಿವೆ. ಇನ್ನೂ ಬ್ಯಾಂಕ್‌ಗಳ ಸಂಖ್ಯೆಯೂ ಏರುತ್ತಿದೆ ಹೀಗಾಗಿ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ.

 

<strong>ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್</strong>ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಇತ್ತೀಚೆಗಷ್ಟೇ ನೀವು ನೋಡಿರಬಹುದು ಅದೇನೆಂದರೆ ಅನೇಕ ಬ್ಯಾಂಕ್‌ಗಳು ವಿವಿಧ ಹುದ್ದೆಗಳ ನೇಮಕಾತಿಯ ಪ್ರಕಟಣೆಯನ್ನು ಹೊರಡಿಸಿತ್ತು. ಹಾಗಾಗಿ ನಾವಿವತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶ ಮತ್ತು ಇಲ್ಲಿ ಉದ್ಯೋಗ ಮಾಡಿದರೆ ಏನೆಲ್ಲಾ ಲಾಭ ಇವೆ ಅನ್ನುವ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿದ ಬಳಿಕ ನೀವು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗವನ್ನು ಅರಸಲು ಸಿದ್ಧರಾಗುವುದು ಖಂಡಿತ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶದ ಬಗೆಗೆ ನಿಮಗೆಷ್ಟು ಗೊತ್ತು?

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಯಾಕೆ ಮಾಡಬೇಕು:

ಹಲವರು ನಿಮಗೆ ಈಗಾಗಲೇ ಬ್ಯಾಂಕ್‌ನಲ್ಲಿ ಉದ್ಯೋಗಗಳು ಖಾಲಿ ಇವೆ ಅರ್ಜಿ ಹಾಕಿ ಎಂಬ ಸಲಹೆಯನ್ನು ನೀಡಿರುತ್ತಾರೆ. ಆದರೆ ಯಾಕೆ ಈ ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜಾಬ್ ಸೆಕ್ಯುರಿಟಿ:

ಇಲ್ಲಿ ಜಾಬ್ ಸೆಕ್ಯುರಿಟಿ ಇರತ್ತೆ. ಇತರೆ ಸರ್ಕಾರಿ ಉದ್ಯೋಗದಂತೆ ಉತ್ತಮ ವೇತನವನ್ನು ನೀಡಲಾಗುತ್ತೆ.

ವರ್ಕ್ ಹೇಗಿರುತ್ತೆ?

ಬ್ಯಾಂಕ್‌ನಲ್ಲಿನ ಕೆಲಸಗಳು ಸುಲಭವಾಗಿ ಒಂದೆಡೆ ಕುಳಿತು ಕಾರ್ಯ ನಿರ್ವಹಿಸಬಲ್ಲದ್ದಾಗಿರುತ್ತದೆ.

ಯಾರೇ ಬೇಕಾದರು ಸೇರಬಹುದು:

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಯಾವುದೇ ಅಭ್ಯರ್ಥಿಗಳು ಬೇಕಾದರೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಬ್ಯಾಂಕ್‌ ಉದ್ಯೋಗಕ್ಕೆ ಸೇರಬಹುದು.

ನಿಗದಿತ ಸಮಯ:

ಈ ಕ್ಷೇತ್ರದಲ್ಲಿ ಹಗಲು ರಾತ್ರಿ ಕೆಲಸ ಎನ್ನುವ ಮಾತೇ ಇಲ್ಲ. ಇಲ್ಲಿ ನಿಗದಿತ ಸಮಯದಿ ಕೆಲಸ ಮಾಡುವ ಅವಕಾಶವಿರುತ್ತದೆ.

ಏನೆಲ್ಲಾ ಲಾಭಗಳಿವೆ:

ಬ್ಯಾಂಕ್‌ ಉದ್ಯೋಗದಲ್ಲಿರುವವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ವಸತಿ ಹೀಗೆ ಹಲವು ಸೌಲಭ್ಯಗಳನ್ನು ಬ್ಯಾಂಕ್ ಕ್ಷೇತ್ರದಲ್ಲಿ ಪಡೆಯಬಹುದು.

 

ಕರಿಯರ್ ಹೇಗಿರುತ್ತೆ:

ಈ ಹುದ್ದೆಗೆ ಸೇರಿದ ಅಭ್ಯರ್ಥಿಗಳು ಪ್ರಪೋಷನ್ ಜೊತೆ ಜೊತೆಗೆ ಭಾರತದೆಲ್ಲೆಡೆ ಕೆಲಸ ಮಾಡುವ ಅವಕಾಶವನ್ನು ಹೊಂದಿರುತ್ತಾನೆ.

<strong>ಚಾರ್ಟೆಡ್ ಅಕೌಂಟೆಂಟ್ ಆಗಬೇಕಾ? ಹಾಗಿದ್ರೆ ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ</strong>ಚಾರ್ಟೆಡ್ ಅಕೌಂಟೆಂಟ್ ಆಗಬೇಕಾ? ಹಾಗಿದ್ರೆ ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ಯಾವ ರೀತಿಯ ಬ್ಯಾಂಕ್‌ಗಳಿವೆ:

ಇತ್ತೀಚೆಗೆ ಯುವಜನತೆ ಬ್ಯಾಂಕ್‌ಗಳಲ್ಲಿ ಕೆಲಸವನ್ನು ಹುಡುಕುತ್ತಿದ್ದಾರೆ ಹಾಗಾಗಿ ಯಾವ ರೀತಿಯ ಬ್ಯಾಂಕ್‌ಗಳಿವೆ ಅನ್ನುವುದನ್ನು ಮೊದಲು ತಿಳಿಯಿರಿ.

ಭಾರತದಲ್ಲಿ ಸಾಮಾನ್ಯವಾಗಿ 3 ರೀತಿಯ ಬ್ಯಾಂಕ್‌ಗಳಿವೆ ಅವುಗಳೆಂದರೆ

ಕಮರ್ಷಿಯಲ್ ಬ್ಯಾಂಕ್:

ಕಮರ್ಷಿಯಲ್ ಬ್ಯಾಂಕ್ ಅಂದರೆ ನಿಮಗೆಲ್ಲಾ ಗೊತ್ತಿರುವ ಹಾಗೆ ಜನರಿಂದ ಹಣವನ್ನು ಡೆಪಾಸಿಟ್ ಮಾಡಿಸಿಕೊಳ್ಳುವುದು ಮತ್ತು ವ್ಯಾಪಾರಿಗಳಿಗೆ, ವಸತಿ ನಿರ್ಮಿಸಲು ಸಾಲ ಪಡೆಯುವಂತಹ ಅಭ್ಯರ್ಥಿಗಳಿಗೆ ಲೋನ್ ನೀಡಿ ಬಡ್ಡಿ ಪಡೆಯುವುದು ಇಂತಹ ಕೆಲಸವನ್ನು ನಿರ್ವಹಿಸಲಾಗುತ್ತದೆ. ಕಮರ್ಷಿಯಲ್‌ ಬ್ಯಾಂಕ್‌ಗಳಲ್ಲಿ ಕೂಡ 3 ತೆರನಾದ ಬ್ಯಾಂಕ್‌ಗಳಿವೆ:

1 ಪ್ರೈವೇಟ್ ಸೆಕ್ಟರ್ ಬ್ಯಾಂಕ್
2 ಪಬ್ಲಿಕ್ ಸೆಕ್ಟರ್ ಬ್ಯಾಂಕ್
3 ರೀಜನಲ್ ಬ್ಯಾಂಕ್

ಕೋ-ಆಪರೇಟಿವ್ ಬ್ಯಾಂಕ್:

ಗ್ರಾಮೀಣ ಭಾಗದಲ್ಲಿ ಜನರಿಗೆ ಅತಿ ಹೆಚ್ಚು ಉಪಯುಕ್ತವಾಗಿರುವುದೇ ಕೋ-ಆಪರೇಟಿವ್‌ ಬ್ಯಾಂಕ್‌ಗಳು. ಏಕೆಂದರೆ ಕೋ-ಆಪರೇಟಿವ್‌ ಬ್ಯಾಂಕ್‌ಗಳು ರೈತರಿಗೆ, ಸಣ್ಣ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಅವರ ಬದುಕಿಗೆ ಸಹಾಯಕವಾಗಿದೆ. ಕೋ-ಆಪರೇಟಿವ್‌ ಬ್ಯಾಂಕ್‌ಗಳನ್ನು 3 ರೀತಿಯಾಗಿ ವಿಂಗಡಿಸಲಾಗಿದೆ ಅವುಗಳೆಂದರೆ

1 ರಾಜ್ಯ ಸಹಕಾರಿ ಬ್ಯಾಂಕ್
2 ಕೇಂದ್ರೀಯ ಸಹಕಾರಿ ಬ್ಯಾಂಕ್
3 ಪ್ರಾಥಮಿಕ ಕೃಷಿ ಸಾಲ ಸಂಘಗಳು

ಹಣ ಹೂಡಿಕೆ ಮತ್ತು ವಿಶೇಷ ಬ್ಯಾಂಕ್‌ಗಳು:

ಕೆಲವು ಬ್ಯಾಂಕ್‌ಗಳು ಹಣ ಹೂಣಿಕೆ ಮತ್ತು ವಿಶೇ‍ಷ ಚಟುವಟಿಕೆಗಳಿಗಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ ಅವುಗಳೆಂದರೆ
* ಐಡಿಬಿಐ ಬ್ಯಾಂಕ್
* ಐಎಫ್‌ಸಿಐ ಲಿಮಿಟೆಡ್
* ಇಂಡಸ್ಟ್ರೀಸ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ

<strong>ಕಾಲೇಜಿಗೆ ಸೇರಿದ ಮೊದಲ ದಿನ ಹೇಗಿರಬೇಕು? ಎನ್ನುವುದಕ್ಕೆ ಇಲ್ಲಿದೆ ಕಿವಿಮಾತು</strong>ಕಾಲೇಜಿಗೆ ಸೇರಿದ ಮೊದಲ ದಿನ ಹೇಗಿರಬೇಕು? ಎನ್ನುವುದಕ್ಕೆ ಇಲ್ಲಿದೆ ಕಿವಿಮಾತು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ?

ಅನೇಕರು ಈಗಾಗಲೇ ಬ್ಯಾಂಕ್‌ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಿರುತ್ತೀರಿ. ಮತ್ತೆ ಕೆಲವರು ಬ್ಯಾಂಕ್‌ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಆಲೋಚಿಸುತ್ತಿರುತ್ತೀರಿ. ಆದರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿರುತ್ತವೆ ಎನ್ನುವದನ್ನು ತಿಳಿದಿದ್ದೀರಾ? ಇಲ್ಲವಾಗಿದ್ದಲ್ಲಿ ನಾವಿಂದು ನಿಮಗೆ ತಿಳಿಸಲಿದ್ದೇವೆ ಓದಿ ತಿಳಿಯಿರಿ.

ಪ್ರೊಬೆಷನರಿ ಆಫೀಸರ್:

ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಪ್ರೊಬೆಷನರಿ ಆಫೀಸರ್ ಹುದ್ದೆಗಳು ಇರುತ್ತವೆ. ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸಲು ಪ್ರಾಥಮಿಕ ಹಂತದ ಹುದ್ದೆ ಇದಾಗಿರುತ್ತದೆ. ನಂತರದ ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಅನುಭವದೊಂದಿಗೆ ಉನ್ನತ ಹುದ್ದೆಗಳಿಗೆ ಪ್ರಮೋಷನ್ ಪಡೆಯುತ್ತಾರೆ.

ವಿವಿಧ ಬ್ಯಾಂಕ್‌ಗಳಲ್ಲಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಂದರೆ ಐಬಿಪಿಎಸ್‌ ಪಿಓ ಪರೀಕ್ಷೆ ಅಥವಾ ಎಸ್‌ಬಿಐ ಪಿಓ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಯಾವುದೇ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಈ ಹುದ್ದೆಗಳಿಗೆ ಸೇರಬಹುದು.

ಕ್ಲರ್ಕ್:

ಬ್ಯಾಂಕ್‌ ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಹುದ್ದೆಯಾಗಿದೆ. ಇಲ್ಲಿ ಅಭ್ಯರ್ಥಿಗಳು ಬ್ಯಾಂಕ್‌ನ ವ್ಯವಹಾರ ಮತ್ತು ಜನರೊಂದಿಗಿನ ಸಂಪರ್ಕದ ಕರ್ತವ್ಯವನ್ನು ನಿರ್ವಹಿಸುತ್ತಾನೆ. ಈ ಹುದ್ದೆಗಳಿಗೆ ಯಾವುದೇ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಎಸ್‌ಬಿಐ ಕ್ಲರ್ಕ್ ಅಥವಾ ಐಬಿಪಿಎಸ್ ಕ್ಲರ್ಕ್‌ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗುವ ಮೂಲಕ ಸೇರಬಹುದು.

ಸ್ಟೆಷಲಿಸ್ಟ್ ಆಫೀಸರ್:

ಸ್ಪೆಷಲಿಸ್ಟ್ ಆಫೀಸರ್‌ಗಳು ಇಂಜಿನಿಯರಿಂಗ್ ವಿಭಾಗ, ಸಾಲ ವಿಭಾಗ,ಮಾರಾಟ ನಿರ್ವಹಣೆ ಇತ್ಯಾದಿ ವಿಭಾಗಗಲದಲ್ಲಿ ಕೆಲಸ ನಿರ್ವಹಿಸುತ್ತಾರೆ. ಸ್ಟೆಷಲಿಸ್ಟ್ ಆಫೀಸರ್ ಆಗಲು ಹುದ್ದೆಗೆ ಸಂಬಂಧಪಟ್ಟಂತೆ ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸೇರ ಬಹುದು.

ಸ್ಪೆಷಲಿಸ್ಟ್ ಆಫೀಸರ್‌ ಹುದ್ದೆಗಳಲ್ಲಿ ಕೆಲವು ಸ್ಥಾನಗಳಿವೆ ಅವುಗಳೆಂದರೆ

ಇನ್ಫರ್ಮೇಶನ್ ಟೆಕ್ನಾಲಜಿ ಆಫೀಸರ್:

ಐಟಿ ಆಫೀಸರ್ ಆದವರು ಬ್ಯಾಂಕ್‌ಗಳಲ್ಲಿನ ಟೆಕ್ನಿಕಲ್ ವಿಷಯಗಳ ಬಗೆಗೆ ಗಮನ ವಹಿಸುವುದು ಅವರ ಕೆಲಸವಾಗಿರುತ್ತದೆ.
ಐಟಿ ವಿಭಾಗದಲ್ಲಿ ಐದು ಸೆಕ್ಷನ್‌ಗಳಿರುತ್ತವೆ ಅವುಗಳೆಂದರೆ:
* ಡಾಟಾ ಸೆಂಟರ್
* ಎಟಿಎಂ ಸೆಕ್ಷನ್
* ಪ್ರಾಜೆಕ್ಟ್ ಆಫೀಸ್
* ಸೆಕ್ಯುರಿಟಿ ಸೆಕ್ಷನ್
* ಎಂಐಎಸ್ ಮತ್ತು ಅಪ್ಲಿಕೇಶನ್ ಸೆಕ್ಟರ್

ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್:

ಅಗ್ರಿಕಲ್ಚರಲ್ ಆಫೀಸರ್ ಅಂದರೆ ವ್ಯವಸಾಯ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಕೆಲಸ ನಿರ್ವಹಿಸುವುದು. ಸಾಮಾನ್ಯವಾಗಿ ಅಗ್ರಿಕಲ್ಚರಲ್ ಆಫೀಸರ್‌ಗಳು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸಬೇಕಿರುತ್ತದೆ. ರೈತರ ಅಗತ್ಯತೆಗಳಿಗನುಗುಣವಾಗಿ ನೀಡಲಾಗುವ ಸಾಲದ ಸ್ಕೀಮ್ಸ್‌ಗಳ ಬಗೆಗೆ ಅಧಿಕಾರಿಯು ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಾನೆ.

ಲಾ ಆಫೀಸರ್:

ಬ್ಯಾಂಕ್‌ಗೆ ಸಂಬಂಧಪಟ್ಟ ಯಾವುದೇ ಕಾನೂನುಬದ್ಧ ವಿಚಾರಗಳಲ್ಲಿ ಕೆಲಸ ನಿರ್ವಹಿಸುವುದು ಲಾ ಅಧಿಕಾರಿಗಳ ಕೆಲಸವಾಗಿರುತ್ತದೆ. ಈ ಹುದ್ದೆಗಳಿಗೆ ಕಾನೂನು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಅಭ್ಯರ್ಥಿಗಳು ಸೇರಬಹುದು. ಅಲ್ಲದೇ ಈ ಹುದ್ದೆಗಳಿಗೆ ಸೇರಲು ನೀವು ಸ್ಪರ್ಧಾತ್ಮಕ ಪರೀಕ್ಷಯನ್ನು ತೆಗೆದುಕೊಳ್ಳಬೇಕಿರುತ್ತದೆ.

ಹೆಚ್‌ಆರ್‌/ ಪರ್ಸನಲ್ ಆಫೀಸರ್ (ಮಾನವ ಸಂಪನ್ಮೂಲ ಅಧಿಕಾರಿ):

ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡುವುದು ಮತ್ತು ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ಅಧಿಕಾರಿಯು ಹೊಂದಿರುತ್ತಾನೆ. ಸಂಸ್ಥೆಯಲ್ಲಿ ಎಲ್ಲ ಉದ್ಯೋಗಿಗಳ ಕರ್ತವ್ಯ ನಿರ್ವಹಣೆಯ ಬಗೆಗೆ ಗಮನ ವಹಿಸುವುದು ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಸಾಮಾನ್ಯವಾಗಿ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು.

ಮಾರ್ಕೆಟಿಂಗ್ ಆಫೀಸರ್:

ಬ್ಯಾಂಕುಗಳಿಗೆ ಸಂಬಂಧಪಟ್ಟ ಮಾರಾಟ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿಯು ಮಾರ್ಕೆಟಿಂಗ್‌ ಆಫೀಸರ್‌ದ್ದಾಗಿರುತ್ತದೆ. ಬ್ಯಾಂಕ್‌ಗಳಿಂದ ನೀಡಲಾಗುವ ಸ್ಕೀಮ್‌ಗಳ ಬಗೆಗೆ ಜನರಿಗೆ ಪರಿಚಯಿಸುವುದ ಅಧಿಕಾರಿಯ ಕೆಲಸವಾಗಿರುತ್ತದೆ. ಈ ಹುದ್ದೆಗಳಿಗೆ ಎಂಬಿಎ ನಲ್ಲಿ ಮಾರ್ಕೆಟಿಂಗ್‌ ವಿಷಯದ ಬಗೆಗೆ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಬ್ಯಾಂಕ್‌ಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿರುತ್ತದೆ.

ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್:

ಬ್ಯಾಂಕಿನ ನಿರ್ವಹಣೆಯ ಜವಾಬ್ದಾರಿ ಮತ್ತು ವ್ಯಾಪಾರವನ್ನು ಅಭಿವೃದ್ಧಿ ಪಡಿಸುವ ಸಂಪೂರ್ಣ ಜವಾಬ್ದಾರಿ ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್‌ಗಳದ್ದಾಗಿರುತ್ತದೆ. ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಿದ ಹಾಗೂ ಕನಿಷ್ಟ 3 ರಿಂದ 5 ವರ್ಷಗಳ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸೇರಲು ಅರ್ಹರು. ಸಾಮಾನ್ಯ ಈ ಹುದ್ದೆಗಳಿಗೆ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಲಾಗುವುದು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕು ಎಂಬ ಹಂಬಲವುಳ್ಳ ಅಭ್ಯರ್ಥಿಗಳು ಈ ಲೇಖನವನ್ನು ಓದಿದ ನಂತರ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಯನ್ನು ನಡೆಸಿ.

<strong>ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ನೀವು ಮಾಡಬಹುದು ಗೊತ್ತಾ?</strong>ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ನೀವು ಮಾಡಬಹುದು ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
Here are the list of career and job opportunities in banking sector. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X