ಕೆರಿಯರ್ ಅಭಿವೃದ್ಧಿಗಾಗಿ ವರ್ಷಾನುಗಟ್ಟಲೆ ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಇರುವುದು ಸರಿಯಲ್ಲ. ಒಂದೇ ಕಂಪನಿಯಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿಕೊಂಡು ಇದ್ದರೆ, ನಿಮಗೆ ಆ ಕಂಪನಿಯಲ್ಲಿ ಕಂಫರ್ಟ್ ಫೀಲ್ ಆಗಿರಬಹುದು ಹಾಗೆಯೇ ಆ ಕಂಪನಿ ಬಿಟ್ಟು ಹೋಗಲು ಕೂಡಾ ನಿಮಗೆ ಮನಸಾಗದೇ ಇರಬಹುದು.

ಒಂದು ವೇಳೆ ನೀವು ಕೆಲಸ ಬದಲು ಮಾಡದೇ ಇದ್ದರೆ, ಹೊಸತೇನಾದ್ರೂ ಕಲಿಯಲು ನಿಮಗೆ ಅವಕಾಶ ಸಿಗಲ್ಲ ಹಾಗೆಯೇ ಮಾರ್ಕೆಟ್ ವ್ಯಾಲ್ಯೂ ಕೂಡಾ ನಿಮಗೆ ತಿಳಿಯಲ್ಲ. ಹಾಗಾಗಿ ಇಂತಹ ಸಮಯದಲ್ಲಿ ಕೆಲಸ ಚೇಂಜ್ ಮಾಡುತ್ತಾ ಇರುವುದು ಅಗತ್ಯ ಎನಿಸುತ್ತದೆ. ಇನ್ನೂ ಕೆಲಸ ಬದಲು ಮಾಡಿದ ಕೂಡಲೇ ಮೊದಲಿಗೆ ನೀವು ಎದುರಿಸಬೇಕಾಗುವುದು ಸಂದರ್ಶನವನ್ನ.
ಇನ್ನು ಸಂದರ್ಶನದಲ್ಲಿ ಸಂದರ್ಶನಕಾರರಿಗೆ ನಿಮ್ಮ ಕೆಲಸ, ಹಾಗೂ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯುತ್ತದೆ. ಒಂದು ವೇಳೆ ನೀವು ಕೆರಿಯರ್ ಗ್ರೋಥ್ ಆಗಬೇಕು ಎಂದು ಅಂದುಕೊಂಡಿದ್ದರೆ, ಸಂದರ್ಶನ ವೇಳೆ ಸಂದರ್ಶನಕಾರರಿಗೆ ಅಪ್ಪಿ ತಪ್ಪಿಯೂ ಈ ಸವಾಲು ಕೇಳಬೇಡಿ. ಇದರಿಂದ ನಿಮಗೆ ಸಿಗಬಹುದಾಗಿದ್ದ ಕೆಲಸ ಕೂಡಾ ಕೈ ತಪ್ಪಬಹುದು.
15 ನಿಮಿಷ ನಡೆಯುವ ಸಂದರ್ಶನ ನಿಮ್ಮ ಜೀವನಕ್ಕೆ ಒಂದು ಅರ್ಥ ನೀಡಬಹುದು ಇಲ್ಲ ಮತ್ತೆ ನಿಮ್ಮನ್ನ ಕೆಲಸಕ್ಕೆ ಅಲೆಯುವಂತೆ ಮಾಡಬಹುದು. ಹಾಗಾಗಿ ಸಂದರ್ಶನ ವೇಳೆ ಸಂದರ್ಶನಕಾರರಲ್ಲಿ ಅಪ್ಪಿ ತಪ್ಪಿಯೂ ಈ ಕೆಳಗಿನ ಸವಾಲುಗಳನ್ನ ಕೇಳಬೇಡಿ. ಈ ಸವಾಲು ಕೇಳಿದ್ದೇ ಆದಲ್ಲಿ ಆ ಕೆಲಸ ನಿಮ್ಮ ಕೈ ತಪ್ಪಿ ಹೋಗುವುದು ಗ್ಯಾರಂಟಿ.
ಆ ಸವಾಲುಗಳು ಯಾವುವು ಎಂದು ಈ ಕೆಳಗೆ ನೀಡಲಾಗಿದೆ.
ವೇತನ ಸವಾಲು:
ಸಂದರ್ಶನದಲ್ಲಿ ಹೆಚ್ ಆರ್ ರೌಂಡ್ ವೇಳೆ, ಅವರಾಗಿಯೇ ನಿಮಗೆ ಸ್ಯಾಲರಿ ಬಗ್ಗೆ ಕೇಳುವ ಮುನ್ನ ನೀವಾಗಿಯೇ ಕೇಳಿ ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ. ನಿಮಗೆ ಅವರು ನೀಡುವ ಸ್ಯಾಲರಿ ಬಗ್ಗೆ ಅಸಮಾಧಾನ ವಿದ್ದರೆ ಮತ್ತೊಮ್ಮೆ ಹೆಚ್ ಆರ್ ಅವರನ್ನ ಭೇಟಿಯಾಗಿ ಚರ್ಚಿಸಿ ಆದ್ರೆ ಮೊದಲ ರೌಂಡ್‌ನಲ್ಲಿ ಸ್ಯಾಲರಿ ಬಗ್ಗೆ ಯಾವುದೇ ಕಾರಣಕ್ಕೂ ಚರ್ಚೆ ಬೇಡ
ಯಾವ ದಿನಾಂಕಕ್ಕೆ ವೇತನ ಸಿಗುತ್ತೆ:
ಈ ಪ್ರಶ್ನೆ ಮಾತ್ರ ಅಪ್ಪಿ ತಪ್ಪಿಯೂ ಕೇಳಬೇಡಿ. ನೀವು ಬರೀ ಹಣಕ್ಕಾಗಿ ಈ ಕಂಪನಿ ಸೇರಲು ಬಂದಿರುವಿರಿ ಎಂದು ಈ ಸವಾಲಿನಿಂದ ಸಂದರ್ಶನಕಾರರು ತಿಳಿದುಕೊಳ್ಳುತ್ತಾರೆ. ಕಂಪನಿಯಲ್ಲಿ ನಿಮಗೆ ಹೋಸತೇನಾದ್ರೂ ಕಲಿಯಲು ಇಲ್ಲ ಕಂಪನಿಗೆ ನೀವೇನಾದ್ರೂ ನೀಡುವ ಭಾವನೆ ನಿಮ್ಮಲ್ಲಿ ಇಲ್ಲ ಎಂದು ಅವರು ತಿಳಿದುಕೊಳ್ಳುವರು. ಒಂದು ವೇಳೆ ನಿಮಗೆ ಟ್ಯಾಲೆಂಟ್ ಇದ್ದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ನೀವು ಎಷ್ಟು ಟ್ಯಾಲೆಂಟ್ ಇದ್ದೀರಿ ಎಂದು ಮೊದಲು ನೀವು ಸಂದರ್ಶನಕಾರರಿಗೆ ನಿಮ್ಮ ಜ್ಞಾನದ ಮೂಲಕ ತಿಳಿಸಿ. ಇಷ್ಟೇಲ್ಲಾ ಆದ ಬಳಿಕ ನೀವು ಆರಾಮವಾಗಿ ಅವರ ಜತೆ ಸವಾಲು ಕೇಳಬಹುದು
ನಿಮ್ಮ ಕಂಪನಿ ಬಗ್ಗೆ ತಿಳಿಸಿ:
ಸಂದರ್ಶನಕ್ಕೆ ಹೋಗುವ ಮುನ್ನ ಸಂಬಂಧಪಟ್ಟ ಕಂಪನಿಯ ಬಗ್ಗೆ ನೀವು ಇಂಟರ್ ನೆಟ್ ನಲ್ಲಿ ಮಾಹಿತಿ ಕಲೆ ಹಾಕಿ ತೆರಳಿ. ಬದಲಿಗೆ ನೇರವಾಗಿ ಸಂದರ್ಶನಕಾರರಲ್ಲಿ ಈ ಬಗ್ಗೆ ಪ್ರಶ್ನೆಗಳನ್ನ ಕೇಳಬೇಡಿ. ಒಂದು ವೇಳೆ ಕೇಳಿದ್ರೆ ನೀವು ಯಾವುದೇ ತಯಾರಿ ಮಾಡಿಕೊಳ್ಳದೇ ಸಂದರ್ಶನಕ್ಕೆ ಬಂದಿದ್ದೀರಾ ಎಂದು ಸಂದರ್ಶನಕಾರರು ನಿಮ್ಮ ಬಗ್ಗೆ ತಿಳಿಯುವರು.
ಪ್ರಮೋಶನ್ ಯಾವಾಗ ಆಗಬಹುದು:
ಕೆಲವು ಜನರಿಗೆ ಕೆಲಸ ಸಿಗುವ ಮೊದಲೇ ಪ್ರಮೋಶನ್ ಯಾವಾಗ ಸಿಗಬಹುದು ಎಂಬ ಚಿಂತೆ ಕಾಡುತ್ತದೆ. ಮೊದಲು ಕೆಲಸ ಚೆನ್ನಾಗಿ ಮಾಡಿ. ಒಂದು ವೇಳೆ ನೀವು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದಾದ್ರೆ ನಿಮಗೆ ಪಕ್ಕಾ ಪ್ರಮೋಶನ್ ಸಿಗುತ್ತೆ. ಬೇಕಿದ್ರೆ ಈ ಸವಾಲನ್ನ ಈ ರೀತಿಯಾಗಿ ಕೇಳಬಹುದು. ಪೊಜಿಶನ್ ಆರ್ಡರ್ ಬಗ್ಗೆ ಕೇಳಬಹುದು.


Click it and Unblock the Notifications











