ಫ್ರೆಂಡ್‌ಶಿಪ್ ಡೇ ಗಿಫ್ಟ್... ನಿಮ್ಮ ಈ ತಪ್ಪಿನಿಂದ ನಿಮ್ಮ ಸ್ನೇಹಿತರ ಫೀಲಿಂಗ್ ಗೆ ಹರ್ಟ್ ಆಗಬಹುದು!

ಫ್ರೆಂಡ್‌ಶಿಪ್ ಬಂದ್ರೆ ಸಾಕು ಸ್ನೇಹಿತರಿಗೆ ಯಾವ ಗಿಫ್ಟ್ ನೀಡಬೇಕು ಎಂದು ಟೆನ್ಶನ್ ಸ್ಟಾರ್ಟ್ ಆಗುತ್ತದೆ. ಅದಕ್ಕಾಗಿ ಒಂದು ವಾರದ ಹಿಂದಿನಿಂದಲೇ ಶಾಪಿಂಗ್ ಕೂಡಾ ಪ್ರಾರಂಭವಾಗುತ್ತದೆ. ಇನ್ನು ಫ್ರೆಂಡ್‌ಶಿಪ್ ಡೇ ನೆನಪಿಗಾಗಿ ನಾವು ಗಿಫ್ಟ್ ಕೂಡಾ ನೀಡುತ್ತೇವೆ. ಇನ್ನು ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೇ ಆಫೀಸ್ ಕಚೇರಿಗಳಲ್ಲಿಯೂ ಫ್ರೆಂಡ್‌ಶಿಪ್ ಆಚರಣೆ ಮಾಡುವುದು ನೀವು ನೋಡಿರಬಹುದು.

ಫ್ರೆಂಡ್‌ಶಿಪ್ ಡೇ ಗಿಫ್ಟ್... ನಿಮ್ಮ ಈ ತಪ್ಪಿನಿಂದ ನಿಮ್ಮ ಸ್ನೇಹಿತರ ಫೀಲಿಂಗ್ ಗೆ ಹರ್ಟ್ ಆಗಬಹುದು!

 

ಕಾಲೇಜು ಕ್ಯಾಂಪಸ್ ತುಂಬಾ ಹಾರಾಡೋ ರಾಣಿ ಜೇನುಗಳಿಗೆ ಬ್ಯೂಟಿ ಸಲಹೆ!

ಆದ್ರೆ ಕೆಲವೊಮ್ಮೆ ನಮ್ಮ ಉಡುಗೊರೆಯಿಂದ ನಮ್ಮ ಸ್ನೇಹಿತರ ನಿರೀಕ್ಷೆ ಹುಸಿಯಾಗಬಹುದು. ನಮ್ಮಿಂದ ಏನೋ ನಿರೀಕ್ಷೆ ಮಾಡಿದ್ದು, ಅದು ಅವರಿಗೆ ಸಿಗದೇ ಅವರಿಗೆ ಬೇಜಾರು ಆಗಬಹುದು. ಇದರಿಂದ ಅವರಿಗೆ ಫೀಲಿಂಗ್ಸ್ ಗೂ ಕೂಡಾ ನಮ್ಮ ಗಿಫ್ಟ್ ಹರ್ಟ್ ಮಾಡಿದಂತಾಗಬಹುದು. ಅದು ಹೇಗೆ ನಮ್ಮ ಗಿಫ್ಟ್ ನಿಂದ ಸ್ನೇಹಿತರಿಗೆ ಹರ್ಟ್ ಆಗುತ್ತೆ ಎಂದು ನೀವು ಯೋಚಿಸುತ್ತಿದ್ದೀರಾ ನಾವು ಹೇಳ್ತೇವೆ... ಮೂಂದಕ್ಕೆ ಓದಿ

ಗಿಫ್ಟ್ ಜತೆ ಯಾವತ್ತೂ ಸಂದೇಶ ಬೇಡ

ಸಕ್ಸಸ್ ಜನರು ಎಲ್ಲದರಲ್ಲೂ ಸಕ್ಸಸ್ ಕಾಣುತ್ತಾರೆ ಯಾಕೆ ಗೊತ್ತಾ?

ಹೌದು ಅಂದ್ರೆ ಕೆಲವೊಮ್ಮೆ ನಿಮ್ಮ ಸ್ನೇಹಿತರಿಗೆ ಚಾಕಲೇಟ್ ತಿನ್ನೋದು ಅಂದ್ರೆ ತುಂಬಾ ಇಷ್ಟ ಇರಬಹುದು. ಹಾಗಾಗಿ ಚಾಕಲೇಟ್ ಹೆಚ್ಚು ತಿನ್ನ ಬೇಡ, ಅಥವಾ ನಿಮ್ಮ ಗೆಳೆಯ ಅಥವಾ ಗೆಳತಿ ಸಣ್ಣಗಿದ್ರೆ ದಪ್ಪ ಆಗು ಇಲ್ಲಿ ದಪ್ಪ ಇದ್ರೆ ಸಣ್ಣ ಆಗು, ಸಿಗರೇಟ್ ಸೇದೋ ಸ್ನೇಹಿತನಿಗೆ ಅದರ ವಿರುದ್ಧ ಸಂದೇಶ ಸೇರಿದಂತೆ ನಿಮ್ಮ ಸ್ನೇಹಿತನ ವೀಕ್‌ನೆಸ್ ಗಳನ್ನ ಸುಧಾರಿಸು ಎಂದು ಸಂದೇಶ ಬರೆಯಬೇಡಿ. ಇದರಿಂದ ಅವರು ಎಲ್ಲರ ಮುಂದೆ ಗಿಫ್ಟ್ ತೆರೆದಾದ ಮುಜುಗರಕ್ಕೆ ಒಳಗಾಗಬಹುದು.

ನೀವೇನೋ ಒಳ್ಳೆಯ ಆಲೋಚನೆಯಿಂದ ಬರೆದಿರಬಹುದು, ಆದ್ರೆ ನೀವು ಅವರನ್ನ ಸಪೋರ್ಟ್ ಮಾಡದೇ ಜಡ್ಜ್ ಮಾಡುತ್ತಿದ್ದೀರಾ ಎಂದು ಫ್ರೆಂಡ್ ತಪ್ಪಾಗಿ ಅರ್ಥೈಸಿಕೊಳ್ಳುವ ಸಂಭವವಿರುತ್ತದೆ.

ರೀ ಗಿಫ್ಟ್:

ಹೌದು ನಿಮಗೆ ಈಗಾಗಲೇ ತಿಳಿದಿರುತ್ತದೆ, ನಿಮ್ಮ ಸ್ನೇಹಿತರಿಗೆ ಏನು ಇಷ್ಟ ಏನೂ ಇಷ್ಟವಿಲ್ಲ ಎಂದು. ಹಾಗಾಗಿ ಒಂದು ಗಿಫ್ಟ್ ನೀಡಿದಾಗ ಅವರು ಖುಷಿ ಪಡುತ್ತಾರೆ ನಿಜ ಆದ್ರೆ ಅವರಿಗೆ ಇಷ್ಟವೆಂದು ಮತ್ತೆ ಮತ್ತೆ ಅದೇ ಗಿಫ್ಟ್ ನೀಡುತ್ತಾ ಇದ್ರೆ ಅವರು ನಿಮ್ಮ ಗಿಫ್ಟ್ ಬಗೆಗಿನ ಆಸಕ್ತಿಯೇ ಕಳೆದುಕೊಳ್ಳುತ್ತಾರೆ

 

ಅವರ ಆಸಕ್ತಿ ಮೇರೆಗೆ ಗಿಫ್ಟ್:

ಕ್ರಿಕೆಟ್ ಮಾತ್ರ ವೃತ್ತಿಯಲ್ಲ... ಯಾವ್ಯಾವ ಕ್ರಿಕೆಟಿಗರು ಎಷ್ಟೆಷ್ಟು ರೆಸ್ಟೋರೆಂಟ್ ಮಾಲೀಕರು ಗೊತ್ತಾ?

ಹೌದು ಇದು ಬ್ಯಾಡ್ ಗಿಫ್ಟ್ ಗಳಲ್ಲಿ ಒಂದಾಗಿರುತ್ತದೆ. ನಾವೇನು ಮಾಡುತ್ತೇವೆ ಅಂದ್ರೆ ನಮ್ಮ ಸ್ನೇಹಿತರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರ ಮೇರೆಗೆ ಗಿಫ್ಟ್ ನೀಡುತ್ತೆವೆ ಆದ್ರೆ ಈ ವೇಳೆ ನಾವು ಒಂದು ಚಿಕ್ಕ ಸಂಗತಿ ಮರೆತಿರುತ್ತೇವೆ ಅದೇನೆಂದ್ರೆ ಅವರು ಆಸಕ್ತಿಯ ವಸ್ತುಗಳು ಈಗಾಗಲೇ ಅವರ ಬಳಿ ಇದ್ದಿರುತ್ತವೆ ಎಂದು. ಒಂದು ವೇಳೆ ಇಲ್ಲದಿದ್ದರೆ ಪರವಾಗಿಲ್ಲ ನೀಡಬಹುದು ಬದಲಿಗೆ ಅವರ ಬಳಿ ಇರುವ ವಸ್ತುಗಳನ್ನೇ ಮತ್ತೆ ಗಿಫ್ಟ್ ಆಗಿ ನೀಡಿದ್ರೆ ಅವರು ನಿಜಕ್ಕೂ ಬೇಜಾರು ಪಡುತ್ತಾರೆ

ಹಣ:

ಹೌದು ನೀವು ಅಂದುಕೊಳ್ಳಬಹುದು ನಿಮ್ಮ ಸ್ನೇಹಿತರಿಗೆ ಹಣವನ್ನ ಒಂದು ಕವರ್ ನಲ್ಲಿ ಗಿಫ್ಟ್ ಆಗಿ ಕೊಟ್ರೆ ಖುಷಿಯಾಗಬಹುದು ಅದರಿಂದ ಅವರಿಗೆ ಬೇಕಾದುದು ಶಾಪಿಂಗ್ ಮಾಡಬಹುದು, ಎಂಜಾಯ್ ಮಾಡಬಹುದು ಎಂದು. ಆದ್ರೆ ನಿಮ್ಮ ಊಹೆ ತಪ್ಪು. ನೀವು ಹಣವನ್ನ ಉಡುಗೊರೆಯಾಗಿ ನೀಡುವುದರಿಂದ ಅವರು ಖಂಡಿತ ಖುಷಿಯಾಗುವುದಿಲ್ಲ. ಬದಲಿಗೆ ನಿಮಗೆ ಅವರಿಗೆ ಏನೂ ಗಿಫ್ಟ್ ಕೊಡಬೇಕು ಎಂದು ಯೋಚಿಸವಷ್ಟು ಕೂಡಾ ಟೈಂ ಇಲ್ಲ ಹಾಗಾಗಿ ನೀವು ಹಣ ನೀಡಿದ್ದೀರಿ ಎಂದು ಅಂದುಕೊಂಡು ಬೇಜಾರು ಮಾಡಿಕೊಳ್ಳುತ್ತಾರೆ

ಈ ವಸ್ತುಗಳು ಬೇಡವೇ ಬೇಡ:

ಟೂಥ್ ಬ್ರಶ್, ಶವರ್, ಕರ್ಲಿಂಗ್ ಐರನ್ ಇವೆಲ್ಲಾ ಬೋರಿಂಗ್ ಗಿಫ್ಟ್ ಗಳು. ಇವುಗಳನ್ನೆಲ್ಲಾ ನೀಡಿದ್ರೆ ಖಂಡಿತಾ ನಿಮ್ಮ ಫ್ರೆಂಡ್ ಖುಷಿ ಪಡಲು ಸಾಧ್ಯವೇ ಇಲ್ಲ.

ಐಪಿಎಲ್ ಮೈದಾನದಲ್ಲಿ ತಳಕು ಬಳಕು ಸೊಂಟ ಕುಣಿಸೋ ಚಿಯರ್ ಲೀಡರ್ಸ್ ಸಂಬಳ ಎಷ್ಟಿದೆ ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
Friendship day is always a memorable occasion, especially for kids and adolescents. Its that time of the year when friendship bands are selling at its peak and your emotional bond with a friend seems to be tied with that single thread
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more