ಇದೀಗ ಬರೀ ಡಾಕ್ಟರ್ ಇಲ್ಲ ಇಂಜಿನಿಯರ್ ಆಗಬೇಕು ಎಂದು ಹೇಳುತ್ತಿದ್ದ ಜನರು ಬದಲಾಗಿದ್ದಾರೆ. ಒಳ್ಳೆ ಸಂಬಳ ಸಿಕ್ಕುತ್ತದೆ ಎಂದಾದ್ರೆ ಯಾವ ಜಾಬ್ ಆದ್ರೂ ಬೆಸ್ಟ್ ಅಂತಾರೆ ನಮ್ಮ ಜನರು.
ಮೆಡಿಕಲ್ ಇಂಜಿನಿಯರ್ ಅಂತೆಯೇ ಐಆವ ಕ್ಷೇತ್ರದಲ್ಲಿ ಒಳ್ಳೆಯ ಸ್ಯಾಲರಿ ಜತೆ ಘನತೆ ಗೌರವ ಕೂಡಾ ಸಂಪಾದಿಸಬಹುದು ಎಂಬ ಮಾಹಿತಿ ಇಲ್ಲಿದೆ. ಆಫ್‌ಬೀಟ್ ಕೋರ್ಸ್ ಗಳ ಲಿಸ್ಟ್ ಇಲ್ಲಿದೆ.

ಯೂಟ್ಯೂಬರ್:
ಸೋಶಲ್ ಮೀಡಿಯಾ ಸಿಂಪಲ್ ಆಗಿ ಅದೆಷ್ಟೋ ಉದ್ಯೋಗವಕಾಶ ನಿಮಗೆ ನೀಡುತ್ತದೆ. ಇಲ್ಲಿ ನೀವಾಗಿ ಉದ್ಯೋಗಕ್ಕಾಗಿ ಬಾಗಿಲು ಬಡಿಯುವ ಅವಶ್ಯಕತೆ ಇಲ್ಲ, ಬದಲಿಗೆ ನಿಮ್ಮ ಟ್ಯಾಲೆಂಟ್ ನೋಡಿ ಉದ್ಯೋಗವಕಾಶವೇ ನಿಮ್ಮನ್ನ ಹುಡುಕಿಕೊಂಡು ಬರುವುದು. ನಿಮಗೆ ಏನಾದ್ರೂ ವಿಶೇಷವಾದ ವಿಚಾರವನ್ನ ಬಣ್ಣಿಸುವ ಕಲೆಗೊತ್ತಿದ್ದರೆ ಸಾಕು ನೀವು ಈ ಕ್ಷೇತ್ರದಲ್ಲಿ ಮಿಂಚಬಹುದು. ಒಂದೇ ರಾತ್ರಿ ಸ್ಟಾರ್ ಆಗುವುದು ಸುಲಭದ ಮಾತಲ್ಲ, ಬದಲಿಗೆ ನೀವಾಗಿಯೇ ಒಂದು ಚಾನೆಲ್ ಓಪನ್ ಮಾಡಿಕೊಂಡು, ಒಳ್ಳೆಯ ಕಂಟೆಂಟ್ ಅಪ್‌ಲೋಡ್ ಮಾಡುತ್ತಾ ಬನ್ನಿ.
ಫುಡ್ ಟೆಸ್ಟರ್, ಫುಡ್ ಬ್ಲಾಗರ್, ಫುಡ್ ರಿವ್ಯುವರ್:
ನೀವು ಫುಡ್ಡಿ ಯಾಗಿದ್ದರೆ ಅದು ಮತ್ತೊಂದು ವಿಚಾರ ಆದ್ರೆ ಈ ಹುದ್ದೆಗೆ ನೀವು ಫುಡ್ ಲವರ್ ಆಗಿರಬೇಕು. ಫುಡ್ ಪರಿಮಳ ನೋಡಿ ಅದು ಗುಡ್ ಅಥವಾ ಬ್ಯಾಡ್ ಎಂದು ನೀವು ಡಿಸೈಡ್ ಮಾಡುವ ಕಲೆ ತಿಳಿದಿರಬೇಕು. ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳು ಹೋಟೆಲ್‌ಗಳು ಈ ಜಾಬ್ ಗೆ ಆಫರ್ ಮಾಡುತ್ತವೆ.
ಗ್ರಾಮೀಣ ಅಧ್ಯಯನ:
ಗ್ರಾಮೀಣ ಭಾರತ ಅರ್ಥಮಾಡಿಕೊಂಡರೆ ಹಾಗೂ ಅದರ ಅಗತ್ಯತೆ ತಿಳಿದುಕೊಂಡರೆ ನೀವು ಗ್ರಾಮೀಣ ಅಧ್ಯಯನವನ್ನ ಕೆರಿಯರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಫಾರೆಸ್ಟ್ರಿ, ಫಾರ್ಮ್ ಮ್ಯಾನೇಜ್‌ಮೆಂಟ್, ಅನಿಮಲ್ ಹಸ್ಬಂಡ್ರಿ, ಚೈಲ್ಡ್ ಡೆವಲಪ್ ಮೆಂಟ್, ಕಮ್ಯುನಿಟಿ ಡೆವಲಪ್ ಮೆಂಟ್, ಅಗ್ರಿಕಲ್ಚರ್ ಹಾಗೂ ಎನ್ವಿರಾನ್ ಮೆಂಟ್ ಮ್ಯಾನೇಜ್‌ಮೆಂಟ್ ಸಬ್‌ಜೆಕ್ಟ್ ಬಗ್ಗೆ ನೀಉ ತಿಳಿದುಕೊಳ್ಳಬೇಕು. ಒಂದು ಭಾರಿ ಕೋರ್ಸ್ ಕಂಪ್ಲೀಟ್ ಆದ ಕೂಡಲೇ, ಎನ್‌ಜಿಒ ಅಥವಾ ಆರ್ಗನೈಸೇಶನ್ ಗಳಲ್ಲಿ ದುಡಿಯಲು ಆರಂಭಿಸಬಹುದು.
ಫೋಟೋಗ್ರಾಫಿ:
ಇಂದಿನ ಕಾಲದಲ್ಲಿ ಫೋಟೋಗ್ರಾಫಿ ಬರೀ ಬರ್ತ್ ಡೇ ಹಾಗೂ ಮದುವೆ ಸಮಾರಂಭಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಕೃತಿಯ ಚಿಲ್ಲಿಂಗ್ ಮೂವ್‌ಮೆಂಟ್ ಕ್ಲಿಕ್, ವೈಲ್ಡ್ ಲೈಫ್ ಕ್ಲಿಕ್ ಸೇರಿದಂತೆ ಫೋಟೋಗ್ರಾಫರ್ ಗೆ ಹಲವಾರು ಅವಕಾಶಗಳಿವೆ. ಇನ್ನು ನಿಮಗೆ ಫೋಟೋಗ್ರಾಫಿಯಲ್ಲಿ ಇಂಟ್ರಸ್ಟ್ ಇದ್ರೆ ನಿಮ್ಮ ಬಳ ಸ್ಮಾರ್ಟ್ ಫೋನ್ ಇದ್ದರೆ ಸಾಕು ಅದರಲ್ಲೇ ನಿಮ್ಮ ಟ್ಯಾಲೆಂಟ್ ತೋರಿಸಬಹುದು.


Click it and Unblock the Notifications











