Rabindranath Tagore Jayanti 2022 : ಠಾಗೋರ್ ಅವರ ಸ್ಫೂರ್ತಿದಾಯಕ ಉಲ್ಲೇಖಗಳು ಮತ್ತು ಸಂದೇಶಗಳು ಇಲ್ಲಿವೆ

ರವೀಂದ್ರನಾಥ ಠಾಗೋರ್ ಜಯಂತಿ : ಸಂದೇಶಗಳು ಮತ್ತು ಉಲ್ಲೇಖಗಳು

ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ ಟ್ಯಾಗೋರ್ ಅವರು ಏಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತರು. ಜನಗಣ ಮನ ಅಧಿನಾಯಕ ಜಯ ಹೇ... ಎಂಬ ಅದ್ಭುತ ಗೀತೆಯನ್ನು ನೀಡಿದವರು. ಸಾಹಿತ್ಯ ವಿದ್ವಾಂಸ, ಪಾಲಿಮಥ್, ಕವಿ, ಸಂಗೀತಗಾರ,ಕಲಾವಿದ ಎಂದೇ ಹೆಸರಾದವರು. ತನ್ನ ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳನ್ನು ಸಾರಿದವರು.

ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವಾದ ಇಂದು ಅವರನ್ನು ನೆನೆಯದಿರಲು ಸಾಧ್ಯವೇ ಇಲ್ಲ. ಇನ್ನು ಅವರ ಮಾತುಗಳು ಮತ್ತು ಸಂದೇಶಗಳು ಎಂದೆಂದಿಗೂ ಜೀವಂತ. ಅವರ ಜನ್ಮ ದಿನದ ಪ್ರಯುಕ್ತ ಅವರ ಕೆಲವು ಸ್ಫೂರ್ತಿದಾಯಕ ಉಲ್ಲೇಖಗಳು ಮತ್ತು ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ಸಂತೋಷವಾಗಿರುವುದು ತುಂಬಾ ಸರಳ. ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ"

ಈ ಸಂದೇಶ ನಿಜಕ್ಕೂ ಬದುಕಿಗೆ ಸ್ಫೂರ್ತಿದಾಯಕವಾದದ್ದು, ಪ್ರತಿಯೊಂದು ಜೀವಿಯೂ ಇದನ್ನು ಅರಿತು ಬಾಳಿದರೆ ಜೀವನ ಸುಂದರಮಯವಾಗಿರುತ್ತದೆ. ಟ್ಯಾಗೋರರ ಜೀವನದ ತತ್ವಗಳೇ ಅಂತದ್ದು, ಸಾಮಾನ್ಯರ ಬದುಕಿಗೆ ಹೆಚ್ಚು ಸ್ಫೂರ್ತಿದಾಯಕವಾಗುವಂತದ್ದಾಗಿರುತ್ತದೆ.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ನಿಮ್ಮ ಬದುಕಿನಿಂದ ಸೂರ್ಯ ಹೊರಟು ಹೋದನೆಂದು ನೀವು ಅಳುತ್ತಿದ್ದರೆ, ನಿಮ್ಮ ಕಣ್ಣೀರು ನಿಮ್ಮನ್ನು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ"

ಜೀವನ ಅಂದ್ರೇನೆ ಹಾಗೆ ಕಳೆದು ಹೋದದ್ದನ್ನು ನೆನೆಯುತ್ತಾ ಕೂತರೆ ಈಗಿನ ಕ್ಷಣಗಳನ್ನು ಸವಿಯೋದು ಯಾವಾಗ ? ಅಲ್ವಾ ಕಳೆದು ಹೋದ ಕ್ಷಣಗಳನ್ನು ನೆನೆದು ಕೊರಗುವ ಬದಲು ಈಗಿನ ಕ್ಷಣಗಳನ್ನು ಸವಿಯಿರಿ ಎಂದು ಟ್ಯಾಗೋರರು ಹೇಳಿದ್ದಾರೆ.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ನಾವು ಜಗತ್ತನ್ನು ತಪ್ಪಾಗಿ ಓದುತ್ತೇವೆ ಹಾಗಾಗಿ ಅದು ನಮ್ಮನ್ನು ಮೋಸಗೊಳಿಸುತ್ತದೆ"

ಪ್ರತಿಯೊಂದು ವಿಚಾರದಲ್ಲೂ ಹಾಗೇನೆ ನಾವು ಹೇಗೆ ಒಂದು ವಿಷಯವನ್ನು ಆಲೋಚಿಸುತ್ತೇವೆಯೋ ಅದೇ ರೀತಿಯಾಗಿ ನಮಗೆ ಅದು ಅರ್ಥೈಸುತ್ತದೆ. ಅದರಿಂದ ನಮ್ಮನ್ನು ನಾವು ವಂಚಿಸಿಕೊಂಡಂತಾಗುತ್ತದೆ. ಹಾಗಾಗಿ ನಾವು ಜಗತ್ತನ್ನು ನೋಡುವ ರೀತಿ ಬದಲಾಯಿಸಿಕೊಳ್ಳಬೇಕು. ಬದಲಾಯಿಸಿಕೊಂಡಾಗ ಮಾತ್ರ ನಾವು ಮೋಸಗೊಳ್ಳುವುದರಿಂದ ದೂರವಿರಲು ಸಾಧ್ಯ.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ಹೂವಿನ ದಳಗಳನ್ನು ಕಸಿದುಕೊಳ್ಳುವ ಮೂಲಕ ನೀವು ಹೂವಿನ ಸೌಂದರ್ಯವನ್ನು ಸಂಗ್ರಹಿಸುವುದಿಲ್ಲ"

ನಾವು ಇಷ್ಟ ಪಡುವ ವಸ್ತು ಆಗಲಿ ಅಥವಾ ಮತ್ತೊಂದಾಗಲಿ ಅದು ನಮಗೆ ಬೇಕು ಎಂದು ಆಸೆ ಪಡುವುದು ತಪ್ಪಲ್ಲ. ಆದರೆ ಅದನ್ನು ಪಡೆಯುವುದರಿಂದ ಏನು ಲಾಭ ಎನ್ನುವುದನ್ನು ಒಮ್ಮೆ ಯೋಚಿಸಬೇಕು. ಈಗ ಉದಾಹರಣೆಗೆ ಒಂದು ಹೂ ಇಷ್ಟವಾಗಿದೆ ಹಾಗಂತ ಅದರ ದಳಗಳನ್ನು ಕಿತ್ತು ಬಳಸಿದರೆ ಅದರಿಂದ ನೀವು ಅದರ ಸೌಂದರ್ಯವನ್ನು ಸವಿದಂತಾಗುವುದಿಲ್ಲ. ಬದಲಾಗಿ ನೀವು ಅದರ ಸೌಂದರ್ಯವನ್ನು ನಾಶ ಮಾಡಿದ್ದೀರಿ ಎಂದರ್ಥ.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ಮಸುಕಾದ ಪ್ರತಿಯೊಂದು ತೊಂದರೆಗಳು ನಂತರ ನಿಮ್ಮ ವಿಶ್ರಾಂತಿಗೆ ಭಂಗ ತರುವ ಭೂತವಾಗಿರುತ್ತದೆ"

ಸಾಮಾನ್ಯವಾಗಿ ನಾವು ಇರುವುದರಲ್ಲೇ ಸಂಭ್ರಮಿಸುವ ವ್ಯಕ್ತಿತ್ವವನ್ನು ಹೊಂದಿದವರಾಗಿರಬೇಕು. ಇದ್ದಾಗ ಹಿಗ್ಗಿ, ಇಲ್ಲದಿದ್ದಾಗ ಕುಗ್ಗಿ ಬದುಕುವಂತಾಗಬಾರದು. ಬದುಕಿನಲ್ಲಿ ಒಳ್ಳೆ ತನಗಳೂ ಇರುತ್ತವೆ ಮತ್ತು ಕೆಟ್ಟ ದಿನಗಳೂ ಇರುತ್ತವೆ. ಈಗ ಸುಂದರವಾದ ಬದುಕಿದೆ ಎಂದರೆ ನಾಳೆ ಕಷ್ಟ ಬರುವುದಿಲ್ಲ ಅಂತಲ್ಲ. ಹಾಗಾಗಿ ಎಲ್ಲಾ ಸಮಯವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸುವುದು ಒಳಿತು.

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ನಮ್ರತೆಯಿಂದ ದೊಡ್ಡವರಾಗಿದ್ದಾಗ ಮಾತ್ರ ನಾವು ಶ್ರೇಷ್ಠರಿಗೆ ಹತ್ತಿರವಾಗುತ್ತೇವೆ" -ರವೀಂದ್ರನಾಥ ಠಾಗೋರ್

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ಪ್ರೀತಿ ಮಾತ್ರ ವಾಸ್ತವ ಮತ್ತು ಅದು ಕೇವಲ ಶುದ್ಧ ಭಾವನೆಯಲ್ಲ. ಇದು ಸೃಷ್ಟಿಯ ಹೃದಯಭಾಗದಲ್ಲಿರುವ ಅಂತಿಮ ಸತ್ಯ" -ರವೀಂದ್ರನಾಥ ಠಾಗೋರ್

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

ಟಾಗೋರ್ ಅವರ ಜಯಂತಿ ಪ್ರಯುಕ್ತ ಉಲ್ಲೇಖ ಮತ್ತು ಸಂದೇಶಗಳು:

"ಸ್ನೇಹದ ಆಳವು ಪರಿಚಯದ ಉದ್ದವನ್ನು ಅವಲಂಬಿಸಿರುವುದಿಲ್ಲ" -ರವೀಂದ್ರನಾಥ ಠಾಗೋರ್

For Quick Alerts
ALLOW NOTIFICATIONS  
For Daily Alerts

English summary
Rabindranath tagore jayanthi is on may 7. Here is the inspirational quotes and messages by the bard of bengal in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X