Online Courses After Class 12 : ಪಿಯುಸಿ ನಂತರ ಯಾವೆಲ್ಲಾ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು ಗೊತ್ತಾ ?

ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಲ್ಲಿರುತ್ತೀರಿ. ಮುಂದೆ ಯಾವ ಕೋರ್ಸ್‌ ಮಾಡಬೇಕು ? ಎಲ್ಲಿ ಮಾಡಬೇಕು ಅನ್ನುವ ಪ್ರಶ್ನೆಗಳೇ ತಲೆ ತುಂಬಾ ತುಂಬಿರುತ್ತವೆ. ಆದರೆ ನಾವಿವತ್ತು ಹೇಳಲು ಹೊರಟಿರುವ ವಿಷಯ ಏನೆಂದ್ರೆ ಆನ್‌ಲೈನ್ ಕೋರ್ಸ್‌ಗಳ ಬಗ್ಗೆ.

ಪಿಯುಸಿ ನಂತರ ಪಾರ್ಟ್‌ಟೈಂನಲ್ಲಿ ಮಾಡಬಹುದಾದ ಆನ್‌ಲೈನ್ ಕೋರ್ಸ್‌ಗಳು

ನೀವು ಪಿಯುಸಿ ವಿದ್ಯಾರ್ಥಿಗಳಾ ? ಹಾಗಿದ್ದರೆ ನೀವು ಈ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು. ಯಾವೆಲ್ಲಾ ಆನ್‌ಲೈನ್‌ ಕೋರ್ಸ್‌ಗಳಿವೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

1. ಡಿಪ್ಲೋಮ ಕೋರ್ಸ್‌
2. ಸರ್ಟಿಫಿಕೇಟ್ ಕೋರ್ಸ್‌ಗಳು
3. ಪದವಿ ಕೋರ್ಸ್‌ಗಳು
4. ಸ್ನಾತಕೋತ್ತರ ಪದವಿ ಕೋರ್ಸ್‌ಗಳು

ಪಿಯುಸಿ ನಂತರ ಹಲವಾರು ಜನ ಆನ್‌ಲೈನ್ ಕೋರ್ಸ್‌ಗಳನ್ನು ಪಾರ್ಟ್‌ ಟೈಂ ಬೇಸ್ ಅಥವಾ ಫುಲ್ ಟೈಂ ಬೇಸ್ ಮೇಲೆ ಅಧ್ಯಯನ ನಡೆಸುತ್ತಾರೆ. ಆದರೆ ನಮ್ಮ ದೈನಂದಿನ ರೆಗ್ಯುಲರ್ ಶಿಕ್ಷಣದ ಜೊತೆ ಜೊತೆಗೆ ಈ ಆನ್‌ಲೈನ್ ಕೋರ್ಸ್‌ಗಳನ್ನು ಪಾರ್ಟ್‌ ಟೈಂ ಬೇಸ್‌ನಲ್ಲಿ ಅಧ್ಯಯನ ಮಾಡುವುದು ಒಳಿತು ಎನ್ನುವುದು ಹಲವರ ಅಭಿಪ್ರಾಯ.

ಭಾರತದಲ್ಲಿ ಅನೇಕ ಶೈಕ್ಷಣಿಕ ವೆಬ್‌ ಪೋರ್ಟಲ್‌ಗಳಿವೆ ಅಲ್ಲಿ ವಿದ್ಯಾರ್ಥಿಗಳು ಈ ಬಗೆಗೆ ಹೆಚ್ಚು ಮಾಹಿತಿಯನ್ನು ಪಡೆದು ನಂತರ ಏನು ಮಾಡಬೇಕು ಎಂದು ನಿರ್ಧರಿಸಬಹುದು.

ಆನ್‌ಲೈನ್‌ ಕೋರ್ಸ್‌ಗಳು: ಮೂಲಭೂತ ಅಂಶಗಳು

ಈಗೆಲ್ಲಾ ಆನ್‌ಲೈನ್ ಕೋರ್ಸ್‌ಗಳು ತುಂಬಾನೆ ಜನಪ್ರಿಯಗೊಳ್ಳುತ್ತಿದ್ದು ಅನೇಕ ಪೋರ್ಟಲ್ ಮತ್ತು ಸಂಸ್ಥೆಗಳು ಜಾಬ್ ಓರಿಯೆಂಟೆಡ್ ಆನ್‌ಲೈನ್‌ ಕೋರ್ಸ್‌ಗಳನ್ನು ಒದಗಿಸುವಲ್ಲಿ ಮುಂದೆ ಬರುತ್ತಿವೆ. ಕಾರಣ ನಾವು ಒಂದೆಡೆ ಹೋಗಿ ನಾಲ್ಕು ಗೋಡೆಗಳ ನಡುವೆ ಪಾಠ ಕೇಳಬೇಕೆಂದಿಲ್ಲ ಬದಲಾಗಿ ನಾವೆಲ್ಲಿ ಇರುತ್ತೇವೆಯೋ ಅಲ್ಲಿಂದಲೇ ಈ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು. ಕೇವಲ ನಿಮ್ಮ ಬಳಿ ಒಂದು ಲ್ಯಾಪ್‌ಟಾಪ್ , ಸ್ಮಾರ್ಟ್‌ಫೋನ್ ಮತ್ತು ಮೊಬೈಲ್ ಇದ್ದರೆ ಸಾಕು ನೀವು ಇರುವಲ್ಲಿಂದಲೇ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು.

ಈಗಾಗಲೇ ಮೇಲೆ ಹೇಳಿರುವ ಹಾಗೆ ಡಿಪ್ಲೋಮ, ಪದವಿ, ಸರ್ಟಿಫಿಕೇಟ್ ಮತ್ತು ಪಿಜಿ ಆನ್‌ಲೈನ್ ಕೋರ್ಸ್‌ಗಳು ಲಭ್ಯವಿದ್ದು ಈ ಕೋರ್ಸ್‌ಗಳ ಅಧ್ಯಯನ ವಿವಿಧ ಅವಧಿಯದ್ದಾಗಿರುತ್ತದೆ. ಸಾಮಾನ್ಯವಾಗಿ ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್‌ಗಳು 3 ರಿಂದ 6 ತಿಂಗಳ ಅವಧಿಯದಾಗಿರುತ್ತದೆ, ಆನ್‌ಲೈನ್ ಡಿಪ್ಲೋಮ ಕೋರ್ಸ್‌ಗಳು 6 ರಿಂದ 12 ತಿಂಗಳ ಅವಧಿಯದಾಗಿತ್ತವೆ. ಆನ್‌ಲೈನ್ ಪದವಿ ಕೋರ್ಸ್‌ಗಳು 1 ರಿಂದ 3 ವರ್ಷ ಅವಧಿಯದಾಗಿರುತ್ತದೆ. ಆನ್‌ಲೈನ್ ಪಿಜಿ ಕೋರ್ಸ್‌ಗಳು ಕೂಡ 6 ರಿಂದ 24 ತಿಂಗಳ ವರೆಗಿನ ಅಧ್ಯಯನವನ್ನು ಮಾಡಬಹುದು.

ಆನ್‌ಲೈನ್ ಕೋರ್ಸ್‌ ಮಾಡೋದ್ರಿಂದ ಏನೆಲ್ಲಾ ಲಾಭಗಳಿವೆ:

* ಆನ್‌ಲೈನ್ ಕೋರ್ಸ್‌ಗಳು ನಿಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುತ್ತವೆ
* ಆನ್‌ಲೈನ್‌ ಕೋರ್ಸ್‌ಗಳನ್ನು ಯಾರು ಎಲ್ಲಿಂದ ಬೇಕಾದರೂ ಮಾಡಬಹುದು, ಇದಕ್ಕೆ ಇಂಟರ್‌ನೆಟ್ ಇದ್ದರೆ ಸಾಕು
* ನಿರ್ಧಿಷ್ಟ ಅವಧಿಯ ಅಧ್ಯಯನದ ಅಗತ್ಯವಿಲ್ಲ
* ನಿಮ್ಮ ಕೌಶಲ್ಯಕ್ಕೆ ತಕ್ಕ ಕೆಲಸವನ್ನು ಪಡೆಯಬಹುದು
* ನೀವು ಕೋರ್ಸ್‌ ಮಾಡಿದ್ದಲ್ಲಿ ಅದನ್ನು ರೆಸ್ಯುಮೆಯಲ್ಲಿ ನಮೂದಿಸಿದ್ದಲ್ಲಿ ಅದರಿಂದ ಇನ್ನಷ್ಟು ಉಪಯೋಗ
* ನಿಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು

ಆನ್‌ಲೈನ್ ಕೋರ್ಸ್‌ಗಳ ಶುಲ್ಕ:

ಆನ್‌ಲೈನ್‌ ಕೋರ್ಸ್‌ಗಳ ಶುಲ್ಕವು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವಿಭಿನ್ನ ಇರುತ್ತದೆ. ನೀವು ಯಾವ ರೀತಿಯ ಕೋರ್ಸ್‌ ಆಯ್ಕೆ ಮಾಡುಕೊಳ್ಳುತ್ತೀರಿ ಎನ್ನುವುದರ ಮೇಲೆಯೂ ಅವಲಂಭಿತವಾಗಿರುತ್ತದೆ.

ಯಾವೆಲ್ಲಾ ಆನ್‌ಲೈನ್ ಕೋರ್ಸ್‌ಗಳಿವೆ:

ಪಿಯುಸಿ ನಂತರ ಮಾಡಬಹುದಾದ ಕೆಲವು ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಆನ್‌ಲೈನ್‌ಗಳ ವಿವರ ಇಲ್ಲಿವೆ

* ಡಿಜಿಟಲ್ ಮಾರ್ಕೆಟಿಂಗ್
* ಎಥಿಕಲ್ ಹ್ಯಾಕಿಂಗ್
* ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್
* ಪ್ರೊಗ್ರಾಮಿಂಗ್
* ಆಂಡ್ರಾಯ್ಡ್ ಆಪ್ ಡೆವಲಪ್ಮೆಂಟ್
* ಆಪ್ ಡೆವಲಪ್ಮೆಂಟ್
* ವೆಬ್‌ ಡಿಸೈನಿಂಗ್
* ವೆಬ್‌ ಡಿಸೈನಿಂಗ್ ಮತ್ತು ಗ್ರಾಫಿಕ್ ಡಿಸೈನ್
* ಎಸ್‌ಇಓ ಮತ್ತು ಎಸ್‌ಎಂ ಮಾರ್ಕೆಟಿಂಗ್ (ಎಸ್‌ಎಂ ಸ್ಟ್ಯಾಂಡ್ಸ್ ಫಾರ್ ಸೋಶಿಯಲ್ ಮೀಡಿಯಾ)
* ಸೈಬರ್ ಸೆಕ್ಯುರಿಟಿ
* ಸಿಎಡಿ
* ಅನಿಮೇ‍ಷನ್ ಮತ್ತು ಗೇಮ್ ಡಿಸೈನ್
* ಮೈಕ್ರೋಸಾಫ್ಟ್ ಆಫೀಸ್ ಸರ್ಟಿಫಿಕೇಶನ್
* ಬಿ.ಎಸ್ಸಿ
* ಬಿಸಿಎ
* ಬಿ.ಕಾಂ
* ಬಿಬಿಎ
* ಬಿ.ಎ
* ವಿಎಫ್‌ಎಕ್ಸ್ ಮತ್ತು ಅನಿಮೇಶನ್
* ಸಾಫ್ಟ್ವೇರ್ ಡಿಸೈನ್ ಮತ್ತು ಟೆಸ್ಟಿಂಗ್
* ಟ್ಯಾಲಿ
* ಕ್ರಿಯೇಟಿವ್ ಬರೆವಣಿಗೆ
* ಡಿಪ್ಲೋಮ್ ಇನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್
* ಡಿಪ್ಲೋಮ ಇನ್ ಮ್ಯಾನೇಜ್ಮೆಂಟ್

ಸೂಚನೆ: ಶೈಕ್ಷಣಿಕ ಕೋರ್ಸ್‌ಗಳಾದ ಬಿ.ಎಸ್ಸಿ, ಬಿಸಿಎ, ಬಿ.ಕಾಂ, ಬಿಬಿಎ ಮತ್ತು ಬಿಎ ಇವು ಪದವಿ ಕೋರ್ಸ್‌ಗಳು. ಮೇಲೆ ತಿಳಿಸಿರುವ ಇತರೆ ಕೋರ್ಸ್‌ಗಳು ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಾಗಿರುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
Here we are giving information about the online courses available after class 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+