
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವ ನೀಟ್ ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಯಾವೆಲ್ಲಾ ಅಂಶಗಳನ್ನು ನೆನಪಿನಲ್ಲಿಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಎಂಬಿಬಿಎಸ್, ಆಯುಷ್, ಬಿವಿಎಸ್ಸಿ ಮತ್ತು ಎಹೆಚ್ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಇದಾಗಿದ್ದು, ಪೆನ್ ಪೇಪರ್ ಮಾದರಿಯ ಪರೀಕ್ಷೆ ಇದಾಗಿದೆ. ಹಾಗಾದ್ರೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವೆಲ್ಲಾ ಅಂಶಗಳನ್ನು ನೆನಪಿನಲ್ಲಿಡಬೇಕು ಇಲ್ಲಿದೆ ಮಾಹಿತಿ.
ನೀಟ್ 2021 ಪರೀಕ್ಷೆ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ಅಂಶಗಳು ನೆನಪಿರಲಿ
1. ಪರೀಕ್ಷೆಗೆ ನಿಗದಿತ ಸಮಯಕ್ಕೆ ಹಾಜರಾಗಿ:
ನೀಟ್ 2021 ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಹಾಜರಾಗಿ. ಆದಷ್ಟು ಪರೀಕ್ಷೆಗೆ ಮುಂಚಿತವಾಗಿಯೇ ನಿಗದಿತ ಸ್ಥಳಕ್ಕೆ ಹಾಜರಾಗುವುದು ಒಳಿತು.
2. ನೀಟ್ ಪರೀಕ್ಷೆಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ:
ನೀಟ್ 2021 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ. ಪರೀಕ್ಷೆಗೆ ಸಂಬಂಧಿಸಿದಂತೆ ಪ್ರವೇಶ ಪತ್ರ ಮತ್ತು ಇತರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ.
3. ಪರೀಕ್ಷೆಯ ಮಾರ್ಗಸೂಚಿ ಜೊತೆಗೆ ಕೋವಿಡ್ ಮಾರ್ಗಸೂಚಿ ಅನುಸರಿಸಿ:
ನೀಟ್ 2021 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆಯ ಮಾರ್ಗಸೂಚಿಯನ್ನು ಓದಿಕೊಂಡು ಅನುಸರಿಸಬೇಕಿರುತ್ತದೆ. ಪ್ರಮುಖವಾಗಿ ಅಭ್ಯರ್ಥಿಗಳು ಕೋವಿಡ್ ಸಂಬಂಧಿಸಿದ ಮಾರ್ಗಸೂಚಿಯನ್ನು ಓದಿಕೊಂಡು ಪಾಲಿಸಬೇಕಿರುತ್ತದೆ.


Click it and Unblock the Notifications











