ಮೊದಲ ಜಾಬ್ ನಲ್ಲಿ ಫ್ರೆಶರ್ಸ್ ಫೇಸ್ ಮಾಡುವ ಸಮಸ್ಯೆಗಳು!

ಮೊದಲ ಹುದ್ದೆಯಲ್ಲಿ ಫೆಶರ್ಸ್ ಅದೆಷ್ಟೋ ಸಮಸ್ಯೆಗಳನ್ನ ಎದುರಿಸುತ್ತಾರೆ. ಅವುಗಳಲ್ಲಿ ೪ ಸಾಮಾನ್ಯ ಸಮಸ್ಯೆಗಳ ಬಗ್ಗೆ ಇದೀಗ ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ

ಜೀವನದಲ್ಲಿ ಹೊಸತೇನಾದ್ರೂ ಪ್ರಾರಂಭಿಸುವುದೆಂದ್ರೆ ಅದು ಸುಲಭದ ಮಾತಲ್ಲ. ನಮಗೆ ಅದೆಷ್ಟೋ ಚ್ಯಾಲೆಂಜ್ ಗಳು, ಊಹಿಸಲಾಗದ ಸಮಸ್ಯೆಗಳು ಎದುರಾಗಬಹುದು.

ಮೊದಲ ಜಾಬ್ ನಲ್ಲಿ ಫ್ರೆಶರ್ಸ್ ಫೇಸ್ ಮಾಡುವ ಸಮಸ್ಯೆಗಳು!

ಸಮಸ್ಯೆಗಳನ್ನ ಬಗೆಹರಿಸುವುದೇ ಒಂದು ಸವಾಲಾಗಿ ಪರಿಣಮಿಸಬಹುದು. ಇನ್ನು ಕೆರಿಯರ್ ಲೈಫ್ ಪ್ರಾರಂಭಿಸುವಾಗಲೂ ಈ ಎಲ್ಲಾ ಸಮಸ್ಯೆ ನಿಮಗೆ ಕಾಡಬಹುದು.

<strong>ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕೆಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ!</strong>ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕೆಂದಿದ್ದರೆ ಈ ಟಿಪ್ಸ್ ಫಾಲೋ ಮಾಡಿ!

ಇನ್ನು ಸ್ಟುಡೆಂಟ್ ಲೈಫ್ ಇದ್ದಾಗ ಉದ್ಯೋಗದ ಬಗ್ಗೆ ಪ್ರತಿಯೊಬ್ಬರು ಅದೆಷ್ಟೋ ಕನಸುಗಳನ್ನ ಕಂಡಿರುತ್ತಾರೆ. ಆದ್ರೆ ಒಮ್ಮೆ ಜಾಬ್ ಎಂಬ ಲೈಫ್ ಗೆ ಎಂಟ್ರಿ ನೀಡಿದಾಗ ಅವರಿಗೆ ತಿಳಿಯುತ್ತೆ ಎಲ್ಲವೂ ನಾವು ಅಂದುಕೊಂಡಂತೆ ಸಾಗುವುದಿಲ್ಲ ಎಂದು.

ಮೊದಲ ಹುದ್ದೆಯಲ್ಲಿ ಫೆಶರ್ಸ್ ಅದೆಷ್ಟೋ ಸಮಸ್ಯೆಗಳನ್ನ ಎದುರಿಸುತ್ತಾರೆ. ಅವುಗಳಲ್ಲಿ 4 ಸಾಮಾನ್ಯ ಸಮಸ್ಯೆಗಳ ಬಗ್ಗೆ ಇದೀಗ ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

<strong>ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು! </strong>ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು!

ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಕಷ್ಟಕರ:

ಫ್ರೆಶರ್ಸ್ ಎದುರಿಸುವ ಸಮಸ್ಯೆಗಳಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ನಾವು ಮಾಡುವುದು ಸರಿಯಿಲ್ಲ ಎಂದು ಹಲವಾರು ಬಾರಿ ಅವರು ಯೋಚಿಸಬಹುದು. ಇಲ್ಲ ಅವರು ಕೆಲಸ ಮಾಡುತ್ತಿರುವ ಫೀಲ್ಡ್ ಬಗ್ಗೆ ಅವರಿಗೆ ಹೆಚ್ಚಿನ ಜ್ಞಾನ ಇಲ್ಲದೇ ಇರಬಹುದು ಹಾಗಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೆ ಮುಂದೆ ಯೋಚಿಸುತ್ತಾರೆ.

ಬೇರೆ ಕಾರಣ ಏನಿರಬಹುದು ಎಂದ್ರೆ, ಅವರಿಗೆ ಎಲ್ಲರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಲು ಕಷ್ಟವಾಗಬಹುದು ಇಲ್ಲ ಕಂಪನಿ ಅವರಿಗೆ ಯಾವುದೇ ರೀತಿಯ ಸಪೋರ್ಟ್ ಮಾಡದೇ ಇರಬಹುದು.

ಹುದ್ದೆಯ ಬಗ್ಗೆ ಸಂತೃಪ್ತಿ ಕೊರತೆ:

ಎಷ್ಟೋ ವಿದ್ಯಾರ್ಥಿಗಳು ಹುದ್ದೆಗೆ ಸೇರುವ ಮುನ್ನ ಏನೆಲ್ಲಾ ಕನಸು ಕಂಡಿರುತ್ತಾರೆ. ಆದ್ರೆ ಅವರು ಜಾಬ್ ಗೆ ಸೇರಿದಾಗ ಈ ಮೊದಲು ಅಂದುಕೊಂಡಂತೆ ಅವರ ಕೆರಿಯರ್ ಜೀವನ ಸಾಗದೇ ಇರಬಹುದು.ಇಂತಹ ಟೈಂನಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಕೆಲಸ ಕೂಡ ಬಿಟ್ಟುಬಿಡುತ್ತಾರೆ. ಆದ್ರೆ ಇದು ನಿಮ್ಮ ಸಮಸ್ಯೆಗೆ ಸೊಲ್ಯುಶನ್ ಅಲ್ಲ.

<strong>ಕಾಲೇಜಿನಲ್ಲಿ ಶಿಕ್ಷಣ ಯಾಕೋ ಆಗಿ ಬರುತ್ತಿಲ್ವಾ... ಹಾಗಿದ್ರೆ ಈ ರೀತಿಯಾಗಿ ನಿಮ್ಮ ಕೆರಿಯರ್ ರೂಪಿಸಿ</strong>ಕಾಲೇಜಿನಲ್ಲಿ ಶಿಕ್ಷಣ ಯಾಕೋ ಆಗಿ ಬರುತ್ತಿಲ್ವಾ... ಹಾಗಿದ್ರೆ ಈ ರೀತಿಯಾಗಿ ನಿಮ್ಮ ಕೆರಿಯರ್ ರೂಪಿಸಿ

ಈ ಸಮಸ್ಯೆಗೆ ಪರಿಹಾರವೇನೆಂದ್ರೆ ನೀವು ಅಂದುಕೊಂಡತೆ ನಿಮಗೆ ಜಾಬ್ ನಲ್ಲಿ ತೃಪ್ತಿ ಸಿಗದೇ ಹೋದ್ರೆ ನೀವು ಮತ್ತಷ್ಟು ಎಫರ್ಟ್ ಹಾಕಿ ಹಾರ್ಡ್ ವರ್ಕ್ ಮಾಡಿ. ಇದರಿಂದ ನಿಮ್ಮ ಕೆಲಸವನ್ನ ಇತರರು ಗುರುತಿಸುವಂತೆಯಾಗುತ್ತದೆ. ಇದರಿಂದ ನಿಮಗೆ ನಿಮ್ಮ ಜಾಬ್ ನಿಂದ ಸಂತೃಪ್ತಿ ಕೂಡಾ ಸಿಗುತ್ತದೆ.

ಟೆಕ್ನಿಕಲ್ ಜ್ಞಾನದ ಕೊರತೆ:

ನೀವು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಇದ್ದಾಗ ಅತೀ ಹೆಚ್ಚು ಅಂಕ ಸ್ಕೋರ್ ಮಾಡಿರಬಹುದು. ಆದ್ರೆ ಇದೀಗ ನೀವು ಕಾರ್ಪೋರೇಟ್ ಜಗತ್ತಿನಲ್ಲಿ ಇದ್ದೀರಾ. ನಿಮ್ಮ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಬದಲಾವಣೆಯಿಂದ ನೀವು ಆಶ್ಚರ್ಯಚಕಿತರಾಗಿರಬಹುದು. ಹಾಗಂತಹ ಅದಕ್ಕೆ ನಿಮ್ಮನ್ನೇ ನೀವು ದೂಷಿಸಿಕೊಳ್ಳಬೇಡಿ. ನೀವು ಕಾಲೇಜಿನಲ್ಲಿ ಏನು ಕಲಿತಿರುತ್ತೀರೋ ಅದೆಲ್ಲಾ ಬರೀ ಥಿಯರಿ ಅಷ್ಟೇ. ಜಾಬ್ ಗೆ ಸೇರಿದ ಮೇಲೆಯೇ ನಾವು ನಿಜವಾಗಿಯೂ ಕಲಿಯುವಂತದ್ದು. ಹಾಗಾಗಿ ನಿಮಗೆ ಹುದ್ದೆಗೆ ಸೇರಿದ ಮೇಲೆ ಅದೆಷ್ಟೋ ಟೆಕ್ನಿಕಲ್ ಜ್ಞಾನ ಇಲ್ಲದೆ ನಿಮಗೆ ಕೆಲಸ ಮಾಡುವುದು ಕಷ್ಟ ಎನಿಸಬಹುದು. ಅದಕ್ಕಾಗಿ ನೀವು ಟೆಕ್ನಿಕಲ್ ವಿಷಯಕ್ಕೆ ಸಂಬಂಧಪಟ್ಟಂತೆ ಅದೆಷ್ಟೋ ಕೋರ್ಸ್ ಗಳಿವೆ. ಆ ಕೋರ್ಸ್ ಗಳಿಗೆ ಸೇರಿ ಜ್ಞಾನವರ್ಧಿಸಿಕೊಳ್ಳಿ.

<strong>ನೀವು ಮಾಡುವ ಕೆಲಸದಲ್ಲಿ ಪ್ರೊಡಕ್ಟಿವಿ ಹೆಚ್ಚಿಸುವುದು ಹೇಗೆ?</strong>ನೀವು ಮಾಡುವ ಕೆಲಸದಲ್ಲಿ ಪ್ರೊಡಕ್ಟಿವಿ ಹೆಚ್ಚಿಸುವುದು ಹೇಗೆ?

ಹೆಚ್ಚು ಸಮಯ ಕೆಲಸ:

ಹೌದು ಕಾಲೇಜಿನಲ್ಲಿ ಟೈಮಿಂಗ್ಸ್ ಎಂಬುವುದು ಇತ್ತು. ಬೆಳಗ್ಗೆ ಯಿಂದ ಸಂಜೆ 4 ಗಂಟೆಯಾದ್ರೆ ಅಲ್ಲಿಗೆ ಕ್ಲಾಸ್ ಮುಗಿಯಿತು. ಮತ್ತೇನಿದ್ರೂ ರಿಲಾಕ್ಸ್.ಆದ್ರೆ ಒಮ್ಮೆ ವೃತ್ತಿ ಜೀವನಕ್ಕೆ ಎಂಟ್ರಿಯಾದ್ರೆ ಟೈಮಿಂಗ್ಸ್ ಎಲ್ಲಾ ಬದಲಾಗುತ್ತಾ ಹೋಗುತ್ತದೆ. ನೀವು ಕಡಿಮೆ ಅಂದ್ರೂ 9 ರಿಂದ 10 ಗಂಟೆ ದುಡಿಯಬೇಕು. ಇನ್ನು ನೀವು ಫ್ರೆಶರ್ಸ್ ಆದ್ರೆ ಕೆಲವೊಮ್ಮೆ ಎರಡೆರಡು ಶಿಫ್ಟ್ ಕಂಟಿನ್ಯೂ ಮಾಡಬೇಕಾಗುತ್ತದೆ. ಕೆಲಸ ಹೆಚ್ಚು ಮಾಡುತ್ತಾ ನಿಮ್ಮ ನಿದ್ರೆಯ ಅವಧಿ ಕೂಡಾ ಕಡಿಮೆ ಮಾಡಬೇಕಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Starting any new phase in life is never easy. There are unknown challenges and unimagined obstacles that come our way and without experience, it is very difficult for any individual to tackle the same. The same holds good when people kick-start their career
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X