National Education Day 2021 : ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ, ಥೀಮ್, ಮಹತ್ವ ಮತ್ತು ಆಚರಣೆ ಬಗ್ಗೆ ಮಾಹಿತಿ

ಭಾರತದ ಮೊದಲ ಶಿಕ್ಷಣ ಸಚಿವ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನ ಅಥವಾ ರಾಷ್ಟ್ರೀಯ ಶಿಕ್ಷಾ ದಿವಸ್ ಎಂದು ಆಚರಿಸಲಾಗುತ್ತದೆ. ಅಬುಲ್ ಕಲಾಂ ಆಜಾದ್ ಯಾರು ? ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಎನ್ನುವ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

 
ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ, ಥೀಮ್, ಆಚರಣೆ ಮತ್ತು ಮಹತ್ವವನ್ನು ತಿಳಿಯಿರಿ

ರಾಷ್ಟ್ರೀಯ ಶಿಕ್ಷಣ ದಿನ : ಮೌಲಾನಾ ಅಬ್ದುಲ್ ಆಜಾದ್ ಯಾರು?:

ಮೌಲಾನಾ ಅಬ್ದುಲ್ ಆಜಾದ್ ಅವರು ನವೆಂಬರ್ 11, 1888 ರಂದು ಜನಿಸಿದರು ಮತ್ತು ಫೆಬ್ರವರಿ 22, 1958 ರಂದು ಕೊನೆಯುಸಿರೆಳೆದರು. ಅವರ ಮೂಲ ಹೆಸರು ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್-ಹುಸೇನಿ ಆಜಾದ್. ಅವರು ಸುಧಾರಕರಾಗಿದ್ದರು ಮತ್ತು ಶಿಕ್ಷಣದ ಮೂಲಕ ರಾಷ್ಟ್ರ-ನಿರ್ಮಾಣಕ್ಕಾಗಿ ಅವರ ಕೊಡುಗೆಗಳಿಂದ ಹೆಸರುವಾಸಿಯಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಪ್ರಖ್ಯಾತ ಶಿಕ್ಷಣತಜ್ಞ, ಮೌಲಾನಾ ಆಜಾದ್ ಸ್ವತಂತ್ರ ಭಾರತದ ಪ್ರಮುಖ ವಾಸ್ತುಶಿಲ್ಪಿಯಾಗಿದ್ದು, ಅವರು AICTE ಮತ್ತು UGC ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಮೊದಲ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ಖರಗ್‌ಪುರ, ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಥಾಪಿಸಿದರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ, ರಾಷ್ಟ್ರ ನಿರ್ಮಾಣ ಮತ್ತು ಸಂಸ್ಥೆ-ನಿರ್ಮಾಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳು ಅಪಾರ. ಅವರು ಭಾರತದಲ್ಲಿ ಶಿಕ್ಷಣದ ಪ್ರಮುಖ ವಾಸ್ತುಶಿಲ್ಪಿ. ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದರು ಮತ್ತು 1947 ರಿಂದ 1958 ರವರೆಗೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು.

ರಾಷ್ಟ್ರೀಯ ಶಿಕ್ಷಣ ದಿನ: ಇತಿಹಾಸ

ಸೆಪ್ಟೆಂಬರ್ 11,2008 ರಂದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD) ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚಸುವುದಾಗಿ ಘೋಷಿಸಿತು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕೊಡುಗೆಯನ್ನು ಸ್ಮರಿಸುವ ಮತ್ತು ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸಲಾಗುತ್ತದೆ. 2008 ರಿಂದ ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನು ರಜಾದಿನವೆಂದು ಘೋಷಿಸದೆ ಆಚರಿಸಲಾಗುತ್ತದೆ.

 

ಶಾಲೆಗಳು ದೇಶದ ಭವಿಷ್ಯದ ಪ್ರಜೆಗಳನ್ನು ಉತ್ಪಾದಿಸುವ ಪ್ರಯೋಗಾಲಯಗಳು ಎಂದು ಮೌಲಾನಾ ಆಜಾದ್ ಒಮ್ಮೆ ಹೇಳಿದರು. ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಶನ್ (ಸಿಎಬಿಇ) ಯ ಮೊದಲ ಸಭೆಯನ್ನುದ್ದೇಶಿಸಿ ಮೌಲಾನಾ ಆಜಾದ್ ಅವರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು: "ಯಾವುದೇ ವ್ಯವಸ್ಥೆಯ ಪ್ರಾಥಮಿಕ ಗುರಿಯು ತಪ್ಪುದಾರಿಗೆಳೆಯಲಾಗದ ಸಮತೋಲಿತ ಮನಸ್ಸನ್ನು ಸೃಷ್ಟಿಸುವುದು." ಅಬುಲ್ ಕಲಾಂ ಆಜಾದ್ ಅವರ ಕೊಡುಗೆಗಾಗಿ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದರು.

ರಾಷ್ಟ್ರೀಯ ಶಿಕ್ಷಣ ದಿನ 2021 ಥೀಮ್ :

ರಾಷ್ಟ್ರೀಯ ಶಿಕ್ಷಣ ದಿನದ ಆಚರಣೆಯ ಕೇಂದ್ರ ವಿಷಯ ಶಿಕ್ಷಣ. ಪ್ರತಿ ವರ್ಷ ಈ ದಿನದ ಆಚರಣೆಗಾಗಿ ಥೀಮ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಶಾಲೆಗಳಲ್ಲಿ ಈ ದಿನವನ್ನು ಗುರುತಿಸಲು ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಮಾನವ ಸಂಪನ್ಮೂಲ ಸಚಿವಾಲಯವು ಮೌಲಾನಾ ಆಜಾದ್ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ನೆನಪಿಟ್ಟುಕೊಳ್ಳಲು ಕಾರ್ಯಕ್ರಮಗಳ ಯೋಜನೆಯನ್ನು ಹಾಕಿಕೊಳ್ಳುತ್ತದೆ.

"ಮಹಿಳೆಯರ ಶಿಕ್ಷಣ", "ಕಡ್ಡಾಯ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ", "ವೃತ್ತಿಪರ ಶಿಕ್ಷಣದ ಪ್ರಾಮುಖ್ಯತೆ", "14 ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ನ್ಯಾಯಯುತ ಶಿಕ್ಷಣ" ಮುಂತಾದವುಗಳನ್ನು ಈ ದಿನದಂದು ಪ್ರಮುಖವಾಗಿ ಒತ್ತಿಹೇಳಲಾಗುತ್ತದೆ. ತಾಂತ್ರಿಕ ಶಿಕ್ಷಣವನ್ನು ಜನಸಾಮಾನ್ಯರಿಗೆ ಕೈಗೆಟಕುವಂತೆ ಮಾಡುವುದು. ಪ್ರಸ್ತುತ ಸರ್ಕಾರಗಳು ದೇಶಕ್ಕೆ ಶಿಕ್ಷಣವನ್ನು ನೀಡುವಲ್ಲಿ ಆಧುನಿಕ ವಿಜ್ಞಾನ ಮತ್ತು ಸಮಕಾಲೀನ ಬೋಧನಾ ವಿಧಾನಗಳನ್ನು ಕಲಿಸುವ ಮೌಲಾನಾ ಆಜಾದ್ ಅವರ ದೂರದೃಷ್ಟಿಯ ಆಲೋಚನೆಗಳಾಗಿದ್ದವು.

ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ಮತ್ತು ಆಚರಣೆ :

ನವೆಂಬರ್ 11 ರಂದು ರಾಷ್ಟೀಯ ಶಿಕ್ಷಣ ದಿನದ ಪ್ರಯುಕ್ತ ಶಾಲಾ ಕಾಲೇಜುಗಳಲ್ಲಿ ವಿವಿಧ ಆಸಕ್ತಿದಾಯಕ ಸೆಮಿನಾರ್‌ಗಳು, ವಿಚಾರ ಸಂಕಿರಣಗಳು, ಪ್ರಬಂಧ-ಬರಹ, ರ್ಯಾಲಿಗಳು ಇತ್ಯಾದಿಗಳನ್ನು ನಡೆಸುವ ಮೂಲಕ ಪ್ರತಿ ವರ್ಷ ಶಾಲೆಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಿಗೆ ಸೇರಿ ಸಾಕ್ಷರತೆಯ ಮಹತ್ವ ಮತ್ತು ಶಿಕ್ಷಣದ ಎಲ್ಲಾ ಅಂಶಗಳಿಗೆ ರಾಷ್ಟ್ರದ ಬದ್ಧತೆಯ ಬಗ್ಗೆ ಮಾತನಾಡುತ್ತಾರೆ. ರಾಷ್ಟ್ರೀಯ ಶಿಕ್ಷಣ ದಿನವು ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲಾನಾ ಅಬ್ದುಲ್ ಆಜಾದ್ ಅವರು ನೀಡಿದ ಎಲ್ಲಾ ಮಹಾನ್ ಕೊಡುಗೆಗಳಿಗೆ ಗೌರವವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
National education day is on november 11. here is the history, theme, significance and celebrations of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X