ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶವನ್ನು ಅಕ್ಟೋಬರ್ 20,2020ರಂದು ಪ್ರಕಟ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.
ಎಸ್ಬಿಐ ಒಟ್ಟು 8,000 ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಪರೀಕ್ಷೆ, ಪ್ರಮುಖ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಎಸ್ಬಿಐ ಫೆಬ್ರವರಿ 22,29, ಮಾರ್ಚ್ 1 ಮತ್ತು ಮಾರ್ಚ್ 8,2020ರಂದು ಪ್ರಿಲಿಮಿನರಿ ಪರೀಕ್ಷೆಗಳನ್ನು ನಡೆಸಿತ್ತು ಅದರ ಫಲಿತಾಂಶವನ್ನು ಪ್ರಕಟಮಾಡಲಾಗಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅಕ್ಟೋಬರ್ 31,2020ರಂದು ನಡೆಯುವ ಪ್ರಮುಖ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಹಾಗಾಗಿ ಇನ್ನುಳಿದ ಹತ್ತು ದಿನಗಳಲ್ಲಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂದು ಇಲ್ಲಿ ಸಲಹೆ ನೀಡಲಾಗಿದೆ.

ಪರೀಕ್ಷಾ ಪಠ್ಯಕ್ರಮವನ್ನು ತಿಳಿಯಿರಿ:
ಯಾವುದೇ ಪರೀಕ್ಷೆಗೆ ಹಾಜರಾಗುವ ಮುನ್ನ ಪರೀಕ್ಷಾ ಪಠ್ಯಕ್ರಮವನ್ನು ತಿಳಿಯುವುದು ಒಳಿತು. ಹಾಗಾಗಿ ಎಸ್ಬಿಐ ಮುಖ್ಯ ಪರೀಕ್ಷೆಗೆ ಹಾಜರಾಗುವ ಮುನ್ನ ಪಠ್ಯಕ್ರಮವನ್ನು ತಿಳಿಯಿರಿ.

ಪರೀಕ್ಷೆ ರೂಪುರೇಷೆಗಳನ್ನು ಅರಿತುಕೊಳ್ಳಿ:
ಮುಖ್ಯ ಪರೀಕ್ಷೆಯಲ್ಲಿ ಒಟ್ಟು 190 ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಅಭ್ಯರ್ಥಿಗಳು 2 ಗಂಟೆ 40 ನಿಮಿಷದೊಳಗೆ ಪ್ರಶ್ನೆಗೆ ಉತ್ತರಿಸಬೇಕಿರುತ್ತದೆ. ಒಟ್ಟು 200 ಅಂಕಗಳ ಪರೀಕ್ಷೆ ಇದಾಗಿರುತ್ತದೆ.

ಉಳಿದ ದಿನಗಳಿಗೆ ಟೈಂಟೇಬಲ್ ಹಾಕಿಕೊಳ್ಳಿ:
ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಉಳಿದಿವೆ ಹಾಗಾಗಿ ಈ ಸಮಯ ತುಂಬಾನೆ ಮುಖ್ಯವಾದದ್ದು. ಹಾಗಾಗಿ ಅಭ್ಯರ್ಥಿಗಳು ಉಳಿದಿರುವ ಸಮಯದಲ್ಲಿ ಹೇಗೆ ಅಧ್ಯಯನ ಮಾಡಬೇಕು ಎಂದು ಟೈಂ ಟೇಬಲ್ ಹಾಕಿಕೊಳ್ಳಿ. ನಂತರ ಅದರಂತೆಯೇ ಅಧ್ಯಯನ ನಡೆಸಿ,

ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ:
ಪರೀಕ್ಷೆ ಎಂದಾಗ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅಧ್ಯಯನ ಮಾಡುವುದು ಕೂಡ ಮುಖ್ಯವಾದದ್ದು ಹಾಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಪಡೆದು ಒಮ್ಮೆ ಪರಿಶೀಲಿಸಿ, ಇದರಿಂದ ಅಧ್ಯಯನದಲ್ಲಿ ಯಾವುದಾದರೂ ವಿಷಯ ಬಿಟ್ಟಿದಲ್ಲಿ ಅದು ನಿಮ್ಮ ಗಮನಕ್ಕೆ ಬರುತ್ತದೆ ಅದನ್ನು ಅಧ್ಯಯನ ಮಾಡಿದಂತಾಗುತ್ತದೆ.

ಅಧ್ಯಯನದ ನಡುವೆ ಪುನರ್ ಮನನ:
ಈಗ ಉಳಿದಿರುವ ದಿನಗಳಲ್ಲಿ ಅಧ್ಯಯನ ತುಂಬಾನೆ ಅಗತ್ಯ. ದಿನವಿಡೀ ಓದಿದ ನಡುವೆಯೇ ಬ್ರೇಕ್ ತೆಗೆದುಕೊಂಡಾಗ ಓದಿದ್ದನ್ನು ನೆನಪಿಸಿಕೊಳ್ಳಿ. ಅದು ಹೆಚ್ಚು ಕಾಲ ಮನದಲ್ಲಿ ಉಳಿಯಲು ಸಾಧ್ಯವಾಗುತ್ತದೆ.

ಮಾನಸಿಕವಾಗಿ ಪರೀಕ್ಷೆಗೆ ಸಿದ್ದರಾಗಿ:
ಇನ್ನು ಪರೀಕ್ಷೆಗೆ ಕೆಲವೇ ದಿನಗಳಿವೆ ಎಂದು ಚಿಂತಿಸಬೇಡಿ. ಈಗ ಉಳಿದಿರುವ ದಿನಗಳಲ್ಲೇ ಬೇಕಿರುವ ವಿಷಯಗಳನ್ನು ಅಧ್ಯಯನ ಮಾಡಿ ಮುಗಿಸುತ್ತೇನೆ ಎಂಬ ಆತ್ಮವಿಶ್ವಾಸವಿರಲಿ ಮತ್ತು ಕೊರೋನಾ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ಹಿಂಜರಿಯಬೇಡಿ. ನೀವು ಸಂಪೂರ್ಣವಾಗಿ ಮಾನಸಿಕವಾಗಿ ಸ್ಥೈರ್ಯದಿಂದ ಪರೀಕ್ಷೆ ಬರೆಯಲು ಸಿದ್ಧರಾಗಿ.

ಪರೀಕ್ಷೆಗೆ ಪಾಲಿಸಬೇಕಾದ ನಿಯಮಗಳನ್ನು ಅಭ್ಯಾಸ ಮಾಡಿ:
ಪರೀಕ್ಷಾ ಪ್ರವೇಶ ಪತ್ರದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸಿ ಜೊತೆಗೆ ಎಸ್ಬಿಯ ಮುಖ್ಯ ಪರೀಕ್ಷೆಯ ನಿಯಮಾನುಸಾರ ಏನೆಲ್ಲಾ ಕ್ರಮಗಳಿವೆ ಅವುಗಳನ್ನು ತೆಗೆದುಕೊಂಡು ಕಡ್ಡಾಯವಾಗಿ ಪಾಲಿಸಿ.

ಸಮಯ ನಿರ್ವಹಣೆಯತ್ತ ಆಲೋಚಿಸಿ:
ಎಲ್ಲಾ ಪರೀಕ್ಷೆಗಳಲ್ಲೂ ಮುಖ್ಯವಾದದ್ದು ಸಮಯ ನಿರ್ವಹಣೆ. ಅಭ್ಯರ್ಥಿಗಳು ಎಲ್ಲಾ ಸಿದ್ಧತೆಗಳ ಜೊತೆಗೆ ಸಮಯ ನಿರ್ವಹಣೆಯತ್ತ ಹೆಚ್ಚು ಗಮನ ವಹಿಸಿಕೊಳ್ಳಿ ಆಗ ಮಾತ್ರ ಪ್ರತಿ ಪ್ರಶ್ನೆಗೆ ಕೊಟ್ಟಿರುವ ಕಾಲವಕಾಶದಲ್ಲಿ ಯಾವುದೇ ಗಾಬರಿಗೆ ಒಳಗಾಗದೆ ಉತ್ತರಿಸಲು ಸಾಧ್ಯವಾದೀತು.

ಪರೀಕ್ಷೆಗೆ ಬೇಕಿರುವ ಅಗತ್ಯ ವಸ್ತುಗಳನ್ನು ಜೋಡಿಸಿಕೊಳ್ಳಿ:
ಪರೀಕ್ಷಾ ಸಂದರ್ಭದಲ್ಲಿ ಗಲಿಬಿಲಿಗೊಳ್ಳುವುದು ಬೇಡ. ಈಗಿನಿಂದಲೇ ಪರೀಕ್ಷೆಗೆ ಏನೆಲ್ಲಾ ತೆಗೆದುಕೊಂಡು ಹೋಗಬೇಕಿದೆ ಲೀಸ್ಟ್ ಮಾಡಿಕೊಳ್ಳಿ. ಹಾಗೆಯೇ ಅಗತ್ಯ ವಸ್ತುಗಳನ್ನು ನಿಮ್ಮ ಬ್ಯಾಗ್ ನಲ್ಲಿ ಜೋಡಿಸಿಕೊಳ್ಳಿ ಇದರಿಂದ ನಿಮಗೆ ಮನಸ್ಸು ಇನ್ನಷ್ಟು ಹಗುರವಾಗಬಹುದು. ನೀವು ನೆಮ್ಮದಿಯಿಂದ ಪರೀಕ್ಷೆ ಬರೆಯಲು ಸಾಧ್ಯವಾದೀತು.

ಕೊರೋನಾ ಕಾರಣ ಮುಂಜಾಗ್ರತೆ ವಹಿಸಿ:
ಎಲ್ಲೆಡೆ ಕೊರೋನಾ ಸಮಸ್ಯೆ ಕೇಳಿಬರುತ್ತಿರುವ ಕಾರಣ ನೀವು ಕೂಡ ಪರೀಕ್ಷೆಗೆ ಹಾಜರಾಗುವಾಗ ಅಗತ್ಯವಾದ ಮುಂಜಾಗ್ರತೆ ಕ್ರಮಗಳನ್ನು ವಹಿಸಿಕೊಳ್ಳಿ.

ಪರೀಕ್ಷೆಗೆ ಹಾಜರಾಗುವ ಹಿಂದಿನ ದಿನ ಕೇವಲ ನೋಟ್ಸ್ ಓದಿ:
ಪರೀಕ್ಷೆಯ ಹಿಂದಿನ ದಿನ ಯಾವುದೇ ಅಧ್ಯಯನ ಪ್ರಾರಂಭ ಮಾಡಬೇಡಿ. ನೀವು ಈಗಾಗಲೆ ಮಾಡಿರುವ ಅಧ್ಯಯನದ ಸಣ್ಣ ಸಣ್ಣ ಪಾಯಿಂಟ್ಸ್ ಉಳ್ಳ ನೋಟ್ಸ್ ಗಳನ್ನು ಅಭ್ಯಾಸ ಮಾಡಿ,

ಪರೀಕ್ಷೆಗೆ ಹಾಜರಾಗುವ ದಿನ ಮನಸಿನಲ್ಲಿ ಓದಿರುವುದನ್ನು ನೆನಪಿಸಿಕೊಳ್ಳಿ:
ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಚರ್ಚೆ ಮಾಡುವುದು ಅಥವಾ ಗೊಂದಲ ಉಂಟಾಗುವ ಪ್ರಯತ್ನಗಳನ್ನು ಮಾಡಬೇಕು. ಕೇವಲ ನೀವು ಈಗಾಗಲೇ ತಯಾರಿ ನಡೆಸಿರುವ ವಿಷಯಗಳನ್ನು ಹಾಗೆಯೇ ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತಾ ಹೋಗಿ.