ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಶಾಲೆ ಹಾಗೂ ಕಾಲೇಜು ಎಂಬುವುದು ಬರೀ ಶಿಕ್ಷಣ ನೀಡುವ ಸಂಸ್ಥೆಯಲ್ಲ. ಬದಲಿಗೆ ಶಾಲೆ ಹಾಗೂ ಕಾಲೇಜು ದಿನಗಳು ನಮ್ಮ ಜೀವನದಲ್ಲಿ ತುಂಬಾ ಪ್ರಮುಖವಾದ ಘಟ್ಟ.

By Kavya

ಶಾಲೆ ಹಾಗೂ ಕಾಲೇಜು ಎಂಬುವುದು ಬರೀ ಶಿಕ್ಷಣ ನೀಡುವ ಸಂಸ್ಥೆಯಲ್ಲ. ಬದಲಿಗೆ ಶಾಲೆ ಹಾಗೂ ಕಾಲೇಜು ದಿನಗಳು ನಮ್ಮ ಜೀವನದಲ್ಲಿ ತುಂಬಾ ಪ್ರಮುಖವಾದ ಘಟ್ಟ. ನೀವು ಈ ಎರಡ ಜತೆಯೂ ಭಾವನಾತ್ಮಕವಾಗಿ ಸಂಬಂಧಹೊಂದಿರುತ್ತೀರಿ. ಈ ಎರಡೂ ಘಟ್ಟಗಳು ವಿದ್ಯಾರ್ಥಿಗಳಿಗೆ ವಿಭಿನ್ನ ಅನುಭವ ನೀಡುತ್ತದೆ.

ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಕಾಲೇಜು ಎಂಬುವುದು ನಮ್ಮ ಜೀವನದ ಅದ್ಭುತ ಕ್ಷಣ. ಹಾಗಾಗಿ ಯಂಗ್ ಸ್ಟರ್ಸ್ ಗಳು ಕಾಲೇಜಿಗೆ ಕಾಲಿಡುತ್ತಿದ್ದಂತೆ ಏನೇನೋ ನಿರೀಕ್ಷೆಯನ್ನ ಇಟ್ಟುಕೊಂಡು ಕಾಲಿಡುತ್ತಿದ್ದಾರೆ.ಆದ್ರೆ ಈಗ ಪ್ರಶ್ನೆ ಏನಂದ್ರೆ ಈ ಎರಡರಲ್ಲಿ ಯಾವ ದಿನಗಳು ಬೆಸ್ಟ್ ದಿನಗಳು ಎಂದು. ಇದರ ಉತ್ತರ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿದೆ. ಇದೀಗ ಕೆರಿಯರ್ ಇಂಡಿಯಾ ಇದೆರಡನ್ನೂ ಕೂಡಾ ಹೋಲಿಸಿ ಯಾವುದು ಬೆಸ್ಟ್ ಎಂಬ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಬೆಳಗ್ಗೆ ಎದ್ದೇಳುವ ಸಮಯ:

ಶಾಲಾದಿನಗಳಲ್ಲಿ ಬೆಳಗ್ಗೆ 6.05 ಗಂಟೆಗೆ ಎದ್ದರೂ ಕೂಡಾ ಅದು ತಡವೇ ಆಗಿರುತ್ತದೆ ಹಾಗೆಯೇ ಕಾಲೇಜು ದಿನಗಳಲ್ಲಿ ನೀವು ಬೆಳಗ್ಗೆ 11.00 ಗಂಟೆಗೆ ಎದ್ದರೂ ಅದು ಬೇಗನೇ ಎಂದೆನಿಸಿಕೊಳ್ಳುತ್ತದೆ.

<strong>ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗೆ ವಾಸ್ತು ಸಲಹೆ !</strong>ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗೆ ವಾಸ್ತು ಸಲಹೆ !

ಡ್ರೆಸ್ ಕೋಡ್:

ನೀವು ನಿಮ್ಮ ಬಾಲ್ಯದ ಹೆಚ್ಚಿನ ದಿನವನ್ನ ಯೂನಿಫಾರ್ಮ್ ಅಲ್ಲಿಯೇ ಕಳೆದಿರುತ್ತೀರಿ. ಆದ್ರೆ ಕಾಲೇಜು ಲೈಫ್ ಡಿಫರೆಂಟ್. ಇಲ್ಲಿ ಕಲರ್ ಉಡುಗೆ ಧರಿಸಲು ಅವಕಾಶ ಇರುವುದರಿಂದ ನೀವು ಪ್ರತೀ ದಿನ ಹೊಸತಾಗಿ ಏನು ಧರಿಸುವುದು ಎಂದು ಚಿಂತಿಸುತ್ತಾ ಇರುತ್ತೀರಿ.

ನಿಯಮಗಳು:

ಶಾಲಾ ದಿನಗಳಲ್ಲಿ ತರಗತಿಯಲ್ಲಿ ಕದ್ದು ಮುಚ್ಚಿ ಟಿಫಿನ್ ಬಾಕ್ಸ್ ತಿಂದ್ರೆ ಅದು ದೊಡ್ಡ ತಪ್ಪು, ಆದ್ರೆ ಕಾಲೇಜುದಿನಗಳಲ್ಲಿ ಕ್ಯಾಂಪಸ್ ನಲ್ಲೇ ಪಾರ್ಟಿ ಮಾಡಿಕೊಂಡು ತಿಂದು ತೇಗುತ್ತಾರೆ.

ರಜೆ:

ಶಾಲಾ ದಿನಗಳಲ್ಲಿ ಫ್ಯಾಮಿಲಿ ಟೂರ್ ಎಂಬುವುದು ಬೆಸ್ಟ್ ವಿಚಾರ. ಆದ್ರೆ ಕಾಲೇಜು ದಿನಗಳಲ್ಲಿ ಇಂಟರ್ನ್ ಶಿಪ್ ಎಂಬುವುದು ರಜೆಯನ್ನ ತಿಂದು ಬಿಡುತ್ತದೆ.

ಹಲ್ಲಿನ ಮಧ್ಯೆ ಗ್ಯಾಪ್... ನಿಮ್ಮ ಕೆರಿಯರ್ ಲೈಫ್ ಗೆ ಇದು ಲಕ್‌ ಅಥವಾ ಬ್ಯಾಡ್?ಹಲ್ಲಿನ ಮಧ್ಯೆ ಗ್ಯಾಪ್... ನಿಮ್ಮ ಕೆರಿಯರ್ ಲೈಫ್ ಗೆ ಇದು ಲಕ್‌ ಅಥವಾ ಬ್ಯಾಡ್?

ಹಾಜರಾತಿ:

ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ 100 ಕ್ಕೆ 100 ಹಾಜರಾತಿ ಗಳಿಸಿ ಟ್ರೋಫಿ ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ಕಾಲೇಜು ದಿನಗಳಲ್ಲಿ ರಜೆಗಾಗಿಯೇ ಅದೆಷ್ಟೋ ಫೇಕ್ ಮೆಡಿಕಲ್ ಸರ್ಟಿಫಿಕೇಟ್ ಗಳು ಕಾಲೇಜಿಗೆ ಸಬ್‌ಮಿಟ್ ಆಗುತ್ತದೆ.

ಜೀವನದ ಗುರಿ:

ಇನ್ನು ಶಾಲಾದಿನಗಳಲ್ಲಿ ನಾವು ಹೆತ್ತವರಿಗೆ ಹೆಮ್ಮೆ ತರವಂತಹ ಕೆಲಸಗಳನ್ನೇ ಮಾಡುತ್ತೇವೆ. ಆದ್ರೆ ಕಾಲೇಜು ದಿನಗಳಲ್ಲಿ ಇವೆಲ್ಲಾ ಬರೀ ಫಿಲೋಸಫಿಗಳಾಗಿರುತ್ತದೆ.

ಬ್ಯಾಗ್:

ಶಾಲಾ ಬ್ಯಾಗ್‌ಗಳು ಕಡಿಮೆ ಅಂದ್ರೂ 100 ಕೆಜಿ ತೂಕವಿರುತ್ತದೆ. ಆದ್ರೆ ಕಾಲೇಜು ಲೈಫ್ ನಲ್ಲಿ ಬರೀ ಒಂದು ನೋಟ್ ಬುಕ್ ನಲ್ಲಿ ಎಲ್ಲಾ ಸೆಮಿಸ್ಟರ್ ಕಂಪ್ಲೀಟ್ ಮಾಡುತ್ತಾರೆ ವಿದ್ಯಾರ್ಥಿಗಳು.

<strong>ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!</strong>ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!

ಅಂಕಗಳು:

ಶಾಲಾ ದಿನಗಳಲ್ಲಿ ಕಡಿಮೆ ಅಂದ್ರೂ ಶೇ.90 ರಷ್ಟು ಅಂಕಗಳಿಸುತ್ತಾರೆ ವಿದ್ಯಾರ್ಥಿಗಳು, ಅದೇ ಕಾಲೇಜು ಮೆಟ್ಟಿಲು ಹತ್ತಿದ ನಂತರ ವಿದ್ಯಾರ್ಥಿಗಳಿಗೆ ಜಸ್ಟ್ ಪಾಸಾದ್ರೆ ಸಾಕು ಪಾರ್ಟಿ ಮಾಡುತ್ತಾರೆ

ಸಮಯ:

ಶಾಲೆಗಳಿಗೆ ಹೋಗುವಾಗ ಸಮಯವನ್ನ ಕಡ್ಡಾಯವಾಗಿ ಫಾಲೋ ಮಾಡಬೇಕು ಅದೇ ರೀತಿ ಕಾಲೇಜುದಿನಗಳಲ್ಲಿ ನೀವು ಲೇಟ್ ಆದ್ರೆ ಫಸ್ಟ್ ಕ್ಲಾಸ್ ಬಂಕ್ ಆಗುತ್ತೆ ಅಷ್ಟೇ ಕೂಲ್.

ಸ್ನೇಹಿತರು:

ಶಾಲೆಗಳಲ್ಲಿ ಬರೀ ತನ್ನ ಕ್ಲಾಸ್ ನ ವಿದ್ಯಾರ್ಥಿಗಳು ಮಾತ್ರ ಸ್ನೇಹಿತರು ಎಂದು ಬಿಂಬಿತವಾಗುತ್ತಿತ್ತು ಆದ್ರೆ ಕಾಲೇಜು ದಿನಗಳಲ್ಲಿ ಹಾಗಲ್ಲ ಬದಲಿಗೆ ಗಲ್ಲಿ ಗಲ್ಲಿಯಲ್ಲೂ ಸ್ನೇಹಿತರು ಇರುತ್ತಾರೆ

<strong>ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!</strong>ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!

For Quick Alerts
ALLOW NOTIFICATIONS  
For Daily Alerts

English summary
School days vs college days are the best part of your life. You are emotionally attached to both of them, school days vs college days. Both of them are beautiful and way too different.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X