ಕಾಲೇಜು ಲೈಫ್ ಅಂದ್ರೆ ಫಸ್ಟ್ ಕ್ರಶ್, ಆಮೇಲೆ ಲವ್, ಹೊಸ ಹೊಸ ಫ್ರೆಂಡ್ಸ್ ಕೊನೆಗೆ ಸ್ವಲ್ಪ ಫೈಟಿಂಗ್ ಆಮೇಲೆ ಮದುವೆ. ಹೀಗಂತ ಸಿನಿಮಾ ನೋಡಿ ನಾವು ಅಂದುಕೊಂಡಿರುತ್ತೇವೆ. ಹೌದು ಪೂರ್ತಿಯಾಗಿ ಸಿನಿಮಾ ತರಹ ಇರಲ್ಲ ಬದಲಿಗೆ ಸ್ವಲ್ಪ ಸಿನಿಮಾವನ್ನೇ ಹೋಲುತ್ತೆ ಕಾಲೇಜು ಲೈಫ್. ಬಣ್ಣ ಬಣ್ಣದ ಲೈಫ್ ನಿಮ್ಮದಾಗಿರುತ್ತದೆ.
ಈ ಬಣ್ಣ ಬಣ್ಣದ ಲೈಫ್ ನಲ್ಲಿ ಎಡುವುತ್ತಾರೆ ಹಲವಾರು ಮಂದಿ. ಹಾಗಾಗಿ ಕಾಲೇಜು ಮೆಟ್ಟಿಲು ಹತ್ತುವ ಮುನ್ನ ಈ ೫ ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಸಿನಿಮಾ ಗಳಲ್ಲಿ ಇರುವಂತೆ ನಿಜಜೀವನದ ಕಾಲೇಜು ಲೈಫು ಹಾಗೆ ಇರುವುದಿಲ್ಲ. ಕಾಲೇಜು ಮುಗಿದ ಬಳಿಕವೂ ನೀವು ನಿಮ್ಮ ಕಾಲೇಜು ಲೈಫ್ ಸದಾ ನೆನಪಲ್ಲಿರುವಂತೆ ನೋಡಿಕೊಳ್ಳಿ. ಕಾಲೇಜು ಸೇರುವ ಮುನ್ನ ಈ ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಿ.
ಶಿಕ್ಷಣಾಭ್ಯಸದ ಕೊನೆಯ ಹಂತ:
ಹಲವಾರು ವರ್ಷ ಶಾಲಾ ಜೀವನ ಕಳೆದ ಬಳಿಕ ಬರುವ ಕಾಲೇಜು ಶಿಕ್ಷಣ ಇದೆಯಲ್ಲ ಇದು ಜೀವನದ ಕೊನೆಯ ಹಂತದ ಶಿಕ್ಷಣ. ಈ ಹಂತದಲ್ಲೇ ನಿಮ್ಮ ಕೆರಿಯರ್ ಜೀವನ ರೂಪುಗೊಳ್ಳುತ್ತದೆ. ಈ ಹಂತದಲ್ಲಿ ನೀವು ಹಲವಾರು ಹೊಸ ಹೊಸ ಸ್ನೇಹಿತರನ್ನು ಭೇಟಿಯಾಗಬಹುದು ಅಂತೆಯೇ ಮೋಜು ಮಸ್ತಿ ಮಾಡಬಹುದು. ಆದ್ರೆ ಇದೇ ಹಂತದಲ್ಲಿ ಕೆರಿಯರ್ ಬಗ್ಗೆಯೂ ಸೀರಿಯಸ್ ಆಗಿ ನೀವು ಯೋಚಿಸಬೇಕು. ಶಾಲಾ ದಿನಗಳಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನೀವು ಎಷ್ಟೋ ತಪ್ಪುಗಳನ್ನ ಮಾಡಿರಬಹುದು ಆದರೆ ಇದೀಗ ನಿಮ್ಮ ತಪ್ಪು ತಿದ್ದಿಕೊಂಡು ಕೆರಿಯರ್ ರೂಪಿಸಿಕೊಳ್ಳಲು ಇರುವ ಸರಿಯಾದ ಟೈಂ.
ಕಲರ್ ಫುಲ್ ಟೀನೇಜ್:
ಈ ವಯಸ್ಸಲ್ಲಿ ನೀವು ಓದಿನತ್ತ ಹೆಚ್ಚು ಫೋಕಸ್ ಮಾಡಬೇಕು. ಅಷ್ಟೇ ಅಲ್ಲ ಈ ವಯಸ್ಸಲ್ಲಿ ನಿಮಗೆ ಒಳ್ಳೆಯ ಟೈಂ ನ ಅವಶ್ಯಕತೆ ಇದೆ ಎಂಬುವುದು ಮರೆಯಬೇಡಿ. ಈ ಲೈಫ್ ಮತ್ತೆ ಯಾವತ್ತೂ ನಿಮಗೆ ಸಿಗುವುದಿಲ್ಲ. ಹಾಗಾಗಿ ಈ ಲೈಫನ್ನ ನೀವು ಸ್ಪೇಶಲ್ ಆಗಿ ಕಳೆಯಿರಿ. ಹಲವಾರು ಸ್ನೇಹಿತರನ್ನ ಮಾಡಿಕೊಳ್ಳಿ. ಪ್ರೀತಿಯ ಕಡಲಲ್ಲಿ ತೇಲಾಡಿ. ಎಲ್ಲರ ಜತೆ ಖುಶಿ ಖುಶಿಯಾಗಿ ಕಳೆಯಿರಿ. ಯಾಕೆಂದ್ರೆ ಹಲವಾರು ವರ್ಷಗಳ ಬಳಿಕ ನೀವು ಕಾಲೇಜು ಲೈಫ್ ಮೆಲುಕು ಹಾಕುವಾಗ ಇವೆಲ್ಲಾ ಸ್ವೀಟ್ ಮೆಮೋರಿಸ್ ನಿಮ್ಮ ಜತೆ ಇದ್ದು, ನಿಮ್ಮ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತದೆ.
ಸಕ್ಸಸ್ ಗಿಂತ ಸೋಲನ್ನ ಕೂಡಾ ಒಪ್ಪಿಕೊಳ್ಳಿ:
ಯಾವಾಗಲೂ ಲೈಫ್ ನಲ್ಲಿ ಸಕ್ಸಸ್ ಸಿಗುವುದು ಗ್ರೇಟ್ ವಿಷಯ. ಒಂದು ವೇಳೆ ನಿಮಗೆ ಸೋಲು ಆದ್ರೆ ಅದು ನಿಮಗೆ ಆರ್ಶೀವಾದ ಇದ್ದಂಗೆ. ಹೇಗೆ ಅಂತೀರಾ. ಸಕ್ಸಸ್ ಎಷ್ಟು ಟೇಸ್ಟ್ ಆಗಿರುತ್ತದೆ ಅನ್ನೋದು ವಿಷಯವಲ್ಲ. ಬದಲಿಗೆ ಸಕ್ಸಸ್ ನಿಮಗೆ ಏನನ್ನೂ ಕಲಿಸಿಕೊಡುವುದಿಲ್ಲ. ಅದೇ ಸೋಲು ನಿಮಗೆ ಜಿವನದಲ್ಲಿ ಪಾಠವನ್ನ ಕಲಿಸಿಕೊಡುತ್ತದೆ. ನಿಮ್ಮ ಬೆಸ್ಟ್ ಟೀಚರ್ ಆಗಿರುತ್ತದೆ. ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂಬುವುದು ತಿಳಿಸಿಕೊಡುತ್ತದೆ.
ಡಯೆಟ್ ನತ್ತ ಇರಲಿ ಗಮನ:
ಪ್ರತಿ ದಿನ ನಿಮ್ಮ ಸ್ನೇಹಿತರು ನಿಮ್ಮನ್ನ ಫಾಸ್ಟ್‌ಫುಡ್ ತಿನ್ನಲು ರೆಸ್ಟೋರೆಂಟ್ ಇಲ್ಲ ಬಾರ್ ಗೆ ಆಗಾಗ ಕರೆದುಕೊಂಡು ಹೋಗಬಹುದು. ನೀವು ಯಾವಾಗ ಅವರಿಗೆ ನೋ ಹೇಳಬೇಕು ಎಂಬುವುದು ಮೊದಲಿಗೆ ತಿಳಿದುಕೊಳ್ಳಬೇಕು. ಒಂದೆರಡು ಸಲ ಜಂಕ್ ಫುಡ್ ತಿನ್ನುವುದು ಓಕೆ. ಆದ್ರೆ ಪ್ರತಿದಿನ ಜಂಕ್ ಫುಡ್ ಸೇವನೆ ಒಳ್ಳೆಯದಲ್ಲ. ನೀವು ಮನೆಯಿಂದ ಹೊರಗಡೆ ಇದ್ದು ಕಲಿಯುವ ವಿದ್ಯಾರ್ಥಿಯಾಗಿದ್ದರೆ ನೀವು ಈ ಬಗ್ಗೆ ಗಮನಹರಿಸಲೇ ಬೇಕು. ನೀವು ವಿದ್ಯಾರ್ಥಿ ಲೈಫ ಲೀಡ್ ಮಾಡುತ್ತಿರುವುದರಿಂದ ನೀವು ಆರೋಗ್ಯಕರ ಡಯೆಟ್ ಫಾಲೋ ಮಾಡಬೇಕು.
ಪರ್ಸನಲ್ ಲೈಫ್ ಹಾಗೂ ಪ್ರೊಫೆಶನಲ್ ಲೈಫ್ ಬೇರೆ ಬೇರೆನೆ:
ನಿಮ್ಮ ಪ್ರೊಫೆಶನಲ್ ಲೈಫ್ ಮಧ್ಯೆ ಪರ್ಸನಲ್ ಲೈಫ್ ತರಬೇಡಿ. ಈ ಎರಡನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡುವುದು ತುಂಬಾ ಇಂಪೋರ್ಟೆಂಟ್. ನಿಮಗೆ ಬ್ಯಾಲೆನ್ಸ್ ಮಾಡುವುದು ತಿಳಿದಿಲ್ಲ ಎಂದಾದ್ರೆ ನೀವು ತುಂಬಾ ಕಷ್ಟ ಎದುರಿಸಬೇಕಾಗುತ್ತದೆ. ಈ ಎರಡನ್ನ ಬ್ಯಾಲೆನ್ಸ್ ಮಾಡಲಾಗದೇ ಬಹಳಷ್ಟು ಮಂದಿ ತುಂಬಾ ಕಷ್ಟಪಡುತ್ತಾರೆ.


Click it and Unblock the Notifications











