ಟೀಚಿಂಗನ್ನು ಕೆರಿಯರ್ ಆಯ್ಕೆಯಾಗಿ ಮಾಡಿಕೊಂಡ್ರೆ ಏನೆಲ್ಲಾ ಪ್ರಯೋಜನ ಗೊತ್ತಾ?

By Kavya

ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಗಾದೆ ನೀವು ಕೇಳಿರುತ್ತೀರಿ. ಆದ್ರೆ ಈ ಮಾತು ಎಲ್ಲರ ಜೀವನಕ್ಕೆ ಹೋಲದನೇ ಇರಬಹುದು. ಆದ್ರೆ ಪ್ರತೀ ಯಶಸ್ವೀ ಮನುಷ್ಯನ ಹಿಂದೆ ಒಬ್ಬ ಟೀಚರ್ ಇದ್ದೇ ಇರುತ್ತಾರೆ.

ಟೀಚಿಂಗ್ ಎಂಬುವುದು ಒಂದು ಗೌರವಯುತ ಹುದ್ದೆ. ಪ್ರತಿಯೊಬ್ಬನ ಸಕ್ಸಸ್ ಹಿಂದೆ ಶಿಕ್ಷಕರ ಶ್ರಮವಿರುತ್ತದೆ. ಇಂದು ಆತ ಏನೇ ಸಾಧಿಸಿದ್ದರು ಅವನಲ್ಲಿ ಅದಕ್ಕೆ ಬೇಕಾದ ಅರ್ಹತೆ, ಟ್ಯಾಲೆಂಟ್ ಎಂಬ ಬುನಾದಿ ಹಾಕಿದ ಕ್ರೆಡಿಟ್ ಶಿಕ್ಷಕರದಾಗಿರುತ್ತದೆ.

ನಮ್ಮ ಮಕ್ಕಳು ಮುಂದೆ ಏನು ಆಗಬೇಕು ಎಂದು ಯಾರಾದ್ರು ಕೇಳಿದ್ರೆ ಅವರು ಡಾಕ್ಟರ್, ಇಂಜಿನಿಯರ್, ಸೈಂಟಿಸ್ಟ್, ಸರ್ಕಾರಿ ಉದ್ಯೋಗಿ ಇಲ್ಲ ಬ್ಯುಸಿನೆಸ್ ಮ್ಯಾನ್ ಆಗಬೇಕೆಂದು ನಾವು ಹೇಳುತ್ತೇವೆ. ಆದ್ರೆ ಮಗು ಮುಂದೊಂದು ದಿನ ಶಿಕ್ಷಕನಾಗಬೇಕೆಂದು ಯಾರು ಹೇಳುವುದಿಲ್ಲ.

ಟೀಚಿಂಗ್ ಉತ್ತಮ ಕೆರಿಯರ್ ಆಯ್ಕೆ ಎಂದೂ ಯಾರೂ ಒಪ್ಪಿಕೊಳ್ಳಲು ತಯಾರಿಲ್ಲ. ಆದ್ರೆ ಇಂತಹ ಅನಿಸಿಕೆ ಸತ್ಯಕ್ಕೆ ದೂರವಾದುದು. ಟೀಚಿಂಗ್ ಬೆಸ್ಟ್‌ ಕೆರಿಯರ್ ಯಾಕೆ ಎನ್ನೋದಕ್ಕೆ ನಾವು ಇಲ್ಲಿ ಕೆಲವೊಂದು ಪಾಯಿಂಟ್ಸ್ ಗಳನ್ನು ನೀಡುತ್ತೇವೆ.

ಕ್ರಿಯೇಟಿವಿಟಿ:

ಕ್ರಿಯೇಟಿವಿಟಿ:

ಟೀಚಿಂಗ್ ಹುದ್ದೆಯಲ್ಲಿ ಕ್ರಿಯೇಟಿವಿಟಿ ಇರುತ್ತದೆ. ಆದ್ರೆ ಹೆಚ್ಚಿನ ಜನರು ಹೇಳುವ ಪ್ರಕಾರ ಬ್ಯುಸಿನೆಸ್ ನಲ್ಲಿ ಇರುವಷ್ಟು ರಿಸ್ಕ್ ಈ ವೃತ್ತಿಯಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ತಾವು ಕಲಿಸಿರುವ ಪಾಠ ಅರ್ಥವಾಗುವಂತೆ ಮಾಡಲು ಕ್ರಿಯೇಟಿವಿಟಿ ಗೊತ್ತಿದ್ರೆ ಸಾಕು. ಮಕ್ಕಳಿಗೆ ಕಲಿಸುವ ವೇಳೆ ಹೊಸ ಹೊಸ ಟೆಕ್ನಿಕ್ ಬಳಸಿ ರಿಸ್ಕ್ ತೆಗೊಳುತ್ತಾರೆ.

ಇಂಪ್ರೂವ್ ಮೆಂಟ್:

ಇಂಪ್ರೂವ್ ಮೆಂಟ್:

ಟೀಚಿಂಗ್ ವೃತ್ತಿಯಿಂದ ನೀವು ಸ್ವತಃ ಇಂಪ್ರೂವ್ ಆಗ್ತೀರಾ. ಬರೀ ನೀವು ಕಲಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳಿಂದಲೂ ನಿಮಗೆ ಕಲಿಯಲು ಅವಕಾಶ ಸಿಗುವುದು.

ಪ್ರತಿ ಹೊಸ ವಿದ್ಯಾರ್ಥಿಗಳಿಂದ ನಿಮಗೆ ಹೊಸ ಹೊಸ ಅನುಭವ ಸಿಗುತ್ತದೆ. ಇದು ನಿಮ್ಮ ಕೌಶಲ್ಯ ವೃದ್ದಿಗೆ ಸಹಾಯಕವಾಗುತ್ತದೆ. ನಿಮ್ಮ ಜ್ಞಾನ ಇಂಪ್ರೂವ್ ಆಗುವುದು ಮಾತ್ರವಲ್ಲದೇ ನೀವು ಪ್ರತಿದಿನ ಹೊಸತೇನಾದ್ರೂ ಕಲಿಯುತ್ತೀರಿ

 

ಕೆಲಸ ಸಂತೃಪ್ತಿ:
 

ಕೆಲಸ ಸಂತೃಪ್ತಿ:

ನಿಮ್ಮ ಯಾವುದೇ ವೃತ್ತಿಯಾದ್ರೂ ಸಂತೃಪ್ತಿ ಸಿಗುವುದು ಮುಖ್ಯ. ನಿಮಗೆ ಕೆಲಸದಲ್ಲಿ ಸಂತೃಪ್ತಿ ಇಲ್ಲವೆಂದಾದ್ರೆ ಆ ಕೆಲಸ ಮುಂದುವರೆಸಿಕೊಂಡು ಹೋಗುವುದು ವೇಸ್ಟ್. ಆದ್ರೆ ಟೀಚಿಂಗ್ ವೃತ್ತಿಯು ನಿಮಗೆ ಖಂಡಿತ ಸಂತೃಪ್ತಿಯನ್ನ ನೀಡುತ್ತದೆ. ನೀವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಹೆಸರು ಗಳಿಸಿದ್ರೆ ಖಂಡಿತ ನಿಮ್ಮ ಮುಖದಲ್ಲಿ ಮಂದಹಾಸ ಮೂಡುತ್ತದೆ

ಗೌರವ:

ಗೌರವ:

ಟೀಚಿಂಗ್ ಎಂಬುವುದು ಒಂದು ವಿನಮ್ರ ವೃತ್ತಿಯಾಗಿದೆ. ವಿದ್ಯಾರ್ಥಿಗಳು ಯಾವತ್ತೂ ತಮ್ಮ ಟೀಚರ್‌ ನ್ನ ಮರೆಯಲ್ಲ. ತಮ್ಮ ಬಾಲ್ಯವಸ್ಥೆಯಲ್ಲಿ ತಮ್ಮನ್ನ ತಿದ್ದಿ ತೀಡಿ, ಸಮಾಜದಲ್ಲಿ ಘನತೆ ಸಿಗುವಂತೆ ಮಾಡಿದ ಟೀಚರ್‌ ಅಂದ್ರೆ ವಿದ್ಯಾರ್ಥಿಗಳಿಗೆ ಅದೇನೋ ಪ್ರೀತಿ, ಗೌರವ ಇದ್ದೇ ಇರುತ್ತದೆ. ಪ್ರೀತಿ ತುಂಬಿರುವ ಇಂತಹ ಗೌರವ ನಿಮಗೆ ಇತರ ವೃತ್ತಿಯಿಂದ ಸಿಗಲು ಸಾಧ್ಯವಿಲ್ಲ.

ಸಂಭಾವ್ಯ:

ಸಂಭಾವ್ಯ:

ಟೀಚಿಂಗ್ ಎಂಬುವುದು ಗ್ರೇಟ್ ಸಂಭಾವ್ಯ. ಟೀಚರ್ ದೇಶದ ರಚನೆಕಾರ ಆಗಿರುತ್ತಾರೆ. ಟೀಚರ್ ವಿದ್ಯಾರ್ಥಿಗಳಿಗೆ ಕೇವಲ ಜ್ಞಾನ ಮಾತ್ರ ನೀಡುವುದಿಲ್ಲ, ಬದಲಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬುವುದು ಕೂಡಾ ತಿಳಿಸಿ ಕೊಡುತ್ತಾರೆ. ದೇಶ ಹಾಗೂ ಸಮಾಜಕ್ಕಾಗಿ ತಮ್ಮ ಜ್ಞಾನವನ್ನ ಹೇಗೆ ಬಳಸಿಕೊಳ್ಳುವುದು ಎಂಬುವುದನ್ನು ಮಕ್ಕಳಿಗೆ ಶಿಕ್ಷಕರು ತಿಳಿಸಿಕೊಡುತ್ತಾರೆ

ಟೀಚಿಂಗ್ ಒಂದು ಫನ್ ಜಾಬ್

ಟೀಚಿಂಗ್ ಒಂದು ಫನ್ ಜಾಬ್

ಟೀಚಿಂಗ್ ವೃತ್ತಿ ನಿಮಗೆ ಯಾವತ್ತೂ ಬೋರ್ ಎನಿಸುವುದಿಲ್ಲ. ಇದೊಂದು ಫನ್ ಜಾಬ್ ಆಗಿದೆ. ನೀವು ಇಡೀ ದಿನ ಖುಷಿ ಖುಷಿಯಾಗಿರುತ್ತೀರಿ, ವಿದ್ಯಾರ್ಥಿಗಳ ಜತೆ ನಗುತ್ತೀರಿ, ಎಂಜಾಯ್ ಮಾಡುತ್ತೀರಿ. ಜತೆಗೆ ಆಟ ಕೂಡಾ ಆಡುತ್ತೀರಿ. ಮಕ್ಕಳು ನಿಮ್ಮ ಜೀವನಕ್ಕೆ ಸಂತೋಷ ಹಾಗೂ ಪಾಸಿಟೀವ್ ಎನರ್ಜಿ ನೀಡುತ್ತಾರೆ

ಆದಾಯ:

ಆದಾಯ:

ಟ್ಯಾಲೆಂಟ್ ಹಾಗೂ ಅನುಭವಕ್ಕೆ ಯಾವುದೇ ಗಡಿ ಎಂಬುವುದು ಇರುವುದಿಲ್ಲ. ನಿಮಗೆ ಟ್ಯಾಲೆಂಟ್ ಇದ್ದು, ನೀವು ಮಾಡುವ ಕೆಲಸದಲ್ಲಿ ಕಾಂಫಿಡೆಂಟ್ ಇದ್ದರೆ ಯಾರೂ ನಿಮ್ಮ ಆದಾಯವನ್ನ ಕಡಿಮೆ ಮಾಡಲು ಸಾಧ್ಯವಿಲ್ಲ. ಉತ್ತಮ ಶಿಕ್ಷಕರು ಯಾವಾಗಲೂ ಉತ್ತಮ ಸಂಭಾವನೆ ಪಡೆಯುತ್ತಾರೆ.

ಉದ್ಯೋಗವಕಾಶ:

ಉದ್ಯೋಗವಕಾಶ:

ಟೀಚಿಂಗ್ ಹುದ್ದೆಗಾಗಿ ನೀವು ಪರದಾಡಬೇಕಿಲ್ಲ. ಬದಲಿಗೆ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಶಿಕ್ಷಕರಿಗಾಗಿ ಹುಡುಟಕಾಟ ನಡೆಸುತ್ತಿರುತ್ತದೆ. ಹಾಗಾಗಿ ಈ ಫೀಲ್ಡ್‌ನಲ್ಲಿ ಉತ್ತಮ ಉದ್ಯೋಗವಕಾಶವಿದೆ.

ನೀವು ಯಾವುದಾದ್ರೂ ಒಂದು ಸಬ್ ಜೆಕ್ಟ್ ನಲ್ಲಿ ಪರ್ಫೇಕ್ಟ್ ಇದ್ರೆ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಟೀಚಿಂಗ್ ಮಾಡುವ ಅವಶ್ಯಕತೆಯಿಲ್ಲ ಬದಲಿಗೆ ನೀವೇ ಒಂದು ಟ್ಯುಟೋರಿಯಲ್ ಕ್ಲಾಸ್ ತೆರೆಯಬಹುದು

 

For Quick Alerts
ALLOW NOTIFICATIONS  
For Daily Alerts

English summary
There is a well-known saying, behind every successful man there is a woman. We don’t actually know whether it is true in all the cases or not but we can definitely say that behind every successful man there is a teacher.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X