ಪಿಯುಸಿ ಕಲಾ ವಿಭಾಗದಲ್ಲಿ ಓದಿದ್ದರೆ ಮುಂದೆ ಯಾವೆಲ್ಲಾ ಕೋರ್ಸ್‌ಗಳಿವೆ? ಇಲ್ಲಿದೆ ಮಾಹಿತಿ

ಅನೇಕ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ನಂತರ ಏನು ಮಾಡಬೇಕು ಎನ್ನುವ ಗೊಂದಲ. ಇನ್ನೂ ಕೆಲವರು ಪಿಯುಸಿ ಕಲಾ ವಿಭಾಗದಲ್ಲಿ ಓದಿದೆ ಆದರೆ ಬೇರೆ ವಿಷಯಗಳನ್ನು ಅಧ್ಯಯನ ಮಾಡುವ ಆಸೆ ಆದರೆ ಯಾವ ಕೋರ್ಸ್‌ಗಳಿವೆ ಎನ್ನುವ ಪ್ರಶ್ನೆಗಳೊಂದಿಗೆ ಇರುತ್ತೀರಿ.

ಪಿಯುಸಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳಿವು

ಪಿಯುಸಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಯಾವೆಲ್ಲಾ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಕೈಗೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ. ವಿದ್ಯಾರ್ಥಿಗಳು ಇಲ್ಲಿ ನೀಡಲಾಗಿರುವ ಕೋರ್ಸ್‌ಗಳ ಪಟ್ಟಿಯನ್ನು ನೋಡಿಕೊಂಡು ನಿಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ದ್ವಿತೀಯ ಪಿಯುಸಿ ಕಲಾ ವಿಭಾಗಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ:

1. ಬಿ.ಎ.- ಬ್ಯಾಚುಲರ್ ಆಫ್ ಆರ್ಟ್ಸ್- 3 ವರ್ಷ ಅವಧಿಯ ಕೋರ್ಸ್
2. ಬಿ.ಎಂ.ಎಸ್- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ - 3 ವರ್ಷ ಅವಧಿಯ ಕೋರ್ಸ್
3. ಬಿ.ಎಫ್.ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ - 3 ವರ್ಷ ಅವಧಿಯ ಕೋರ್ಸ್
4. ಬಿ.ಜೆ.ಎಂ- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ- 2ರಿಂದ 3 ವರ್ಷ ಅವಧಿಯ ಕೋರ್ಸ್
5. ಬಿ.ಹೆಚ್‌.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ - 3 ವರ್ಷ ಅವಧಿಯ ಕೋರ್ಸ್
6. ಬಿ.ಬಿ.ಎ- ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ - 3 ವರ್ಷ ಅವಧಿಯ ಕೋರ್ಸ್
7. ಬಿ.ಇ.ಎಂ- ಬ್ಯಾಚುಲರ್ ಆಫ್ ಈವೆಂಟ್ ಮ್ಯಾನೇಜ್ಮೆಂಟ್- 3 ರಿಂದ 4 ವರ್ಷ ಅವಧಿಯ ಕೋರ್ಸ್
8. ಬಿ.ಎಫ್‌.ಡಿ- ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್ -4 ವರ್ಷ ಅವಧಿಯ ಕೋರ್ಸ್
9. ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ - 4 ವರ್ಷ ಅವಧಿಯ ಕೋರ್ಸ್
10. ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್ - 1 ವರ್ಷ ಅವಧಿಯ ಕೋರ್ಸ್
11. ಡಿಪ್ಲೋಮ ಇನ್ ಎಲಿಮೆಂಟರಿ ಎಜುಕೇಷನ್ -3 ವರ್ಷ ಅವಧಿಯ ಕೋರ್ಸ್
12. ಬಿ.ಎಸ್‌.ಡಬ್ಲ್ಯೂ- ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ - 3 ವರ್ಷ ಅವಧಿಯ ಕೋರ್ಸ್
13. ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಕೋರ್ಸ್
14. ಬಿ.ಆರ್‌ಎಂ- ಬ್ಯಾಚುಲರ್ ಆಪ್ ರೀಟೇಲ್ ಮ್ಯಾನೇಜ್ಮೆಂಟ್ - 3 ವರ್ಷ ಅವಧಿಯ ಕೋರ್ಸ್
15. ಏವಿಯೇಷನ್ ಕೋರ್ಸ್ - 1 ರಿಂದ 3 ವರ್ಷ ಅವಧಿಯ ಕೋರ್ಸ್
16. ಬಿ.ಬಿ.ಎಸ್‌ - ಬ್ಯಾಚುಲರ್ ಆಫ್ ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
17. ಇಂಟಿಗ್ರೇಟೆಡ್ ಲಾ ಕೋರ್ಸ್- ಬಿಎ+ಎಲ್‌ಎಲ್‌ಬಿ - 5 ವರ್ಷ ಅವಧಿಯ ಕೋರ್ಸ್
18. ಬಿ.ಟಿ.ಟಿ.ಎಂ - ಬ್ಯಾಚುಲರ್ ಆಪ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್ - 3 ರಿಂದ 4 ವರ್ಷ ಅವಧಿಯ ಕೋರ್ಸ್
19. ಗ್ರಾಫಿಕ್ ಡಿಸೈನ್
20. ಟೀಚರ್ ಟ್ರೈನಿಂಗ್ ಕೋರ್ಸ್‌

ಪಿಯುಸಿ ಕಲಾ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್‌ಗಳ ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳು ಯಾವುದೇ ಗೋಜಿಗೆ ಒಳಗಾಗದೆ ಯಾವ ವಿಷಯವನ್ನು ನೀವು ಇಷ್ಟ ಪಟ್ಟು ಆಯ್ಕೆ ಮಾಡಿಕೊಳ್ಳುತ್ತೀರೋ ಆ ವಿಷಯವನ್ನು ಅತಿ ಹೆಚ್ಚು ಆಸಕ್ತಿಯಿಂದ ಓದಿದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಇನ್ನೂ ವಿದ್ಯಾರ್ಥಿಗಳು ಈ ಕೋರ್ಸ್‌ಗಳ ಬಗೆಗೆ ಮತ್ತು ಯಾವ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ ಮತ್ತು ತಗುಲುವ ಶುಲ್ಕವೆಷ್ಟು ಎಂಬ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಬಹುದು. ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಡ ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನಂತರ ಈ ಕೋರ್ಸ್‌ಗಳನ್ನು ಮಾಡಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Here we are giving details about list of courses for students completed second puc with Arts combination.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+