NEET UG 2020: ಪರೀಕ್ಷೆ ಬಗ್ಗೆಗಿನ ಇಂಟ್ರಸ್ಟಿಂಗ್ ಮಾಹಿತಿ

By Kavya

ಎನ್‌ಇಇಟಿ ಯುಜಿ 2020 ಪರೀಕ್ಷೆಗೆ ನೀವು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ.. ಹಾಗಿದ್ರೆ ಯಾವುದೆಲ್ಲಾ ಪ್ರಮುಖ ಟಾಪಿಕ್ ಅನ್ನೋ ಮಾಹಿತಿ ಇಲ್ಲಿದೆ. ಆಫ್‌ ಲೈನ್‌ ಮೂಲಕ ಪರೀಕ್ಷೆ ನಡೆಯಲಿದ್ದು, ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ.

ಒಂದು ಬೇಜಾರಿನ ಸಂಗತಿ ಅಂದ್ರೆ ಈ ಪರೀಕ್ಷೆಯಲ್ಲಿ ನೆಗಟೀವ್ ಅಂಕಗಳಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮಾರ್ಕ್ ಕಳೆಯಲಾಗುತ್ತದೆ.ಈ ಪರೀಕ್ಷೆಯು ಸೆಪ್ಟೆಂಬರ್ 13,2020ರಂದು ನಡೆಯಲಿದೆ.

ಜೀವಶಾಸ್ತ್ರ, ರಾಸಾಯನಿಕ ಶಾಸ್ತ್ರ ಹಾಗೂ ಭೌತಶಾಸ್ತ್ರ ಸಬ್‌ಜೆಕ್ಟ್ ಬಗ್ಗೆ ವಿದ್ಯಾರ್ಥಿಗಳು ಅತೀ ಹೆಚ್ಚು ಸ್ಟಡಿ ಮಾಡುವ ಅವಶ್ಯಕತೆಯಿದೆ. ಪ್ರಮುಖ ಟಾಪಿಕ್ ಬಗ್ಗೆ ಮಾತನಾಡುವ ಮುನ್ನ ಎಕ್ಸಾಂ ಮಾದರಿ ಹೇಗಿರುತ್ತದೆ ಎಂಬುವುದು ತಿಳಿದುಕೊಳ್ಳೋಣ. ಪರೀಕ್ಷೆಗೆ ಹೇಗೆ ಅಂಕ ಸ್ಕೋರ್ ಮಾಡಬಹುದು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಅದಕ್ಕೂ ಮುನ್ನ ಪರೀಕ್ಷೆಯ ಮಾದರಿ ಹೇಗಿರುತ್ತೆ ಎಂದು ತಿಳಿದುಕೊಳ್ಳೋಣ

ಎನ್‌ಇಇಟಿ 2020  ಪರೀಕ್ಷೆ ಮಾದರಿ

ಎನ್‌ಇಇಟಿ 2020 ಪರೀಕ್ಷೆ ಮಾದರಿ

ಪರೀಕ್ಷೆ ವಿಧಾನ: ಆಫ್‌ಲೈನ್
ಅವಧಿ: 3 ಗಂಟೆ
ಭಾಷೆ: ಇಂಗ್ಲೀಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಒಡಿಯಾ, ಕನ್ನಡ ಹಾಗೂ ಉರ್ದು
ಪ್ರಶೆ ವಿಧಾನ: ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು
ಪ್ರಶ್ನೆಗಳ ಒಟ್ಟು ಸಂಖ್ಯೆ : 180
ಒಟ್ಟು ಅಂಕಗಳು : 720 ಅಂಕಗಳು
ಅಂಕ ನೀಡುವ ವಿಧಾನ: ಪ್ರತೀ ಉತ್ತರಕ್ಕೆ 4 ಅಂಕಗಳು ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಳೆಯಲಾಗುವುದು.

 

ಈ ಪರೀಕ್ಷೆ ಬರೆಯಲು ಎಷ್ಟು ಅಂಕಪಡೆಯಬೇಕು

ಈ ಪರೀಕ್ಷೆ ಬರೆಯಲು ಎಷ್ಟು ಅಂಕಪಡೆಯಬೇಕು

ಈ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಅಂಕವನ್ನು ಶೇಕಡಾವಾರು ಪ್ರಮಾಣದಲ್ಲಿ ಅಳೆದು ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆ ಬರೆಯಲು ಎಷ್ಟು ಅಂಕಪಡೆಯಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ
ಓಪನ್ ಕೆಟಗರಿ (ಓಸಿ) : ಶೇಕಡಾ 50
ಓಸಿ ವಿಕಲಚೇತನ - ಶೇಕಡಾ 45
ಎಸ್ ಸಿ - ಶೇಕಡಾ 40
ಎಸ್ ಟಿ - ಶೇಕಡಾ 40
ಓಬಿಸಿ- ಶೇಕಡಾ 40

11ನೇ ತರಗತಿಯ ಸಬ್‌ಜೆಕ್ಟ್ ನಲ್ಲಿ ಫೋಕಸ್ ಮಾಡಬೇಕಾದದ್ದು
 

11ನೇ ತರಗತಿಯ ಸಬ್‌ಜೆಕ್ಟ್ ನಲ್ಲಿ ಫೋಕಸ್ ಮಾಡಬೇಕಾದದ್ದು

ಫಿಸಿಕ್ಸ್ - 76
ಕೆಮೆಸ್ಟ್ರಿ - 64
ಸಸ್ಯಶಾಸ್ತ್ರ -112
ಪ್ರಾಣಿಶಾಸ್ತ್ರ - 100
ಒಟ್ಟು : 354

12ನೇ ತರಗತಿಯ ಸಬ್‌ಜೆಕ್ಟ್ ನಲ್ಲಿ ಫೋಕಸ್ ಮಾಡಬೇಕಾದದ್ದು

12ನೇ ತರಗತಿಯ ಸಬ್‌ಜೆಕ್ಟ್ ನಲ್ಲಿ ಫೋಕಸ್ ಮಾಡಬೇಕಾದದ್ದು

ಫಿಸಿಕ್ಸ್ - 104
ಕೆಮೆಸ್ಟ್ರಿ - 116
ಸಸ್ಯಶಾಸ್ತ್ರ -88
ಪ್ರಾಣಿಶಾಸ್ತ್ರ - 60
ಒಟ್ಟು : 368

ಎನ್‌ಇಇಟಿ ಯುಜಿ ಭೌತಶಾಸ್ತ್ರಕ್ಕೆ  ಓದಬೇಕಾದ ಪ್ರಮುಖ ಟಾಪಿಕ್ಸ್

ಎನ್‌ಇಇಟಿ ಯುಜಿ ಭೌತಶಾಸ್ತ್ರಕ್ಕೆ ಓದಬೇಕಾದ ಪ್ರಮುಖ ಟಾಪಿಕ್ಸ್

ಫಿಸಿಕ್ಸ್, ಮೆಕಾನಿಕ್ಸ್ ಹಾಗೂ ಎಲೆಕ್ಟ್ರೋಡಿನಾಮಿಕ್ಸ್ ಇವೆಲ್ಲವೂ ಪ್ರಮುಖವಾದ ಟಾಪಿಕ್ ಆಗಿದೆ. ಆಧುನಿಕ ಫಿಸಿಕ್ಸ್ ನಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಬಗ್ಗೆ ಕೇಳಬಹುದು. ಅಷ್ಟೇ ಅಲ್ಲ ಉಷ್ಣಬಲ ವಿಜ್ಞಾನದ ನಿಯಮಗಳು, ಕಿರಣ ದೃಗ್ವಿಜ್ಞಾನ, ಪರಮಾಣು ಭೌತಶಾಸ್ತ್ರ, ದ್ಯುತಿವಿದ್ಯುತ್ ಪರಿಣಾಮ, ವಿದ್ಯುತ್ಕಾಂತೀಯ ಅಲೆಗಳು, ಪರಿಭ್ರಮಣ ಚಲನೆ, ಅಲೆಗಳು ಮತ್ತು ಧ್ವನಿ ಮತ್ತು ವಿದ್ಯುದ್ವಿಭಜನೆ ಈ ವಿಷಯದತ್ತನೂ ಫೋಕಸ್ ಅಗತ್ಯ.

ಎನ್‌ಇಇಟಿ ಯುಜಿ ರಾಸಾಯನಿಕ ಶಾಸ್ತ್ರಕ್ಕೆ ಓದಬೇಕಾದ ಪ್ರಮುಖ ಟಾಪಿಕ್ಸ್

ಎನ್‌ಇಇಟಿ ಯುಜಿ ರಾಸಾಯನಿಕ ಶಾಸ್ತ್ರಕ್ಕೆ ಓದಬೇಕಾದ ಪ್ರಮುಖ ಟಾಪಿಕ್ಸ್

ರಾಸಾಯನಿಕ ಶಾಸ್ತ್ರವನ್ನು ಅಜೈವಿಕ, ಸಾವಯವ ಮತ್ತು ಭೌತಿಕ ರಸಾಯನಶಾಸ್ತ್ರ ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಸಾವಯವ ರಾಸಾಯನಿಕ ಶಾಸ್ತ್ರ ವಿಭಾಗದ ಅಡಿಯಲ್ಲಿ ಆಸಿಡ್ ಹಾಗೂ ಬೇಸಸ್, ಅಟೋಮಿಕ್ ಸ್ಟ್ರಕ್ಚರ್, ಹಾಲೋಲ್ಕಾನೆಸ್ ಮತ್ತು ಕಾರ್ಬೋನಿಲ್ ಕಂಪೌಂಡ್ಸ್ ಟಾಪಿಕ್ ನತ್ತ ಗಮನಕೊಡಿ

ಅಜೈವಿಕ ರಾಸಾಯನಿಕ ಶಾಸ್ತ್ರ ವಿಭಾಗದ ಅಡಿಯಲ್ಲಿ ದಿ ಹಾಗೂ ಎಫ್ ಬ್ಲಾಕ್ ಎಲಿಮೆಂಟ್ಸ್‌ ಮತ್ತು ಪಿ ಬ್ಲಾಕ್ ಎಲಿಮೆಂಟ್ಸ್, ಕ್ವಾಲಿಟೇಟಿವ್ ಅನಾಲಿಸಿಸ್, ಕೆಮಿಕಲ್ ಕಿನೆಟಿಕ್ಸ್, ಮತ್ತು ಎಲೆಕ್ಟ್ರೋ ಕೆಮೆಸ್ಟ್ರಿ ಮುಂತಾದ ಟಾಪಿಕ್ ಬಗ್ಗೆ ಫೋಕಸ್ ಮಾಡಲಾಗುತ್ತದೆ

 

ಎನ್‌ಇಇಟಿ ಯುಜಿ ಸಸ್ಯಶಾಸ್ತ್ರ ಕ್ಕೆ ಓದಬೇಕಾದ ಪ್ರಮುಖ ಟಾಪಿಕ್ಸ್

ಎನ್‌ಇಇಟಿ ಯುಜಿ ಸಸ್ಯಶಾಸ್ತ್ರ ಕ್ಕೆ ಓದಬೇಕಾದ ಪ್ರಮುಖ ಟಾಪಿಕ್ಸ್

ಎಕಾಲಾಜಿ, ಆನುವಂಶಿಕತೆಯ ಆಣ್ವಿಕ ಆಧಾರ, ಸಸ್ಯ ಸಾಮ್ರಾಜ್ಯ ಸಬ್‌ಜೆಕ್ಟ್ ನಿಂದ ಹೆಚ್ಚಿನ ವಿಷಯಗಳನ್ನು ಕೇಳಲಾಗುತ್ತದೆ. ಪರಿಸರ ಅಧ್ಯಯನ, DNA ಪ್ರತಿಕೃತಿ ಈ ಸಬ್‌ಜೆಕ್ಟ್ ಅಡಿಯಲ್ಲಿ ಬರುವ ಪ್ರಮುಖ ಟಾಪಿಕ್ ಗಳು

ಪ್ರಾಣಿಶಾಸ್ತ್ರ

ಪ್ರಾಣಿಶಾಸ್ತ್ರ

ಮಾನವನ ಶರೀರಶಾಸ್ತ್ರ ಸೇರಿದಂತೆ ಅತೀ ಹೆಚ್ಚು ಅಂಕದ ಪ್ರಶ್ನೆಗಳನ್ನ ಪ್ರಾಣಿಶಾಸ್ತ್ರದಿಂದ ಕೇಳಲಾಗುತ್ತದೆ. ಡಯಾಗ್ರಾಮ್ ಮೂಲಕ ಕಲಿತ್ರೆ ನಿಮಗೆ ಇನ್ನೂ ಸುಲಭವಾಗುವುದು. ಕೃತಕ ಫಲೀಕರಣ ಮತ್ತು ಗರ್ಭನಿರೋಧಕ ವಿಧಾನದ ಬಗ್ಗೆಯೂ ಹೆಚ್ಚು ಹೆಚ್ಚು ಸ್ಟಡಿ ಮಾಡಲೇ ಬೇಕು

ಎನ್‌ಇಇಟಿ ಬಗ್ಗೆ

ಎನ್‌ಇಇಟಿ ಬಗ್ಗೆ

ನ್ಯಾಷನಲ್ ಎಂಟ್ರೇಸ್ ಕಂ ಎಲಿಜಿಬಿಲಿಟಿ ಟೆಸ್ಟ್ ( ಎನ್‌ಇಇಟಿ) ಇದು ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗೆ ಹೋಗಲು ಇಚ್ಚಿಸುವ ವಿದ್ಯಾರ್ಥಿಗಳು ಬರೆಯಬೇಕಾದ ಪ್ರವೇಶ ಪರೀಕ್ಷೆ. ಸರ್ಕಾರಿ ಹಾಗೂ ಪ್ರೈವೆಟ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಸೀಟು ಹಂಚಿಕೆಗಾಗಿ ಸೆಂಟ್ರಲ್ ಬೋರ್ಡ ಆಫ್ ಸೆಕೆಂಡರಿ ಎಜ್ಯುಕೇಶನ್ ಆಯೋಜನೆ ಮಾಡುವ ಪರೀಕ್ಷೆಯಾಗಿದೆ.

ಈ ಪರೀಕ್ಷೆ ಎಷ್ಟು ಕಷ್ಟವಿರುತ್ತದೆ ಅಂದ್ರೆ ಅದೆಷ್ಟೋ ವಿದ್ಯಾರ್ಥಿಗಳು ಪಾಸಾಗಲು ಹರಸಾಹಸ ಪಡಬೇಕಾಗುತ್ತದೆ. ಅದಕ್ಕಾಗಿಯೇ ಅನೇಕ ಕೋಚಿಂಗ್ ಸೆಂಟರ್ ಕೂಡಾ ಇದೆ. ಏನೇ ಹೇಳಿ ಪರೀಕ್ಷೆಯನ್ನ ಕ್ಲಿಯರ್ ಆಗಿ ಅರ್ಥ ಮಾಡಿಕೊಂಡ್ರೆ ಮಾತ್ರ ಉತ್ತಮ ಅಂಕ ಪಡೆಯಲು ಸಾಧ್ಯ

 

For Quick Alerts
ALLOW NOTIFICATIONS  
For Daily Alerts

English summary
NEET UG 2020 is around the corner and this is the time students must look into the important topics and thoroughly get familiar with them. The exam will be conducted offline in various cities of India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X