ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿರುವ ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಹಲವು ಕೋರ್ಸುಗಳ ಮಾಹಿತಿ

ದ್ವಿತೀಯ ಪಿಯುಸಿ ಪರೀಕ್ಷೆಯ ಬಹುತೇಕ ಎಲ್ಲಾ ಪತ್ರಿಕೆಗಳು ಮುಗಿದಿದ್ದು, ಕೊರೋನಾ ಭೀತಿಯಿಂದಾಗಿ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ಪರೀಕ್ಷೆಯು ಮೇ 3ರ ಬಳಿಕ ನಡೆಯಲಿದೆ. ತದನಂತರ ದ್ವಿತೀಯ ಪಿಯುಸಿ ವಾಣಿಜ್ಯ ವಿಷಯದಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಮುಂದೇನು ಎನ್ನುವ ಗೊಂದಲದಲ್ಲಿರುವುದು ಸಹಜ.

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತೀರಿ. ಫಲಿತಾಂಶ ಬಂದ ಮೇಲೆ ಭವಿಷ್ಯವನ್ನು ನಿರ್ಧರಿಸುವ ಕೋರ್ಸುಗಳ ಆಯ್ಕೆ ನಿಮ್ಮ ಕೈಲಿರುತ್ತದೆ. ಹಾಗಾಗಿ ಪಿಯುಸಿಯಲ್ಲಿ ವಾಣಿಜ್ಯ ಆಯ್ಕೆ ಮಾಡಿಕೊಂಡು ಓದಿದಂತಹ ವಿದ್ಯಾರ್ಥಿಗಳು ಮುಂದೆ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಪಿಯುಸಿ ವಾಣಿಜ್ಯ ಓದಿದ ಮೇಲೆ ಯಾವೆಲ್ಲಾ ಕೋರ್ಸುಗಳು ಮಾಡಬಹುದು? ಇಲ್ಲಿದೆ ಹಲವು ಕೋರ್ಸುಗಳು

ವಿದ್ಯಾರ್ಥಿಗಳು ವಾಣಿಜ್ಯ ವಿಷಯದಲ್ಲಿ ಅಂದರೆ ವ್ಯವಹಾರ , ತೆರಿಗೆ ಮತ್ತು ಹಣಕಾಸು ಹೀಗೆ ಹಲವು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿಯನ್ನು ಹೊಂದಿರುತ್ತೀರಿ. ಆದರೆ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಇಲ್ಲಿರುವ ಕೋರ್ಸ್‌ಗಳನ್ನು ಮಾಡಬಹುದು.

ಪಿಯುಸಿಯಲ್ಲಿ ವಾಣಿಜ್ಯ ವಿಷಯದಲ್ಲಿ ಓದಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ:

1. ಬಿ.ಕಾಂ. - ಬ್ಯಾಚುಲರ್ ಆಫ್ ಕಾಮರ್ಸ್ -3 ವರ್ಷ ಅವಧಿಯ ಕೋರ್ಸ್
2. ಲಾ (ಕಾನೂನು)- 5 ವರ್ಷ ಅವಧಿಯ ಕೋರ್ಸ್
3. ಸಿ.ಎ. (ಚಾರ್ಟೆಡ್ ಅಕೌಂಟೆನ್ಸಿ)
4. ಬಿ.ಬಿ.ಎ.- ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ -3 ವರ್ಷ ಅವಧಿಯ ಕೋರ್ಸ್
5. ಬಿ.ಇ- ಬ್ಯಾಚುಲರ್ ಆಫ್ ಎಕನಾಮಿಕ್ಸ್ -3 ವರ್ಷ ಅವಧಿಯ ಕೋರ್ಸ್
6. ಸಿ.ಎಸ್‌. (ಕಂಪೆನಿ ಸೆಕ್ರೆಟರ್) ಕೋರ್ಸ್‌
7. ಹಾಸ್ಪಿಟಾಲಿಟಿ ಡಿಪ್ಲೋಮ ಕೋರ್ಸ್‌ಗಳು

8. ಅನಿಮೇಶನ್ ಮತ್ತು ಮಲ್ಟಿಮೀಡಿಯಾ ಕೋರ್ಸ್‌ಗಳು- 6 ತಿಂಗಳಿನಿಂದ 3 ವರ್ಷ ಅವಧಿಯ ಕೋರ್ಸ್‌ಗಳಿವೆ
9. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ - 1 ರಿಂದ 3 ವರ್ಷ ಅವಧಿಯ ಕೋರ್ಸ್
10. ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳು- 1 ರಿಂದ 3 ವರ್ಷ ಅವಧಿಯ ಕೋರ್ಸ್
11. ಫ್ಯಾಷನ್ ಡಿಸೈನ್ ಮತ್ತು ಟೆಕ್ನಾಲಜಿ - 1 ರಿಂದ 4 ವರ್ಷ ಅವಧಿಯ ಕೋರ್ಸ್‌ಗಳಿವೆ
12. ಹೋಟೆಲ್ ಮ್ಯಾನೇಜ್ಮೆಂಟ್ - 4 ವರ್ಷ ಅವಧಿಯ ಕೋರ್ಸ್
13. ಬ್ಯಾಚುಲರ್ ಆಫ್ ಸ್ಟ್ಯಾಟಿಸ್ಟಿಕ್ಸ್
14. ಆಕ್ಟುರಿಯಲ್ ಸೈನ್ಸ್
15. ಸಿ.ಎಂ.ಎ.
16. ಬಿ.ಎಂ.ಎಸ್‌- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ - 3 ವರ್ಷ ಅವಧಿಯ ಕೋರ್ಸ್
17. ಬಿ.ಬಿ.ಎಸ್‌- ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
18. ಬಿ.ಹೆಚ್‌.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್- 4 ವರ್ಷ ಅವಧಿಯ ಕೋರ್ಸ್
19. ಬಿ.ಎಫ್.ಎ- ಬ್ಯಾಚುಲರ್ ಆಫ್ ಫಿನಾನ್ಸ್ ಮತ್ತು ಅಕೌಂಟಿಂಗ್- 3 ವರ್ಷ ಅವಧಿಯ ಕೋರ್ಸ್
20. ಬಿ.ಸಿಎ. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ - 3 ವರ್ಷ ಅವಧಿಯ ಕೋರ್ಸ್
21. ಬಿ.ಎಸ್‌.ಡಬ್ಲ್ಯೂ- ಬ್ಯಾಚುಲರ್ ಆಪ್ ಸೋಷಿಯಲ್ ವರ್ಕ್-3 ವರ್ಷ ಅವಧಿಯ ಕೋರ್ಸ್

ಈ ಎಲ್ಲಾ ಕೋರ್ಸ್‌ಗಳನ್ನು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾಡಬಹುದು. ಈ ಕೋರ್ಸ್‌ಗಳ ಬಗೆಗೆ ಮತ್ತು ವಿದ್ಯಾಭ್ಯಾಸಕ್ಕಾಗಿ ತಗಲುವ ವೆಚ್ಚ ಜೊತೆಗೆ ಯಾವ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿದೆ ಎನ್ನುವ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಬಹುದು.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ನಿಮ್ಮ ಅಭಿರುಚಿಗೆ ಮತ್ತು ಆಸಕ್ತಿಗೆ ತಕ್ಕ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುವುದು ಒಳಿತು. ಇನ್ನೂ ಪೂರಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದೊಂದಿಗೆ ತಯಾರಿ ನಡೆಸಿ ಪರೀಕ್ಷೆಯನ್ನು ಎದುರಿಸಿದಲ್ಲಿ ಉತ್ತಮ ಫಲಿತಾಂಶ ಲಭಿಸುವುದು ಜೊತೆಗೆ ನಿಮ್ಮ ಕನಸಿನ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂಬುದು ನಮ್ಮ ಹಾರೈಕೆ.

More News  

For Quick Alerts
ALLOW NOTIFICATIONS  
For Daily Alerts

English summary
Here we are giving details about list of courses for students completed second puc with commerce combination.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+