ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ನೀವು ಮಾಡಬಹುದು ಗೊತ್ತಾ?

ತುಂಬಾ ಜನಕ್ಕೆ ತಾನು ಸಿನೆಮಾ ಕ್ಷೇತ್ರಕ್ಕೆ ಹೋಗಬೇಕು ಅನ್ನುವ ಆಸೆ ತುಂಬಾನೆ ಇರುತ್ತೆ. ಸಿನೆಮಾ ಕ್ಷೇತ್ರ ಅಂದಾಕ್ಷಣ ಯುವಜನರಲ್ಲಿ ಅದೇಕೋ ಹೆಚ್ಚಿನ ಆಸಕ್ತಿ ಇರುತ್ತೆ. ಇನ್ನೂ ಸಿನೆಮಾ ಅಂದಾಕ್ಷಾಣ ಕೇವಲ ನಟಿ ಮತ್ತು ನಟಿಯರು ಮಾತ್ರ ಪರದೆಯ ಮೇಲೆ ಕಾಣಿಸುತ್ತಾರೆ ಆದರೆ ಈ ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ ಮತ್ತು ಆ ಉದ್ಯೋಗಳನ್ನು ಮಾಡಿದರೆ ಆದಾಯ ಹೇಗಿರುತ್ತದೆ ಎನ್ನುವುದನ್ನು ನಾವಿಂದು ತಿಳಿಸುತ್ತಿದ್ದೇವೆ.

 

ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ ಮತ್ತು ಆ ಉದ್ಯೋಗಗಳಲ್ಲಿ ತೊಡಗಿಕೊಂಡರೆ ಎಷ್ಟು ವೇತನವನ್ನು ಪಡೆಯಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ.

 ಸಿನೆಮಾ ಕ್ಷೇತ್ರದಲ್ಲಿ ಇರುವ ಉದ್ಯೋಗಗಳ ಮಾಹಿತಿ

ಪ್ರೊಡ್ಯೂಸರ್:

ಪ್ರೊಡ್ಯೂಸರ್ ಅಂದರೆ ನಿರ್ಮಾಪಕರು ಸಿನೆಮಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರಧಾರಿಗಳು. ನಿರ್ಮಾಕರ ಜವಾಬ್ದಾರಿಗಳೆಂದರೆ ಎಲ್ಲಾ ಕೆಲಸಗಳು ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವ ಜವಾಬ್ದಾರಿ ಆತನಿಗಿರುತ್ತದೆ. ಆತ ಯಾವ ಕಥೆಯನ್ನು ಮಾಡಬೇಕು? ಎಲ್ಲಿ ಚಿತ್ರೀಕರಣ ಮಾಡಬೇಕು ಅದಕ್ಕೆ ಏನೆಲ್ಲಾ ಅಗತ್ಯಗಳನ್ನು ಪೂರೈಸುವ ಅಗತ್ಯವಿದೆ. ಹೊರಗಡೆ ಚಿತ್ರೀಕರಣವಿದ್ದರೆ ಅದಕ್ಕೆ ಭರಿಸುವ ವೆಚ್ಚವೆಷ್ಟು ? ಹೀಗೆ ಪ್ರತಿಯೊಂದು ವಿಷಯಗಳ ಬಗೆಗೆ ಆತ ಗಮನವಸಹಿಸಬೇಕಿರುತ್ತದೆ.

 

ಪ್ರೊಡ್ಯೂಸರ್ ಆಗ ಬಯಸುವವರು ಕಲಾ ವಿಭಾಗದಲ್ಲಿ ಪದವಿ / ಸ್ನಾತಕೋತ್ತರ ಪದವಿಯನ್ನು ಹೊಂದಿರುವುದರ ಜೊತೆಗೆ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಬರಹ , ಸಾಹಿತ್ಯ,ಸಂಗೀತ ಮತ್ತಿತರ ವಿಷಯಗಳ ಬಗೆಗೆ ಜ್ಞಾನವನ್ನು ಹೊಂದಿರಬೇಕು. ಸಿನೆಮಾ / ಟಿವಿ ಗಳಲ್ಲಿ ಪ್ರೊಡ್ಯೂಸರ್ ಆಗಿ ಕೆಲಸ ನಿರ್ವಹಿಸಿದರೆ ವರ್ಷಕ್ಕೆ 10,00,000/-ರೂ ವೇತನವನ್ನು ಪಡೆಯಬಹುದು.

ಡೈರೆಕ್ಟರ್:

ಬಹುತೇಕ ಸಿನೆಮಾದ ಜವಾಬ್ದಾರಿಗಳನ್ನು ನಿಭಾಯಿಸುವವರು ಡೈರೆಕ್ಟರ್ ಅಂದರೆ ನಿರ್ದೇಶಕರು. ಒಂದು ಸಿನೆಮಾ ಅಥವಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರಬೇಕೆಂದರೆ ಅಲ್ಲಿ ನಿರ್ದೇಶಕರ ಪಾತ್ರ ಹೆಚ್ಚಿರುತ್ತದೆ. ಸಿನೆಮಾ ಚಿತ್ರೀಕರಣ ಪ್ರತಿಯೊಂದು ವಿಷಯಗಳಲ್ಲೂ ಅವರ ನಿರ್ಧಾರ ಮತ್ತು ಅವರ ಕ್ರಿಯಾಶೀಲತೆಯೇ ಪ್ರಮುಖ. ಚಿತ್ರೀಕರಣ ಹೇಗೆ ಎಲ್ಲಿ ನಡೆಯಬೇಕು ಮತ್ತು ನಟ ಮತ್ತು ನಟಿಯರ ವೇಷಭೂಷಣ ಹೇಗಿರಬೇಕು? ಯಾವ ರೀತಿಯಲ್ಲಿ ಸಿನೆಮಾವನ್ನು ಚಿತ್ರೀಕರಿಸಬೇಕು ಎಂಬ ಪ್ರತಿಯೊಂದು ನಿರ್ಧಾರವೂ ನಿರ್ದೇಶಕ /ನಿರ್ದೇಶಕಿಯದ್ದೇ ಆಗಿರುತ್ತದೆ.

ನಿರ್ದೇಶಕರಾಗ ಬಯಸುವವರು ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರುವುದಲ್ಲದೇ ಸಿನೆಮಾ, ಸಂವಹನ, ನಟನೆ, ಕಲೆ ಮತ್ತು ನಿರ್ವಹಣೆಯ ಬಗೆಗೆ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕಿರುತ್ತದೆ. ನಿರ್ದೇಶಕರಾಗಿ ಕೆಲಸ ಮಾಡುವವರಿಗೆ 8,00,000/- ರೂ ವೇತನವನ್ನು ಪಡೆಯಬಹುದು.

ಎಡಿಟರ್:

ಒಂದು ಸಿನೆಮಾ ಚಿತ್ರೀಕರಣಗೊಂಡ ನಂತರ ಪರದೆ ಮೇಲೆ ಮೂಡುವ ಪ್ರತಿ ದೃಷ್ಯಗಳಿಗೂ ಎಡಿಟರ್‌ನ ಪಾತ್ರ ಪ್ರಮುಖವಾಗಿರುತ್ತದೆ. ಚಿತ್ರೀಕರಣಗೊಂಡ ಪ್ರತಿ ದೃಶ್ಯಗಳನ್ನು ಎಡಿಟ್ ಮಾಡಿ ಎಫೆಕ್ಟ್ ನೀಡಿ ಸಂಗೀತದೊಂದಿಗೆ ಮಿಶ್ರಣ ಮಾಡಿ ಪರದೆ ಮೇಲೆ ನಿಗದಿತ ಸಮಯದೊಳಗೆ ಮೂಡುವಂತೆ ಮಾಡುವ ಕೈಚಳಕ ವೀಡಿಯೋ ಎಡಿಟರ್‌ಗಳದ್ದಾಗಿರುತ್ತದೆ.

ವೀಡಿಯೋ ಎಡಿಟರ್‌ ಅಗಲು ಅನಿಮೇಷನ್ ಅಥವಾ ಮಾಧ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕಿರುತ್ತದೆ. ಕಂಪ್ಯೂಟರ್ ಜ್ಞಾನ್ ವೀಡಿಯೋ ಎಡಿಟಿಂಗ್ ಬಗೆಗೆ ಒಂದಿಷ್ಟು ಕಲಿಕೆಯೂ ಅಗತ್ಯವಾಗಿರುತ್ತದೆ. ಎಡಿಟರ್ ಆಗಿ ಉದ್ಯೋಗ ಪಡೆದರೆ 6,00,000/- ರೂ ವೇತನವನ್ನು ಪಡೆಯಬಹುದು.

ಸ್ಕ್ರೀನ್‌ಪ್ಲೇ ರೈಟರ್:

ಒಂದು ಸಿನೆಮಾ ನಿಂತಿರುವುದು ಒಂದು ಕಥೆಯ ಮೇಲೆ ಆ ಕಥೆಗಳು ನಿರ್ಮಿತವಾಗುವುದು ಬರಹಗಾರರಿಂದ ಅವರನ್ನು ನಾವು ಸ್ಕ್ರೀನ್ ಪ್ಲೇ ರೈಟರ್ ಎಂದೇ ಕರೆಯಲಾಗುವುದು. ಸಿನೆಮಾ ಅಂದರೆ ಒಂದೊಳ್ಳೆ ಕಥೆ, ಉತ್ತಮ ಸಂಭಾಷಣೆ, ಕಿವಿಗೆ ಇಂಪಾದ ಸಂಗೀತ ಹಾಗೆ ಮನೋರಂಜನೆ ಜೊತೆಗೆ ಉತ್ತಮ ಸಂದೇಶ ನೀಡುವಂತದ್ದು. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವಂತದ್ದೇ ಸಿನೆಮಾ ಆಗಿ ರೂಪುಗೊಳ್ಳುವುದು. ಹಾಗಾಗಿ ಸ್ಕ್ರೀನ್ ಪ್ಲೇ ರೈಟರ್‌ಗಳಿಗೆ ಭಾರೀ ಉದ್ಯೋಗಾವಕಾಶಗಳಿರುತ್ತವೆ.

ಸ್ಕ್ರೀನ್ ಪ್ಲೇ ರೈಟರ್ ಆಗಲು ಇಂತದ್ದೇ ವಿದ್ಯಾರ್ಹತೆ ಎನ್ನುವುದಿಲ್ಲ ಆದರೆ ಸ್ಕ್ರೀನ್ ರೈಟಿಂಗ್‌ನಲ್ಲಿ ಕನಿಷ್ಟ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.ಜೊತೆಗೆ ಒಂದಷ್ಟು ಬರೆವಣಿಗೆ ಕೌಶಲ್ಯವನ್ನು ಹೊಂದಿರಬೇಕು. ಈ ಉದ್ಯೋಗಕ್ಕೆ ಸೇರಿದರೆ 7,00,000/-ರೂ ವೇತನವನ್ನು ಪಡೆಯಬಹುದು.

ನಟ / ನಟಿ:

ಒಂದು ಸಿನೆಮಾ ನಿಂತಿರುವುದೇ ನಟಿ / ನಟನ ಅಭಿನಯದ ಮೇಲೆ ಹಾಗಾಗಿ ಉತ್ತಮ ನಟನೆಯ ಕೌಶಲ್ಯವನ್ನು ಹೋಂದಿರುವವರು ಈ ಕ್ಷೇತ್ರಕ್ಕೆ ಎಂಟ್ರಿ ಆಗಬಹುದು. ನಿರ್ದೇಶಕರ ಮಾರ್ಗದರ್ಶನದಂತೆ ನಟಿಸುವ ಕೌಶಲ್ಯವನ್ನು ಹೊಂದಿರುವವರು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದು. ನಟ / ನಟಿನಿಗೆ ನೀಡಲಾಗುವ ಸಂಭಾವನೆ ವಿಭಿನ್ನವಾಗಿರುತ್ತದೆ.ಏಕೆಂದರೆ ಮಾರುಕಟ್ಟೆಯಲ್ಲಿ ಅವರಿಗಿರುವ ಬೇಡಿಕೆಗಳ ಮೇಲೆ ಸಂಭಾವನೆ ಆಧಾರಿತವಾಗಿರುತ್ತದೆ.

ಅನಿಮೇಟರ್:

ಅನಿಮೇಟರ್ ಒಬ್ಬ ಮಾಂತ್ರಿಕ ಅಂತಾನೆ ಹೇಳಬಹುದು. ಒಂದು ಸಿನೆಮಾ ಪರದೆಯ ಮೇಲೆ ಚೆನ್ನಾಗಿ ಮೂಡುವಂತೆ ಮಾಡಲು ಅನಿಮೇಟರ್ ಪಾತ್ರವೂ ಮಹತ್ವದ್ದಾಗಿರುತ್ತದೆ. ಸಿನೆಮಾದಲ್ಲಿ ಅಗತ್ಯವಿರುವ ಕೆಲವು ಎಫೆಕ್ಟ್ಸ್‌ಗಳು ಮತ್ತು ಕಲವು ಕ್ರಿಯೇಟಿವಿಟಿ ವರ್ಕ್‌ಗಳನ್ನು ಅನಿಮೇಟರ್ ಮಾಡುತ್ತಾರೆ.

ಈಗೆಲ್ಲಾ ೨ಡಿ ಮತ್ತು ೩ಡಿ ಮೇಕಿಂಗ್ ಟ್ರೆಂಡ್ ಆಗಿದೆ ಹಾಗಾಗಿ ಅನಿಮೇಟರ್ ಆಗುವವರಿಗೆ ನಿರ್ಧಿಷ್ಟ ವಿದ್ಯಾರ್ಹತೆ ಅಂತ ಇರುವುದಿಲ್ಲ ಆದರೆ ಅನಿಮೇಷನ್ ಬಗೆಗೆ ಜ್ಞಾನವಿರಬೇಕು. ಈ ಉದ್ಯೋಗಕ್ಕೆ ಸೇರಿದರೆ 4,50,000/-ರೂ ವೇತನವನ್ನು ಪಡೆಬಹುದು.

ಸಿನಿಮಾಟೋಗ್ರಾಫರ್:

ಒಂದು ಸಿನೆಮಾ ಹೇಗೆ ಚಿತ್ರಿಸಬೇಕು ಎನ್ನುವ ನಿರ್ಧಾರ ನಿರ್ದೇಶಕರದ್ದು ಆದರೆ ಹೇಗೆಲ್ಲಾ ಕ್ರಿಯಾಶೀಲರಾಗಿ ಚಿತ್ರಿಸಬಹುದು ಎಂದು ಕೈಚಳಕ ತೋರುವುದೇ ಸಿನಿಮಾಟೋಗ್ರಾಫರ್‌ನ ಕೆಲಸವಾಗಿರುತ್ತದೆ. ಒಂದು ಸಿನೆಮಾ ವಿಭನ್ನ ರೀತಿಯಲ್ಲಿ ಪರದೆ ಮೇಲೆ ಮೂಡಲು ಸಿನೆಮಾಟೋಗ್ರಾಫರ್ ಕಾರಣರಾಗುತ್ತಾರೆ.

ಸಿನೆಮಾಟೋಗ್ರಾಫರ್ ಆಗಲು ಡಿಜಿಟಲ್ ಕ್ಯಾಮೇರಾ ದಲ್ಲಿ ಪದವಿ ಜೊತೆಗೆ ಕಂಪ್ಯೂಟರ್ ಜ್ಙಾನವನ್ನು ಹೊಂದಿರಬೇಕು. ಈ ಹುದ್ದೆಗಳಿಗೆ ಸೇರಿ ಉತ್ತಮ ಅನುಭವ ಹೊಂದಿದ್ದಲ್ಲಿ ಅವರ ವೇತನವೂ ಹೆಚ್ಚುತ್ತದೆ.

ಕ್ಯಾಮೆರಾಮೆನ್:

ಸಿನೆಮಾ ಚಿತ್ರೀಕರಣದಲ್ಲಿ ಕ್ಯಾಮೆರಾಮೆನ್ ಪ್ರಮುಖ ಪಾತ್ರವಹಿಸುತ್ತಾನೆ. ದೃಶ್ಯವನ್ನು ಯಾವುದೇ ದೋಷವಿಲ್ಲದೆ ಸಂಪೂರ್ಣವಾಗಿ ಚಿತ್ರಿಸುವುದು ಅವನ ಕರ್ತವ್ಯ. ಬಿತ್ರೀಕರಣಕ್ಕೆ ಬೇಕಾದ ಬೆಳಕು ಗಾಳಿ ಇದೆಯೇ ಇಲ್ಲವಾದಲ್ಲಿ ಚಿತ್ರೀಕರಣ ನಡೆಸುವುದು ಒಳಿತೇ ? ಅಥವಾ ಇಲ್ಲವೇ ಎನ್ನುವ ಸಂಪೂರ್ಣ ಜವಾಬ್ದಾರಿ ಆತನದ್ದಾಗಿರುತ್ತದೆ. ಹಾಗಾಗಿ ಕ್ಯಾಮೆರಾಮೆನ್ ಹೆಚ್ಚು ಕಾಳಜಿಯುತನಾಗಿ ಕೆಲಸ ನಿರ್ವಹಿಸಬೇಕಿರುತ್ತದೆ.

ಕ್ಯಾಮೆರಾಮೆನ್ ಆಗ ಬಯಸುವವರು ಬ್ರಾಡ್‌ಕಾಸ್ಟಿಂಗ್,ಸಿನೆಮಾ, ಪತ್ರಿಕೋದ್ಯಮ,ಫೋಟೋಗ್ರಫಿ /ಫೋಟೋಜರ್ನಲಿಸಂ ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಜೊತೆಗೆ ಕ್ಯಾಮೆರಾ ಬಗೆಗೆ ಹೆಚ್ಚು ಜ್ಞಾನವನ್ನು ಹೊಂದಿರಬೇಕು.

ಲೈಟಿಂಗ್ ಟೆಕ್ನೀಶಿಯನ್ / ಆಪರೇಟರ್:

ಸಿನೆಮಾ ಚಿತ್ರೀಕರಣದಲ್ಲಿ ಪ್ರಮುಖವಾದ ಅಂಶ ಅಂದರೆ ಬೆಳಕು, ಸಿನೆಮಾ ಸರಿಯಾಗಿ ಮೂಡಿಬರದಿರಲು ಕೆಲವೊಮ್ಮೆ ಬೆಳಕು ಕೂಡ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ಲೈಟಿಂಗ್ ಟೆಕ್ನೀಶಿಯನ್‌ / ಆಪರೇಟರ್‌ಗಳಿಗೂ ಉದ್ಯೋಗಾವಕಾಶಗಳು ಹೆಚ್ಚಿವೆ.

ಸಿನೆಮಾ ಕ್ಷೇತ್ರದಲ್ಲಿ ಲೈಟಿಂಗ್ ಟೆಕ್ನೀಶಿಯನ್ / ಆಪರೇಟರ್ ಆಗಿ ಉದ್ಯೋಗಕ್ಕೆ ಸೇರಿದರೆ 3,50,000/-ರೂ ವೇತನವನ್ನು ಪಡೆಯಬಹುದು.

ಸೌಂಡ್ ಟೆಕ್ನೀಶಿಯನ್:

ಸಿನೆಮಾ ಸುಂದರವಾಗಿ ತೆರೆ ಮೇಲೆ ಮೂಡಿ ಬರಲು ಕಾರಣ ಅದಕ್ಕೆ ನೀಡಲಾಗಿರುವ ಶಬ್ಧ. ಅಂದರೆ ದೃಶ್ಯಕ್ಕೆ ಅನುಸಾರ ಜೋಡಣೆಯಾಗುವ ಶಬ್ಧದಿಂದಲೇ ಸಿನೆಮಾ ಮೇಲೆ ಅರ್ಥಗರ್ಭಿತವಾಗಿ ಮೂಡಿಬರಲು ಸಾಧ್ಯವಾಗುವುದು.

ಸೌಂಡ್ ಟೆಕ್ನೀಶಿಯನ್ ಆಗಲು ಸೌಂಡ್ ಇಂಜಿನಿಯರಿಂಗ್‌ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಉದ್ಯೋಗಕ್ಕೆ ಸೇರಿದ ಅಭ್ಯರ್ಥಿಗಳು ವರ್ಷಕ್ಕೆ 3,50,000/-ರೂ ವೇತನವನ್ನು ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
If you want to get into the film industry, there are dozens of jobs you may be want to consider. Here are the list
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X