ಡಾಕ್ಟರ್ ಆಗೋದು ಹೇಗೆ? ಇಲ್ಲಿದೆ ಮಾಹಿತಿ

ಇಂದಿನ ವಾತಾವರಣ ಮತ್ತು ಆರೋಗ್ಯ ಸಂಬಂಧಿತ ಅನೇಕ ಸಮಸ್ಯೆಗಳನ್ನು ಕಂಡಾಗ ವಿದ್ಯಾರ್ಥಿಗಳಿಗೆ ನಾನು ವೈದ್ಯನಾಗಬೇಕು, ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಭಾವ ಮೂಡದೇ ಇರಲಾರದು. ಯಾಕಂದ್ರೆ ವೈದ್ಯಕೀಯ ವೃತ್ತಿಯೇ ಅಂಥದ್ದು, ತನ್ನದ ಗುರಿಯ ಜೊತೆಗೆ ಸಮಾಜ ಸೇವೆ ಮಾಡುವ ಅವಕಾಶವುಳ್ಳ ಉದ್ಯೋಗವಿದು.

ಜಗತ್ತಿನ ಎಲ್ಲಾ ವೃತ್ತಿಗಳಲ್ಲಿ ವೈದ್ಯಕೀಯ ವೃತ್ತಿ ತುಂಬಾನೆ ಶ್ರೇಷ್ಠವಾದುದು ಎಂಬುದು ಹಲವರ ನಂಬಿಕೆ. ಏಕೆಂದರೆ ಈ ವೃತ್ತಿಯಲ್ಲಿ ಕೇವಲ ಕರ್ತವ್ಯ ಮಾತ್ರವಲ್ಲದೇ ಇನ್ನೊಬ್ಬರ ಬಾಳಿನಲ್ಲಿ ಸಂತಸ ಮೂಡಿಸುವ ಕ್ಷಣಗಳು ಎದುರಾಗುತ್ತವೆ. ಈ ವೃತ್ತಿಯಿಂದ ಆತ್ಮತೃಪ್ತಿ, ನೆಮ್ಮದಿ ಮತ್ತು ಸಂತೋಷ ಹೆಚ್ಚಿದೆ ಹಾಗಾಗಿಯೇ ಅನೇಕರು ವೈದ್ಯಕೀಯ ವೃತ್ತಿಗೆ ಹೆಜ್ಜೆ ಇಡಲು ಬಯಸುತ್ತಾರೆ.

ಅನೇಕ ವಿದ್ಯಾರ್ಥಿಗಳು ತಾನು ಡಾಕ್ಟರ್ ಆಗಬೇಕೆಂಬ ಆಸೆಯನ್ನು ಹೊತ್ತಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗೋದು ಹೇಗೆ ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ಇಂದು ತಿಳಿಸುತ್ತಿದೆ.

ಡಾಕ್ಟರ್ ಆಗಬೇಕು ಎಂಬ ಕನಸು ನನಸು ಮಾಡೋದ್ಹೇಗೆ? ಇಲ್ಲಿದೆ ಓದಿ

ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಿರಿ:

ಪಿಯುಸಿ ವಿಜ್ಞಾನ ವಿಭಾಗ (ಔತಶಾಸ್ತ್ರ,ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ)ದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಎಂಬಿಬಿಎಸ್ ಮಾಡಬಹುದು. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಿಂದ ಉತ್ತಮ ಕಾಲೇಜಿನಲ್ಲಿ ಸೀಟ್‌ ಪಡೆಯಲು ಸಹಾಯವಾಗುವುದು.

ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಿ:

ಪಿಯುಸಿ ನಂತರ ನೀವು ಹೆಸರಾಂತ ವೈದ್ಯಕೀಯ ಸಂಸ್ಥೆಗೆ ಸೇರಲು ಬಯಸಿದರೆ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬೇಕಿರುತ್ತದೆ. ಅದಕ್ಕಾಗಿ ಭಾರತದ ಕೆಲವು ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಗಳಾದ ನೀಟ್,ಏಮ್ಸ್,ಎಎಫ್‌ಎಂಸಿ,ರಾಜ್ಯವಾರು ಪ್ರವೇಶ ಪರೀಕ್ಷೆಗಳು ಮತ್ತು ಸಂಸ್ಥೆವಾರು ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ವಿದೇಶದಲ್ಲಿ ಅಧ್ಯಯನ ನಡೆಸಲು ಇಚ್ಚಿಸುವ ಅಭ್ಯರ್ಥಿಗಳು ಅದಕ್ಕಾಗಿ ಇರುವ ಪ್ರವೇಶ ಪರೀಕ್ಷೆಗಳ ಬಗೆಗೆ ಅಂತರ್ಜಾಲದಲ್ಲಿ ಮಾಹಿತಿಯನ್ನು ಪಡೆಯಬಹುದು.

ದಾಖಲಾತಿ ಪಡೆಯಿರಿ:

ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರವೇಶಾರ್ಹತೆಯನ್ನು ಪಡೆದಿದ್ದಲ್ಲಿ ಪದವಿ ಕೋರ್ಸ್‌ಗೆ ದಾಖಲಾತಿಯನ್ನು ಪಡೆಯಿರಿ.

ಪದವಿಯನ್ನು ಪೂರ್ಣಗೊಳಿಸಿ:

ಉತ್ತಮ ಕಾಲೇಜಿನಲ್ಲಿ ದಾಖಲಾತಿ ಪಡೆದ ನಂತರ ವಿದ್ಯಾರ್ಥಿಗಳು 4 ವರ್ಷಗಳ ಅಧ್ಯಯನದ ನಂತರ 1 ವರ್ಷದ ಇಂಟರ್ನ್‌ಶಿಪ್ ಮುಗಿಸಿದರೆ "ಡಾಕ್ಟರ್‌" ಎಂಬ ಟೈಟಲ್ ಪಡೆಯುತ್ತೀರಿ.

ಇಂದಿನ ದಿನಗಳಲ್ಲಿ ಡಾಕ್ಟರ್ ಆದರೆ ಸಾಲದು ಉನ್ನತ ಸ್ನಾತಕೋತ್ತರ ಪವಿಗಳಾದ ಎಂಡಿ,ಎಂಎಸ್ ಮತ್ತು ಪಿಜಿಡಿಎಂ ಕೋರ್ಸ್‌ಗಳನ್ನು ಮಾಡಬಹುದು.

ಎಂಬಿಬಿಎಸ್ ಪದವಿಯನ್ನು ಪಡೆದ ಅಭ್ಯರ್ಥಿಗಳು ಮಾತ್ರ "ಡಾಕ್ಟರ್" ಟೈಟಲ್ ಪಡೆಯಲು ಸಾಧ್ಯ ಇದು ತಪ್ಪು . ಇನ್ನಿತರೆ ಕೋರ್ಸ್‌ಗಳಾದ ಬಿಡಿಎಸ್ (ಡೆಂಟಿಸ್ಟ್ರಿ),ಬಿಎಎಂಎಸ್ (ಆಯುರ್ವೇದ),ಬಿಹೆಚ್‌ಎಂಎಸ್ (ಹೋಮಿಯೋಪಥಿ),ಬಿಯುಎಂಎಸ್ (ಯುನಾನಿ), ಬಿ.ವಿ.ಎಸ್ಸಿ ಮತ್ತು ಎಹೆಚ್ (ವೆಟರಿನರಿ ಸೈನ್ಸ್),ಫಾರ್ಮ್ ಡಿ,ಬಿಪಿಟಿ (ಫಿಸಿಯೋಥೆರಪಿ),ಬಿಓಟಿ (ಅಕ್ಯುಪೇಶನಲ್ ಥೆರಪಿ) ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಮೂಲಕ "ಡಾಕ್ಟರ್‌" ಟೈಟಲ್ ಅನ್ನು ಪಡೆಯಬಹುದು.

ಹೀಗೆ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿದ ಅಭ್ಯರ್ಥಿಗಳು ತಮ್ಮ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆದು ನಂತರ ರಾಜ್ಯದಲ್ಲಿ ಪರವಾನಗಿಯನ್ನು ಪಡೆದು ಉದ್ಯೋಗವನ್ನು ಹುಡುಕಿಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯಬಹುದು.

ಈಗಾಗಲೇ ತಿಳಿದಿರುವಂತೆ ವೈದ್ಯಕೀಯ ವೃತ್ತಿಯಲ್ಲಿ ಉತ್ತಮ ವೇತನವನ್ನು ಪಡೆಯಬಹುದು. ವೃತ್ತಿಯಲ್ಲಿ ಅನುಭವವನ್ನು ಪಡೆಯುತ್ತಾ ಹೋದಂತೆ ಕೈತುಂಬಾ ಸಂಪಾದಿಸಬಹುದು ಅಥವಾ ತನ್ನದೇ ಸ್ವಂತ ಕ್ಲಿನಿಕ್ ತೆರೆದು ಕೆಲಸ ನಿರ್ವಹಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Here we are giving information and steps to become a doctor. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+