ನೀವು ಆಲಸಿಗಳೇ... ಹಾಗಿದ್ರೆ ಈ ಜಾಬ್ ನಿಮಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ!

By Kavya

ದಿನದ ಕೆಲವೇ ಗಂಟೆ ಮಾತ್ರ ಕೆಲಸ ಜತೆಗೆ ತುಂಬಾ ರಜೆ ಬೇಕು ಎಂದು ನಿಮಗೆ ಅನಿಸುತ್ತಿದೆಯೇ? ನಿಮ್ಮ ಈ ಬಯಕೆಗೆ ತಕ್ಕಂತಹ ಒಂದು ಹುದ್ದೆ ಇದೆ. ಇದು ಡೀಸೆಂಟ್ ಹುದ್ದೆಯಾಗಿದ್ದು, ಈ ಹುದ್ದೆಗೆ ಹಣದ ಜತೆ ನೀವು ಸಮಾಜದಲ್ಲಿ ಗೌರವ ಕೂಡಾ ಪಡೆದುಕೊಳ್ಳುತ್ತೀರಾ. ಈ ಹುದ್ದೆ ನಿಮ್ಮದಾದಲ್ಲಿ ಆರಾಮದ ಕೆಲಸದ ಜತೆ ಲಾಂಗ್ ವೆಕೇಶನ್ ಕೂಡಾ ನಿಮ್ಮದಾಗುವುದು.

ನೀವು ಆಲಸಿಗಳೇ... ಹಾಗಿದ್ರೆ ಈ ಜಾಬ್ ನಿಮಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ!

 

ಹೌದು ಟೀಚಿಂಗ್ ಪ್ರೊಫೆಶನ್ ನಿಮಗೆ ಬೆಸ್ಟ್. ನೀವು ಬಯಸುವ ಈ ಮೇಲಿನ ಬಯಕೆಗೆ ತಕ್ಕನಾದ ಹುದ್ದೆ ಎಂದ್ರೆ ಶಿಕ್ಷಕ ವೃತ್ತಿ. ಒಂದು ಮಗುವಿನ ಜೀವನದಲ್ಲಿ ಹೆತ್ತವರ ನಂತರದ ಪ್ರಮುಖ ಸ್ಥಾನ ಈ ಟೀಚರ್ಸ್ ದು. ಇಂದಿನ ಮಕ್ಕಳನ್ನ ಮುಂದಿನ ಗೌರವಾನ್ವಿತ ಪ್ರಜೆಯನ್ನಾಗಿ ರೂಪಿಸುವ ಹೊಣೆ ಶಿಕ್ಷಕರಲ್ಲಿ ಇರುತ್ತದೆ.

ALSO READ: ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

ಬನ್ನಿ ಇದೀಗ ಈ ಹುದ್ದೆ ನಿಮಗೆ ಹೇಗೆ ಸ್ಯೂಟ್ ಆಗಬಲ್ಲದು ಎಂದು ನಾವು ತಿಳಿಸುತ್ತೇವೆ ಮುಂದಕ್ಕೆ ಓದಿ. ಈ ಹುದ್ದೆಗೆ ದಿನದ ಬರೀ 6 ರಿಂದ 7 ಗಂಟೆ ಮಾತ್ರ ಸಾಕು. ಸಾಮಾನ್ಯವಾಗಿ ಟೀಚರ್ ಗಳ ವರ್ಕಿಂಗ್ ಟೈಂ ಮುಂಜಾನೆ 7.30 ಇಲ್ಲ 8 ರಿಂದ ಪ್ರಾರಂಭವಾಗಿ ಮಧ್ಯಾಹ್ಯ 1.30 ಯಿಂದ 2 ಗಂಟೆಯೊಳಗೆ ಮುಗಿದು ಹೋಗುತ್ತದೆ.

ವರ್ಕಿಂಟ್ ಟೈಂ ಕಳೆದ ನಂತರ ಮಧ್ಯಾಹ್ನ 3 ಗಂಟೆಗೆ ಮನೆಗೆ ಹಿಂತಿರುಗ ಬಹುದು. ಮತ್ತೆಯ ಸಮಯವನ್ನ ಫ್ಯಾಮಿಲಿ ಹಾಗೂ ಸ್ನೇಹಿತರ ಜತೆ ಬಿಂದಾಸ್ ಆಗಿ ಕಳೆಯಬಹುದು. ಜತೆಗೆ ವರ್ಷಕ್ಕೆ ಎರಡು ಬಾರಿ ಲಾಂಗ್ ರಜೆ ಕೂಡಾ ಇರುತ್ತದೆ. ಬೇಸಿಗೆಯಲ್ಲಿ ಸುಮಾರು ಒಂದೂವರೆ ತಿಂಗಳು ರಜೆ ಇರುತ್ತದೆ ಹಾಗೂ ಚಳಿಗಾಲದಲ್ಲಿ 2 ವಾರ ರಜೆ ಇರುತ್ತದೆ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ದಸರಾ ಹಾಗೂ ದೀಪಾವಳಿಗೆಂದು ಎರಡು ವಾರ ರಜೆ ನೀಡುತ್ತಾರೆ. ಇವಿಷ್ಟೇ ಅಲ್ಲದೇ ಸರ್ಕಾರಿ ರಜೆಗಳ ಜತೆಗೆ ಇನ್ನಿತ್ತರ ಕೆಲವುರಜೆಗಳಿದ್ದು, ಈ ಟೈಂನಲ್ಲಿ ನೀವು ಆರಾಮವಾಗಿ ರಿಲಾಕ್ಸ್ ಮಾಡಬಹುದು.

 

ಇಷ್ಟು ಓದಿದ ಮೇಲೆ ಟೀಚರ್ ವೃತ್ತಿ ಆಯ್ಕೆ ಮಾಡುವುದು ಬೆಸ್ಟ್ ಎಂದು ಅಂದುಕೊಂಡು ಈಗಲೇ ಸಿದ್ಧತೆ ಮಾಡಿಕೊಂಡ್ರಾ.. ಸ್ವಲ್ಪ ತಡಿರಿ ಇನ್ನೂ ಇದೆ. ಇಷ್ಟೇಲ್ಲಾ ಆಫರ್ ಗಳಿದ್ರೂ ಟೀಚರ್ ವೃತ್ತಿ ಅಷ್ಟೊಂದು ಸುಲಭದಾಯಕವಲ್ಲ. ನೀವು ಯಾವುದರಲ್ಲಿ ನಿಸ್ಸೀಮರು ಎಂದು ತಿಳಿದುಕೊಳ್ಳಬೇಕಿದೆ. ಟೀಚರ್ ಆಗಬೇಕಾದ್ರೆ ಬಿಎಡ್ ಡಿಗ್ರಿ ಜತೆ ಇನ್ನೂ ಕೆಲವೊಂದು ಮೂಲಭೂತ ಅಗತ್ಯಗಳನ್ನ ರೂಪಿಸಿಕೊಳ್ಳಬೇಕಿದೆ. ಟೀಚಿಂಗ್ ಜತೆ ಜತೆ ಮಕ್ಕಳನ್ನ ಪ್ರೀತಿಸುವುದು ಕೂಡಾ ಕಲಿತುಕೊಳ್ಳಬೇಕಿದೆ. ಅಷ್ಟೇ ಅಲ್ಲ ಶಿಸ್ತಿನಿಂದಿದ್ದು, ನಿಮ್ಮೆಲ್ಲಾ ಅಶಿಸ್ತಿನ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ರೆ ಮಾತ್ರ ನೀವು ಯಶಸ್ವೀ ಟೀಚರ್ ಎನಿಸಿಕೊಳ್ಳುವಿರಿ.

ALSO READ: ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

ಬರೀ ಹಣ ಬೇಕು ಎಂಬ ಉದ್ದೇಶವಿದ್ದರೆ ಈ ವೃತ್ತಿಗೆ ನೀವು ಕಾಲಿಡಬೇಡಿ ಹಾಗೂ ಭಾರತದ ಎಜ್ಯುಕೇಶನ್ ಸಿಸ್ಟಮ್‌ಗೆ ಏನಾದ್ರೂ ನಿಮ್ಮಿಂದ ಸಹಾಯ ಮಾಡಬೇಕೆಂಬ ಉದ್ದೇಶವಿದ್ರೆ ಈ ವೃತ್ತಿ ನಿಮ್ಮದಾಗಿಸಿಕೊಳ್ಳಲು ಈಗಲೇ ತಯಾರಿ ಮಾಡಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
It is one of the most responsible jobs and if not taken seriously, can seriously hamper the future of the entire nation. Teachers, after parents, are the ones who mould the impressionable minds of tiny toddlers and young kids into something, which makes them civilised and prepare them for a productive life ahead.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more