Police Commemoration Day 2021 : ಪೊಲೀಸ್ ಸ್ಮರಣಾರ್ಥ ದಿನದ ಇತಿಹಾಸ ಮತ್ತು ಮಹತ್ವವನ್ನು ಇಲ್ಲಿ ತಿಳಿಯಿರಿ

ಪೊಲೀಸ್ ಸ್ಮರಣಾರ್ಥ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ನಾಡಿನ ಭದ್ರತೆಗಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಲು ಪ್ರತಿ ವರ್ಷ ದೇಶವು ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸುತ್ತದೆ.

 

ಪೊಲೀಸ್ ಅಂದರೆ ಕೇವಲ ರಕ್ಷಣೆ ಮಾಡುವ ಕೆಲಸವಲ್ಲ ಇಡೀ ನಾಡನ್ನೇ ಕಾಯುವವವರು, ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪೊಲೀಸ್ ವೃತ್ತಿಗೆ ಇಡೀ ಜಗತ್ತೇ ಗೌರವಿಸುತ್ತದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರನ್ನು ನೆನೆಯುತ್ತಾ ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತಾದ ಮಾಹಿತಿಯನ್ನು ತಿಳಿಯಿರಿ.

ಅಕ್ಟೋಬರ್ 21, 1959 ರಂದು ಚೀನಾದ ಸೈನಿಕರು ಗುಂಡು ಹಾರಿಸಿದರು ಮತ್ತು ಲಡಾಖ್‌ನಲ್ಲಿ ಇಪ್ಪತ್ತು ಭಾರತೀಯ ಸೈನಿಕರ ಮೇಲೆ ಗ್ರೆನೇಡ್‌ಗಳನ್ನು ಎಸೆದಿದ್ದರು. ಚೀನಾದ ಗುಂಡಿನ ದಾಳಿಯಲ್ಲಿ ಕೊನೆಯುಸಿರೆಳೆದ ಹತ್ತು ಪೊಲೀಸರ ತ್ಯಾಗವನ್ನು ಈ ದಿನ ನೆನಪಿಸುತ್ತದೆ.

ನವೆಂಬರ್ 28, 1959 ರಂದು ಚೀನಾ ಸೈನಿಕರು ಹುತಾತ್ಮರಾದ ಪೊಲೀಸರ ಮೃತ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿದರು. ಈಶಾನ್ಯ ಲಡಾಖ್‌ನ ಹಾಟ್ ಸ್ಪ್ರಿಂಗ್‌ಗಳಲ್ಲಿ ಅವರನ್ನು ಪೂರ್ಣ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಈ ಘಟನೆಯ ನಂತರ ಅಕ್ಟೋಬರ್ 21 ರಂದು ಪೋಲಿಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಯಿತು. 2012 ರಿಂದ ದೆಹಲಿಯ ಚಾಣಕ್ಯಪುರಿಯಲ್ಲಿರುವ ಪೋಲಿಸ್ ಸ್ಮಾರಕದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಸ್ಮರಣೋತ್ಸವ ದಿನಾಚರಣೆಯನ್ನು ನಡೆಸಲಾಗುತ್ತಿದೆ.

2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 15 ರಂದು ದೆಹಲಿಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಪೊಲೀಸ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು. ಗುಪ್ತಚರ ಇಲಾಖೆ (ಐಬಿ) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ನಿರ್ವಹಿಸಿದ ವಸ್ತು ಸಂಗ್ರಹಾಲಯವು ಭಾರತದ ಕೇಂದ್ರ ಮತ್ತು ರಾಜ್ಯದ ಪೊಲೀಸ್ ಪಡೆಗಳ ಇತಿಹಾಸ, ಸಮವಸ್ತ್ರ ಮತ್ತು ಗೇರ್ ಅನ್ನು ಚಿತ್ರಿಸುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Police commemoration day is on october 21. Here is the history, significance and all you need to know.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X