ನಿಮ್ಮ ರೆಸ್ಯೂಮ್‍ನಿಂದ ಈ ಮಿಸ್ಟೇಕ್ಸ್ ದೂರ ಮಾಡಿದ್ರೆ ಕೆಲಸ ಗ್ಯಾರಂಟಿ !

ನೀವು ಉದ್ಯೋಗದ ಭೇಟೆಯಲ್ಲಿದ್ದೀರಾ ಹಾಗಿದ್ರೆ ಮೊದಲ ಸ್ಟೆಪ್ ರೆಸ್ಯೂಮ್ ತಯಾರು ಮಾಡುವುದು. ಒಮ್ಮೆ ನಿಮ್ಮ ಶಿಕ್ಷಣ ಕಂಪ್ಲೀಟ್ ಆದ ಕೂಡಲೇ ಮತ್ತೆ ಜಾಬ್ ಟೆನ್ಷನ್ ಸ್ಟಾರ್ಟ ಆಗುತ್ತದೆ. ನಿಮ್ಮ ರೆಸ್ಯೂಮ್‍ನಲ್ಲಿ ಬರೀ ಮಿಸ್ಟೇಕ್‍ಗಳೇ ತುಂಬಿದ್ರೆ ನಿಮಗೆ ಇಂಟರ್‍ವ್ಯೂ ಗೆ ಕರೆ ಬರುವ ಬದಲು ನಿಮ್ಮ ರೆಸ್ಯೂಮ್ ಕಸದಬುಟ್ಟಿ ಸೇರುವುದರಲ್ಲಿ ಡೌಟೇ ಇರಲ್ಲ.

ಹಾಗಿದ್ರೆ ಯಾವ ಮಿಸ್ಟೇಕ್‍ಗಳು ರೆಸ್ಯೂಮ್‍ನಲ್ಲಿ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿಮ್ಮ ರೆಸ್ಯೂಮ್‍ನಿಂದ ಈ ಮಿಸ್ಟೇಕ್ಸ್ ದೂರ ಮಾಡಿದ್ರೆ ಕೆಲಸ ಗ್ಯಾರಂಟಿ !

ಸಂಬಂಧವಿಲ್ಲದ ಕೆಲಸದ ಅನುಭವ:

ಕಾಲೇಜು ಫೆಸ್ಟ್ ದಿನಗಳಲ್ಲಿ ನೀವು ನೀವು ವಾಲೆಂಟಿಯರ್ ಆಗಿ ಕೆಲಸ ಮಾಡಿರಬಹುದು. ಹಾಗಂತಹ ಹುದ್ದೆಗೆ ಅಪ್ಲೈ ಮಾಡುವ ವೇಳೆ ನಿಮ್ಮ ರೆಸ್ಯೂಮ್‍ನಲ್ಲಿ ಈ ಮಾಹಿತಿ ಬೇಡ. ಯಾಕೆಂದ್ರೆ ನಿಮ್ಮ ಹುದ್ದೆಗೆ ಈ ಅನುಭವದ ಅಗತ್ಯವಿರುವುದಿಲ್ಲ

ಅತೀ ಹೆಚ್ಚು ಪರ್ಸನಲ್ ಡೀಟೆಲ್ಸ್:

ಈ ರೆಸ್ಯೂಮ್ ನಿಮ್ಮ ಮದುವೆಗೆ ಸಂಬಂಧಕ್ಕಲ್ಲ ಹಾಗಾಗಿ ಹುದ್ದೆಗೆ ರೆಸ್ಯೂಮ್ ಅಪ್ಲೈ ಮಾಡುವಾಗ ಅತೀ ಹೆಚ್ಚು ಪರ್ಸನಲ್ ಡೀಟೆಲ್ಸ್ ಬೇಡ. ಎಷ್ಟು ಬೇಕೋ ಅಷ್ಟೇ ಮಾಹಿತಿ ಇರಲಿ. ನಿಮ್ಮನ್ನ ಸಂಪರ್ಕಿಸಲು ಸಾಧ್ಯವಾಗುವಷ್ಟು ಮಿತವಾದ ಮಾಹಿತಿ ಇದ್ದರೆ ಸಾಕು.

ಶಾಲೆಗಳ ಮಾಹಿತಿ: ಶಾಲೆಗಳ ಅಂಕಗಳ ಮಾಹಿತಿ ನೀಡುವಾಗ ಈ ಅಂಶ ಗಮನವಿಟ್ಟುಕೊಳ್ಳಿ. ನೀವು ಪದವೀಧರರಾಗಿದ್ದರೆ ಹೈಸ್ಕೂಲ್, ಪ್ರೈಮರಿ ಶಾಲೆಗಳ ಅಂಕಗಳ ಮಾಹಿತಿ ನೀಡುವ ಅಗತ್ಯವಿಲ್ಲ. ಪದವಿ ಮಾಹಿತಿ ನೀಡಿದ್ರೆ ಸಾಕು.

ಸಂಬಂಧವಿಲ್ಲದ ಹವ್ಯಾಸ:

ಈ ಅಂಶ ಕೂಡಾ ಗಣನೆಗೆ ತೆಗೆದುಕೊಳ್ಳುವುದು ಅಗತ್ಯ. ನೀವು ಯಾವುದಾದ್ರೂ ಹುದ್ದೆಗೆ ಅರ್ಜಿ ಸಲ್ಲಿಸುವವರಾಗಿದ್ದರೆ, ಆ ಹುದ್ದೆಗೆ ಸಂಬಂಧಪಟ್ಟ ಹವ್ಯಾಸ ಇದ್ರೆ ಮಾತ್ರ ಅದನ್ನು ನಮೂದಿಸಿ. ಇನ್ನೂ ಸ್ಪೋಟ್ರ್ಸ ಕ್ಷೇತ್ರದಲ್ಲಿ ನೀವು ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ಅದಕ್ಕೆ ನಿಮ್ಮ ಸಿಂಗಿಂಗ್, ಡ್ಯಾನ್ಸಿಂಗ್ ಹವ್ಯಾಸದ ಬಗ್ಗೆ ಬರೆಯುವ ಅಗತ್ಯವಿಲ್ಲ

ಫೋಟೋಗ್ರಾಫ್ಸ್:

ಇನ್ನು ನೀವು ಕಂಪನಿಗಳಿಗೆ ಜಾಬ್‍ಗೆ ಅಪ್ಲೈ ಮಾಡುವವರಾಗಿದ್ದರೆ ರೆಸ್ಯೂಮ್‍ನಲ್ಲಿ ಫೋಟೋ ಮುದ್ರಿಸುವ ಅಗತ್ಯವಿಲ್ಲ. ಯಾಕೆಂದ್ರೆ ಫೋಟೋ ನೋಡಿ ಅವರು ಸಂದರ್ಶನಕ್ಕೆ ಕರೆಯುದಿಲ್ಲ ಆದ್ರೆ ಮಾಡೆಲಿಂಗ್, ಸಿನಿಮಾ ರಂಗ ಮುಂತಾದೆಡೆ ನೀವು ಅರ್ಜಿ ಸಲ್ಲಿಸುವುದಾದ್ರೆ ಫೋಟೋ ಜತೆಗಿರಿಸುವುದು ಬೆಸ್ಟ್.

ಅತೀ ಹೆಚ್ಚು ಸಂಪರ್ಕ ವಿವರ:

ಹೌದು ನಿಮ್ಮನ್ನ ಸಂದರ್ಶನಕಾರರಿಗೆ ಸಂಪರ್ಕಿಸಲು ಸಾಧ್ಯವಾಗುವಂತಹ ಒಂದು ಸರಿಯಾದ ಕಾಂಟೆಕ್ಸ್ ನಂಬರ್ ಹಾಗೂ ವಿಳಾಸ ನೀಡಿದ್ರೆ ಸಾಕು. ಆದ್ರೆ ಅದು ಬಿಟ್ಟು ಸಿಕ್ಕಾಪಟ್ಟೆ ನಂಬರ್ ಹಾಗೂ ವಿಳಾಸ ನೀಡಿದ್ರೆ ಸಂದರ್ಶನಕಾರರಿಗೆ ನಿಮ್ಮನ್ನ ಕಾಂಟೆಕ್ಟ್ ಮಾಡಲು ಕಂಫ್ಯೂಸ್ ಆಗಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Things that you should not included in your cv. who are looking for job, CV may be the most important and it should be. there might be many, depending on different parameters, here we have listed 10 general things that you should not include in your cv
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+