ಇಂಜಿನಿಯರಿಂಗ್ ನಲ್ಲಿ ಯಾವೆಲ್ಲಾ ಬ್ರಾಂಚ್‌ಗಳಲ್ಲಿ ನೀವು ಅಧ್ಯಯನ ಮಾಡಬಹುದು ಗೊತ್ತಾ?

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್‌ ಆದ ವಿದ್ಯಾರ್ಥಿಗಳು ಯಾವೆಲ್ಲಾ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡಬಹುದು ಮತ್ತು ಯಾವೆಲ್ಲಾ ವಿಷಯಗಳನ್ನು ಇಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡುವ ಅವಕಾಶ ಇದೆ ಎನ್ನುವುದನ್ನ ನಾವಿಲ್ಲಿ ತಿಳಿಸಲಿದ್ದೇವೆ. ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರ್ ಆಗಬೇಕೆಂಬ ಕನಸು ಹೊತ್ತಿರುತ್ತಾರೆ. ಹಾಗೆನೇ ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಕಲಿಕೆ ಒಂದು ಟ್ರೆಂಡ್ ಆಗಿದೆ. ಇಂಜಿನಿಯರಿಂಗ್ ಮಾಡಿದರೆ ವಿಫುಲ ಉದ್ಯೋಗಾವಕಾಶಗಳು ಕೂಡ ದೇಶ ವಿದೇಶದೆಲ್ಲೆಡೆ ಲಭ್ಯವಿದೆ ಎನ್ನುವುದು ಹಲವರ ಭರವಸೆ ಹಾಗೂ ಅದು ನಿಜ ಕೂಡ. ಇನ್ನೂ ಇಂಜಿನಿಯರಿಂಗ್ ಕಲಿಕೆಯಲ್ಲಿ ಯಾವೆಲ್ಲಾ ಹಂತಗಳಿಗೆ ಇಲ್ಲಿ ನೋಡಿ.

ಇಂಜಿನಿಯರಿಂಗ್‌ನಲ್ಲಿ ಓದಬಹುಹಾದ ಬ್ರಾಂಚ್‌ಗಳ ಪಟ್ಟಿ

 

* ಡಿಪ್ಲೋಮ ಇನ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ( ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಅಥವಾ ಬ್ಯಾಚುಲರ್ ಆಫ್ ಟೆಕ್ನಾಲಜಿ

* ಎಂ.ಇ ಅಥವಾ ಎಂ.ಟೆಕ್ ( ಮಾಸ್ಟರ್ ಆಫ್ ಇಂಜಿನಿಯರಿಂಗ್ ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ)

* ಪಿ.ಹೆಚ್‌ಡಿ

ಮೇಲೆ ತಿಳಿಸಿರುವಂತೆ ಇಂಜಿನಿಯರಿಂಗ್ ಕಲಿಕೆಯಲ್ಲಿ ನಾಲ್ಕುಹಂತಗಳಿರುತ್ತವೆ. ವಿದ್ಯಾರ್ಥಿಗಳು ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿಕೊಂಡು ಕೋರ್ಸ್‌ ಅನ್ನು ತೆಗೆದುಕೊಳ್ಳುವುದು ಒಳಿತು. ಇನ್ನೂ ಇಂಜಿನಿಯರಿಂಗ್ ಕಲಿಕೆಯ ಹಂತಗಳಲ್ಲಿ ಯಾವೆಲ್ಲಾ ಬ್ರಾಂಚ್‌ಗಳಲ್ಲಿ ಅಧ್ಯಯನವನ್ನು ಮಾಡಬಹುದು ಎನ್ನುವುದನ್ನ ನೋಡೋಣ.

ಡಿಪ್ಲೋಮ ಇನ್ ಇಂಜಿನಿಯರಿಂಗ್:

ಡಿಪ್ಲೋಮ ಕೋರ್ಸ್‌ಗಳು ಇಂಜಿನಿಯರಿಂಗ್ ನಲ್ಲಿ 3 ವರ್ಷದ ಕಲಿಕೆಯ ಅವಧಿಯನ್ನು ಹೊಂದಿರುತ್ತವೆ. ಇಲ್ಲಿ ಹಲವಾರು ವಿಷಯಗಳ ಆಯ್ಕೆಗಳಿರುತ್ತವೆ.10 ನೇ ತರಗತಿ ಉತ್ತೀರ್ಣ ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕೂಡ ಈ ಕೋರ್ಸ್‌ ಅನ್ನು ತೆಗೆದುಕೊಳ್ಳಬಹುದು.ರಾಜ್ಯದೆಲ್ಲೆಡೆ ಹಲವಾರು ಸರ್ಕಾರಿ ಮತ್ತು ಖಾಸಗಿ ಡಿಪ್ಲೋಮ ಕಾಲೇಜುಗಳಿದ್ದು ಉತ್ತಮ ಶಿಕ್ಷಣವನ್ನು ನೀಡುತ್ತಿವೆ. .ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ ಮಾಡಿದ ವಿದ್ಯಾರ್ಥಿಗಳು ಬಿ.ಇ ಅಥವಾ ಬಿ.ಟೆಕ್ ಕೋರ್ಸ್‌ಗೆ ಲ್ಯಾಟರಲ್ ಎಂಟ್ರಿ ಮೂಲಕ ದ್ವಿತೀಯ ವರ್ಷದ ಇಂಜಿನಿಯರಿಂಗ್ ಪದವಿ ಕೋರ್ಸ್‌ಗೆ ಸೇರಬಹುದು.

ಬಿ.ಇ ಅಥವಾ ಬಿ.ಟೆಕ್ ಕೋರ್ಸ್‌:

4 ವರ್ಷದ ಇಂಜಿನಿಯರಿಂಗ್ ಕೋರ್ಸ್‌ ಇದಾಗಿದ್ದು ಇಲ್ಲಿ ಹಲವಾರು ವಿಷಯಗಳಲ್ಲಿ ತಮ್ಮ ಇಷ್ಟದ ವಿಷಯ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಓದಬಹುದು. ಈ ಕೋರ್ಸ್‌ ಅನ್ನು 10+2ಮಾದರಿಯಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಭಾರತದೆಲ್ಲೆಡೆ ಹಲವಾರು ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಒದಗಿಸುತ್ತಿವೆ.

 

ಎಂ.ಇ ಮತ್ತು ಎಂ.ಟೆಕ್ ಕೋರ್ಸ್‌:

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಎಂ.ಇ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿ ಕೋರ್ಸ್‌ಗಳಾಗಿವೆ. 2 ವರ್ಷದ ಕಲಿಕೆಯ ಕೋರ್ಸ್‌ ಇದಾಗಿದ್ದು ವಿದ್ಯಾರ್ಥಿಗಳು ಕನಿಷ್ಟ ಬಿ.ಇ ಅಥವಾ ಬಿ.ಟೆಕ್ ವಿದ್ಯಾರ್ಹತೆಯನ್ನು ಹೊಂದಿದ್ದಲ್ಲಿ ಮಾತ್ರ ಈ ಕಲಿಕೆಯನ್ನು ಮಾಡಬಹುದು.

ಪಿ.ಹೆಚ್‌ಡಿ ಪದವಿ:

ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ವಿದ್ಯಾರ್ಥಿಗಳು ಪಿ.ಹೆಚ್‌ಡಿ ಡಾಕ್ಟರಲ್ ಕೋರ್ಸ್‌ ಅನ್ನು ಮಾಡಬಹುದು. ಇದಿಷ್ಟೂ ಕೋರ್ಸ್‌ಗಳನ್ನು ಹಂತ ಹಂತವಾಗಿ ಅಧ್ಯಯನ ಮಾಡಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಯಾರೆಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಇಂಜಿನಿಯರಿಂಗ್ ಕಲಿಕೆಗೆ ಎಂಟ್ರಿ ಆಗೋಕೆ ಕಾಯ್ತಾ ಇದ್ದೀರಿ ಅಂತಹ ವಿದ್ಯಾರ್ಥಿಗಳಿಗೆ ನಾವಿಲ್ಲಿ ಇಂಜಿನಿಯರಿಂಗ್ ಕಲಿಕೆಯಲ್ಲಿ ಯಾವೆಲ್ಲಾ ಬ್ರಾಂಚ್‌ಗಳಿಗೆ ಎನ್ನುವುದರ ಪಟ್ಟಿಯನ್ನು ನೀಡಲಿದ್ದೇವೆ.

ಪಿಯುಸಿ ನಂತರ ಬಿ.ಇ /ಬಿ.ಟೆಕ್ ಪದವಿಯಲ್ಲಿ ಅಧ್ಯಯನ ಮಾಡಬಹುದಾದ ಬ್ರಾಂಚ್‌ಗಳ ಪಟ್ಟಿ

* ಬಿ.ಇ ಅಥವಾ ಬಿ.ಟೆಕ್ ಮೆಕ್ಯಾನಿಕಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಕೆಮಿಕಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಐಟಿ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಐಸಿ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಇಸಿ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಪೆಟ್ರೋಲಿಯಂ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಎರೋನಾಟಿಕಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಏರೋಸ್ಪೇಸ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಆಟೋಮೊಬೈಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಮೈನಿಂಗ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಬಯೋಟೆಕ್ನಾಲಜಿ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಜೆನೆಟಿಕ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಫುಡ್ ಪ್ರೊಸೆಸಿಂಗ್ ಮತ್ತು ಟೆಕ್ನಾಲಜಿ

* ಬಿ.ಇ ಅಥವಾ ಬಿ.ಟೆಕ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಡೈರಿ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಅಗ್ರಿಕಲ್ಚರಲ್ ಇನ್ಫರ್ಮೇಶನ್ ಟೆಕ್ನಾಲಜಿ

* ಬಿ.ಇ ಅಥವಾ ಬಿ.ಟೆಕ್ ಪವರ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಪ್ರೊಡಕ್ಷನ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಮೋಟಾರ್‌ಸ್ಪೋರ್ಟ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಮೆಟಲರ್ಜಿ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಟೆಕ್ಸ್‌ಟೈಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ಮರೈನ್ ಇಂಜಿನಿಯರಿಂಗ್

* ಬಿ.ಇ ಅಥವಾ ಬಿ.ಟೆಕ್ ನಾವಲ್ ಆರ್ಕಿಟೆಕ್ಚರ್

5 ವರ್ಷದ ಇಂಟಿಗ್ರೇಟೆಡ್ ಕೋರ್ಸ್‌ಗಳು :

* ಬಿ.ಇ /ಬಿ.ಟೆಕ್ + ಎಂ.ಇ / ಎಂ.ಟೆಕ್

* ಬಿ.ಇ / ಬಿ.ಟೆಕ್ +ಎಂಬಿಎ

ಇಂಜಿನಿಯರಿಂಗ್ ಪದವಿಯಲ್ಲಿ ಲಭ್ಯವಿರುವ ವಿವಿಧ ಬ್ರಾಂಚ್‌ಗಳಂತೆಯೇ ಡಿಪ್ಲೋಮದಲ್ಲಿ ಲಭ್ಯವಿರುವ ಕೋರ್ಸ್‌ಗಳ ಪಟ್ಟಿ

* ಡಿಪ್ಲೋಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಕೆಮಿಕಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಮೈನಿಂಗ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಮರೈನ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಇಸಿ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಐಸಿ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಮೆಟಲರ್ಜಿ

* ಡಿಪ್ಲೋಮ ಇನ್ ಸೌಂಡ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಟೆಕ್ಸ್‌ಟೈಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಆಟೋಮೊಬೈಲ್ ಇಂಜಿನಿಯರಿಂಗ್

* ಡಿಪ್ಲೋಮ ಇನ್ ಡೈರಿ ಟೆಕ್ನಾಲಜಿ

* ಡಿಪ್ಲೋಮ ಇನ್ ಪವರ್ ಇಂಜಿನಿಯರಿಂಗ್

For Quick Alerts
ALLOW NOTIFICATIONS  
For Daily Alerts

English summary
Here we are giving list of engineering courses for second puc passed students who are interested to enter in to engineering.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X