ಸಿಂಡಿಕೇಟ್ ಬ್ಯಾಂಕ್ ಸ್ಟೆಷಲಿಸ್ಟ್ ಆಫೀಸರ್ ಹುದ್ದೆಗಳ ಪರೀಕ್ಷಾ ತಯಾರಿಗೆ ಸಿಂಪಲ್ ಸಲಹೆ

ಸಿಂಡಿಕೇಟ್ ಬ್ಯಾಂಕ್ ಸ್ಟೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಒಟ್ಟು 325 ಮ್ಯಾನೇಜರ್ ಮತ್ತು ಸೆಕ್ಯುರಿಟಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ / ಗುಂಪು ಚರ್ಚೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಆನ್‌ಲೈನ್‌ ಪರೀಕ್ಷೆಯನ್ನು ನಡೆಸುವುದಾದರೆ ಮೇ ತಿಂಗಳಿನಲ್ಲಿ ನಡೆಸುವ ಸಾಧ್ಯತೆ ಇರುತ್ತದೆ. ಈ ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾಗಲು ಹೇಗೆ ತಯಾರಿ ನಡೆಸಬೇಕೆಂದು ಇಲ್ಲಿ ತಿಳಿಸಲಿದ್ದೇವೆ ಹಾಗಾಗಿ ಅಭ್ಯರ್ಥಿಗಳು ಒಮ್ಮೆ ಈ ಲೇಖನವನ್ನು ಓದಿ ನಿಮ್ಮ ಪರೀಕ್ಷಾ ತಯಾರಿಯನ್ನು ನಡೆಸಿ.

ಸಿಂಡಿಕೇಟ್ ಬ್ಯಾಂಕ್  ಸ್ಟೆಷಲಿಸ್ಟ್ ಆಫೀಸರ್  ಹುದ್ದೆಗಳ ಪರೀಕ್ಷೆಗೆ ಹೀಗೆ ತಯಾರಿ ಮಾಡಿ

ಸಿಂಡಿಕೇಟ್ ಬ್ಯಾಂಕ್ ಎಸ್‌ಓ ಹುದ್ದೆಗಳ ಆಯ್ಕೆ ಪ್ರಕ್ರಿಯೆ:

ಸ್ಟೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ /ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ / ಗುಂಪು ಚರ್ಚೆ / ಸಂದರ್ಶನದ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಆನ್‌ಲೈನ್‌ ಪರೀಕ್ಷೆಯನ್ನು ನಡೆಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪರ್ಸನಾಲಿಟಿ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸಲಾಗುವುದು. ಇದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೊನೆಯ ಹಂತದಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಕೈಗೊಂಡು ಆಯ್ಕೆ ಮಾಡಿ ನೇಮಕಾತಿ ಮಾಡಿಲಾಗುವುದು.

ಸಿಂಡಿಕೇಟ್ ಬ್ಯಾಂಕ್ ಎಸ್‌ಓ ಪರೀಕ್ಷಾ ರೂಪುರೇಖೆ:

ಈ ಪರೀಕ್ಷೆಯು ಒಟ್ಟು 150 ನಿಮಿಷಗಳದ್ದಾಗಿದ್ದು ಅಭ್ಯರ್ಥಿಗಳು ನೀಡುವ ಪ್ರತಿ ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಡಿತಗೊಳಿಸಲಾಗುವುದು.

ಕ್ರಮ.ಸಂ.ಪರೀಕ್ಷೆಪ್ರಶ್ನೆಗಳುಗರಿಷ್ಟ ಅಂಕಗಳು
1ರೀಸನಿಂಗ್5050
2ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್2525
3ಪ್ರೊಫೆಷನಲ್ ನಾಲೆಡ್ಜ್ (ಹುದ್ದೆಗೆ ಸಂಬಂಧಪಟ್ಟಂತೆ)7575
4ಇಂಗ್ಲೀಷ್ ಭಾಷೆ5050
ಒಟ್ಟು200200

ಸಿಂಡಿಕೇಟ್ ಬ್ಯಾಂಕ್ ಎಸ್‌ಓ ಪರೀಕ್ಷಾ ತಯಾರಿಗೆ ಸಲಹೆ:

* ಪರೀಕ್ಷಾ ರೂಪುರೇಖೆಯಲ್ಲಿ ತಿಳಿಸಿರುವಂತೆ ಹುದ್ದೆಗೆ ಸಂಬಂಧಪಟ್ಟ ಜ್ಞಾನ ವಿಷಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಅಗತ್ಯವಿರುತ್ತದೆ.

* ಪರೀಕ್ಷೆಯ ಇನ್ನಿತರೆ ಸೆಕ್ಷನ್‌ಗಳ ಬಗೆಗೆ ಗಮನಹರಿಸುವುದು ಒಳಿತು ಕಾರಣ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನದ ಸುತ್ತಿಗೆ ಆಯ್ಕೆ ಮಾಡಲಾಗುವುದು.

* ಇಂಗ್ಲೀಷ್ ಭಾಷೆ ಮತ್ತು ರೀಸನಿಂಗ್ ನಲ್ಲಿ ಅಭ್ಯರ್ಥಿಗಳು ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಿದರೆ ಆನ್‌ಲೈನ್ ಪರೀಕ್ಷೆಯ ಒಟ್ಟಾರೆ ಅಂಕಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

* ಆನ್‌ಲೈನ್ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳುವ ಕಾರಣ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕೇಳಲಾಗುವ ಪ್ರತಿ ವಿಷಯಕ್ಕೂ ಹೆಚ್ಚಿನ ಗಮನ ಕೊಟ್ಟು ತಯಾರಿ ನಡೆಸುವುದು ಒಳಿತು.

* ಅಭ್ಯರ್ಥಿಗಳು ರೀಸನಿಂಗ್‌ನಲ್ಲಿ ಕೇಳಲಾಗುವ ಪ್ರಮುಖ ವಿಷಯಗಳಾದ ಅನಾಲಜಿ,ಕೋಡಿಂಗ್ ಮತ್ತು ಡಿ-ಕೋಡಿಂಗ್ , ಬ್ಲಡ್ ರಿಲೇಶನ್, ಡಾಟಾ ಸಫಿಶಿಯನ್ಸಿ ಟೆಸ್ಟ್ ಇತ್ಯಾದಿ. ಈ ವಿಷಯಗಳಿಗೆ ಹೆಚ್ಚಿನ ತಯಾರಿಯನ್ನು ನಡೆಸಬೇಕು.

* ಇಂಗ್ಲೀಷ್ ಭಾಷೆಯಲ್ಲಿ ವ್ಯಾಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಇವುಗಳ ಬಗೆಗೆ ಸುಲಭವಾಗಿ ತಯಾರಿ ನಡೆಸಿ ಉತ್ತಮ ಅಂಕಗಳನ್ನು ಪಡೆಯಬಹುದು.

* ಅಭ್ಯರ್ಥಿಗಳು ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಉತ್ತರಿಸುವಾಗ ಸ್ವಲ್ಪ ಎಚ್ಚರದಿಂದ ಉತ್ತರಿಸುವುದು ಒಳಿತು ಕಾರಣ ಪ್ರತಿ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸಲಾಗುವುದು.

*ಅಭ್ಯರ್ಥಿಗಳು ಕೊಟ್ಟಿರುವ ಕಾಲಾವಕಾಶದೊಳಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವುದಕ್ಕೆ ಪ್ರಯತ್ನ ಪಡುವುದು ಅಗತ್ಯ.

* ಆನ್‌ಲೈನ್ ಪರೀಕ್ಷೆ ಮುಗಿದ ನಂತರ ಕೆಲವೇ ದಿನಗಳೊಳಗೆ ಸಂದರ್ಶನವನ್ನು ಕೈಗೊಳ್ಳಲಾಗುವುದು ಹಾಗಾಗಿ ಅಭ್ಯರ್ಥಿಗಳು ಈಗಿನಿಂದಲೇ ಸಂದರ್ಶನಕ್ಕೆ ತಯಾರಿ ನಡೆಸಿ

* ಮಾಕ್ ಟೆಸ್ಟ್ ನಿಂದ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಹೆಚ್ಚು ಸಹಾಯವಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಪ್ರತಿನಿತ್ಯ ಒಂದು ಮಾಕ್ ಟೆಸ್ಟ್ ತೆಗೆದುಕೊಳ್ಳುವ ಮೂಲಕ ತಯಾರಿ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Here are the exam preparation tips for syndicate bank Specialist Office examinations,
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+